ಸಿಂಹ ರಾಶಿ :-
·
ಇವರಿಗೆ ೯ ವಿಶೇಷ ರಾಜ ಯೋಗವನ್ನ ಕೊಡುತ್ತೆ.
·
ಸಿಂಹಕ್ಕೆ ಬೇಟಿಯನ್ನ ಮಾಡುವ ಅಭ್ಯಾಸ. ಅದೇ ಮಿಥುನಕ್ಕೆ ಬೇಟಿ ಮಾಡಿದ್ದನ್ನ ತಿನ್ನುವ ಅಭ್ಯಾಸ!
·
ಸಿಂಹ ರಾಶಿಯವರನ್ನ ಹೊಗಳಿದರೆ, ಅವ್ರುಗಳು ಫ಼್ಲೇಟ್.
·
ಇವರುಗಳು ಪ್ರಾಚೀನ ವಸ್ತುಗಳನ್ನ (ಏಂಟಿಕ್ ಪೀಸ್ ಲವರ್ಸ್) ಬಹಳಷ್ಟು ಇಷ್ಠ ಪಡುತ್ತಾರೆ.
·
ಇವರು ಅಲಂಕಾರವನ್ನ ಮಾಡಿದರೆಂದರೆ ಬಹಳ ಚಂದ. ಇಲ್ಲದಿದ್ದರೂ ಕೂಡ ಇವರುಗಳು ಸುಂದರ ಮತ್ತು ಚಂದ.
·
ರಾಹು ಇವರನ್ನ ಎಳೆಯುತ್ತೆ.
·
ಇವರಿಗೆ ಸ್ನೇಹಿತರು ಕಮ್ಮಿ.
·
ಎಲ್ಲಿಯಾದರೂ ಶನಿ ಪ್ರಭಾವದೊಡನೆ ಒಳಗಾದರೆ, ಸಂಗಾತಿಯೊಡನೆ ವಿರಸ ಗ್ಯಾರಂಟಿ.
·
೫ ಮತ್ತು ೬ ರ ಪ್ರಭಾವಕ್ಕೆ ಒಳಗಾಗಬೇಡಿ.
·
ಒಂದು ವೇಳೆ ೬ ರ ಪ್ರಭಾವಕ್ಕೆ ಒಳಗಾದರೆ, ಕಾಮಾಂಧರಾಗುತ್ತಾರೆ.
·
ಸಿಂಹ ರಾಶಿಯವರು ಮತ್ತು ಲಗ್ನದವರೂ ಸಹ, ಆತ್ಮ ಹತ್ಯದ ಮಟ್ಟಕ್ಕೆ ಹೋಗುತ್ತಾರೆ, ಹೋಗಿರುತ್ತಾರೆ. ಇದಕ್ಕೆ
ನನ್ನಲ್ಲಿ ಉದಾಹರಣೆಯೂ ಇದೇ ಅನ್ನಿ.
·
ಇವರಿಗೆ ಕಲೆಯ ಒಂದಿಷ್ಟೂ ಗಂಧವಿಲ್ಲ.
·
ಸಿಂಹ ರಾಶಿ ಬೆಂಕಿ. ಸಿಂಹ ರಾಶಿಗೆ ಸಿಂಹ ರಾಶಿಯೇ ಆಗಿ ಬರುವುದಿಲ್ಲ. ಈ ರಾಶಿಯವರಿಗೂ, ಮಿಥುನ ರಾಶಿಯವರಿಗೂ ಮದುವೆ ಮಾಡಿದಲ್ಲಿ ಬಹಳ ಸೂಪರ್ ಜೋಡಿ. ಹಾಲು ಸಕ್ಕರೆ ಇದ್ದ ಹಾಗೆ ಇವರ ಜೋಡಿ.
·
ಇವರಿಗೆ ಪುತ್ರ ಸಂತಾನವೇ ಜಾಸ್ತಿ.
·
ಸಿಂಹ ರಾಶಿಯವರು ಇದ್ದದ್ದನ್ನ ಇದ್ದ ಹಾಗೆಯೇ, ಇದ್ದಷ್ಟೇ ಹೇಳುತ್ತಾರೆ.
·
ಸಿಂಹಕ್ಕೂ ಕನ್ಯಾ ರಾಶಿಗೂ ಆಗಿ ಬರೋದಿಲ್ಲ. ಬಿ. ಕೇರಫ಼ುಲ್!
·
ಇವರು ಮರೆತು ಬಿಡುವುದು ಜಾಸ್ತಿ.
·
ಸಿಂಹ ರಾಶಿಯವರಿಗೆ ಕಣ್ಣೀರು ಆಗೋಲ್ಲ. ತಮ್ಮ ಹೆಂಡತಿಯೇ ಕಣ್ಣೀರು ಹಾಕಿದಲ್ಲಿ, ಮಕ್ಕಳಿಗೆ ಅವರು, ಅಮ್ಮನಿಗೆ ಏನೂ ಹೇಳಲು ಹೋಗಬೇಡಿ ಅಂತ ಅನ್ನುತ್ತಾರೆ.
·
ಈ ರಾಶಿ ವೈರಾಗ್ಯ ರಾಶಿ. ಒಂದು ರೀತಿಯಲ್ಲಿ ವೈರಾಗ್ಯ ರಾಶಿ.
·
ಈ ರಾಶಿಯ ಹೆಂಗಸರುಗಳು, ಒಂದು ರೀತಿಯಲ್ಲಿ ಗಂಡುಬೀರಿಗಳು. ಬೈ ಬೇಡಿ. ಇದು ನನ್ನ ಅಭಿಪ್ರಾಯವಲ್ಲ.
·
ಕಟಕ ಅಮ್ಮ(ಪಾರ್ವತಿ), ಸಿಂಹ ಅಪ್ಪ(ಶಿವ), ಮೇಷ ಮಗನ ರಾಶಿ (ಸುಬ್ರಹ್ಮಣ್ಯ), ಶುಕ್ರನ ರಾಶಿ ಸೊಸೆಯ ರಾಶಿ. (ಲಕ್ಷ್ಮಿ)
·
ಸಿಂಹಕ್ಕೆ ಕನ್ಯಾ ಆಗಿ ಬರೋಲ್ಲ.
·
ಸಿಂಹ ರಾಶಿಗೆ ವೃಷಭ ರಾಶಿ ಆಗಿ ಬರೋಲ್ಲ.
·
ಸಿಂಹಕ್ಕೆ ತುಲಾ ರಾಶಿ ಕೆಂಡದಂತೆ.
·
ಸಿಂಹ ರಾಶಿ ಶಿವನ ರಾಶಿ.
·
ಸಿಂಹ ರಾಜನ ರಾಶಿ. ಮೇಷ ಸೇನಾಧಿಪತಿಯ ರಾಶಿ. ಇವರಿಬ್ಬರನ್ನೂ ಸೇರಿಸಿದಾವಾಗ, ರಾಜ್ಯದ ಎಕ್ಸ್ಪ್ಯಾನ್ಷನ್ ಆಗುತ್ತೆ. ರಾಜ್ಯವನ್ನ ಕಟ್ಟುತ್ತಾರೆ.
·
ಸಾಯಿನಾಥನ ಪೂಜೆ ಮಾಡಿ. ದೇವಿಗೆ ಸಂಬಂಧ ಪಟ್ಟಂತಹ ದೇವಸ್ತಾನಕ್ಕೆ ಹೋಗಿ.
ಕನ್ಯಾ ರಾಶಿ :-
ಕನ್ಯಾ ಲಗ್ನದವರು ಒಂದು ರೀತಿಯಲ್ಲಿ ಪ್ರಾಯ (ಏಜ್) ಆದವರಂತೆ ಕಾಣಿಸುತ್ತಾರೆ. ಅದಕ್ಕೇ ಅವರನ್ನ ೨೫ ವರುಷಗಳ ಒಳಗೆಏನೆ ಮದುವೆಯನ್ನ ಮಾಡಿಸಬೇಕು.
ಆದರೆ ಇವರ ಮನಸ್ಸು ಪುಟ್ಟ ಮಗುವಿನ ಹಾಗೆ . ಇದಕ್ಕೆ ಕಾರಣ ಈ ಲಗ್ನದ ಅಧಿಪತಿ ಬುಧನು.
ಮಂಗಲ್ ಇವರ್ ಶತ್ರು ಗ್ರಹ. ಇವರಿಗೆ ಏಕ್ಸಿಡೆಂಟ್ಸ್ ಜಾಸ್ತಿ.
ಸಾಮಾನ್ಯವಾಗಿ ೩ ರ ಹಿಂದೆ ಹೋಗುತ್ತಾರೆ. ಇವರುಗಳು ಹಳದಿ ಬಣ್ಣದ ಹಿಂದೆಯೂ ಹೋಗುತ್ತಾರೆ.
ಸಂಖೆ ೪,೫ ಮತ್ತು ೬ ಹಿಂದೆ ಹೋಗಬೇಡಿ.
ಕನ್ಯಾ ರಾಶಿ ಕಣ್ಣಿರಿನ ರಾಶಿ.
ಕನ್ಯಾ ಅಂದರೆ ಕಿರ್ಕ್ ರಾಶಿ ಎಂದರ್ಥ.
ಕನ್ಯಾ ರಾಶಿಯ ಗಂಡಾದಲ್ಲಿ ಬಹಳ ಕಂಜೂಸ್, ಮಕ್ಕಿ ಚೂಸ್.
ಕಟಕಕ್ಕೂ , ಕನ್ಯಾ ರಾಶಿಗೂ ಎಳೆದಾಟ ನಡೆಯುತ್ತೆ. ಇದಕ್ಕೆ ಕಾರಣ ಕನ್ಯಾ ರಾಶಿಯವರು ದುಡ್ಡು ಬಿಚ್ಚೋಲ್ಲ. ಆದ್ದರಿಂದ ಈ ರಾಶಿಯವರಿಗೆ ಡೈವೋರ್ಸ್ ಜಾಸ್ತಿ!.
ಕನ್ಯಾ ರಾಶಿಯವರು ಜಗಳವನ್ನ ಕೆರೆಯುವುದರಲ್ಲಿ ಉಸ್ತಾದ್.
ಇವರುಗಳು ಬೆಳ್ಳಿಯನ್ನ ಉಪಯೋಗಿಸಬಹುದು.
ಇವರುಗಳು ಬಹಳ ಹಟವಾದಿ.
ಇವರುಗಳು ವೃಷ್ಚಿಕದವರ ಹಾಗೆ ನನ್ನ ಮನೆ, ನನ್ನ ಕುಟುಂಬ ಅಂತ ಹೇಳುವವರು.
ಇವರಿಗೆ ನಯ ವಿನಯ ಜನ್ಮತಾ ಬಂದಿರುವ ಕಲೆ. ಬಿಸಿನೆಸ್ಸಿಗೆ ಹೇಳಿಮಾಡಿಸಿದವರು.
ಕನ್ಯಾ ಲಗ್ನದವರಿಗೆ ಸಣ್ಣ ಪ್ರಾಯದವರು ಸಿಕ್ಕಿದರೆ ಬಹಳ ಒಳ್ಳೆಯದು. ಕಾರಣ ಇವರು ಸಣ್ಣ ಮಗುವಿನ ಹಾಗೆ.
ಕನ್ಯಾ ರಾಶಿಯ ಜೊತೆಗೆ ಮೇಷ ರಾಶಿ ಆಗುವುದಿಲ್ಲ. ಆಡುತ್ತಾ ಆಡುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು ಆಗ್ತಾರೆ.
ಕನ್ಯಾ ರಾಶಿಯ ಜೊತೆಗೆ ವೃಷಭ ಅತೀ ಅದ್ಭುತ. ಧನ ಸಂಪತ್ತು ಹೇರಳ. ವೆಶೇಷ ಸಂತಾನ ಪ್ರಾಪ್ತಿ. ಕಲಾವಿಧರ ಮಕ್ಕಳುಗಳು ಈ ಕೆಟೆಗರಿಗೆ ಬರುತ್ತಾರೆ. ಪ್ರಖ್ಯಾತರಾಗುತ್ತಾರೆ, ಸಿರಿವಂತರಾಗುತ್ತಾರೆ.
ಕನ್ಯಾ ರಾಶಿಯ ಜೊತೆಗೆ ಮಿಥುನ ರಾಶಿ ಚೋರಗುರು, ಚಂಡಾಲ ಶಿಷ್ಯರ ಸಂಬಂಧವಾಗುತ್ತದೆ. ಪೂರ್ಣ ಕನ್ಯಾದವರು ಮಿಥುನ ರಾಶಿಯವರಿಗಿಂತ ಧಾರಾಳಿಗಳು.
ಮಿಥುನ ರಾಶಿಯವರು ರಸ್ತೆಯಲ್ಲಿ ಚಾ ಕುಡಿದರೆ, ಕನ್ಯಾ ರಾಶಿಯವರು ವರ್ಷಕ್ಕೊಮ್ಮೆ ಕುಡಿದರೂ, ಒಳ್ಳೇ ೫ ಸ್ಟಾರ್ ಹೋಟೆಲಿನಲ್ಲಿ ಕುಡಿಯುತ್ತಾರೆ. ಆದ್ದ್ರಿಂದ ಕನ್ಯಾ-ಮಿಥುನ ಜೋಡಿ ಒಳ್ಳೆಯದಾಗುತ್ತೆ.
ಕನ್ಯಾದವರ ಜೊತೆಯಲ್ಲಿ ಮಕರ ಮತ್ತು ಕುಂಭ ಅತೀ ಅದ್ಭುತ ಜೋಡಿ.
ಅತ್ತೆ ಕನ್ಯಾ ರಾಶಿಯಾಗಿದ್ದು, ಸೊಸೆ ಕಟಕ ರಾಶಿಯದ್ದಾದರೆ, ಗಂಡನ ಮೀಸೆ ಉದಿರುಹಾಗುತ್ತೆ. ಈ ಜೋಡಿಯನ್ನ ಮಾಡಲೇ ಬೇಡಿ. ನೋವನ್ನ ಅನುಭವಿಸಬೇಕಾಗುತ್ತೆ. ವಿಪರೀತ ಸಾಲಗಾರರಾಗುತ್ತೀರ.
ಕನ್ಯಾ ಬಿಗುಮಾನ, ಹಾಗೂ ಸ್ವಾಭಿಮಾನದ ವ್ಯಕ್ತಿಗಳು.
ಕನ್ಯಾ ರಾಶಿಯ ಜೊತೆಯಲ್ಲಿ ಸಿಂಹ ರಾಶಿ ತೊಂದರೆ ಇಲ್ಲ.
ಕನ್ಯಾ ರಾಶಿಯವರು ಬೆಣ್ಣೆ ಹಾಕುವುದರಲ್ಲಿ ಬಹಳ ನಿಪುಣರು.
ಕನ್ಯಾ ರಾಶಿಯಲ್ಲಿ ಯಾವಾಗಲೂ ತುಂಟುತನಒಂದಿರುತ್ತೆ. ಆದರೆ ಸಿಂಹದವರು ಗಾಂಭೀರ್ಯ. ಆದ್ದರಿಂದ ಜೋಡಿ ನಡೆಯುತ್ತೆ ಮತ್ತು ಮುದ್ದಾಗಿರುತ್ತೆ.
ಕನ್ಯಾ ರಾಶಿ- ಕನ್ಯಾ ರಾಶಿ ಬೇಡವೇ ಬೇಡ. ಇಬ್ಬರೂ ಕ್ಲೀನ್ ಮಾಡ್ತಾ ಇದ್ದಲ್ಲಿ, ಮನೆಗೆ ಬಂದವರ ಗತಿ ಏನು?
ಕನ್ಯಾದವರಿಗೆ ಎಲ್ಲಿಗಾದರೂ ಹೋಗಬೇಕೆಂದಲ್ಲಿ, ಒಂದು ದಿನ ಮುಂಚೆಯೇ ಹೇಳಬೇಕು. ಕಾರಣ ಅಷ್ಟೊಂದು ಸಮಯ ಬೇಕು ಅವರಿಗೆ ಅಲಂಕಾರ ಮಾಡಲು.
ಕನ್ಯಾ ರಾಶಿಯವರು ಅಲಂಕಾರ ಪ್ರಿಯರು. ಆದ್ದರಿಂದಲೇ ಹೇಳುವುದು ಕನ್ಯಾ-ಕನ್ಯ ಬೇಡವೇ ಬೇಡ.
ಕನ್ಯಾ ರಾಶಿಯ ಜೊತೆಗೆ ತುಲಾ, ಒಳ್ಳೇ ಭೋಗದ ಜೋಡಿಯಾಗಿರುತ್ತೆ. ಮಾಡಿ. ವಿಶೇಷ ವಾಹನ ಯೋಗ ಹಾಗೂ ವಿಶೇಷ ದೈಹಿಕ ಯೋಗವನ್ನ ಈ ಜೋಡಿಯಲ್ಲಿ ಪಡೆಯಿರಿ.
ಕನ್ಯ -ವೃಸ್ಚಿಕ ಜೋಡಿ ಅಪ್ಪಿ ತಪ್ಪಿಯೂ ಮಾಡಬೇಡಿ! ಅಂಗ ಭೇದ, ಏಕ್ಸಿಡೆಂಟ್ಸ್, ಡೈವೋರ್ಸ್ ಹಾಗೂ ಆತ್ಮಹತ್ಯ ಇತ್ಯಾದಿಗಳೆಲ್ಲಾನಡೆಯುತ್ತೆ. ಅಸ್ಟಮಾಧಿಪತಿ ದೋಷ. ಕನ್ಯಾ ರಾಶಿಯ ಜೊತೆಗೆ ವೃಷ್ಚಿಕದವರು ಸ್ನೇಹತ್ವಕ್ಕೂ ನಾಲಾಯಕ್!.
ಬುಧನ ತತ್ವವಿರುವ ನೀವು, ಶ್ರೀಚಕ್ರ ಇರತಕ್ಕಂತಹ ಕೊಲ್ಲೂರು ಮೂಕಾಂಬಿಕೆ, ಶ್ರಂಗೇರಿ ಶಾರದಾಂಬೆ, ಕಟೀಲು ದುರ್ಗಾ ಪರಮೇಷ್ವರಿ, ಹಾಸನದ ನಿಮಿಷಾಂಭ ಹಾಗೂ ಶಿವ್-ಪಾರ್ವತಿ ಇಬ್ಬರೂ ಇರುವ ದೇವಸ್ತಾನಕ್ಕೆ ಹೋಗಿ ಬನ್ನಿ.
ನಿಮಗೆ ಸಂಗಾತಿಯ ವಿಷಯದಲ್ಲಿ ನೋವು ಬರುತ್ತೆ. ನಿಮಗೆ ಅಣ್ಣ ತಮ್ಮಂದಿರ ಬಗ್ಗೆ ಕಾಳಜಿ ಜಾಸ್ತಿ. ನೀವು ತಂದೆ ಯಾ ತಾಯಿಯನ್ನ ಕಳೆದುಕೊಳ್ಳುವುದು ಜಾಸ್ತಿ. ಆದ್ದರಿಂದ ಕಾಶಿಗೆ , ಶ್ರೀಶೈಲಕ್ಕೆ ಹೋಗಿ.
ಕನ್ಯಾದವರಿಗೆ ತುಂಟುತನ ಜಾಸ್ತಿ. ರಾಹು ಪ್ರಭಾವ. ಶ್ರೀಶೈಲ, ಭ್ರಮರಾಂಬಿಕಾ, ಕಾಶಿ ವಿಶ್ವೇಷ್ವರ, ಅನ್ನಪೂರ್ಣೇಶ್ವರಿ ದೇವಸ್ತಾನಕ್ಕೆ ಹೋದಲ್ಲಿ ವಿಶೇಷ ಬಲ ಸಿಗುತ್ತೆ.
ಕಾವೇರಿ ನದಿಯಲ್ಲಿ ಸ್ನಾನವನ್ನ ಮಾಡಿ. ರಾಃಉ ದೋಷ, ಮದುವೆ ದೋಷವೆಲ್ಲಾ ಹೋಗುತ್ತೆ. ತ್ರಿವೇಣಿ ಸಂಗಮಕ್ಕೆ ಹೋಗಿ ಶ್ರೀರಂಗನ ದರ್ಷನ್ ನಿಮಗೆ ಇನ್ನಸ್ಟು ವಿಶೇಷ!.
ತಿರುಚಿ ಶ್ರೀರಂಗನ ದರ್ಷನದಿಂದ ಪಂಚಮ ಶನಿ ದೋಷ ನಿವಾರಣೆಯಾಗುತ್ತೆ.
ಶ್ರೀ ಚಕ್ರವಿರುವ ದೇವಿದರ್ಷನವನ್ನ ಮಾಡಿದರೆ ಇನ್ನಷ್ಟು ವಿಶೇಷ.
ಹುಣ್ಣಿಮೆಯಂದು ಕೊಪ್ಪ ರಾಜ ರಾಜೇಶ್ವರಿ ದರ್ಷನ ಮಾಡಿ ಬನ್ನಿ. ಮಂತ್ರಾಲಯಕ್ಕೆ ಹೋಗಿ ಬನ್ನಿ.
ತುಲಾ ರಾಶಿ :-
·
ತುಲಾ ರಾಶಿಯವರ ಮಕ್ಕಳು ಇವರ ಮಾತನ್ನ ಕೇಳುವುದಿಲ್ಲ.
·
ಮನೆಯಲ್ಲಿ ಹಿರಿಯರು ಅನಾರೋಗ್ಯದಲ್ಲಿದ್ದರೆ, ಸಂಖೆ ೮ ನ್ನ ಉಪಯೋಗಿಸಬೇಡಿ. ಸಂಖೆ ೬ ನ್ಯೂಟ್ರಲ್.
·
ಸಂಖೆ ೪ ಬಹಳ ಒಳ್ಳೆಯದು. ಸಂಖೆ ೫ ಇವರಿಗೆ ೮೦ ರಿಂದ ೯೦ % ಓ.ಕೆ.
·
ಇವರೂ ಕೂಡ ಸಂಖೆ ೩ ರ ಹಿಂದೆ ಹೋಗಬಾರದು. ಸಾಲಗಾರರಾಗುತ್ತಾರೆ.
·
ಸುಗರ್ ಪ್ರೋಬ್ಲೆಮ್ಸ್, ಕೋರ್ಟ ಪ್ರೋಬ್ಲೆಮ್ಸ್ ಬರುತ್ತೆ.
·
ತುಲಾ ರಾಶಿ ಮೋಹಕ ಭಾವ.
·
ಇದು ಸೊಸೆಯ ಭಾವ.
·
ತುಲಾದವರು ಬಾಹ್ಯ ಅಂದ, ಕಟಕದವರು ಜನ್ಮಥಾ ಅಂದವಾಗಿರುತ್ತಾರೆ.
·
ತುಲಾದವರು ರಸಿಕರು. ಆದರೆ ಕೆಲವು ಬಾರಿ ಇವರುಗಳು ಒಂಕುಂಟಿಯಾಗಿ ಅರಸಿಕರಾಗಿರುತ್ತಾರೆ. ಆದರೆ ಕಟಕದವರಿಗೆ ವಯಸ್ಸಿಗೆ ತಕ್ಕಂತೆ ಗುಣವಿರುತ್ತೆ.
·
ತುಲಾದವರಿಗೆ ಅಲಂಕಾರದ ಮೇಲೆ ಭಾವನೆ ಜಾಸ್ತಿ.
·
ಇವರುಗಳು ಕಪ್ಪು ಮತ್ತು ನೀಲಿಯನ್ನ ಉಪಯೋಗಿಸಬಹುದು.
·
ಸಂಖೆ ೪ ಮತ್ತು ಸಂಖೆ ೫ ನೇ ಮನೆಯು ಮಕರ ಮತ್ತು ಕುಂಭ ಬರುವುದರಿಂದ, ಇದರ ಅಧಿಪತಿ ಶನನೈಷ್ಚರನಾದುದರಿಂದ, ನದಿಯ ತಟದಲ್ಲಿರುವ ಶಿವನ ಆರಾಧನೆಯನ್ನ ಮಾಡಬೇಕು. ನದಿಯ ತಟದಲ್ಲಿರುವ ರಾಮನ ಪೂಜೆಯನ್ನ ಮಾಡಿದರೂ ಉತ್ತಮ. ಪರಷುರಾಮ ತೋರಿಸಿದ ನಂಜುಂಡೇಶ್ವರನ ಪೂಜೆ ಮಾಡಿದರೆ ಬಹಲ ಉತ್ತಮ. ರಾಮೇಶ್ವರಕ್ಕೆ ಹೋದರೆ ಬಹಳ ಉತ್ತಮ. ಪೂರ್ಣ ಎರಡು ಕಣ್ಣುಗಳಿರುವ ಹನುಮಂತನ ದರ್ಷನವನ್ನ ಮಾಡಿ.
·
ವಿಷ್ಣು, ಗರುಡ ಹಾಗೂ ಹನುಮಂತನಿರುವ ಭದ್ರಾಚಲ ರಾಮಯ್ಯನ ದರ್ಷನ್ ಮಾಡಿದಲ್ಲಿ ಬಹು ವಿಶೇಷ. ಹಾಗೆ ಮಾಡಿದಲ್ಲಿ, ಪಂಚಮ ಶನಿ ದೋಷ, ಪಂಚಮ ಕುಜ ದೋಷವೆಲ್ಲಾ ಹೋಗುತ್ತೆ.
·
ತುಲಾ ಲಗ್ನಕ್ಕೆ ಒಂಟಿ ಗುರು ಬಂದಲ್ಲಿ ವೈರಾಗ್ಯ ಖಾತ್ರಿ.
·
ತುಲಾ ಲಗ್ನದವರಿಗೆ ಶನಿ ನೀಚ. ಇವರುಗಳಿಗೆ ಬರೇ ದುಡಿಮೆ ದುಡಿಮೆ ದುಡಿಮೆ. ಅದರಲ್ಲೂ ಶುಕ್ರ ಬೇರೆ ೬ ನೇ ಮನೆಯಲ್ಲಿದ್ದರೆ ಒಡವೆಗಳನ್ನ ಅಡವನ್ನ ಇಡಲೇ ಬೇಕು. (ಪಿವೈ) ಇವರಿಗೆ ಶುಕ್ರ ಶಾಂತಿಯನ್ನ ಮಾಡಿಸಲೇ ಬೇಕು. ಇವರುಗಳು ಬಿಳೀ ಶಲ್ಯ, ೬೦ ಗ್ರೇಮ್ ಕಲ್ಲು ಸಕ್ಕರೆ ಅಥವಾ ೬೦೦ ಗ್ರೇಮ್ ಅವರೇ ಕಾಳನ್ನ ೬ ಹುಣ್ಣಿಮೆಯೆಂದು ದಾನ ಮಾಡಲೇ ಬೇಕು.
ಬರೆದವರು, ಡಾ. ಪಾರಂಪಳ್ಳೀ ಸುರೇಂದ್ರ ಉಪಾಧ್ಯ,ಪಿ.ಹೆಚ್.ಡಿ.
(ಜ್ಯೋತಿಷ್ಯ) ೦೭/೦೩/೨೦೧೭
ಗುರುಗಳೆ, ನಾನು ರಾಘವ್ ಕೋಟೇಶ್ವರ, ಕುಂದಾಪುರದವನು. ನಿಮ್ಮ ಎಲ್ಲಾ ಆಪ್‌ಲೋಡ್‌ಗಳನ್ನು ಯೂಟ್ಯೂಬ್‌ನಲ್ಲಿ ನೋಡಿದ್ದೇನೆ. ನಿಮ್ಮನ್ನು ಭೇಟಿ ಮಾಡಲು ಎಲ್ಲಿಗೆ ಬರಬೇಕು. ನಾನು ತುಂಬಾ ಕಷ್ಟಕರ ಜೀವನ ನಡೆಸುತ್ತಿದ್ದೇನೆ. ಒಮ್ಮೆ ನನ್ನ ಜಾತಕ ನಿಮಗೆ ತೋರಿಸಬೇಕು ಎಂದಿದ್ದೇನೆ. ದಯವಿಟ್ಟು ನಿಮ್ಮ ದೂರವಾಣಿ ಸಂಖ್ಯೆ ಅಥವಾ ನಿಮ್ಮನ್ನು ಭೇಟಿ ಆಗುವ ಮಾರ್ಗ ತಿಳಿಸಿ.
ReplyDelete