Monday 13 March 2017

ಮನೆ ಮದ್ದುಗಳು

ಮನೆ ಮದ್ದುಗಳು

ಮನೆ ಮದ್ದು ಜೀರಿಗೆ

ಎಲ್ಲರ ಅಡುಗೆ ಮನೆಯ ಸಾಂಬಾರ್ ಬಟ್ಟಲಲ್ಲಿ ಕಾಣಿಸಿಕೊಳ್ಳುವ ‘ಜೀರಿಗೆ’ ಬಹೂಪಯೋಗಿ ಕಿಚನ್ ಮೆಡಿಸಿನ್ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಇದೊಂದು ರೋಗ ನಿರೋಧಕ ಶಕ್ತಿಯುಳ್ಳ ಮಸಾಲೆ ಪದಾರ್ಥ. ವಿಧಿಬದ್ಧವಾಗಿ ಜೀರಿಗೆ ಸೇವಿಸುವುದರಿಂದ ಹೃದಯರೋಗ, ಪಿತ್ತಪ್ರಕೃತಿ, ವಾಯು ವಿಕೋಪ, ಮಲಬದ್ಧತೆ, ಬಾಯಿಹುಣ್ಣು, ಆಮ್ಲತೆ, ಜ್ವರ, ಮೂತ್ರಕೋಶ ಸಂಬಂಧಿ ಕಾಯಿಲೆ, ಜೀರ್ಣ ಶಕ್ತಿ ಇಲ್ಲದಿರುವುದು, ಹೀಗೆ ಹತ್ತು ಕಾಯಿಲೆಗಳನ್ನು ಪ್ರಾರಂಭದಲ್ಲಿಯೇ ತಡೆಗಟ್ಟಬಹುದಾಗಿದೆ.

ಜೀರಿಗೆ ಸೇವನೆಯ ವಿಧಾನಗಳು

*ಕುಡಿಯುವ ನೀರಿನ ಡ್ರಮ್ಮಿಗೆ ಒಂದೆರಡು ಚಮಚ ಜೀರಿಗೆ ಮುಂಜಾನೆ ಸೇರಿಸಿರಿ. ಇದರಿಂದ ಪರಿಮಳಯುಕ್ತ ಜೀರಿಗೆ ಮಿಶ್ರಿತ ನೀರು ಮನೆ ಮಂದಿಗೆಲ್ಲಾ ದೊರೆಯುತ್ತದೆ. ಜೀರಿಗೆ ಮಿಶ್ರಣದ ನೀರು ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ. ಜೊತೆಗೆ ದಿನವಿಡೀ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.

*ಜೀರಿಗೆ ಕಷಾಯ: ಸ್ವಲ್ಪ ಜೀರಿಗೆ ಹದವಾಗಿ ಬಿಸಿ ಮಾಡಿ, ಮಿಕ್ಸಿಯಲ್ಲಿ ನುಣುಪಾಗಿ ಹುಡಿ ಮಾಡಿ, ಕಾಫಿ – ಟೀ ಬದಲಾಗಿ, ಬಿಸಿ ನೀರಿನಲ್ಲಿ ಸೇರಿಸಿ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಹಾಗೂ ಹಾಲು ಸೇರಿಸಿ ಮುಂಜಾನೆ ತಿಂಡಿ ತಿನ್ನುವಾಗ ಹಾಗೂ ಸಾಯಂಕಾಲ ಕುಡಿಯಿರಿ. ಇದರಿಂದ ಬಾಯಿರುಚಿ ಹಾಗೂ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಜೀರಿಗೆ ಕಶಾಯ ಸೇವಿಸಿದ ವ್ಯಕ್ತಿಗಳಿಗೆ ಮೂತ್ರಕ್ಕೆ ಸಂಬಂಧಿಸಿದ ಕಾಯಿಲೆ ಹಾಗೂ ಮೂತ್ರಕೋಶದ ವೈಫಲ್ಯ ಬರುವ ಸಾಧ್ಯತೆಯೇ ಇರುವುದಿಲ್ಲ.

*ಕೆಮ್ಮು ತಲೆ ನೋವು ಜ್ವರ ಬಂದಾಗ: ನಾಲ್ಕು ಗ್ಲಾಸ್‌ ನೀರಿಗೆ 3–4 ಚಮಚ ಜೀರಿಗೆ ಪುಡಿ, 6–8 ಮೆಣಸಿನಕಾಳು ಪುಡಿ, ಒಣ ಶುಂಠಿ, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ, ತಣಿಸಿ, ದಿನಕ್ಕೆ 3–4 ಬಾರಿ ಕುಡಿದರೆ ಕೆಮ್ಮು, ತಲೆನೋವು, ಜ್ವರ ಒಂದೆರಡು ದಿನಗಳಲ್ಲಿ ಮಾಯವಾಗುತ್ತದೆ.

*ಮನೆಯಲ್ಲಿ ಕೆಲಸ ಮಾಡುವಾಗ ಹಾಗೂ ಓಡಾಡುವಾಗ ಒಂದು ಚಿಟಕಿ ಜೀರಿಗೆ ಬಾಯಿಯಲ್ಲಿ ಹಾಕಿ ಅಗಿಯುತ್ತಿದ್ದರೆ, ಇದರಿಂದ ಬರುವ ರಸ, ಬಾಯಿ ಜೊಲ್ಲಿನಲ್ಲಿ ಸೇರಿ ದೇಹದ ಅಂಗಾಂಗ ಪ್ರವೇಶಿಸುತ್ತದೆ. ಈ ಪ್ರಕ್ರಿಯೆಯಿಂದ ಲವಲವಿಕೆ ಉಂಟಾಗುತ್ತದೆ. ಜೊತೆಗೆ ಕಾಯಿಲೆಗೆ ನೋ ಎಂಟ್ರಿ ಸಿಗ್ನಲ್‌ ತೋರಿಸುತ್ತದೆ. ಬಾಯಿ ವಾಸನೆ ಮಾಯವಾಗುತ್ತದೆ.

*ಜೀರಿಗೆ ಬೆಲ್ಲದ ಉಂಡೆ: ಈ ಹಿಂದೆ ತಿಳಿಸಿದಂತೆ ಮಿಕ್ಸಿಯಲ್ಲಿ ನುಣುಪಾಗಿ ಮಾಡಿದ ಜೀರಿಗೆ ಪುಡಿ ಹಾಗೂ ಅದಕ್ಕೆ ಸಮಾನ ತೂಕದ ಬೆಲ್ಲ ಸೇರಿಸಿ, ಬಾಣಲೆಯಲ್ಲಿ ಹದವಾಗಿ ಕುದಿಸಿ, ತಣ್ಣಗಾದ ನಂತರ ಆ ಮಿಶ್ರಣದಿಂದ ನೆಲ್ಲಿಕಾಯಿ ಗಾತ್ರದ ಉಂಡೆ ಮಾಡಿರಿ. ಬಾಯಾರಿಕೆ ಆದಾಗ ಒಂದು ಉಂಡೆ ಸೇವಿಸಿ ನೀರು ಕುಡಿಯಿರಿ. ಇದರಿಂದ ದೇಹ ತಂಪಾಗಿರುತ್ತದೆ. ಮಕ್ಕಳು ಈ ಉಂಡೆ ತುಂಬಾ ಇಷ್ಟ ಪಡುತ್ತಾರೆ. ಓದುವ ಮಕ್ಕಳ ಜ್ಞಾಪಕ ಶಕ್ತಿ ಕೂಡಾ ವೃದ್ಧಿಯಾಗುತ್ತದೆ.

ಜೀರಿಗೆ ಒಂದು ಉತ್ತಮ ಮನೆ ಮದ್ದು. ಇದರ ಸೇವನೆ ಬಹುಸುಲಭ ಹಾಗೂ ರುಚಿಕರ. ಪ್ರತೀ ದಿವಸ ಮನೆ ಮಂದಿ ಎಲ್ಲಾರೂ ಒಂದಲ್ಲ ಒಂದು ರೀತಿಯಲ್ಲಿ ಜೀರಿಗೆ ಸೇವಿಸಿ ಧೃಡಕಾಯರಾಗಿರಿ.

 ಹರಿಃ ॐ

*"ಓಂ"* ಮಂತ್ರ ಪಠಿಸಿ,
ಸರ್ವ ರೋಗ ನಿವಾರಿಸಿ

ಹಿಂದೂ ಧರ್ಮದ ಅನುಸಾರ *ಓಂ* ಗೆ ತನ್ನದೇ ಆದ ಮಹತ್ವ ಇದೆ. *ಓಂ* ಉಚ್ಛಾರ ಮಾಡದೇ ಯಾವುದೇ ಪೂಜೆಗಳು ಸಂಪೂರ್ಣವಾಗುವುದೇ ಇಲ್ಲ. ಮಂತ್ರಗಳಲ್ಲಿ *ಓಂ* ಉಚ್ಛಾರ ಮಾಡದೇ ಮಂತ್ರ ಹೇಗೆ ಪೂರ್ಣಗೊಳ್ಳುವುದು..? ಆದರೆ *'ಓಂ'*ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ.?

ಇಂದು ನಾವು ನಿಮಗೆ
*'ಓಂ'* ನಿಂದ ಉಂಟಾಗುವ ರಹಸ್ಯಮಯ ಶಾರೀರಿಕ ಉಪಯೋಗಗಳನ್ನು ಹೇಳುತ್ತೇವೆ. ಇವುಗಳನ್ನು ನಿಮ್ಮದಾಗಿಸಿಕೊಂಡರೆ ಸರ್ವ ರೋಗಗಳು ನಿಯಂತ್ರಣ ಹೊಂದುತ್ತದೆ.

*'ಓಂ'* ಮತ್ತು *ಥೈರಾಯ್ಡ್‌*:

'ಓಂ' ನ ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥೈರಾಯ್ಡ್‌ ಗ್ರಂಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ.

*ಓಂ* ಮತ್ತು *ಭಯ*

ನಿಮಗೆ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ಐದು ಬಾರಿ ದೀರ್ಘ ಶ್ವಾಸ ತೆಗೆದುಕೊಂಡು 'ಓಂ' ಎಂದು ಉಚ್ಛರಿಸಿ.

*ಓಂ* ಮತ್ತು  *ಒತ್ತಡ* :

ಇದು ಶರೀರದ ವಿಷ ಅಂಶಗಳನ್ನು ದೂರ ಮಾಡುತ್ತದೆ.
ಇದನ್ನು ಉಚ್ಛಾರ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ.

*ಓಂ* ಮತ್ತು *ರಕ್ತ ಸಂಚಾರ* :  

ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. 'ಓಂ' ಎಂದು ಹೇಳುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ.

*ಓಂ* ಮತ್ತು *ಪಚನ ಕ್ರಿಯೆ* : 

ಇದನ್ನು ಉಚ್ಛಾರ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ.

*'ಓಂ'* ಮತ್ತು *ಸ್ಫೂರ್ತಿ* : 

ಇದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಫೂರ್ತಿ ಹರಿದಾಡುತ್ತದೆ.

*ಓಂ* ಮತ್ತು *ಸುಸ್ತು* : 

ಆಯಾಸವನ್ನು ದೂರ ಮಾಡಲು ಸುಲಭ ಉಪಾಯ 'ಓಂ' ಉಚ್ಛಾರ ಮಾಡುವುದು.

*ಓಂ* ಮತ್ತು *ನಿದ್ರೆ* :

 ಸರಿಯಾಗಿ ನಿದ್ರೆ ಬರದೇ ಇದ್ದ ಸಂದರ್ಭದಲ್ಲಿ ಓಂ ಎಂದು ಪಠಣ ಮಾಡಿ. ಇದರಿಂದ ಮನಸ್ಸು ಶಾಂತವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.

*ಓಂ* ಮತ್ತು *ಶ್ವಾಸಕೋಶ* : 

'ಓಂ' ಉಚ್ಛಾರಣೆ ಶ್ವಾಸಕೋಶದ ತೊಂದರೆ ಕಡಿಮೆಯಾಗುತ್ತದೆ.

*ಓಂ* ಮತ್ತು *ಬೆನ್ನೆಲುಬು* : 

'ಓಂ' ಉಚ್ಛಾರ ಮಾಡುವುದರಿಂದ ಉಂಟಾಗುವ ಕಂಪನದಿಂದ ಬೆನ್ನೆಲುಬು ಗಟ್ಟಿಯಾಗುತ್ತದೆ ಹಾಗೂ ಮುಂದೆ ಇದರಿಂದ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ..

ಆರೋಗ್ಯದ ಖಜಾನೆ ಮೊಳಕೆ ಕಟ್ಟಿದ ಕಾಳುಗಳು

ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಾವು ಸೇವಿಸುವ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಪೋಷಕಾಂಶವುಳ್ಳ ಆರೋಗ್ಯಕರ ಆಹಾರವನ್ನು ನಾವು ಸೇವಿಸುತ್ತಿದ್ದಲ್ಲಿ ರೋಗ ರುಜಿನಗಳೊಂದಿಗೆ ಹೋರಾಡುವ ಶಕ್ತಿಯನ್ನು ನಾವು ಪಡೆದುಕೊಳ್ಳುತ್ತೇವೆ ಅಂತೆಯೇ ಸುಸ್ತು ಬಳಲಿಕೆ ನಮ್ಮನ್ನು ಹಿಂಬಾಲಿಸುವುದಿಲ್ಲ. ಅದರಲ್ಲೂ ಸಂಸ್ಕರಿಸಿದ ಆಹಾರಕ್ಕಿಂತ ಪುರಾತನ ಆರೋಗ್ಯ ಪದ್ಧತಿಗಳನ್ನು ನಾವು ಅನುಸರಿಸಿದಲ್ಲಿ ಉತ್ತಮ ಆರೋಗ್ಯವನ್ನು ನಾವು ಪಡೆದುಕೊಳ್ಳಬಹುದಾಗಿದೆ. ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಬಳಸುತ್ತಿದ್ದ ಆಹಾರಗಳೇ ಅವರ ಆರೋಗ್ಯದ ಗುಟ್ಟಾಗಿತ್ತು. ಮೊಳಕೆ ಕಟ್ಟಿದ ಕಾಳುಗಳು ಆರೋಗ್ಯಕ್ಕೆ ಉತ್ತಮ ಮಾರುಕಟ್ಟೆಯ ಆಹಾರ ಪದಾರ್ಥಗಳಿಗಿಂತಲೂ ತಾವು ಬೆಳೆದ ತರಕಾರಿ ಹಣ್ಣು, ಸೊಪ್ಪುಗಳನ್ನು ನಿತ್ಯದ ಬಳಕೆಗೆ ಬಳಸುತ್ತಿದ್ದರು ಅಂತೆಯೇ ನೆನೆಸಯಿಸಿದ ಕಾಳುಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದರು. ಹೆಚ್ಚಿನ ಪೋಷಕಾಂಶ ಮತ್ತು ವಿಟಮಿನ್ ಅಂಶಗಳನ್ನು ಹೊಂದಿರುವ ಮೊಳಕೆ ಬರಿಸಿದ ಕಾಳುಗಳು ದೈಹಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ದೇಹದ ಆಕಾರವನ್ನು ಸುಂದರಗೊಳಿಸುತ್ತದೆ. ಆಹಾ ನಾಲಿಗೆಯ ಸ್ವಾದವನ್ನು ಹೆಚ್ಚಿಸುವ ಮೊಳಕೆ ಕಾಳು ರೆಸಿಪಿ ಹೆಸರುಕಾಳು, ಮೆಂತೆ, ಹುರುಳಿ, ಕಡಲೆಯನ್ನು ನೆನೆಸಿಟ್ಟು ಅದನ್ನು ಸೇವಿಸುವುದರಿಂದ ದೇಹವು ಉತ್ತಮ ಚೈತನ್ಯವನ್ನು ಪಡೆದುಕೊಂಡು ಶಕ್ತಿಯನ್ನು ಪಡೆದುಕೊಳ್ಳಲಿದೆ. ಇಂದಿನ ಲೇಖನದಲ್ಲಿ ಮೊಳೆಕೆ ಕಾಳುಗಳ ಇನ್ನಷ್ಟು ಆರೋಗ್ಯ ಪ್ರಯೋಜನಗಳನ್ನು ನಾವು ತಿಳಿಸುತ್ತಿದ್ದು ಈ ಅಂಶಗಳನ್ನು ಕಂಡು ನೀವು ಬೆರಗಾಗುವುದು ಖಂಡಿತ ಮತ್ತು ಇಂದಿನಿಂದಲೇ ಇದರ ಸೇವನೆಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುತ್ತೀರಿ ಕೂಡ. ಆಹಾರದಲ್ಲಿ ಇರಲಿ ಮೊಳಕೆ ಕಾಳುಗಳ ಸತ್ವ!
ಕೂದಲಿಗೆ ಅತ್ಯುತ್ತಮ ನಿಮ್ಮ ಕೂದಲಿನ ಆರೋಗ್ಯಕ್ಕೆ ಮೊಳಕೆ ಕಾಳುಗಳು ಅತ್ಯುತ್ತಮವಾಗಿದೆ. ವಿಟಮಿನ್ ಸಿ ಅಂಶವನ್ನು ಇದು ಒಳಗೊಂಡಿದ್ದು, ಕೂದಲನ್ನು ಉದ್ದ ಮತ್ತು ದಟ್ಟವಾಗಿಸುತ್ತದೆ. ಮುಕ್ತ ರಾಡಿಕಲ್‎ಗಳ ಸಮಸ್ಯೆಯಿಂದ ಮುಕ್ತಿಗೊಳಿಸಿ ಕೂದಲನ್ನು ತೆಳ್ಳಗಾಗಿಸುವ ಅಂಶವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಬಿಳಿ ಕೂದಲಿನ ಸಮಸ್ಯೆಯನ್ನು ದೂರಗೊಳಿಸುತ್ತದೆ. ವಿಟಮಿನ್ ಹೇರಳವಾಗಿದೆ ವಿಟಮಿನ್‎ಗಳಾದ ಎ,ಬಿ,ಸಿ ಮತ್ತು ಇ ಮೊಳಕೆ ಕಾಳುಗಳಲ್ಲಿದ್ದು ಕಾಳುಗಳಲ್ಲಿ ಕೆಲವೇ ದಿನಗಳಲ್ಲಿ ಹುಟ್ಟಿಕೊಳ್ಳುವ ಮೊಳೆಕಯು 20% ದಷ್ಟು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಬೀನ್ಸ್ ಕಾಳು 285% ದಷ್ಟು ವಿಟಮಿನ್ ಬಿ1 ಅನ್ನು ಒಳಗೊಂಡಿದೆ ಎಂಬುದಾಗಿ ಅಧ್ಯಯನವು ತಿಳಿಸಿದೆ. ತೂಕ ಇಳಿಕೆಯಲ್ಲಿ ಸಹಾಯಕ ಫೈಬರ್ ಅಂಶವು ಮೊಳಕೆ ಕಾಳುಗಳಲ್ಲಿದ್ದು, ತೂಕ ಇಳಿಸುವುದರಲ್ಲಿ ಇದು ಗಮನಾರ್ಹ ಪಾತ್ರ ವಹಿಸುತ್ತದೆ. ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಇದು ವೃದ್ಧಿಸಿ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಫ್ಯಾಟಿ ಆಸಿಡ್ ಅಧಿಕವಾಗಿದೆ‎ ಮೊಳಕೆ ಕಾಳುಗಳಲ್ಲಿ ಫ್ಯಾಟಿ ಆಸಿಡ್‎ಗಳು ಹೇರಳವಾಗಿದೆ. ನಾವು ಸೇವಿಸುವ ಆಹಾರದಲ್ಲಿ ಈ ಫ್ಯಾಟಿ ಆಸಿಡ್‎ಗಳು ಇರುವುದಿಲ್ಲ. ಮೊಳಕೆ ಕಾಳುಗಳನ್ನು ಸೇವಿಸಿ ದೇಹಕ್ಕೆ ಬೇಕಾಗಿರುವ ಈ ಪೋಷಕಾಂಶಗಳನ್ನು ನಾವು ಒದಗಿಸಬೇಕು. ದೇಹದ ಕ್ಷಾರೀಕರಣವನ್ನು ಮಾಡುತ್ತದೆ ದೇಹವನ್ನು ಕ್ಷಾರೀಕರಣ ಮಾಡುವುದರಲ್ಲಿ ಮೊಳಕೆ ಕಾಳುಗಳ ಪಾತ್ರ ಹಿರಿದು. ಕ್ಯಾನ್ಸರ್‎ನಂತಹ ಪ್ರಾಣಾಂತಿಕ ಕಾಯಿಲೆಗಳೊಂದಿಗೆ ಇದು ಹೋರಾಡಿ ದೇಹದಲ್ಲಿ ಆಮ್ಲತೆಯನ್ನು ತಡೆಯುತ್ತದೆ. ಕಬ್ಬಿಣದ ಅಂಶ ದೇಹಕ್ಕೆ ಆಮ್ಲಜನಕವನ್ನು ಪೂರೈಸುವ ಕಬ್ಬಿಣದ ಅಂಶವನ್ನು ಮೊಳಕೆ ಕಾಳುಗಳು ಒಳಗೊಂಡಿವೆ. ಮಾನವನ ದೇಹಕ್ಕೆ ಅಗತ್ಯವಾಗಿರುವ ಕಬ್ಬಿಣದ ಅಂಶವು ಮೊಳಕೆ ಕಾಳುಗಳಿಂದ ದೊರೆಯಲಿದ್ದು ದೇಹಕ್ಕೆ ಸಾಮರ್ಥ್ಯವನ್ನು ಒದಗಿಸುತ್ತದೆ. ಉತ್ಕರ್ಷಣ ನಿರೋಧಿ ಅಂಶಗಳು ಮೊಳಕೆ ಕಾಳುಗಳಲ್ಲಿ ಉತ್ಕರ್ಷಣ ನಿರೋಧಿ ಅಂಶಗಳು ಹೇರಳವಾಗಿದ್ದು ನಮ್ಮ ಆರೋಗ್ಯ ಮತ್ತು ಕೂದಲು, ಉಗುರು, ತ್ವಚೆಯ ಅಭಿವೃದ್ಧಿಗೆ ಇದು ಅತಿ ಮುಖ್ಯವಾದುದು.

ರಾತ್ರಿ ಮಲಗುವಾಗ ನಿಮ್ಮ
ಬೆಡ್’ನ ಪಕ್ಕದಲ್ಲಿ ನಿಂಬೆ ಹಣ್ಣಿನ
ತುಂಡು ಇಡುದರಿಂದ
ಆಗುವ
ಉಪಯೋಗವನ್ನೊಮ್ಮೆ
ನೋಡಿ….



ನಿಂಬೆ ಹಣ್ಣನ್ನು ನಮ್ಮ ದಿನನಿತ್ಯ
ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತೇವೆ, ಇದರ
ಆರೋಗ್ಯಕರ ಗುಣಗಳ ಬಗ್ಗೆ ಅಲ್ಪ ಸ್ವಲ್ಪ
ತಿಳುವಳಿಕೆಯೂ ನಮ್ಮಲ್ಲಿ ಇದೆ. ಬಸ್ಸಿನಲ್ಲಿ
ಹೋಗುವಾಗ ವಾಂತಿ ಬರದಿರಲೆಂದು
ನಿಂಬೆ ಹಣ್ಣನ್ನು ಬ್ಯಾಗ್ ನಲ್ಲಿ ಹಾಕಿ
ಕೊಂಡೊಯ್ಯುತ್ತೇವೆ. ತುಂಬಾ
ಸುಸ್ತಾಗ ಒಂದು ನಿಂಬೆ ಜ್ಯೂಸ್ ಕುಡಿದರೆ
ರಿಫ್ರೆಶ್ ಆಗುವುದೆಂದೂ ನಮಗೆ ಗೊತ್ತು,
ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ತೆಳ್ಳಗಿನ ಮೈ
ಮಾಟ ಪಡೆಯಬಹುದೆಂದೂ ಗೊತ್ತು.
ಆದರೆ ಆ ಗುಣಗಳಲ್ಲದೆ ಮಧುಮೇಹ,
ಕ್ಯಾನ್ಸರ್, ಕರುಳಿನ ಸಮಸ್ಯೆಯಂತಹಾ
ದೊಡ್ಡ-ದೊಡ್ಡ ಕಾಯಿಲೆಯನ್ನು
ಬರದಂತೆ ತಪ್ಪಿಸುವ ಗುಣ ನಿಂಬೆ ಹಣ್ಣಿಗಿದೆ.
ಇದಲ್ಲದೆ ಇನ್ನೂ ಹಲವಾರು ಗುಣಗಳು…
ಲಾಭ ನಿಂಬೆ ಹಣ್ಣಿನಲ್ಲಿದೆ….ನಿಂಬೆ ಹಣ್ಣಿನ
ತುಂಡನ್ನು ರಾತ್ರಿ ಮಲಗುವಾಗ ಬೆಡ್’ನ
ಪಕ್ಕದಲ್ಲಿಟ್ಟು ಮಲಗುದರಿಂದ ಬಹಳಷ್ಟು
ಆರೋಗ್ಯಕರ ಲಾಭವನ್ನು
ಪಡೆಯಬಹುದು.
ಒತ್ತಡ ನಿವಾರಣೆ
ಕೆಲಸ-ಕಾರ್ಯ ಮುಗಿಸಿಕೊಂಡು ನಾವು
ರಾತ್ರಿ ಮಲಗುವಾಗ ನಾವು ತುಂಬಾ
ಸುಸ್ತಾಗಿರುತ್ತೇವೆ, ಕೆಲಸ ಕಾರ್ಯದ ಒತ್ತಡ
ಕೂಡ ನಮ್ಮನ್ನು ಆವರಿಸಿರುತ್ತೆ. ಈ ವೇಳೆ
ನಿಂಬೆ ಹಣ್ಣಿನ ತುಂಡನ್ನು ಬೆಡ್’ನ
ಪಕ್ಕದಲ್ಲಿಟ್ಟು ಮಲಗುದರಿಂದ ಅದರ ಪರಿಮಳ
ನಮ್ಮ ನಾರಾ ಮತ್ತು ಭಾವನೆಗಳನ್ನು
ಶಮನಗೊಳಿಸಿ ಎಲ್ಲ ಒತ್ತಡಗಳನ್ನು
ನಿವಾರಿಸುತ್ತೆ.
ಸುಖ ನಿದ್ರೆ
ಕೆಲವರು ಬೆಡ್ ರೂಮಿನಲ್ಲಿ ಮಲಗುವಾಗ
ಅವರಿಗೆ ನಿದ್ರೇನೇ ಬರಲ್ಲ.
ನಿದ್ರಾಹೀನತೆಯಿಂದ ಅವರು
ಬಳಲುತ್ತಾರೆ. ಇಂಥ ಸಂದರ್ಭದಲ್ಲಿ ನಿಂಬೆ
ಹಣ್ಣಿನ ತುಂಡು ಮೆದುಳಿಗೆ ವಿಶ್ರಾಂತಿ
ನೀಡುವ ಮೂಲಕ ಸುಖ ನಿದ್ರೆಯನ್ನು
ಭರಿಸುತ್ತದೆ.
ಉಸಿರಾಟದ ಸಮಸ್ಯೆಗೆ
ಶೀತ ಅಥವಾ ತೀವ್ರ ಅಲರ್ಜಿಯಿಂದ
ಬಳಲುವವರು ಕೊನೆಯಲ್ಲಿ ಮಲಗುವ
ವೇಳೆ ಉಸಿರುಕಟ್ಟಿದಂತಾಗುತ್ತದೆ.
ಜೊತೆಗೆ ಸೈನೆಸ್ಸ್ ಸಮಸ್ಯೆಯಿಂದ
ಬಳಲುವವರಿಗೂ ಈ ನಿಂಬೆ ಹಣ್ಣಿನ ತುಂಡು
ಬಹಳ ಉಪಕಾರಿ. ನಿಂಬೆಯಲ್ಲಿ ಔಷಧೀಯ
ಗುಣವಿರುದರಿಂದ ತಾಜಾ
ಗಾಳಿಯೊಂದಿಗೆ ನಿಂಬೆ ಹಣ್ಣಿನ ಪರಿಮಳವು
ನೇರವಾಗಿ ಮೂಗಿಗೆ ಹೋಗಿ ಕಟ್ಟಿದ
ಉಸಿರಾಟವನ್ನು ಉಪಶಮನಗೊಳಿಸುತ್ತೆ.
ಕೀಟ ನಿವಾರಕ
ಮಲಗುವ ಕೊನೆಯಲ್ಲಿ ಸೊಳ್ಳೆ
ಸೇರಿದಂತೆ ಇನ್ನಿತರ ಕ್ರಿಮಿ ಕೀಟಗಳಿಂದ
ದಿನನಿತ್ಯ ಕಿರಿಕಿರಿ ಅನುಭವಿಸುವವರಿಗೆ ನಿಂಬೆ
ಹಣ್ಣಿನ ತುಂಡು ಬಹುಪಕಾರಿ. ನಿಂಬೆ
ಹಣ್ಣಿನ ಪರಿಮಳಕ್ಕೆ ಸೊಳ್ಳೆ, ಕ್ರಿಮಿಕೀಟಗಳು
ಬರುದಿಲ್ಲ.
ಬೆಳಗ್ಗೆ ಹೆಚ್ಚು ಶಕ್ತಿ ಜೊತೆ ಉಲ್ಲಾಸ
ನೀಡುತ್ತೆ
ಕೊನೆಯಲ್ಲಿ ನಿಂಬೆ ಹಣ್ಣಿನ ತುಂಡು
ಇಡುದರಿಂದ ಅದರ ಪರಿಮಳವು ಬೆಳಗ್ಗೆ
ಏಳುವಾಗ ನಮ್ಮನ್ನು ಹೆಚ್ಚು
ಶಕ್ತಿಯುತರನ್ನಾಗಿಸುವ ಜೊತೆಗೆ
ಉಲ್ಲಾಸಭರಿತರನ್ನಾಗಿಸುತ್ತೆ. ಅಂತ ಶಕ್ತಿ
ನಿಂಬೆಗಿದೆ.

 Benefits of sleeping on your left side. 

In ayurved it is called Vamkushi..


1. Prevents snoring.
2. Pregnant women get the advantage of better blood circulation, flowing of blood to uterus, fetus, and kidneys and relief from back ache.
3. Helps in proper digestion after meals.
4. Gives relief to people having back and neck pain.
5. Helps in filtering and purifying toxins, lymph fluids and wastes.
6. Prevents serious illness as accumulated toxins are flushed out easily.
7. Liver and kidneys work better
8. Smooth bowel movements
9. Reduces workload on heart and its proper functioning
10. Prevents acidity and heartburn
11. Prevents fatigue during morning
12. Fats gets digested easily
13. Positive impact on brain
14. It delays onset of Parkinson’s and Alzheimer
15. It is also considered to be the best sleeping position according to Ayurveda.

Everyone has a different habit of sleeping and it might be difficult for them to change it. But now that we know about so many benefits of sleeping on the left side, we must give it a try. After all, it’s a question of getting healthier day-by-day and it will be no-big change if you make efforts. So, till now if you were sleeping on either right side, back or on stomach, try sleeping on your left side and see the benefits you get. Keep a check!                                           


*ಆರೋಗ್ಯ ಮಾಲಿಕೆ*
*ಮನೆಮದ್ದು*
*ಸತಾಯಿಸುವ 'ಹೊಟ್ಟೆ ನೋವಿಗೆ', ಇಲ್ಲಿದೆ ಸಿಂಪಲ್ ಮನೆಮದ್ದು*

ಹೊಟ್ಟೆ ನೋವು ಎನ್ನುವುದು ಎಲ್ಲಾ ವಯಸ್ಸಿನಲ್ಲಿ ವಿವಿಧ ಕಾರಣಗಳಿಂದ ಬರುವಂತಹ ಸಾಮಾನ್ಯ ಆರೋಗ್ಯ ಸಮಸ್ಯೆ. ಇದಕ್ಕೆಲ್ಲಾ ಮುಖ್ಯ ಕಾರಣ, ಯಾವುದೋ ಅಗ್ಗದ ಅಥವಾ ಹಾಳಾದ, ಕ್ರಿಮಿಗಳಿಂದ ಕೂಡಿದ ಆಹಾರ ಹೊಟ್ಟೆ ಸೇರಿದರೆ, ಅಜೀರ್ಣ ಸಮಸ್ಯೆ, ಆಹಾರ ವಿಷವಾಗುವುದು, ಆಹಾರದ ಅಲರ್ಜಿ, ಅಲ್ಸರ್, ಮಲಬದ್ಧತೆ, ಹೊಟ್ಟೆಯ ವೈರಸ್, ಗ್ಯಾಸ್ ಹರ್ನಿಯಾ, ಹೀಗೆ ಮುಂತಾದ ಹಲವಾರು ಸಮಸ್ಯೆಗಳಿರಬಹುದು, ಹಾಗಂತ ಸಮಸ್ಯೆ ಚಿಕ್ಕದೆಂದು ಉದಾಸೀನ ಮಾಡುವಂತಿಲ್ಲ!ಆದರೆ, ಕೆಲವರು ಇಂತಹ ಸಮಸ್ಯೆ ಬಗ್ಗೆ ಗೆಳೆಯ/ತಿಯರಲ್ಲೂ ಹೇಳಿಕೊಳ್ಳಲು ಸಂಕೋಚ ಪಟ್ಟುಕೊಳ್ಳುತ್ತಾರೆ, ಇಲ್ಲಿ ಪ್ರತಿಷ್ಠೆಯ ಪ್ರಶ್ನೆಯೇ ಅವರಿಗೆ ಮುಖ್ಯವಾಗಿರುತ್ತದೆ!, ಅದರಲ್ಲೂ ಹಿಂದಿನ ಕಾಲದ ನಮ್ಮ ಅಜ್ಜ, ಅಜ್ಜಿ ಹೇಳುವ ಟಿಪ್ಸ್ ಈ ಕಾಲದವರಿಗೆ ರುಚಿಸುವುದಿಲ್ಲ. ಡಾಕ್ಟರ್ ಹತ್ತಿರ ಹೋಗಿ ಹಣ ತೆತ್ತು ಬಂದು ತಾತ್ಕಾಲಿಕ ಪರಿಹಾರ ಪಡೆಯುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ! ಚಿಂತಿಸದಿರಿ ಹೊಟ್ಟೆನೋವಿನಿಂದ ಸ್ವಲ್ಪ ಮಟ್ಟಿನ ಆರಾಮ ಕೊಡುವ ಸರಳವಾದ ಮನೆಮದ್ದನ್ನು ನೀಡಿದ್ದೇವೆ ಮುಂದೆ ಓದಿ..... ಅಪ್ಪಿತಪ್ಪಿಯೂ ಹೊಟ್ಟೆ ನೋವನ್ನು ನಿರ್ಲಕ್ಷಿಸಬೇಡಿ ದಯವಿಟ್ಟು ಗಮನಿಸಿ: ಒಂದು ವೇಳೆ, ಹೊಟ್ಟೆನೋವು ತೀವ್ರವಾಗಿದ್ದರೆ ಮತ್ತು ನಿರಂತರವಾಗಿದ್ದರೆ ಆಗ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಸಲಹೆ ಪಡೆದುಕೊಳ್ಳಿ
   
*ಶುಂಠಿ*

ಶುಂಠಿಯಲ್ಲಿ ಉರಿಯೂತ ಶಮನಕಾರಿ ಗುಣ ಮತ್ತು ಇತರ ಆರೋಗ್ಯಕಾರಿ ಲಾಭಗಳಿವೆ. ಇದು ಜೀರ್ಣಕ್ರಿಯೆ ಸರಾಗವಾಗಿಸಿ ಹೊಟ್ಟೆ ನೋವು ಕಡಿಮೆ ಮಾಡುತ್ತದೆ. ಒಣಗಿದ ಶುಂಠಿಗಿಂತ ಹಸಿ ಶುಂಠಿ ಹೆಚ್ಚು ಪರಿಣಾಮಕಾರಿ.ಇದಕ್ಕಾಗಿ ಹಸಿಶುಂಠಿಯ ಒಂದಿಂಚಿನ ತುಂಡನ್ನು ಜಜ್ಜಿ ಹಾಲಿಲ್ಲದ ಟೀ ಜೊತೆ ಕುದಿಸಿ ಸೋಸಿ ಬಿಸಿಯಾಗಿರುವಂತೆಯೇ ಸೇವಿಸುವುದರಿಂದ ಹೊಟ್ಟೆನೋವು ಕೂಡಲೇ ಕಡಿಮೆಯಾಗುತ್ತದೆ. ಜೊತೆಗೆ ಹುಳಿತೇಗು, ವಾಕರಿಕೆ ಮತ್ತು ವಾಂತಿಯನ್ನೂ ನಿಲ್ಲಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ಕೊಂಚ ಜೇನನ್ನೂ ಸೇರಿಸಬಹುದು.
   
*ಲಿಂಬೆ ಹಣ್ಣು ಮತ್ತು ಅಡುಗೆ ಸೋಡ....*

ಒಂದು ಲೋಟ ನೀರಿಗೆ ಒಂದು ಲಿಂಬೆ ಹಣ್ಣಿನ ರಸ ಹಿಂಡಿ, ಅರ್ಧ ಟೀ ಚಮಚ ಅಡಿಗೆ ಸೋಡ ಸೇರಿಸಿ, ದಿನಕ್ಕೆ ಒಂದು ಗ್ಲಾಸ್ ಸೇವಿಸಿದರೆ ಹೊಟ್ಟೆನೋವಿನ ಸಮಸ್ಯೆಯೊಂದಿಗೆ, ಅಜೀರ್ಣದ ಸಮಸ್ಯೆಯೂ ನಿವಾರಣೆಯಾಗುವುದು.
   
ಉಗುರುಬೆಚ್ಚನೆಯ ನೀರು+ಉಪ್ಪು

ಒಂದು ವೇಳೆ ಹೊಟ್ಟೆಯುಬ್ಬರಿಸಿ ಹೊಟ್ಟೆನೋವಾಗುತ್ತಿದ್ದರೆ, ಒಂದು ಲೋಟ ಉಗುರುಬೆಚ್ಚನೆಯ ಬಿಸಿನೀರಿಗೆ ಒಂದು ಚಿಕ್ಕ ಚಮಚ(ತೀವ್ರವಾಗಿದ್ದರೆ ಎರಡು ಚಮಚ) ಅಡುಗೆ ಉಪ್ಪು ಹಾಕಿ ಕದಡಿ ಕುಡಿಯಿರಿ. ಬೆಳ್ಳಂ ಬೆಳಿಗ್ಗೆ ಕುಡಿಯಿರಿ, ಉಪ್ಪು ಬೆರೆಸಿದ ಬೆಚ್ಚನೆಯ ನೀರು
   
ಪುದೀನಾ ಎಲೆಗಳ ಜ್ಯೂಸ್

ಹೊಟ್ಟೆನೋವು, ವಾಕರಿಕೆ ಮತ್ತು ವಾಂತಿಗೆ ಪುದೀನಾ ಎಲೆಗಳ ರಸ ಉತ್ತಮ ಪರಿಹಾರವಾಗಿದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಆರು ದೊಡ್ಡ ಪುದೀನಾ ಎಲೆಗಳ ಪ್ರಮಾಣದಲ್ಲಿ ಜ್ಯೂಸರ್‌ನಲ್ಲಿ ಅಗತ್ಯವಿದ್ದಷ್ಟು ರಸವನ್ನು ಸಿದ್ಧಪಡಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
   
ಪುದೀನಾ ಎಲೆಗಳ ಜ್ಯೂಸ್

ಈ ನೀರನ್ನು ಒಂದರಿಂದ ಮೂರು ಲೋಟಗಳವರೆಗೂ ಕುಡಿಯಬಹುದು. ಇನ್ನೂ ಉತ್ತಮ ಪರಿಣಾಮಕ್ಕಾಗಿ ಒಂದು ಬಾರಿಗೆ ಆರು ಎಲೆಗಳನ್ನು ಹಸಿಯಾಗಿ ಜಗಿದು ನೀರಿನೊಂದಿಗೆ ನುಂಗಬಹುದು. ಈ ರಸವನ್ನು ಊಟದ ಬಳಿಕ ಸೇವಿಸಬೇಕು.
   
*ಏಲಕ್ಕಿ+ ಜೀರಿಗೆ*

ಅಜೀರ್ಣದ ಕಾರಣದಿಂದ ಹೊಟ್ಟೆನೋವಾಗಿದ್ದರೆ ಒಂದು ಲೋಟ ನೀರಿಗೆ ಸುಮಾರು ಐದರಿಂದ ಆರು ಏಲಕ್ಕಿಗಳ ಸಿಪ್ಪೆ ಸುಲಿದು ಕೇವಲ ಬೀಜಗಳನ್ನು ಮತ್ತು ಒಂದು ಚಿಕ್ಕ ಚಮಚ ಜೀರಿಗೆಯನ್ನು ಹಾಕಿ ಕುದಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
   
*ಏಲಕ್ಕಿ+ ಜೀರಿಗೆ*

ಸುಮಾರು ಮೂರು ನಿಮಿಷ ಕುದಿದ ಬಳಿಕ ಒಲೆಯಿಂದಿಳಿಸಿ ತಣಿಯಲು ಬಿಡಿ. ಈ ನೀರನ್ನು ದಿನಕ್ಕೆ ಮೂರು ಬಾರಿ ಊಟದ ಬಳಿಕ ಕುಡಿಯಬಹುದು.




🌍🆕s 🌍  M🌶RCH🌶🌍

No comments:

Post a Comment