Wednesday 8 March 2017

ಮಗಳ ಜಾತಕದಿಂದ, ಅವಳ ಅಜ್ಜನ ಬಗ್ಗೆ ಹೇಳುವಂತಹ ವಿಧಾನ (ಭಾವಾತ್ ಭಾವವನ್ನ ಉಪಯೋಗಿಸಲಾಗಿದೆ)

ಮಗಳ ಜಾತಕದಿಂದ, ಅವಳ ಅಜ್ಜನ
ಬಗ್ಗೆ ಹೇಳುವಂತಹ ವಿಧಾನ
(ಭಾವಾತ್ ಭಾವವನ್ನ ಉಪಯೋಗಿಸಲಾಗಿದೆ)

ಚಂದ್ರ      6



           ೭

           ೮

          ೯

ಕೇತು       5

ಮಗಳ ಅಜ್ಜನ ಕುಂಡಳಿ


ಗುರು(ವ)  ೧೦

4

 
  ಶನಿ
  ರಾಹು     ೧೧
ರವಿ
ಬುಧ        ೩
ಕುಜ


ಶುಕ್ರ      

ಲಗ್ನ  ೧

     ೧೨



Predicions :-

1.              Her grandfather’s horoscope is having Libra Ascendant. And his 10th house occupied by retrograded Jupiter. So he must be a teacher that too very famous teacher! It is because Jupiter is exalted and also in retrograde form. In retrograde i condition or in Vakri form, any planet gets double strength. Again the rashi lord is Moon which supports agriculture fields!
a.              ಮಗಳ ಅಜ್ಜನ (ಸದಿಯಮಾಸ್ತರ್ ಅವರ) ಜಾತಕವನ್ನ ಮಗಳ ಜಾತಕದಿಂದಲೇ ಆಯ್ಕೆಯನ್ನ ಮಾಡಲಾಗಿದೆ. ಮಗಳ ಜಾತಕದಲ್ಲಿ ನೇ ಮನೆಯು ಅವಳ ತಂದೆಯದ್ದಾದರೆ, ನೇ ಮನೆಯಿಂದ ೯ನೇ ಮನೆಯು ಅವಳ ಅಜ್ಜನ ಲಗ್ನವಾಗುತ್ತದೆ. ಅಂದರೆ ಅಜ್ಜನ ಲಗ್ನವು ತುಲಾ ರಾಶಿಯಾಗಿರುತ್ತದೆ. ಮನೆಯಿಂದ ೧೦ನೇ ಮನೆಯಾದ ಕಟಕ ರಾಶಿಯಲ್ಲಿ ಬ್ರಹಸ್ಪತಿಯು ವಕ್ರಿಯಾಗಿ ಉಛ್ಛ ಸ್ಥಿತಿಯಲ್ಲಿರುವನು. ಬ್ರಹಸ್ಪತಿಯು ಪ್ರಾಧ್ಯಾಪಕ ವೃತ್ತಿಗೆ ಕಾರಕನಾದ ಕಾರಣ, ಅವಳ ಅಜ್ಜನು ಪ್ರಾಧ್ಯಾಪಕ ವೃತ್ತಿಯನ್ನ ಮಾಡುವವರಾಗಿರುತ್ತಾರೆ. ಆತನು ಉಛ್ಛನಾದ ಕಾರಣ ಅವರು ಕ್ಷೇತ್ರದಲ್ಲಿ ಬಹಳ ಹೆಸರುವಾಸಿಯಾಗಿದ್ದರು. ಅವರು ಕೋಟ ಹದಿನಾಲ್ಕು ಗ್ರಾಮದಲ್ಲಿಯೇ ಬಹಳ ಫೇಮಸ್ ಪ್ರಾಧ್ಯಾಪಕರಾಗಿ ಹೆಸರನ್ನ ಗಳಿಸಿದ್ದರು. ಮತ್ತೆ ಕಟಕ ರಾಶಿಯ ಅಧಿಪತಿ ಚಂದ್ರನಾಗಿದ್ದು, ಚಂದ್ರನು ವ್ಯವಸಾಯ ಕ್ಷೇತ್ರವನ್ನ ಪ್ರತಿನಿಧಿಸುತ್ತದೆ. ತುಲಾರಾಶಿ ಕೂಡ ದೊಡ್ಡ ರೀತಿಯ ವ್ಯಾಪಾರ, ವ್ಯವಹಾರವನ್ನ ಮಾಡುವಂತಹ ರಾಶ್ಯಾದ ಕಾರಣ, ಇವರು ಬಹಳಸ್ಟು ವ್ಯವಹಾರ ಜಾಣರೆಂದರೆ ತಪ್ಪಾಗಲಿಕ್ಕಿಲ್ಲ.
2.              Since he is man of Tula Lagna, he is of 64 kalas. He is good writer of dramas and kannada songs. He is good singer, though he has not got any good training. He is a good actor also! HE arranges marriages!. He is good village first aid doctor. He is a good orgainser of a function etc!
a.              ಅಜ್ಜನ ಲಗ್ನವು ತುಲಾ ರಾಶಿಯಾಗಿದ್ದು, ಅದರ ಅಧಿಪತಿ ಶುಕ್ರನಾಗಿರುತ್ತಾನೆ. ಶುಕ್ರನು ೬೪ ಕಲೆಗಳಿಗೆ ಅಧಿಪತಿಯಾದುದರಿಂದ, ಇವರು ಬರೆವಣಿಗೆಯಲ್ಲಿ, ಹಾಡಿನಲ್ಲಿ, ನಾಟಕದಲ್ಲಿ, ನಾಟಕವನ್ನ ಬರೆಯುವಲ್ಲಿ, ನಾಟಕವನ್ನ ಡೈರೆಕ್ಟ ಮಾಡುವಲ್ಲಿ, ಭಜನೆಯಲ್ಲಿ,ಕುಣಿತದಲ್ಲಿ ನಾಟಿ ಔಷಧವನ್ನ ಜಾನುವಾರು  ಹಾಗೂ ಮನುಷ್ಯರುಗಳಿಗೆ ಕೊಡುವಲ್ಲಿ ಬಹಳ ಪ್ರಖ್ಯಾತಿಯನ್ನ ಪಡೆದವರು!
3.              Libra ascendant natives are very lucky fellows always. It is because they will be having Saturn as yoga karaka planet being 4th and 5th lord. It means it is the lord of Kendra as well as trine! This makes them to eat always in Five star hotels only. Or they live lavishly. Though nothing with them, the people all around them will talk always the person must be a Crorepati!
a.              ತುಲಾ ಲಗ್ನದವರು ಯಾವಾಗಲೂ ಲಕ್ಕಿ ವ್ಯಕ್ತಿಗಳು. ಇದಕ್ಕೆ ಕಾರಣ ಶನಿಯು ಮತ್ತು ನೇ ಮನೆಯ ಅಧಿಪತಿ. ಅಂದರೆ ಕೇಂದ್ರಾತ್ ಹಾಗೂ ತ್ರಿಕೋಣಾತ್ ಅಧಿಪತಿಯಾದುದರಿಂದ ಶನೈಸ್ಚರನು ನಿಧಾನವಾಗಿ ಕೊಟ್ಟರೂ ಅವರನ್ನ ಕೋಟ್ಯಾಧೀಶರನ್ನಾಗಿ ಮಾಡುವಲ್ಲಿ ಎಳ್ಳಸ್ಟೂ ಸಂಕೋಚವನ್ನ ಪಡುವುದಿಲ್ಲ. ಒಂದು ವೇಳೆ ಅವರಲ್ಲಿ ಕೋಟಿ ಹಣವೇನಾದರೂ ಇರದೇ ಹೋದರೂ ಜನರೆಲ್ಲರೂ ಅವರನ್ನ ಕೋಟಿ ಹಣವಿದ್ದವರಂತೆಯೇ ತಿಳಿಯುತಾರೆ. ಅದು ಅವರ ಶ್ರೇಷ್ಠತೆ!. ಅವರು ಗಂಜಿಯನ್ನ ಉಂಡರೂ ಕೂಡ, ಜನರು ಅವರುಗಳು ಪಂಚತಾರಾ ಹೋಟೇಲಿನಲ್ಲಿಯೇ ಊಟವನ್ನ ಮಾಡುತ್ತಾರೆಂದು ತಿಳಿಯುವರು! ಅವರಲ್ಲಿ ಅಸ್ಟೇನೂ ಬ್ಯಾಂಕಿನಲ್ಲಿ ಡೆಪಾಸಿಟನ್ನ ಇಟ್ಟಿಲ್ಲದೇ ಇದ್ದರೂ, ಅವರ ಹತ್ತಿರ ನಿಧಿ ಇದೆ ಅಂತ ಹೇಳುವಂತಹ ಜನರು ಅನೇಕರು! ಒಟ್ಟಾರೇ ಅವರನ್ನ ಕೋಟ್ಯಾಧೀಶರಂತಲೇ ಜನರು ತಿಳಿದಿರುವುದು ಅವರ ಜಾತಕದಲ್ಲಿಯ ಒಳ್ಳೇ ಫಲಗಳಿಂದಲೇ!
4.              The lord Venus is in just in the house of family or Kutumbha stan. So this native must be having a very good family and also lead peaceful family life and  is merry going family life indeed! They are always in flying colours!
a.              ಇನ್ನು ಶುಕ್ರನು ಕುಟುಂಬ, ಧನ್ ಹಾಗೂ ವಾಕ್ ಸ್ಥಾನದಲ್ಲಿರುವುದರಿಂದ ಇವರುಗಳು ತಮ್ಮ ಸಂಸಾರವನ್ನ ಒಳ್ಳೇ ರೀತಿಯಲ್ಲಿ ತೂಗಿಸಿಕೊಂಡು ಹೋದವರು. ಅವರುಗಳು ಸಂಸಾರದಲ್ಲಿ ಯಾವಾಗಲೂ ಸಂತೋಷವನ್ನೇ ಕಂಡವರು.ಇವರುಗಳು ಮಾತಿನ ಮಲ್ಲರು ಹಾಗೂ ಮಾತಿನಲ್ಲಿಯೇ ಮೋಡಿಯನ್ನ ಮಾಡುವಂತಹವರು. ಇದೆಲ್ಳಾ ಶುಕ್ರನ ಕಾರಕತ್ವದ ಮಹತ್ವವೇ ಕಾರಣ! ಇವರಲ್ಲಿ ಮಕ್ಕಳ ಸಂಪತ್ತಿದ್ದರೂ ಕೈಯಲ್ಲಿಯೂ ಯಾವಾಗಲೂ ಹಣವೇ ಹಣವಿರುತ್ತಿತ್ತು!
5.              His 3rd house is occupied by Sun. Mars and Mercury indicating he is very good at his communication and also very bold person. Normally 3rd house is 2nd house to 2nd house. So this native was always blessed buy his siblings in accumulating finance to his family. For that matter only one lady who was there as his sister was sole responsible for bring up his family by her sheer support to their father. Even she was responsible to build one whole kitchen in their house!
a.              ಅವರ ಮೂರನೇ ಮನೆಯನ್ನ ರವಿ, ಕುಜ ಮತ್ತು ಬುಧರು ಇದ್ದ ಕಾರಣ, ವ್ಯಕ್ತಿ ಅತೀ ಒಳ್ಳೆಯ ಸಿಹಿ ಮಾತನಾಡುವ್ವರಾಗಿದ್ದರು. ಸಾಮಾನ್ಯವಾಗಿ ನೇ ಮನೆಯು ೨ನೇ ಮನೆಗೆ ೨ನೇ ಮನೆ. ಆದ್ದರಿಂದ ಜಾತಕನ ಅಕ್ಕ-ತಂಗಿಯರು ಇವರ ಸಂಸಾರಕ್ಕಾಗಿ ಧನ ಸಂಪಾದನೆಯನ್ನ ಮಾಡಿದವರು!. ಗ್ರೇಟ್! ಇದು ಅವರ ನಿಜ ಜೀವನದಲ್ಲಿಯೂ ಸತ್ಯ ಘಟನೆ! ಇದ್ದ ಒಬ್ಬಳೇ ಒಬ್ಬಳು ಅಕ್ಕ ಭೀಮಕ್ಕಳು ಇವರ ಸಂಸಾರಕ್ಕಾಗಿಯೇ ದುಡಿದ್ದದ್ದು ಜಾಸ್ತಿ!. ಹೆಚ್ಚೇಕೆ? ಇವರ ಹಳೆಯ ಹಂಚಿನ ಮನೆ ಯಲ್ಲಿರುವ ಅಡುಗೆ ಮನೆಯನ್ನ ಕಟ್ಟಿಸಿಕೊಟ್ಟವರೇ ಅವರು ಮತ್ತು ಅವರ ಹಣದಿಂದ.
6.              His 4th house is empty and the lord is Saturn with Rahu in his 11th house. So he is blessed with immense agricultural products and their realisation and making him a “Crorepati” though he is not having literally CRORES OF RUPEES!
a.              ಇವರ ೪ನೇ ಮನೆಯು ಖಾಲಿಯಾಗಿದ್ದು, ಅದರ ಅಧಿಪತಿ  ಶನಿಯು ರಾಹುವಿನೊಟ್ಟಿಗೆ  ಇವರ ತುಲಾ ಲಗ್ನದಿಂದ ೧೧ ನೇ ಮನೆಯಲ್ಲಿರುವನು! ಅಂದರೆ ಇವರಿಗೆ ವ್ಯವಸಾಯ ವೃತ್ತಿಯೇ ಲಾಭವನ್ನ ತೆಗೆದುಕೊಂಡಿತು ಅಂದರೆ ನಂಬುವಿರಾ? ಇವರ ಪಿತ್ರಾರ್ಜಿತ ಆಸ್ತಿಯಾದ ಮೂರು ಮುಡಿ ಗದ್ದೆಯಿಂದ ಅದನ್ನ ಮುಡಿ ಗದ್ದೆಯನ್ನಾಗಿ ಇವರಕಾಲದಲ್ಲಿ ಕಸ್ಟ ಪಟ್ಟು ಮಾಡಿದರೆಂದರೆ ಅದು ಶನಿಯ ಕೃಪೆಯೇ ಸರಿ! ವ್ಯವಸಾಯದಲ್ಲಿ ಸೆಣಸೊಂದಕ್ಕೆ ಒಂದು ಮುಡಿ ಭತ್ತವನ್ನ ಬೆಳೆಸುವವರೆಂದು ಇಡೀ ಕೋಟ ಹದಿನಾಲ್ಕು ಗ್ರಾಮಗಳಿಗೇ ಇವರ ಹೆಸರು ಪ್ರಸಿಧ್ಧಿ ಇತ್ತು!
7.              4th house is 12th house to 5th house. It means his children will spend money mostly for their high school education and for their happiness.
a.              ಇನ್ನು ನೇ ಮನೆಯು ೫ನೇ ಮನೆಗೆ ೧೨ ನೇ ಮನೆ! ಅಂದರೆ ಇವರ ಮಕ್ಕಳು ಅವರ ವಿದ್ಯಾಭ್ಯಾಸಕ್ಕಾಗಿ ಹಣವನ್ನ ಖರ್ಚು ಮಾಡಿದರಂತಾಯಿತು!
8.              His 5th house is occupied by Ketu and hence he is blessed with god Vinayaka’ A the lord of that house is Shani, he must be having vast faith in lord Anjaneya!  Saturn is also associated with Rahu, means he must be having a habit of performing Naga Pooja regularly, once in a year!
a.              ಜಾತಕನ ನೇ ಮನೆಯನ್ನ ಕೇತು ಗ್ರಹವು ಆಕ್ರಮಿಸಿದ್ದು, ಇವರಿಗೆ ಸದಾ ವಿನಾಯಕನ ಕೃಪೆಯನ್ನ ಕೊಡುವವನಾಗಿ ನಿಂತನು. ಇನ್ನು ಶನಿ ಮಹಾರಾಜನು ರಾಹು ಗ್ರಹದೊಡನೆ ಇರುವುದರಿಂದ, ರಾಹು ಗ್ರಹವನ್ನ ಸರ್ಪದ ಪ್ರತೀಕವೆನ್ನುವ ಕಾರಣ ಇವರುಗಳು ತಮ್ಮ ಜೀವನದಲ್ಲಿ ವರ್ಷಕೊಮ್ಮೆಯಾದರೂ ನಾಗನಿಗೆ ಹಾಲು ಮತ್ತು ಕಲಷಾಭಿಶೇಖವನ್ನ ಮಾಡುವವರಾಗಿದ್ದರುಶನಿಯ ಕಾರಣದಿಂದ ಆಂಜನೇಯನ ಭಕ್ತರಾಗಿದ್ದು ಮಾತೆತ್ತಿದರೆ ಸಾಲಿಗ್ರಾಮದ ಆಂಜನೇಯನಿಗೆ ಸಕ್ಕರೆಯ ಇಲ್ಲಾ ಕಡಲೇ ಪಂಚಕಜ್ಜಾಯದ ರಂಗ ಪೂಜೆಯನ್ನ ಮಾಡುವವರಾಗಿದ್ದರು!
9.              His 6th house is occupied by Moon. So he must be having cough related problems , including Pneumonia. 6th house is 12th house to his 7th house. It means the native’s wife if she spends, she will spend like wholeheartedly.
a.              ಜಾತಕರ ನೇ ಮನೆಯನ್ನ ಚಂದ್ರನು ಆಕ್ರಮಿಸಿಕೊಂಡಿದ್ದಾನೆ. ಅಂದರೆ ಇವರುಗಳು ಸದಾ ಕಫದ ಪ್ರಕೃತಿಯವರು. ಆದ್ದರಿಂದ ಇವರಿಗೆ ಕಫ ಪೀಡಿತ ಜ್ವರ ಬರುವುದೇ ಜಾಸ್ತಿ. ಕೊನೆಗೂ ಅಂತ್ಯಕಾಲದಲ್ಲಿ ನ್ಯುಮೋನಿಯಾದಿಂದಲೇ ಅವರು ಅಸುನೀಗಿದರು!
10.        His 7th house is empty whereas the lord of 7th house is Mars, which is in his 3rd house along with Sun and Mercury!  So, his wife must be a hard hitting lady with egoistic characteristics used to appear on her face! It is because of Sun and Mars. She is equally an intelligent lady as Mercury is also associated with them!
a.              ಇವರ ಕಳತ್ರ ಸ್ಥಾನವಾದ ೭ನೇ ಮನೆಯು ಖಾಲಿ. ಆದರೆ ಅದರ ಅಧಿಪತಿ ಕುಜನು ರವಿಯೊಂದಿಗೆ ಹಾಗೂ ಬುಧನೊಂದಿಗೆ ಗುರುವಿನ ಮನೆಯಾದ ಧನುಸ್ಸು ರಾಶಿಯಲ್ಲಿರುವರು. ಅಂದರೆ ಇವರ ಪತ್ನಿ ಬಹಳ ಮುಸುಂಡೀ ಮುಖದವರು. ಫಾಟ್ ಅಂತ ಮುಖದ ಮೇಲೇ ಬಡಿದು (ಇದಕ್ಕೆ ಕುಜನೇ ಕಾರಣ)ಮಾತನಾಡುವ ಸ್ವಭಾವದವರು. ಇವರು ಬಹಳ ಬುಧ್ಧಿವಂತರೂ ಕೂಡ.(ಇದಕ್ಕೆ ಬುಧನೇ ಕಾರಣ) ಇವರು ಧಾರಾಳಿಯೂ ಕೂಡ! (ಗುರುವೇ ಕಾರಣ) ಇವರು ಬಹಳ ಹಠವಾದಿ ಹಾಗೂ ಜಿದ್ದು ಅಥವಾ ಅಹಂಕಾರಿ ಮತ್ತು ಗತ್ತಿರುವವರು! (ಇದಕ್ಕೆ ರವಿಯೇ ಕಾರಣ)
11.        His 8th house is empty. However, the lord is Venus. But 8th house is 4th house to 5th house. It means his children’s happiness there is no dearth! 8th house is 2nd house to 7th. It means his wife must be having good family life and also enjoying almost all comforts!
a.              ಇವರ ನೇ ಮನೆಯೂ ಖಾಲಿಯಾಗಿದ್ದು ಅದರ ಅಧಿಪತಿ ಶುಕ್ರನು ಇವರ ಲಗ್ನದಿಂದ ಎರಡನೇ ಮನೆಯಲ್ಲಿರುವನು. ೮ನೇ ಮನೆಯು ಪಂಚಮ ಸ್ಥಾನಕ್ಕೆ ನೇ ಮನೆಯಾದುದರಿಂದ ಇವರ ಮಕ್ಕಳ ಸುಖಕ್ಕೆ ಏನೂ ಕೊರತೆ ಎಂಬುದು ಇಲ್ಲ. ಇನ್ನು ೮ನೇ ಮನೆಯು ೭ನೇ ಮನೆಗೆ ೨ನೇ ಮನೆ. ಆದ್ದರಿಂದ ಇವರ ಕಳತ್ರರಿಗೆ ಯಾವುದೇ ಕುಂದು ಕೊರತೆ ಇಲ್ಲದೆ ಬಹಳ ಸುಖವಾಗಿಯೇ ೭೩ ವರ್ಷಗಳವರೆಗೆ ಇದ್ದರು! ಅಂತ್ಯಕಾಲದ ವರ್ಷಗಳೂ ಕೂಡ ಇವರ ಮಕ್ಕಳೇ ಇವರಿಗೆ ಯಾವುದೇ ಕೊರತೆ ಇಲ್ಲದ ಹಾಗೆ ನೋಡಿಕೊಂಡವರು!
12.        His 9th house is Gemini also vacant. However, the lord is Mercury with SUN and MARS in Jupiter’s house indicating he is blessed with lands purchasing! Literally he did purchase the lands worth of 2 acres and increased from his ancesstoral property to 5 acres during his period!
a.              ಈ ಜಾತಕರ ೯ನೇ ಮನೆಯೂ ಖಾಲಿ. ಆದರೆ ಅದರ ಅಧಿಪತಿಯಾದ ಬುಧನು ಸೂರ್ಯ ಮತ್ತು ಕುಜರೊಡನೆ ಆಕಾಶ ತತ್ವದ ಗುರುವಿನ ಮನೆಯಲ್ಲಿ ಅಗ್ನಿ ತತ್ವದ ಧನಸ್ಸು ರಾಶಿಯಲ್ಲಿರುವರು. ಇದರಿಂದಾಗಿ ಈ ಜಾತಕರಿಗೆ ಭೂಮಿಯನ್ನ ಕೊಳ್ಳುವುದರಲ್ಲಿ ಬಹಳ ಲಾಭವನ್ನ ಮಾಡಿರುತ್ತಾನೆ! ೩ ಏಕ್ರೆಯಿಂದ ೫ ಏಕ್ರೆಯವರೆಗೆ ಇವರು ಏರಿಸಿ ಅದನ್ನ ಜೀವಿತ ಕಾಲದಲ್ಲಿ ಮಾರಿ , ಅದರಿಂದ ಬಂದ ಹಣವನ್ನ ಬೇಂಕಿನಲ್ಲಿಟ್ಟು ಬಡ್ಡೀ ಸೇವನೆಯನ್ನ ಮಾಡುತ್ತಾ ಆನಂದದಿಂದ ಸಮಯವನ್ನ ಕಳೆದರೆಂದರೆ ನೀವುಗಳು ನಂಬುವಿರಾ? ಮತ್ತೆ ಮಕ್ಕಳೂ ಕೂಡ ಪ್ರತೀ ತಿಂಗಳೂ ತಮಗೆ ಹಿತವೆನ್ನಿಸಿದಸ್ಟು ಹಣವನ್ನ ಕಳುಹಿಸುತ್ತಿದ್ದು, ಅದು ಅವರ ಸಂತೋಷವನ್ನ ಇನ್ನಸ್ಟು ಇಮ್ಮಡಿಗೊಳಿಸಿತು!
13.        His 10th house is occupied by JUP in vakri state. So he must be a popular Teacher during his period!. It is true only! As Jupiter aspects  Moon in 6th house, the native never fell sick for long period! Only in old age he fell sick that too in last two years!
a.              ಜಾತಕರ ೧೦ ನೇ ಮನೆಯನ್ನ ಬ್ರಹಸ್ಪತಿಯು ಆಕ್ರಮಿಸಿಕೊಂಡು ವಕ್ರೀ ಸ್ಥಿತಿಯಲ್ಲಿರುವನು. ಅಂದರೆ ಇವರು ನಿಜ ಜೀವನದಲ್ಲಿ ಟೀಚರ್ ಉದ್ಯೋಗವನ್ನ ಮಾಡಿ ಇಡೀ ೧೪ ಗ್ರಾಮಗಳಿಗೆ ಪ್ರಖ್ಯಾತಿಯನ್ನ ಪಡೆದವರೆಂದರೆ ಅದು ಬ್ರಹಸ್ಪತಿಯಿಂದಲೇ ಅಲ್ಲದೆ ಮತ್ಯಾರೂ ಅಲ್ಲ!
14.        His 11th house is occupied by Saturn and Rahu showing the profit out of agricultural products as Saturn is the karaka for Agriculture. In fact it was true only. Her grandfather used to grow to the maximum yield with minimum efforts and by homemade fertilisers! Saturn represents Karmik people, he must have suffered due to Karmik’s displeasures and thereby his profit went down!. It was true during 1972 agitation against this native by all agricultural coolis!  They made “Dharana” after reaping the harvest for the increase of their shares!
a.              ಇವರ ಲಾಭದ ಮನೆಯನ್ನ ಶನಿ ಮತ್ತು ರಾಹು ಆಕ್ರಮಿಸಿಕೊಂಡು, ವ್ಯವಸಾಯ ವೃತ್ತಿಯಿಂದಲೇ ಇವರಿಗೆ ಲಾಭವನ್ನ ಮಾಡಿಸಿದರು. ಇವರು ಬೆಳೆಯನ್ನ ಇಡೀ ಗ್ರಾಮದಲ್ಲಿಯೇ ಹಯಸ್ಟ್ ಬೆಳೆದು ಇಡೀ ಕೋಟ ಹದಿನಾಲ್ಕು ಗ್ರಾಮಗಳಿಗೇ ಪ್ರಖ್ಯಾತರಾದರೆಂದರೆ ನೀವು ಗಳು ನಂಬುವಿರಾ? ಆದರೆ ಶನಿಯು ಕರ್ಮಚಾರಿಗಳಿಗೂ ಕೂಡ ಕಾರಕ ಗ್ರಹ. ರಾಹುವಿನ ಉಪಸ್ಥಿತಿಯಿಂದಾಗಿ ಇವರು  ಕಾರ್ಮಿಕರ ದಂಗೆಯನ್ನೂ ಇವರ ನಿಜ ಜೀವನದಲ್ಲಿ ಅನುಭವಿಸಬೇಕಾಗಿ ಬಂತು! ಆದರೆ ಕೊನೆಗೆ ಇವರೇ ಅದಕ್ಕೆ ಪರಿಹಾರವನ್ನ ನೀಡಿ ಶಾಂತಿಯನ್ನ ಕಾಪಾಡಿಕೊಂಡರು! ಇದಕ್ಕೆ ಕಾರಣ ರಾಶಿಯ ಅಧಿಪತಿ ಸೂರ್ಯನು ಬ್ರಹಸ್ಪತಿಯ ಮನೆಯಲ್ಲಿರುವುದರಿಂದ!
15.        His 12th house lord is Mercury which is in Jupiter’s house indicating he later onwards used to spend lavishly in his old age. Because of this, he earned a good name in the village also!
a.              ಇವರ ವ್ಯಯ ಸ್ಥಾನಾಧಿಪತಿ ಬುಧನು ಗುರುವಿನ ಮನೆಯಲ್ಲಿದ್ದು, ರವಿ , ಮತ್ತು ಕುಜರ ಸಂಗಾತಿಯಾಗಿದ್ದನು. ಆದ್ದರಿಂದ ಇವರು ಕೊನೇ ಕಾಲದಲ್ಲಿ ಹಣವನ್ನ ನೀರಿನಂತೆ ಖರ್ಚನ್ನ ಮಾಡಲು ಕಲಿತು ಅದರಲ್ಲಿಯೂ ಹೆಸರುವಾಸಿಯಾಗಿದ್ದರು. ಅದೂ ಕೂಡ ಧರ್ಮದ ಕಾರ್ಯದಲ್ಲಿಯೇ ಜಾಸ್ತಿ ಖರ್ಚು! ಹೇಗಿದೆ ಜಾತಕದ ವಿಶ್ಲೇಷಣೆ. ಅದೂ ಮೊಮ್ಮಗಳ ಜಾತಕವನ್ನ ಆಧರಿಸಿ ಬರೆದಂತಹ ವಿಶ್ಲೇಷಣೆ!

Written by
Dr.P Surendra Upadhya,Ph.D.

(Astrology)

No comments:

Post a Comment