Monday 13 March 2017

ಮಿಥುನ ಲಗ್ನದ ಕುಂಡಳಿಯಲ್ಲಿ ಶುಕ್ರನ ಸ್ಥಾನ ಮಾನ

ಮಿಥುನ ಲಗ್ನದ ಕುಂಡಳಿಯಲ್ಲಿ ಶುಕ್ರನ ಸ್ಥಾನ ಮಾನ



ಲಗ್ನವನ್ನ ೧ನೇ ಮನೆಯೆಂದು ತಿಳಿಯಬೇಕು
ಆನಂತರ ಕ್ಲೋಕವೈಸ್ನಲ್ಲಿ ೨,೩,೪ ಅಂತ ೧೨ ರ ವರೆಗೆ ಏಣಿಸಿ.

ಮಿಥುನ ಲಗ್ನದ ಅಧಿಪತಿ ಬುಧ. ಈ ಬುಧನ ಪ್ಲೇಸ್ಮೆಂಟ್ ಜಾತಕದಲ್ಲಿ ಒಳ್ಳೇ ಮನೆಯಲ್ಲಾದಲ್ಲಿ ಜಾತಕನಿಗೆ ಸುಗ್ಗಿಯೋ ಸುಗ್ಗಿ. ಆವಾಗ ಆತನಿಗೆ ಜೀವನದಲ್ಲಿ ಸಾಮಾನ್ಯವಾಗಿ ಯಾವುದಕ್ಕೂ ಕಡಿಮೆಯಾಗುವುದಿಲ್ಲ. ಉದಾಹರಣೆಗೆ ಬುಧನು ಪಂಚಮದಲ್ಲೇನಾದರೂ ಇದ್ದಲ್ಲಿ, ಜಾತಕನಿಗೆ ಮಕ್ಕಳ ಸುಖಕ್ಕೇನೂ ಕೊರತೆ ಇರದು. ಅದೇ ಬುಧನು ೨ ನೇ ಮನೆಯಲ್ಲಿದ್ದಲ್ಲಿ, ಧನಕ್ಕೆ ಏನೂ ಕೊರತೆ ಇರದು. ಬುಧನು ದಷಮ ಸ್ತಾನದಲ್ಲೇನಾದರೂ ಇದ್ದಲ್ಲಿ ಜಾತಕನಿಗೆ ವೃತ್ತಿಯಲ್ಲಿ ಏನೂ ಕೊರತೆ ಇರದು. ಅದೇ ಬುಧನು ೧೧ ನೇ ಮನೆಯಲ್ಲಿದ್ದರೆ ಲಾಭಕೇನೂ ಕೊರತೆ ಇರದು. ಬುಧನು ಒಂದು ವೇಳೆ ೯ ನೇ ಮನೆಯಲ್ಲಿದ್ದರೆ, ಜಾತಕನ ಭಾಗ್ಯಕ್ಕೇನೂ ಕೊರತೆ ಇರದು. ಅಂತೆಯೇ ಬುಧ ಗ್ರಹನು ಸಪ್ತಮದಲ್ಲಿ ಇದ್ದಾವಾಗ, ದಾಂಪತ್ಯ ಜೀವನವು ರಸಮಯವಾಗಿ ಇರುಉತದೆ.
ಅದೇ ಮಿಥುನ ಲಗ್ನದವರಿಗೆ ಪಂಚಮಾಧಿಪತಿ ಶುಕ್ರನು ಇಸ್ಟದೇವತೆಯ ಕಾರಕನಾಗುತ್ತಾನೆ. ಆದ್ದರಿಂದ ಅವರುಗಳು ಯಾವುದೇ ಹೆಣ್ಣು ದೇವತೆಯನ್ನ , ಅಂದರೆ ವೈಭವ ಲಕ್ಷ್ಮಿ, ಜೈ ಸಂತೋಷಿಮಾತ ಅಥವಾ ವೈಷ್ಣವದೇವಿಯನ್ನ ಪೂಜಿಸಬೇಕು. ಆವಾಗಲೇ ಜಾತಕನಿಗೆ ಒಳ್ಳೆಯದಾಗುವುದು. ಹೀಗೆ ಒಳ್ಳೆಯದಾಗಲು ಡಿಗ್ರೀವೈಸ್ ಶುಕ್ರ ಗ್ರಹನು ಬಲವಾಗಿರಬೇಕು. ಅಂದರೆ, ಶುಕ್ರನು ೦ ಡಿಗ್ರಿಯಿಂದ ೩ ಡಿಗ್ರಿಯವರೆಗಿದ್ದರೆ, ಅಥವಾ ೨೭ ಡಿಗ್ರಿಯಿಂದ ೩೦ ಡಿಗ್ರಿ ಇದ್ದ ಪಕ್ಷದಲ್ಲಿ ಅದು ಆಗದು. ಕಾರಣ ಆ ಶುಕ್ರನಲ್ಲಿ ಯಾವ ಬಲವೂ ಇರದು. ೦ ಡಿಗ್ರಿಯಿಂದ ೩ ಡಿಗ್ರಿಯವರೆಗೆ ಬಾಲ್ಯಾವಸ್ಥೆ ಎಂದೂ , ೨೭ ಡಿಗ್ರಿಯಿಂದ ೩೦ ಡಿಗ್ರಿಯವರೆಗೆ ಮುದುಕನ ಅವಸ್ಥೆಯಲ್ಲಿ ಇರುತ್ತವೆ ಎಂದು ಅರ್ಥ. ಆವಾಗ ಅದಕ್ಕೆ ಬಲ ಇರುವುದಿಲ್ಲ. ಹೀಗಾದಾವಾಗ ಶುಕ್ರನ ದೆಸೆ ಹಾಗೂ ಅಂತರದೆಸೆಯಲ್ಲಿ ಯಾವ ಫಲಗಳನ್ನ ಕೊಡಬೇಕೋ, ಆ ಫಲಗಳನ್ನ ಕೊಡುವುದಿಲ್ಲ. ಅದೇ ಶುಕ್ರನು ೪ ಡಿಗ್ರಿಯಿಂದ ೨೬ ಡಿಗ್ರಿಯವರೆಗಿದ್ದಾವಾಗ, ಒಳ್ಳೆಯ ಫಲಗಳನ್ನೇ ನಿರೀಕ್ಷಿಸಬಹುದು. ಅದೇ ಶುಕ್ರನು ೬,೮ ಮತ್ತು ೧೨ ನೇ ಮನೆಯಲ್ಲಿರುವಾಗ, ಒಂದು ವೇಳೆ ವಿಪರೀತ ರಾಜಯೋಗದ ಅವಸ್ಥೆಯಲ್ಲಿ ಇರದಿದ್ದಲ್ಲಿ, ಒಳ್ಳೇ ಫಲಗಳನ್ನ ಕೊಡುವುದಿಲ್ಲ. ಆವಾಗ ಯಾರಾದರೂ ನಿಮಗೆ ಜಿರ್ಕಾನ್ ಅಥವಾ ವಜ್ರವನ್ನ ಧರಿಸಲು ಹೇಳಿದಲ್ಲಿ, ನೀವುಗಳು ಅದನ್ನ ಫ಼ಾಲೋ ಮಾಡಿದರೆ ನಿಮ್ಮ ಕಥೆ ಗೋವಿಂದ! ಆತನ ದೆಸೆ ಹಾಗೂ ಅಂತರ್ದೆಸೆಯಲ್ಲಿ ಬರ್ಬಾದ್ ಆಗುವುದು ಖಂಡಿತ. ಆತನು ಅನ್ಯಥಾ ಜಾಸ್ತಿ ಖರ್ಚು, ಜಾಸ್ತಿ ಹಾಸ್ಪಿಟಲ್ ಖರ್ಚು ಮತ್ತು ಫ಼ಾಲ್ತು ಜೈಲ್ ಯಾತ್ರಾವನ್ನ ಕೂಡ ಆತನ ದೆಸೆ ಹಾಗೂ ಅಂತರ್ದೆಸೆಯಲ್ಲಿ ಮಾಡಿಸುತ್ತಾನೆ. ಇದನ್ನ ಯಾಕೆ ನಾನು ಇಲ್ಲಿ ಹೇಳಿದನೆಂದರೆ, ೬,೮ ಮತ್ತು ೧೨ ನೇ ಮನೆಗಳು, ಕುಂಡಳಿಯಲ್ಲಿ ಟ್ರಿಕ್ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಈ ಮನೆಯ ಅಧಿಪತಿಗಳು ಅದೇ ಮನೆ ಅಥವಾ ಬೇರುಳಿದ ಟ್ರಿಕ್ ಮನೆಗಳಲ್ಲಿದ್ದಲ್ಲಿ ಹರ್ಷ, ವಿಮಲ ಮತ್ತು ಸರಳ ಯೋಗಗಳನ್ನ ಸೃಸ್ಟಿಸುತ್ತದೆ. ಆವಾಗ ಅವುಗಳು ಜಾತಕನಿಗೆ ಉತ್ತಮ ಫಲಗಳನ್ನೇ ಕೊಡುತ್ತವೆ. ಮತ್ತೆ ಮಿಥುನ ಲಗ್ನದವರಿಗೆ ಶುಕ್ರನು ೧೨ ನೇ ಮನೆಯಲ್ಲಿದಾವಾಗ, ಶುಕ್ರನು ದಿಗ್ಬಲಿಯಾಗುತ್ತಾನೆ. ಕಾರಣ ಅದು ಅವನದ್ದೇ ಮನೆಯಾದ ವೃಷಭ ರಾಶಿಯಾದುದರಿಂದ ಮಾಲವ್ಯ ಯೋಗವನ್ನ ಉಂಟು ಮಾಡುವನು. ಶುಕ್ರನ ಕಾರಕ ಭಾವ ವೃಷಭ ಮತ್ತು ತುಲಾ ರಾಶಿಯಾಗಿರುತ್ತದೆ. ಒಂದು ವೇಳೆ ಶುಕ್ರನು ೧೨ ನೇ ಮನೆಯಲ್ಲಿಇದ್ದಲ್ಲಿ, ಆತನು ವಿಪರೀತ ರಾಜಯೋಗದ ಪರಿಸ್ಥಿತಿಯಲ್ಲಿ ಇಲ್ಲದಿದ್ದಲ್ಲಿ, ಜ್ಯೋತಿಸಿಯ ಹೇಳಿಕೆಯಂತೆ, ಶುಕ್ರನ ರತ್ನವನ್ನ ನೀವುಗಳು ಒಂದು ವೇಳೆ ಧರಿಸಿದಲ್ಲಿ, ಶುಕ್ರನು ಪಾಪಿ ಗ್ರಹವಾಗಿ ಪರಿಣಮಿಸುತ್ತಾನೆ. ಶುಕ್ರನೊಬ್ಬನೇ ಈ ಟ್ರಿಕ್ ಮನೆಗಳಲ್ಲಿ ಪಾಪಿ ಗ್ರಹವಾಗಿ ಪರಿಣಾಮ ಬೀರುವುದಿಲ್ಲ. ಈ ಮನೆಗಳಲ್ಲಿ ಬೇರೆ ಯಾವುದೇ ಗ್ರಹಗಳು ಪಾಪಿ ಗ್ರಹಗಳಾಗಿ ಪರಿಣಾಮವನ್ನ ಬೀರುವುದು ಖಂಡಿತ. ಆದ್ದರಿಂದ, ನೀವೆಲ್ಲಿಯಾದರೂ ಅವುಗಳ ರತ್ನವನ್ನ ಧರಿಸಿದಲ್ಲಿ, ನಿಮಗೆ ಅದು -ವ್ ಆಗಿ ಪರಿಣಮಿಸೀತು. ನೀವೆಲ್ಲಿಯಾದರೂ ಶುಕ್ರನು ಬಲಹೀನನಾಗಿದ್ದಾನೆ ಅಂತ ಒಂದು ವೇಳೆ ಜಿರ್ಕಾನ್ ಅಥವಾ ವಜ್ರವನ್ನ ಧರಿಸಿದಲ್ಲಿ ಮರಣವನ್ನೂ ಕೊಟ್ಟೀತು. ಜಾಗ್ರತೆ. ಈ ವಿಚಾರವು ಯಾವುದೇ ಗ್ರಹಗಳಿಗೆ ಅನ್ವಯಗೊಳ್ಳುತ್ತದೆ. ಮಿಥುನ ಲಗ್ನದವರಿಗೆ ಮಂಗಲ್ ವಿಪರೀತ ರಾಜ ಯೋಗದ ಕಂಡಿಷನಲ್ಲಿ ಬಂತೆಂದರೆ, ಮಂಗಲನೇ ಬಹಳ ಒಳ್ಳೆಯ ಫಲಗಳನ್ನ ಕೊಡುತ್ತಾನೆ. ಇಲ್ಲಾಂದ್ರೆ ಆತನು ಮಿಥುನ ಲಗ್ನದವರಿಗೆ ಮಾರಕ ಗ್ರಹ. ಆದ್ದರಿಂದ ಯಾವ ಗ್ರಹಕ್ಕೆ ಸರಿಯಾದ ಟ್ರೀಟ್ಮೆಂಟ್ ಕೊಡಬೇಕೆಂದು ನೀವೇ ನಿರ್ಧರಿಸಬೇಕು. ಇದು ಜಾತಕದಿಂದ ಜಾತಕಕ್ಕೆ, ಗ್ರಹದಿಂದ ಗ್ರಹಕ್ಕೆ ಬದಲಾವಣೆ ಆಗುತ್ತದೆ. ಒಂದಂತೂ ಸತ್ಯ. ಅದೇನೆಂದರೆ ಪೂಜಾ ಪಾಠವನ್ನ ನಿಮ್ಮ ಇಸ್ಟದೇವತೆಗೆ (ಅಂದರೆ ಪಂಚಮ ಮನೆಯ ಅಧಿಪತಿಯ ಕಾರಕ ದೇವತೆಗಳು) ಮಾಡುತ್ತಲೇ ಇರಬೇಕು. ಆವಾಗಲೇ ನಿಮಗೆ ಒಳ್ಳೆಯ ಫಲಗಳು ಸಿಗುತ್ತದೆ.

ವಿಷೇಷ ಸೂಚನೆ :-
⦁ ಯಾವುದೇ ಗ್ರಹ ನೀಚನಿದ್ದಾವಾಗ, ಆ ಗ್ರಹದ ಉಪವಾಸವನ್ನ ಮಾಡಿದಲ್ಲಿ ಆತನು ನಿಮಗೆ ಒಳ್ಳೆಯ ಫಲಗಳನ್ನ ಕೊಡುತ್ತಾನೆ.
⦁ ಶನಿ , ರಾಹು ಮತ್ತು ಕೇತು ದೋಷವಿದ್ದಲ್ಲಿ, ಹಿಟ್ಟಿನ ಸಣ್ಣ ಸಣ್ಣ ಉಂಡೆಯನ್ನ ಮಾಡಿ ನೀರಿನಲ್ಲಿರುವ ಮೀನಿಗೆ ಉಣಬಡಿಸಿದಲ್ಲಿ ನಿಮಗೆ ಆ ಗ್ರಹದ ದೋಷವು ನಿವಾರಣೆಯಾಗುತ್ತದೆ. ಜೀವನವನ್ನ ಸುವರ್ಣವನ್ನಾಗಿ ಮಾಡುತ್ತಾನೆ.
⦁ ರಾತ್ರಿ ಮಲಗುವ ಮುಂಚೆ ಒಂದು ಲೋಟ ತಣ್ಣೀರನ್ನ ಕುಡಿದು ಮಲಗಿದಲ್ಲಿ, ನಿಮಗೆ ಬಿ.ಪಿ ಸಂಬಂದಿತ ರೋಗವು ಬರುವುದೇ ಇಲ್ಲ. ಅಂದರೆ ಬ್ರೈನ್ ಹೇಮ್ರೇಜ್, ಸ್ಟ್ರೋಕ್ ಇತ್ಯಾದಿಗಳು ನಿಮ್ಮ ಬಳಿ ಸುಳಿಯೋದೇ ಇಲ್ಲ.

ಈಗ ನಾವು ಶುಕ್ರನು ಬೇರೆ ಬೇರೆ ಮನೆಯಲ್ಲಿ ಯಾವ ಯಾವ ಫಲಗಳನ್ನ ಕೊಡುತ್ತಾನೆಂದು ನೋಡೋಣ:-
ಶುಕ್ರನು ಲಗ್ನ(೧ನೇ ಮನೆ)ದಲ್ಲಿಯೇ ಇದ್ದಲ್ಲಿ?:-
ಮಿಥುನ ಲಗ್ನವೆಂದರೆ ೩ ನೇ ಮನೆ. ಇಲ್ಲಿ ಶುಕ್ರನು ಪಂಚಮ(ತುಲಾ ರಾಶಿ) ಹಾಗೂ ವ್ಯಯ ಸ್ತಾನದ (ವೃಷಭ) ಅಧಿಪತಿಯಾಗಿರುತ್ತಾನೆ. ಪಂಚಮ ಸ್ತಾನವು ಹೈಯರ್ ಎಜುಕೇಷನ್ನಿನ ಮನೆ, ಹೊಟ್ಟೆಯ, ಲವ್ ಮತ್ತು ರೋಮೇನ್ಸ್, ಸಂತಾನ, ಅನ್ಸೆರ್ಟೈನ್ ಲಾಭದ, ಮೆಂಟಲ್ ಸ್ಟ್ರೆಂತ್ ಮತ್ತು ವಿಲ್ ಪವರ್ ಇತ್ಯಾದಿಗಳ ಮನೆ. ಶುಕ್ರನು ಈ ಲಗ್ನದವರಿಗೆ ಪಂಚಮಾಧಿಪತಿಯಾದ ಕಾರಣ ಆತನೇ ಇಸ್ಟದೇವತೆಯ ಕಾರಕನಾಗುತ್ತಾನೆ. ವ್ಯಯ ಸ್ತಾನವು ವಿದೇಶ ಯಾತ್ರೆ, ಪತಿ ಮತ್ತು ಪತ್ನಿಯ ಸ್ವಂತ ಸಮಯ, ಜೈಲ್ ಯಾತ್ರ, ಅನ್ಯಥಾ (ಫ಼ಿಜ಼ೂಲ್) ಖರ್ಚಿನ , ವಿದೇಷ ಯಾತ್ರೆಯ ಮನೆಯಾಗಿರುತ್ತೆ.
ಲಗ್ನದಲ್ಲಿ ಯೋಗ ಕಾರಕ ಶುಕ್ರನು ಇದ್ದಲ್ಲಿ, ತ್ರಿಕೋಣದ ಮಾಲಿಕ್ ತ್ರಿಕೋಣದಲ್ಲಿದ್ದ ಹಾಗೆ. ಆವಾಗ, ಜಾತಕನು ಬಹಳ ಬುದ್ಧಿವಂತ, ಯೋಚನೆ ಮಾಡಿ ಕೆಲಸವನ್ನ ಮಾಡುವವನಾಗಿರುತ್ತಾನೆ. ಸುಂದರ ಪರ್ಸೆನೇಲಿಟಿಯನ್ನ ಆತನಿಗೆ ಕೊಡುತ್ತಾನೆ. ಕಾರಣ ಶುಕ್ರನು ಚಂದದ ಕಾರಕ. ಶುಕ್ರನು ಜ್ನಾನವನ್ನ ಕೊಡುವಂತಹ ಗ್ರಹ. ಪಂಚಮದ ಮನೆ, ಲವ್ ಏಂಡ್ ರೋಮೇನ್ಸ್ ಕೂಡುವಂತಹ ಮನೆ. ಪಂಚಮದ ಕಾರಕಗಳೆಲ್ಲಾ ಈತನಿಗೆ ಒಳ್ಳೆಯದಾಗಿ ಬರುತ್ತದೆ. ಶುಕ್ರನ ೭ ನೇ ದೃಸ್ಟಿ ಕಳತ್ರ ಸ್ತಾನದ ಮೇಲೆ ಬೀಳುವುದರಿಂದ, ಫ಼ೆಮಿಲಿ ಲೈಫ಼್ ಬಹಳ ಒಳ್ಳೆಯದಿರುತ್ತದೆ. ಪಾರ್ಟನರಶಿಪ್ ಬಹಳ ಲಾಭವಾಗಿ ಬರುತ್ತೆ. ಡೈಲಿ ವೇಜಸ್ಸಿನಲ್ಲಿ ಹೊಸ ಹೊಸ ರಸ್ತೆ ಓಪನ್ ಆಗುತ್ತದೆ. ಲೈಫ಼್ ಪಾರ್ಟ್ನರ್ ಬಹಳ ಸುಂದರ/ರಿಯಾಗಿರುತ್ತಾರೆ.
ಶುಕ್ರನು ೨ ನೇ ಮನೆಯಲ್ಲಿದ್ದರೆ, ಅಂದರೆ ಕಟಕ ರಾಶಿಯಲ್ಲಿದ್ದರೆ, ಅವರನ್ನ ಸಿಂಗರ್ ಆಗಿ ಮಾಡುತ್ತಾನೆ. ಅವರಿಗೆ ಜೀವನದಲ್ಲಿ ಹಣಕಾಸಿಗೇನೂ ಕೊರತೆಯಿರುವುದಿಲ್ಲ. ಸಮಾಜದಲ್ಲಿ ಒಳ್ಳೇ ಹೆಸರನ್ನ ಗಳಿಸುತ್ತಾನೆ. ಒಳ್ಳೆ ಸುಂದರ ವಾಣಿಯನ್ನ(ಪ್ರವಕ್ತ) ಹೇಳುವವನಾಗಿರುತ್ತಾನೆ. ಇದರಿಂದಾಗಿ ನೆರೆ ಹೊರೆಯವರಲ್ಲಿ ಬಹಳ ಪ್ರಖ್ಯಾತಿಯನ್ನ ಪಡೆಯುವನಾಗಿರುತ್ತಾನೆ. ಪರಿವಾರದವರ ಸಂಪೂರ್ಣ ಸಹಾಯ ಜಾತಕನಿಗೆ ಸಿಗುತ್ತದೆ. ಶುಕ್ರನು ೮ ನೇ ಮನೆಯ ಮೇಲೆ ದೃಸ್ಟಿಯನ್ನ ಹಾಕುವುದರಿಂದ, ಹೆಣ್ಣು ಕೊಟ್ಟ ಮಾವನ ಮನೆಯಿಂದ ಲಾಭ, ಸ್ವಂತ ಬುದ್ಧಿ ಬಲದಿಂದ ಕಸ್ಟವನ್ನ ಪರಿಹಾರ ಮಾಡುವವನಾಗಿರುತ್ತಾನೆ. ಜ್ನಾನವನ್ನ ಗಳಿಸುವಂತಹ ಒಂದು ರೀತಿಯ ದಾಹ ಇವನಲ್ಲಿ ಇರುತ್ತದೆ. ಗುಪ್ತ ವಿದ್ಯವನ್ನ ಪಡೆಯುವವನಾಗುತ್ತಾನೆ. ಪಿತ್ರಾರ್ಜಿತ ಆಸ್ತಿಯನ್ನ ಗಳಿಸುವಲ್ಲಿ ಜಯವನ್ನ ಗಳಿಸುತ್ತಾನೆ.
ಶುಕ್ರನು ೩ ನೇ ಮನೆಯಲ್ಲಿದ್ದರೆ, ತಂಗಿಯ ಯೋಗವನ್ನ ಮಾಡಿಸುತ್ತಾನೆ. ತಮ್ಮನ ಯೋಗವನ್ನ ಮಾಡಿಸುವುದಿಲ್ಲ. ಕಾರಣ ಶುಕ್ರನು ಹೆಣ್ಣು ಗ್ರಹ. ಸಣ್ಣ ಪುಟ್ಟ ಪ್ರಯಾಣವನ್ನ ಮಾಡಿಸುತ್ತಾನೆ. ಇದೊಂದು ಸಾಮಾನ್ಯ ಮನೆ. ತಂಗಿಯರ ಸಹಾಯ ಯಾವಾಗಲೂ ಇರುತ್ತದೆ. ಇಲ್ಲಿಂದ ೯ ನೇ ಮನೆಯ ಮೇಲೆ ದೃಸ್ಟಿ ಬೀಳುವುದರಿಂದ ತಂದೆಯಿಂದ ಲಾಭವನ್ನ ಮಾಡಿಸುತ್ತಾನೆ. ಧರ್ಮವನ್ನ ನಂಬುವಂತೆ ಮಾಡಿಸುತ್ತಾನೆ.ವಿದೇಷ ಯಾತ್ರೆಯನ್ನ ಮಾಡಿಸುತ್ತಾನೆ. ಆದರೆ ಇದರಿಂದ ಆತನಿಗೆ ಲಾಭವೇನೂ ಬಾರದು, ಕಾರಣ ೩ ನೇ ಮನೆಯು ಕಠಿಣ ಶ್ರಮದ (ಮೆಹನತ್) ಮನೆ. ಈ ಮನೆಯಲ್ಲಿ ರೀಸರ್ಚ ಮಾಡುವಲ್ಲಿ ಶುಕ್ರನು ಎಲ್ಲಾ ಸಹಾಯವನ್ನ ಮಾಡುತ್ತಾನೆ. ಶುಕ್ರನು ಹಾರ್ಡ್ ವರ್ಕನ್ನ ಲಾಭದಲ್ಲಿ ಪರಿವರ್ತಿಸುವಲ್ಲಿ ಪರಿಣಾಮವನ್ನ ಬೀರುತ್ತಾನೆ. ಆದರೆ ಶುಕ್ರನು ೩ ನೇ ಮನೆಯಲ್ಲಿ ಬಹಳ ಒಳ್ಳೆಯ ಯೋಗಕಾರಕ ಗ್ರಹನಾಗುವುದಿಲ್ಲ. ಆದ್ದರಿಂದ ,ಇಲ್ಲಿ ಕೂಡ ಶುಕ್ರನ ರತ್ನವನ್ನ ಜಾತಕನು ಧರಿಸಬಾರದು. ಒಂದು ವೇಳೆ ಧರಿಸಿದಲ್ಲಿ ನಿಮ್ಮನ್ನ ಮೆಹನತ್ ಜಾಸ್ತಿ ಮಾಡಿಸುವಂತೆ ಮಾಡುತ್ತಾನೆ ಅಸ್ಟೆ.
ಶುಕ್ರನು ೪ ನೇ ಮನೆಯಲ್ಲಿ ನೀಚನಾಗಿರುತ್ತಾನೆ. ಅಂದರೆ ಕೊಡುವಂತಹ ಒಳ್ಳೇ ಫಲಗಳನ್ನ ಶುಕ್ರನು ಕೊಡಲಾರ. ಇಲ್ಲಿ ಕೂಡ ರತ್ನವನ್ನ ಜಾತಕನು ಧರಿಸಬಾರದು. ಒಂದು ವೇಳೆ ಹಾಗೆ ಧರಿಸಿದಲ್ಲಿ, ನೀಚತ್ವವನ್ನ ನೀವು ವೃದ್ಧಿಸಿದಂತಾಗುತ್ತದೆ. ಈ ಮನೆಯ ಕಾರಕತ್ವಗಳಲ್ಲಿ ಒಂದಾದ ತಾಯಿಯ ಸುಖಕ್ಕೆ ತೊಂದರೆ. ೪ ನೇ ಮನೆಯ ಇತರ ಕಾರಕತ್ವಗಳಾದ ವಾಹನ ಸುಖ, ಮನೆಯ ಸುಖ, ಭೂಮಿಯ ಸುಖ, ಸಾರ್ವಜನಿಕರ ಸುಖ ಇತ್ಯಾದಿಗಳು -ವ್ ಆಗಿ ಪರಿಣಾಮಗೊಳ್ಳುತ್ತದೆ. ಇಲ್ಲಿ ಕೂಡ ಪೂಜೆಯೇ ಸಮಾಧಾನ. ಮರೆತೂ ಕೂಡ, ರತ್ನವನ್ನ ಧರಿಸಲೇ ಬಾರದು. ಒಂದು ವೇಳೆ ಹಾಗೆ ಧರಿಸಿದಲ್ಲಿ ನಿಮ್ಮ ಕಸ್ಟಗಳನ್ನ ಇಮ್ಮಡಿ (ಜಾಸ್ತಿ) ಮಾಡುವಲ್ಲಿ ಸಹಾಯವನ್ನ ಮಾಡಿದಂತಾಗುತ್ತದೆ.
ಶುಕ್ರನು ಪಂಚಮ ಸ್ತಾನದಲ್ಲಿದ್ದರೆ, ೫ ನೇ ಮನೆಯ ಕಾರಕತ್ವಗಳೆಲ್ಲಾ ಒಳ್ಳೆಯದಾಗಿ ಮಿಥುನ ಲಗ್ನದವರಿಗೆ ಪರಿಣಮಿಸುತ್ತೆ. ಅಂದರೆ ಅವರಿಗೆ ಮೆಮೊರಿ ಪವರ್ ಜಾಸ್ತಿ ಬರುತ್ತದೆ. ೪೦ ವರುಷಗಳ ಹಿಂದಿನ ಮಾತು ಕೂಡ ಜಾತಕನಿಗೆ ನೆನಪಿನಲ್ಲಿರುತ್ತೆ. ಅದೇ ಅವರಿಗೆ ಮುಂದೆ ಶತ್ರುವಾಗಿ ಪರಿಣಮಿಸುತ್ತದೆಂದರೆ ತಪ್ಪಾಗದು. ಇದು ಸಂತಾನದ ಮನೆ. ಇದು ಹಯರ್ ಎಜುಕೇಷನ್ನಿನ ಮನೆ. ಇದು ಪೂರ್ವಪುಣ್ಯಸ್ತಾನದ ಮನೆ. ಮಿಥುನ ಲಗ್ನದವರಿಗೆ ಪಂಚಮೇಷ, ಅಂದರೆ ತ್ರಿಕೋಣಾಧಿಪತಿಯೇ ಶುಕ್ರ. ಅವನೇ ಈ ಮನೆಯಲ್ಲಿದ್ದಲ್ಲಿ ಈ ಮನೆಯ ಕಾರಕತ್ವಗಳೆಲ್ಲಾ ಒಳ್ಳೆಯದಾಗಿ ಪರಿಣಮಿಸುತ್ತದೆ. ಇವರ ವಿಲ್ ಪವರ್ ಬಹಳ ಸ್ಟ್ರೋಂಗ್ ಇರುತ್ತದೆ. ಇವರುಗಳ ಮೈಂಡ್ಸ್ ಬಹಳ ಸ್ಟ್ರೋಂಗ್ ಇರುತ್ತೆ. ಜಾತಕನನ್ನ ಕಲಾಕಾರನ್ನಾಗಿ ಮಾಡಿಸುತ್ತೆ. ಮ್ಯೂಸಿಕ್ನಲ್ಲಿ ಆಸ್ತೆಯನ್ನ ತೋರಿಸುವರನ್ನಾಗಿ ಮಾಡಿಸುತ್ತೆ. ಬುಧನ ಸಾಮ್ಗತ್ಯ ಹಾಗೂ ಗುರುವಿನ ದೃಸ್ಟಿ ಬಿದ್ದಲ್ಲಿ, ಇವರೊಬ್ಬರು ಫ಼ೇಮಸ್ ಜ್ಯೋತಿಷಿಗಳಾಗುವುದರಲ್ಲಿ ಎಳ್ಳಸ್ಟೂ ಸಂದೇಹವೇ ಇಲ್ಲ. ಇವರಿಗೆ ಹೊಟ್ಟೆ ಸಂಬಂಧಿತ ಪ್ರೋಬ್ಲೆಮ್ಸ್ ಬರುವುದಿಲ್ಲ. ಬಂದರೂ ಬಹಳ ಕಡಿಮೆ. ಇದು ಸಂತಾನದ ಮನೆ. ಅದರಲ್ಲಿಯೂ, ಇವರಿಗೆ ಹೆಣ್ಣು ಮಕ್ಕಳ ಸಂತಾನವೇ ಜಾಸ್ತಿ. ಹೆಣ್ಣು ಮಕ್ಕಳಿಂದಲೇ ಅವರಿಗೆ ಸುಖವುಂಟು. ಈ ಮನೆಯಿಂದ ೧೧ ನೇ ಮನೆಗೆ, ಅಂದರೆ ಹೌಸ್ ಆಫ಼್ ಪ್ರೋಫ಼ಿಟ್ಸ್ ಮನೆಯನ್ನ ಶುಕ್ರನು ನೋಡುವುದರಿಂದ ಇವರಿಗೆ ಹಣ ಇಲ್ಲಾ ಅಂದಾವಾಗ ಇವರಿಗೆ ಎಲ್ಲಿಂದಲೋ ಬಂದಿರುತ್ತದೆ. ದೊಡ್ಡ ಅಣ್ಣ ಮತ್ತು ಅಕ್ಕನಿಂದ ಸದಾ ಇವರಿಗೆ ಲಾಭ ಹಾಗೂ ಸಹಾಯ ಇರುತ್ತದೆ. ಅಲ್ಲಿಯೂ ೧೧ ನೇ ಮನೆಯಲ್ಲಾದರೂ ಗುರು ಇದ್ದಲ್ಲಿ, ಕೇಳೋದೇ ಬೇಡ. ಬೇಡವೆಂದರೂ ಇವರಿಗೆ ಅಣ್ಣ, ಅದರಲ್ಲೂ ದೊಡ್ಡ ಅಣ್ಣನಿಂದ ಸಹಾಯ ಸದಾ ಸಿಗುತ್ತಿರುತ್ತದೆ. ಇವರ ಸಹಾಯ ಹೇಗೆಂದರೆ ಮಕ್ಕಳ ಮದುವೆ ಮಾಡಿಸುವುದರಿಂದ ಹಿಡಿದು, ಮನೆಯನ್ನ ಕಟ್ಟಲೂ ಇವರದ್ದೇ ಸಹಾಯ ಜಾಸ್ತಿ. ಹಣದ ಕೊರತೆ ಏನೇನೂ ಬರುವುದಿಲ್ಲ. ಇವೆಲ್ಲಾ ಶುಕ್ರನ ಬಲಾಬಲದ ಮೇಲೆ ಆಧರಿಸುತ್ತದೆ. ಒಂದು ವೇಳೆ ನೀವು ಏನಾದರೂ ಇಛ್ಛೆಯನ್ನ ಬೇರವರ ಮುಂದಿಟ್ಟಲ್ಲಿ, ಅದು ಸಂಪೂರ್ಣ ರೀತಿಯಿಂದ ನೆರವೇರುತ್ತದೆ. ಎಲ್ಲಾ +ವ್ ರಿಸಲ್ಟ್ಸ್ ಬರುತ್ತೆ. ಸಣ್ಣ ಪುಟ್ಟ ರೋಗಗಳಿದ್ದಲ್ಲಿ, ಅದು ಸಂಪೂರ್ಣ ಗುಣಮುಖವಾಗುತ್ತದೆ. ಕಾರಣ ೧೧ ನೇ ಮನೆಯು ಸಣ್ಣ ಪುಟ್ಟ ರೋಗದ ಮನೆಯು ಕೂಡ. ಇದು ೬ನೇ ಮನೆಗೆ ೬ ನೇ ಮನೆ.
ಇನ್ನು ಶುಕ್ರನು ೬ ನೇ ಮನೆಯಲ್ಲಿದ್ದಾವಾಗ ಎಲ್ಲಾ ಪ್ರೋಬ್ಲೆಮ್ಸ್. ಋಣ, ರೋಗ, ಕರ್ಜಾ, ಲಿಟಿಗೇಷನ್ನ ಎಲ್ಲಾಉಲ್ಟಾ ಸಿಕ್ಕಿ ಬೀಳುವ ರೀತಿ ಮಾಡಿಸುತ್ತೆ. ಆದರೆ ಶುಕ್ರನು ವಿಪರೀತ ರಾಜಯೋಗದ ಪರಿಸ್ಥಿತಿಯಲ್ಲಿದ್ದರೆ ಈ ಎಲ್ಲಾ ವಿಷಯಗಳಲ್ಲಿ ಗೆಲ್ಲುವಿಕೆಯನ್ನ ಕೊಡಿಸುತ್ತಾನೆ. ಇಲ್ಲಾಂದ್ರೆ ನಿಮಗೆ ಸದಾ ಕಸ್ಟಗಳ ಸುರಿಮಳೆಯನ್ನೇ ಕೊಡಿಸುತ್ತಾನೆ. ಪಂಚಮ ಸ್ತಾನದ ಕಾರಕತ್ವಗಳೆಲ್ಲಾ -ವ್ಸ್ ಆಗಿ ಬದಲಾಗುತ್ತದೆ. ಈ ಮನೆಯಲ್ಲಿ ಶುಕ್ರನು ಇರುವಾಗ ರತ್ನದ ಧಾರಣೆಯನ್ನ ಮಾಡಲೇ ಬರಬಾರದು. ಇದು ಜಾತಕನಿಗೆ ಲುಕ್ಸಾನ್ ಮಾಡಿಸುತ್ತೆ. ಜಾತಕನ ಮೆಂಟಲ್ ವೀಕ್ ಮಾಡಿಸುತ್ತೆ. ಆದರೆ ಅಸ್ತ ಅವಸ್ಥಾದಲ್ಲಿ(ಅಂದರೆ ಸೂರ್ಯನೂ ಶುಕ್ರನು ೫ ಡಿಗ್ರಿಯ ಒಳಗಿದ್ದಲ್ಲಿ) ಮಾತ್ರ ಶುಕ್ರನ ರತ್ನವನ್ನ ಧಾರಣೆ ಮಾಡಬಹುದು. ಇನ್ನು ಈ ಮನೆಯಿಂದ ೧೨ ನೇ ಮನೆಯ ಮೇಲೆ ಶುಕ್ರನ ದೃಸ್ಟಿ ಬೀಳುವುದರಿಂದ, ಫ಼ಾರಿನ್ ಟ್ರಾವಲ್ಸ್ ಮಾಡಿಸುತ್ತಾನೆ. ಫ಼ಾರಿನ್ ಟ್ರಾವಲ್ಸ್ನಲ್ಲಿ ಅನಗತ್ಯ ಲಾಸ್ ಮಾಡಿಸುತ್ತಾನೆ. ಫ಼ಿಜ಼ೂಲ್ ಖರ್ಚು ಜಾಸ್ತಿ. ಹೋಸ್ಪಿಟಲ್ ಖರ್ಚೂ ಇರುತ್ತೆ. ಜೈಲ್ ಯಾತ್ರಾವನ್ನು ಕೂಡ ಮಾಡಿಸುತ್ತಾನೆ. ಆದುದರಿಂದ ಶುಕ್ರನ ಆರಾಧನೆಯನ್ನ ಮಾಡಿ. ಅದೇನೆಂದರೆ ಓಂ ಶುಕ್ರಾಯನಮಃ.
ಶುಕ್ರನು ೭ ನೇ ಮನೆಯಲ್ಲಿದ್ದಲ್ಲಿ ಪತ್ನಿ ಬಹಳ ಸುಂದರಿಯರಾಗಿರುತ್ತಾರೆ. ಪತಿಯಾದಲ್ಲಿ ಬಹಳ ಹೇಂಡ್ಸಂ ಆಗಿರುತ್ತಾರೆ. ಪಾರ್ಟ್ನರ್ಶಿಪ್ ಬಹಳ ಲಾಭದಾಯಕವಾಗಿರುತ್ತೆ. ದಾಂಪತ್ಯ ಜೀವನ ಸುಖಕರವಾಗಿರುತ್ತೆ.ಇಲ್ಲಿಂದ ಲಗ್ನದ ಮೇಲೆ ದೃಸ್ಟಿ ಬೀಳುವುದರಿಂದ, ಪ್ಲೀಸಿಂಗ್ ಪರ್ಸನೇಲಿಟಿಯನ್ನಾಗಿ ಮಾಡಿಸುತ್ತಾನೆ. ಯಾವುದೇ ಕಸ್ಟ ಕಾರ್ಪಣ್ಯಗಳು ಬರುವುದಿಲ್ಲ. ಎಲ್ಲರೂ ಜಾತಕನನ್ನ ಪಸಂದ್ ಮಾಡುವ ಹಾಗೆ ಶುಕ್ರನು ಮಾಡಿಸುತ್ತಾನೆ. ಆದರೆ ಶುಕ್ರನು ಬಲವಾಗಿರಬೇಕಸ್ಟೆ. ಇದನ್ನ ಸದಾ ನೆನಪಿನಲ್ಲಿಡಿ.
ಇನ್ನು ಶುಕ್ರನು ೮ನೇ ಮನೆಯಲ್ಲಿದ್ದರೆ, ಅನಗತ್ಯ ಹರ್ಡಲ್ಸ್ ತಂದಿಡುತ್ತಾನೆ. ಇದು ಮರಣದ ಮನೆ ಕೂಡ. ಇದು ಜಾತಕನ ಐ.ಕ್ಯೂ ಮನೆಯು ಕೂಡ. ಆದರೆ ವಿಪರೀತ ರಾಜಯೋಗದ ಕಂಡಿಷನನಲ್ಲಿದ್ದಲ್ಲಿ ಮಾತ್ರ, ಈ ಎಲ್ಲಾಕಾರಕತ್ವಗಳು +ವ್ ಆಗುತ್ತದೆ. ಇಲ್ಲಾಂದ್ರೆ ಅನಗತ್ಯ ಲಾಸ್ ಎಲ್ಲಾ ಕಾರಕತ್ವಗಳಲ್ಲಿಆಗುತ್ತೆ. ಮರಣವನ್ನ ಕೂಡಾ ಶುಕ್ರನು ಕೊಟ್ಟಾನು. ಇಲ್ಲಾಂದ್ರೆ ಮ್ರುತ್ಯು ತುಲ್ಯ ಕಸ್ಟವನ್ನ ಇಲ್ಲಿ ಕೂಡ ನೀವು ರತ್ನದ ಧಾರಣೆಯನ್ನ ಮಾಡಬಾರದು. ಜಾತಕನಿಗೆ ಕಸ್ಟಇಮ್ಮಡಿಯಾಗಿ ಪರಿಣಮಿಸುತ್ತದೆ. ಜಾತಕನಲ್ಲಿ ಚಿಡ ಚಿಡಾ ಗುಣವು ಜಾಸ್ತಿ ಕಾಣಿಸುತ್ತದೆ. ಇಲ್ಲಿಂದ ೨ ನೇ ಮನೆಗೆ ದೃಸ್ಟಿ ಬೀಳುವುದರಿಂದ ಧನಕ್ಕಾಗಿ ಹಾ ಹಾ ಕಾರವಾಗುತ್ತದೆ. ಜಾತಕನ ವಾಣಿ ಸಹಿಸಲು ಬಹಳ ಕಸ್ಟಕರವಾಗಿ ಪರಿಣಾಮಿಸುತ್ತೆ. ಕುಟುಂಬದ ಸದಸ್ಯರುಗಳಲ್ಲಿ ಇದರಿಂದಾಗಿ ಜಾತಕನ ಜೊತೆಯಲ್ಲಿ ಬೆರೆಯಲು ಕಸ್ಟಕರ.
ಇನ್ನು ಶುಕ್ರನು ೯ ನೇ ಮನೆಯಲ್ಲಿದ್ದಲ್ಲಿ, ಜಾತಕನು ಧಾರ್ಮಿಕನಾಗುತ್ತಾನೆ. ತಂದೆಯಿಂದ ಲಾಭ ಉಂಟಾಗುತ್ತದೆ. ತ್ರಿಕೋಣಾಧಿಪತಿ ತ್ರಿಕೋಣದಲ್ಲಿದ್ದರೆ ಬಹಳ ಒಳ್ಳೆಯದು. ಜಾತಕನಿಗೆ ತಂದೆಯ ಜೊತೆಯಲ್ಲಿ ಸದಾ ಲಗಾವು ಇರುತ್ತದೆ. ಜಾತಕನು ಬಹಳ ಭಾಗ್ಯವಾನ್. ಲವ್ ಏಂಡ ರೋಮೇಂಸ್ನಲ್ಲಿ ಸದಾ ಇಂಟರೆಸ್ಟ್ ಇರುತ್ತದೆ. ಧಾರ್ಮಿಕ್ ಯಾತ್ರಾದಲ್ಲಿ ವಿದೇಶ ಯಾತ್ರೆಯನ್ನೂ ಮಾಡಿಸುತ್ತಾನೆ. ಮೆಂಟಲ್ ಸ್ಟ್ರೆಂತ್ ಬಹಳ ಜಾಸ್ತಿ ಇರುತ್ತದೆ. ರೀಸರ್ಚ್ ಮಾಡುವ ಹಾಗೆ ಮಾಡಿಸುತ್ತಾನೆ. ಇಲ್ಲಿಂದ ೩ ನೇ ಮನೆಗೆ ದೃಸ್ಟಿ ಬೀಳುವುದರಿಂದ ಸಣ್ಣ ಪುಟ್ಟ ಯಾತ್ರೆಯನ್ನೂ ಮಾಡಿಸುತ್ತಾನೆ. ಇದರಿಂದಾಗಿ ಲಾಭವನ್ನೂ ಮಾಡಿಸುತ್ತಾನೆ. ಹಾರ್ಡ ವರ್ಕನಿಂದಾಗಿ ಬಹಳ ಒಳ್ಳೆಯ ಲಾಭವನ್ನ ಮಾಡಿಸುತ್ತಾನೆ.
ಶುಕ್ರನು ೧೦ ನೇ ಮನೆಯಲ್ಲಿದ್ದರೆ ಆತನು ಮೀನ ರಾಶಿಯಲ್ಲಿರುತ್ತಾನೆ. ಅಂದರೆ ಮೀನದಲ್ಲಿ ಶುಕ್ರನು ಉಛ್ಛನಾಗುತ್ತಾನೆ. ಇದರಿಂದಾಗಿ ಪೂರ್ಣ +ವ್ ರಿಸಲ್ಟ್ಸ್ ಬರುವಹಾಗೆ ಮಾಡಿಸುತ್ತಾನೆ. ಪ್ರಮೋಷನ್ ಕೂಡಾ ಕೊಡಿಸುತ್ತಾನೆ. ೧೦ ನೇ ಮನೆಯ ಕಾರಕತ್ವಗಳೆಲ್ಲಾ +ವ್ ಆಗಿ ಪರಿಣಾಮಗೊಳ್ಳುತ್ತದೆ. ಇಲ್ಲಿಂದ ೪ ನೇ ಮನೆಯ ಮೇಲೆ ದೃಸ್ಟಿ ಬೀಳುವುದರಿಂದ, ಕುಟುಂಬ ಸುಖದ ಕಡೆಗೆ ಗಮನವನ್ನ ಹರಿಸುವ ಹಾಗೆ ಮಾಡಿಸುತ್ತಾನೆ. ಸಂತಾನನಿನ ಬಗ್ಗೆ ಬಹಳ ಕಾಳಜಿಯನ್ನ ಮಾಡುವವನಾಗಿ ಜಾತಕನನ್ನ ಮಾಡಿಸುತ್ತಾನೆ. ಗಾಡಿಯ ಸುಖ, ಮನೆಯ ಸುಖ, ತಾಯಿಯ ಸುಖ ಇತ್ಯಾದಿ ಎಲ್ಲಾ ಸಿಗುವ ಹಾಗೆ ಮಾಡಿಸುತ್ತಾನೆ. ತಾಯಿಯನ್ನ ಬಹಳ ಗೌರವದಿಂದ ನೋಡುವ ಹಾಗೆ ಮಾಡಿಸುತ್ತಾನೆ. ಭೂಮಿಯನ್ನ ಕೂಡ ತೆಗೆದುಕೊಳ್ಳುವ ಹಾಗೆ ಮಾಡಿಸುತ್ತಾನೆ.
ಶುಕ್ರನು ೧೧ ನೇ ಮನೆಯಲ್ಲಿದ್ದಲ್ಲಿ, ಯಾವಾಗಲೂ ಲಾಭವೇ ಲಾಭ. ವಿದೇಷ ಯಾತ್ರೆ ಮಾಡಿಸುತ್ತಾನೆ. ಸಣ್ಣ ಪುಟ್ಟ ಆರೋಗ್ಯದಲ್ಲಿ ಹಾನಿ ಇದ್ದಲ್ಲಿ ಅದನ್ನ ಗುಣ ಪಡಿಸುವನು. ಇಲ್ಲಿಂದ ೫ ನೇ ಮನೆಯ ಮೇಲೆ ದೃಸ್ಟಿ ಬೀಳುವುದರಿಂದ ಸಡನ್ ಲಾಭ ಬರುತ್ತದೆ. ಒಂದು ಮಾತು. ಲಾಟರಿ ಟಿಕೇಟನ್ನ ಕೊಳ್ಳಲು ಮರೆಯಬೇಡಿ. ಹಾಗೆ ಕೊಂಡಲ್ಲಿ ನಿಮಗೆ ಲಾಟರಿಯಲ್ಲಿ ಲಾಭವನ್ನ ಮಾಡಿಸಿಯಾನು. ಅದರಲ್ಲಿಯೂ, ಗುರುವಿನ ದೃಸ್ಟಿ ಇದ್ದಲ್ಲಿ ಕೇಳುವುದೇ ಬೇಡ. ಜಾತಕನ ಮೆಮೊರಿಯನ್ನ ಬಲ ಪಡಿಸುವನು. ಜಾತಕನನ್ನ ಕಲಾಕಾರನನ್ನಾಗಿ ಮಾಡಿಸುವನು. ಜಾತಕನಿಗೆ ಹಯರ್ ಎಜುಕೇಷನ್ನಿನ (ಪೋಸ್ಟ್ ಗ್ರೇಜುಯೇಟ್) ಲಾಭವನ್ನ ಮಾಡಿಸುತ್ತಾನೆ. ಹೆಣ್ಣು ಮಕ್ಕಳ ಸಂತಾನದ ಸುಖವನ್ನ ಕೊಡಿಸುತ್ತಾನೆ.
ಅದೇ ಶುಕ್ರನು ೧೨ ನೇ ಮನೆಯಲ್ಲಿದ್ದಾವಾಗ, ವಿಪರೀತ ರಾಜಯೋಗದ ಕಂಡಿಷನ್ನಲ್ಲಿರದಿದ್ದಲ್ಲಿ, ಜೈಲ್ ಯಾತ್ರೆಯನ್ನೂ ಮಾಡಿಸಿಯಾನು. ಫ಼ಿಜ಼ೂಲ್ ಖರ್ಚನ್ನೂ ಮಾಡಿಸಿಯಾನು. ಹೋಸ್ಪಿಟಲ್ ಖರ್ಚು ಕೂಡಾ ಏಕ್ಟಿವೇಟ್ ಆದೀತು. ಜಾತಕನಿಗೆ ಬಹಳ ಕಸ್ಟಕಾರಿಯಾದೀತು. ಆದರೆ ಶುಕ್ರನ ರತ್ನವನ್ನ ಮರೆತೂ ಈ ಮನೆಯಲ್ಲಿ ಧರಿಸಬೇಡಿ. ಹಾಗೆ ಧರಿಸಿದಲ್ಲಿ, ನಿಮ್ಮ ಕಸ್ಟ ಇನ್ನಸ್ಟು ಉಲ್ಭಣಗೊಂಡೀತು. ಜೋಕೆ. ಆದರೆ ಒಂದು ವೇಳೆ ವಿಪರೀತ ರಾಜಯೋಗದ ಕಂಡಿಷನ್ನಲ್ಲಿ ಬಂದರೆ, ಎಲ್ಲಾ ಕಾರಕತ್ವಗಳು ರಾಜಯೋಗವಾಗಿ ಪರಿಣಾಮಗೊಂಡೀತು.
ಇವಿಸ್ಟು ಶುಕ್ರನು ಬೇರೆ ಬೇರೆ ಮನೆಯಲ್ಲಿದ್ದರೆ ಮಿಥುನ ಲಗ್ನದವರಿಗೆ ಹೇಗೆ ಆದೀತು ಅಂತ ವಿಶ್ಲೇಷಣೆಯನ್ನ ಮಾಡಿದ್ದೇನೆ.

Dr. ಪಾರಂಪಳ್ಳಿ ಸುರೇಂದ್ರ ಉಪಾಧ್ಯ.M.Sc.; Ph.D
೧೬/೧೧/೨೦೧೫
ಜ್ಯೋತಿಸಿ, ಏಕ್ಯೂ ಪ್ರೆಸರ್ ಥೆರಾಪಿಸ್ಟ್ ಹಾಗೂ ರೇಕಿ ಮಾಸ್ಟರ್

No comments:

Post a Comment