Friday 10 March 2017

ಲಗ್ನಾತ್ ವಿಶೇಷ ವಿಚಾರಗಳು

ಲಗ್ನಾತ್ ವಿಶೇಷ ವಿಚಾರಗಳು

1.     ಮೇಷ ಲಗ್ನಕ್ಕೆ ಇಷ್ಟಾನಿಷ್ಟ :- ಈ ಲಗ್ನದವರಿಗೆ ಕುಜನು ಅಷ್ಟಮಾಧೀಷನಾದರೂ ಸಹ, ಅಶುಭಪಲಗಳನ್ನ ಕೊಡದೆ-ಶುಭದಾಯಕನ ಒಟ್ಟಿಗೆ ಸೇರಿದ್ದರೆ, ಶುಭಫಲವನ್ನೇ ಕೊಡುತ್ತಾನೆ. ಈ ಯೋಗಪಲದಾಯಕವು, ಕುಜನ ದಶಾಕಾಲ ಹಾಗೂ ಭುಕ್ತಿ, ಅಂತರಭುಕ್ತಿ, ಪ್ರತ್ಯಂತರಭುಕ್ತಿಗಳ ಕಾಲದಲ್ಲಿಯೇ ಆತನು ಕೊಡುತ್ತಾನೆ. ಮೇಷ ಲಗ್ನದವರಿಗೆ ರವಿ ಮತ್ತು ಗುರುಗಳು ಯೋಗಕಾರರು, ಕಾರಣ ಅವರುಗಳು ಪಂಚಮ ಹಾಗೂ ನಮಾಧಿಪತಿಗಳಾಗುತ್ತಾರೆ ಇವರುಗಳಿಗೆ. ಶನಿ ಮತ್ತು ಬುಧರು ಪಾಪ ಫಲದಾಯಕರು. ಆದ್ದರಿಂದ ಇವರುಗಳ ದೆಶೆಯಲ್ಲಿ ಜಾತಕನು ಹುಷಾರಾಗಿರಬೇಕು. ಆಗ ಅವರುಗಳ ಜಪ-ತಪಗಳನ್ನ ಮಾಡಿದಲ್ಲಿ ಆ ಪಾಪದ ಫಲಗಳು ಕಡಿಮೆ ಆಗುವುದೇ ವಿನಹ, ಅದು ಪೂರಾ ನಿರ್ನಾಮವಾಗುವುದಿಲ್ಲ. ಶುಕ್ರನೊಡನೆ ಬುಧ ಅಥವಾ ಶನಿಯು ಸೇರಿದರೆ ಅವರುಗಳು ಮಾರಕರೇ, ಕಾರಣ ಮೊದಲೇ ಶುಕ್ರನು ಮೇಷಲಗ್ನದವರಿಗೆ ೨ ಮತ್ತು ೭ ರ ಅಧಿಪತಿಯಾಗಿ ಮಾರಕನಾಗಿರುತ್ತಾನೆ. ಆನಂತರ, ಈ ಶತ್ರುಗ್ರಹರಾದ ಬುಧ ಮತ್ತು ಶನಿ ಸೇರಿದರೆ ಕೇಳಬೇಕೇ? ಇದು ನಮ್ಮ ವಿದ್ಯಾರ್ಥಿನಿ ಗಾ.ಹೆಬ್ಬಾಳ್ ಅವರ ಜಾತಕದಲ್ಲಿ ಇರುತ್ತದೆ. ಅವರನ್ನ ಕೇಳಿ ಕುಂಡಳಿಯನ್ನ ನೋಡಬಹುದು.
2.     ಇನ್ನು ವೃಷಭ ಲಗ್ನಕ್ಕೆ :- ಈ ಲಗ್ನದವರಿಗೆ ಶನಿಯು ಯೋಗಕಾರಕ ಗ್ರಹನು, ಕಾರಣ ಶನಿಯು ಧರ್ಮ ಮತ್ತು ಕರ್ಮಾಧಿಪತಿಯಾಗುತ್ತಾನೆ. ಬುಧನು ಅಲ್ಪ ಶುಭದಾಯಕನಾಗುತ್ತಾನೆ. ಇವರುಗಳಿಗೆ ಗುರು, ಶುಕ್ರ ಮತ್ತು ಚಂದ್ರರು ಅಶುಭದಾಯಕರಾಗಿರುತ್ತಾರೆ. ಶನಿ ಮತ್ತು ರವಿ ಗ್ರಹರು ಶುಭದಾಯಕರು. ಕುಜನೊಬ್ಬನೇ ಮಾರಕನು, ಕಾರಣ ಈತನು ಸಪ್ತಮಾಧಿಪತಿ ಹಾಗೂ ದ್ವಾದಶಾಧಿಪತಿಯಾಗಿರುತ್ತಾನೆ ಈ ಲಗ್ನದವರಿಗೆ. ನಮ್ಮ ಉದಾಹರಣೆ ಜಾತಕವನ್ನ ವೀಕ್ಷಿಸುವಾಗ ನಮ್ಮ ಸಹವಿದ್ಯಾರ್ಥಿ ಜಗನ್ನಾಥ ಹಾಗೂ ಎಮ್.ಎಸ್.ಓಬೀರೋಯ್ ಅವರ ಜಾತಕದಲ್ಲಿ ಈ ಲಗ್ನವುಂಟು. ಶುಕ್ರನು ಲಗ್ನಾಧಿಪತಿಯಾದುದರಿಂದ ಅಷ್ಟೊಂದು ಕೆಟ್ಟ ಫಲಗಳನ್ನ ಇವರುಗಳಿಗೆ ಕೊಡದೇ ಹೋದರೂ ಸಹ, ೬ ನೇ ಮನೆಯ ಅಧಿಪತಿಯಾದುದರಿಂದ ರೋಗ ರುಜಿನ, ಋಣ, ಹಾಗೂ ಶತ್ರುಗಳನ್ನ ಈತನ ದಶಾ, ಅಂತರದಶಾ ಕಾಲದಲ್ಲಿ.
ಕೊಟ್ಟಾನು.

3.      ಇನ್ನು ಮಿಥುನ ಲಗ್ನಕ್ಕೆ :- ಇವರುಗಳಿಗೆ ಕುಜ, ಗುರು ಮತ್ತು ರವಿಗಳು ಅಶುಭದಾಯಕರು.ಶುಕ್ರನೊಬ್ಬನೇ ಶುಭಪ್ರದ. ಶನಿ-ಗುರು ಯುತಿ (ನವಮೇಶ-ಕೇಂದ್ರ ) ಯೋಗವಿದ್ದಲ್ಲಿ ಅದು ಒಳ್ಳೆಯ ಯೋಗಕಾರಕವು. ಚಂದ್ರನು ಮಾರಕನು, ಕಾರಣ ಚಂದ್ರನು ೨ ರ ಅಧಿಪತಿ. ನಮ್ಮ ಉದಾಹರಣೆಯಲ್ಲಿ ವಿದ್ಯಾರ್ಥಿ ಶ್ರೀ, ಪಾಸುರವರ ಜಾತಕವು ಈ ಕೆಟೆಗರಿಗೆ ಬಂದಿರುತ್ತದೆ. ನೀವು ವೀಕ್ಷಿಸಿದರೆ, ನಮ್ಮ ವಿದ್ಯಾರ್ಥಿನಿ ಶ್ರೀ ಅವರ ಜಾತಕದಲ್ಲಿ ಮಿಥುನಲಗ್ನದಲ್ಲಿಯೇ ಶುಕ್ರನಿದ್ದು ಅವರಿಗೆ ಏಪ್ರಿಲ್ ೨೦೧೯ ರಿಂದ ಡಿಸೆಂಬರ್ ೨೦೨೧ರ ವರೆಗೆ ಒಳ್ಳೆಯದಾಗುವ ಸಂದರ್ಭಗಳು ಜಾಸ್ತಿ. ಅದೇ ಪಾಸುರವರ ಜಾತಕದಲ್ಲಿ, ಶನಿಯದೆಶೆಯೇ ನಡೆದಿದ್ದು, ಗುರುವಿನ ಭುಕ್ತಿ ಜನುವರಿ ೨೦೧೮ರವರೆಗೆ ನಡೆಯುತಿರುತ್ತದೆ. ಅಂದರೆ ಇವರುಗಳಿಗೆ ನವಮೇಶ ಶನಿಯ ಹಾಗೂ ಪಂಚಮ ದೆಶೆಯಾದ ಶನಿಯ ದೆಶೆಯಲ್ಲಿ ಕೇಂದ್ರಾಧಿಪತ್ಯವನ್ನ ಹೊಂದಿರುವಂತಹ ಗುರುವಿನ ಅಂತರ್ದೆಶೆಯು ನಡೆಯುತ್ತಿದೆ ಎಂದರೆ ಅವರುಗಳಿಗೆ  ಈ ಒಂದು ಸಮಯದಲ್ಲಿ ಹೆಸರು, ಕೀರ್ತಿ, ವಿದ್ಯಾರ್ಜನೆ, ಸುಖ, ಸಂಪತ್ತು ಎಲ್ಲಾ ಸಿಕ್ಕಿರುತ್ತದೆ. ಹಾಗೂ ಇನ್ನೂ ಐಗುತ್ತದೆ. ಅವರುಗಳ ನೇಟಲ್ ಚಾರ್ಟಿನಲ್ಲಿ ಗೋಚಾರದ ಗುರುವು ಶನಿಯ ಮೇಲೆ ಪರಿಭ್ರಮಣಿಸುವುದರಿಂದ, ಅವರಿಗೆ ಎಲ್ಲಾ ಒಳ್ಲೇಯದೇ ಆಗುತ್ತದೆ. ಇನ್ನು ಅವರದ್ದು ವೃಷಭ ರಾಶಿ. ಚಂದ್ರನು ೧೬*೦೯’ ಇರುತ್ತಾನೆ. ಅರ್ಥಾತ್ ಆತ ವೃಷಭದಲ್ಲಿ ಉಛ್ಛ ಮಾತ್ರವಲ್ಲ, ಆತನು ನವಾಂಶದಲ್ಲಿ ವರ್ಗೋತ್ತಮ್ನೂ, ಪುಷ್ಕರನವಾಂಸಜನೂ, ಪುಶ್ಕರ ಭಾಗದವನೂ ಆಗಿದ್ದು, ಗೋಚಾರದ ಗುರುವು ಕನ್ಯಾ ರಾಶಿ, ಅಂದರೆ ವೃಷಭ ರಾಶಿಯಿಂದ ೫ ನೇ ರಾಶಿಯ ಮೇಲೆ ಸಂಚರಿಸುವುದರಿಂದ, ಆತನನ್ನ ಲರ್ನೆಡ್ ಸ್ಕೋಲರ್ನನ್ನಾಗಿ ಮಾಡುವನು. ಆತನಿಗೆ ಫೆಬ್ರುವರಿ ತಿಂಗಳು, ೨೦೧೭ ರ ಇಸವಿ ೨೦ನೇ ತಾರೀಕಿನಂದು ಕೋಲ್ಕತ್ತಾ ಯೂನಿವರ್ಸಿಟಿಯಾದ ಓರಿಯಂಟಲ್ ಹೆರಿಟೇಜ್, ಡಾಕ್ಟರೇಟ್ ಡಿಗ್ರೀಯನ್ನ ನವದೆಹಲಿಯಲ್ಲಿ ಕೊಟ್ಟಿರುತ್ತಾರೆ. ಅದಕ್ಕೇ ಇವರುಗಳು ಪ್ರೊಫ಼ೆಸ್ಸರ್ ವಿಜಯಕುಮಾರ ಅವರ ಜ್ಯೋತಿಷ್ಯ ಕೇಂದ್ರವಾದ “ಆಕಾಶ” ಕ್ಕೆ ಭರ್ತಿಗೊಂಡಿದ್ದು, ಡಿಪ್ಲಮೋ ಕೋರ್ಸನ್ನ ಕೂಡಾ ಜ್ಯೋತಿಷ್ಯದಲ್ಲಿ ಮಾಡುವವರಾಗಿರುತ್ತಾರೆ. ಹೀಗೆ ನೀವುಗಳು ಪ್ರೀಡಿಕ್ಷನ್ ಕೊಡಬೇಕೇ ವಿನಹ ಬರೇ ಪುಸ್ತಕದ ಬದನೇಕಾಯಿಯನ್ನ ಜೀರ್ಣಿಸಿಕೊಂಡರೆ ಏನೂ ಪ್ರಯೋಜನವಿಲ್ಲ. ಹಾಗೆ ಮಾಡಿದಲ್ಲಿ ೧೫ -೨೦ ವರ್ಷಗಳ ಕಾಲ ಈ ಜ್ಯೋತಿಷ್ಯ ಕೇಂದ್ರದವರಿಗೆ ನೀವುಗಳು ಬರೇ ಹಣವನ್ನೇ ಸೊರಿಯುತ್ತಿರಬೇಕಷ್ಟೆ.

4.     ಕಟಕ ಲಗ್ನದವರಿಗೆ:- ಕರ್ಕ ಲಗ್ನಕ್ಕೆ ಕುಜ, ಗುರು ಮತ್ತು ಚಂದ್ರರು ಶುಭರು, ಕಾರಣ ಪಂಚಮಾಧಿಪತಿ ಕುಜನಾಗಿದ್ದರೆ, ಗುರು ಗ್ರಹವು ನವಮಾಧಿಪತಿಯಾಗಿರುತ್ತಾನೆ. ಅದೇ ಚಂದ್ರನು ಲಗ್ನಾಧಿಪತಿ ಆಗಿರುತ್ತಾನೆ. ಇವರುಗಳಿಗೆ ಬುಧ ಮತ್ತು ಶುಕ್ರರು ಅಶುಭರು, ಕಾರಣ ಬುಧನಿಗೆ ಚಂದ್ರನು ತಾಯಿಯಾಗಿದ್ದರೂ ಕೂಡ ಶತ್ರುವೇ ಮತ್ತು ಶುಕ್ರನಂತೂ ಚಂದ್ರನಿಗೆ ನೈಸರ್ಗಿಕ ಶತ್ರು. ಕುಜನು ಯೋಗಕಾರಕನು. ಶನಿಯು ಮಾರಕನು, ಕಾರಣ ಈತನು ೭ ಮತ್ತು ೮ನೇ ಅಧಿಪತಿಯಾಗಿರುತ್ತಾನೆ ಕಟಕ ಲಗ್ನದವರಿಗೆ. ರವಿಯು ಸಹಚರ್ಯದಂತೆ ಫಲಗಳನ್ನ ಕೊಡುತ್ತಾನೆ. ನಮ್ಮ ವಿದ್ಯಾರ್ಥಿನಿ ಸಾಧನ ಅವರ ಜಾತಕದಲ್ಲಿ ನೋಡಬಹುದು. ಇವರಿಗೆ ಶನಿಯ ದೆಶೆಯೇ ನಡೆಯುತ್ತಿದ್ದು, ರಾಹುವಿನ (ರಾಹುವಾತ್ ಶನಿ), ಅಂತರದೆಶೆಯು ನಡಿದಿದ್ದು (೦೨-೦೪-೨೦೧೪ ರಿಂದ ೦೬-೦೨-೨೦೧೭ ರವರೆಗೆ) ಅಂದರೆ ಮಾರಕನ ದೆಶೆ ಹಾಗೂ ಅಂತರದೆಶೆ ನಡೆಯುತ್ತಿದ್ದು, ಗೋಚಾರದ ಶನಿಯ (ವೃಷ್ಚಿಕದಲ್ಲಿ) ದೃಷ್ಟಿಯು ಮಕರ, ಅಂದರೆ ಮಾರಕಸ್ಥಾನದ ಮೇಲೆಯೇ ಬಿದ್ದಿದ್ದು, ಮಾರಕನಾದ ಶನಿಯ ದೆಶೆಯೇ ನಡೆಯುತ್ತಿದ್ದು, ಕಳತ್ರರ ವಿಷಯದಲ್ಲಿ ಅನನ್ಯ ನೋವನ್ನ, ಗೊಂದಲವನ್ನ ಅನುಭವಿಸಿರುತ್ತಾರೆ. ಒಂದುವೇಳೆ, ಕಳತ್ರ ರಾಶಿಯನ್ನೇ ಲಗ್ನವಾಗಿರಿಸಿಕೊಂಡಲ್ಲಿ, ೭ನೇ ಮನೆಯು ಕಳತ್ರರಿಗೆ ಮಾರಕವಾಗಿದ್ದು, ಅಂದರೆ ಚಂದ್ರ (ತಾಯಿ) ಕಳತ್ರರಿಗೆ ಮಾರಕನಾಗಿದ್ದು, ಅವನ ಪ್ರತ್ಯಂತರ ದೆಶೆಯಲ್ಲಿಯೇ , ಅಂದರೆ ೧೫-೦೯-೨೦೧೬ ರಿಂದ ೧೦-೧೨-೨೦೧೬ ರವರೆಗಿನ) ಸಮಯದಲ್ಲಿ ಇವರ ಕಳತ್ರರು ತಮ್ಮ ತಾಯಿಯನ್ನ ಕಳೆದುಕೊಂಡಿರುತ್ತಾರೆಂದು ಹೇಳೋಣವೇ? ಇಷ್ಟರವರೆಗೆ ಹಾಗೆ ಆಗದಿದ್ದಲ್ಲಿ, ಕಳೆದುಕೊಳ್ಳುತ್ತಾರೆಂದೂ ಹೇಳೋಣವೇ?
5.     ಸಿಂಹ ಲಗ್ನದವರಿಗೆ:- ಬುಧ, ಶುಕ್ರ ಮತ್ತು ಶನಿಗಳು ಅಶುಭರು. ಕುಜ, ಗುರು ಮತ್ತು ರವಿಗಳು ಶುಭರು. ಶನಿಯು ಮಾರಕನು ಕಾರಣ ಶನಿ ಗ್ರಹನು ೭ನೇ ಮನೆಯ ಅಧಿಪತಿಯಾಗಿರುತ್ತಾನೆ. ಚಂದ್ರನು ಸಹಚರ್ಯದಂತೆ ಪಹಲಗಳನ್ನ ಕೊಡುತ್ತಿರುತ್ತಾನೆ. ವ್ಯಯೇಶನಾದರೂ ಸಹ, ಶುಭಸ್ಥಿತಿ, ಶುಭಯೋಗವಿದ್ದರೆ ಶುಭವೆಂದರ್ಥ. ಇದು ನಮ್ಮ ವಿದ್ಯಾರ್ಥಿನಿ ಲತಾ  ಅವರ ಜಾತಕದಲ್ಲಿ ನೋಡಬಹುದು.
6.     ಕನ್ಯಾ ಲಗ್ನದವರಿಗೆ:- ಇವರುಗಳಿಗೆ ಕುಜ, ಗುರು, ಚಂದ್ರರು ಅಶುಭರು. ಬುಧ ಶುಕ್ರರು ಶುಭದಾಯಕರು. ಶುಕ್ರ ಬುಧರು ಸಂಯೋಗವಾದರೆ ಯೋಗಕಾರಕರುರವಿಯು ಮಧ್ಯಮನು. ನಮ್ಮ ಉದಾಹರಣೆ ಕುಂಡಳಿಯಲ್ಲಿ ವಿದ್ಯಾರ್ಥಿ ಶಿವಕುಮಾರ ಅವರದ್ದು ಕನ್ಯಾ ಲಗ್ನ. ಇವರುಗಳಿಗೆ ಸಪ್ಟೆಂಬರ್ ೨೦೧೪ರಿಂದ ೨೦೩೦ ಸಪ್ಟೆಂಬರ್ ವರೆಗೆ ಗುರು ದೆಶೆಯೇ ನಡೆದಿದ್ದು, ಇವರುಗಳು ನೂರಕ್ಕೆ ನೂರು ಜ್ಯೋತಿಷ್ಯಶಾಸ್ತ್ರವನ್ನ ಈ ಸಮಯದಲ್ಲಿ ತಮ್ಮ ಬುಟ್ಟೀಗೆ ಹಾಕಿಕೊಳ್ಳದೇ ಇರರು. ಅದೂ ಕೂಡಾ ಈ ಗುರು ಅಂತರದೆಶೆಯು ಮುಗಿಯುವದರೊಳಗೆ (೧೭-೧೧-೨೦೧೬) ಇವರು ಖಂಡಿತವಾಗಿಯೂ ಒಂದಲ್ಲಾ ಒಂದು ಜ್ಯೋತಿಷ್ಯದ ಕೇಂದ್ರಕ್ಕೆ ಸೇರಿದ್ದು ಜ್ನಾನವನ್ನ ಗಳಿಸುವುದರಲ್ಲಿಯೇ ಚಿಂತಿತರಾಗಿದ್ದಾರೆ.

7.     ತುಲಾ ಲಗ್ನದವರಿಗೆ:- ಗುರು, ರವಿ, ಕುಜರು ಅಶುಭ ಫಲದಾಯಕರು. ಶನಿ ಮತ್ತು ಬುಧರು ಶುಭಫಲದಾಯಕರು. ಚಂದ್ರ-ಬುಧರ ಯೋಗವು ರಾಜಯೋಗಕಾರಕವು. ಕುಜನು ಮಾರಕ. ಶುಕ್ರ ಸಮನು. ಶನಿಯು ಯೋಗಕಾರಕ ಗ್ರಹನು.


8.     ವೃಷ್ಚಿಕ ಲಗ್ನದವರಿಗೆ:- ಶುಕ್ರ, ಬುಧ ಮತ್ತು ಶನಿಗಳು ಅಶುಭ ಫಲದಾಯಕರು. ಗುರು ಮತ್ತು ಚಂದ್ರರು ಶುಭಫಲಪ್ರದರು. ರವಿ ಮತ್ತು ಚಂದ್ರರು ಯೋಗಕಾರರು. ಕುಜನು ಸಮನು. ಶುಕ್ರಾದಿಗಳು ಮಾರಕರು. ನಮ್ಮ ಪ್ರಾಚಾರ್ಯ ಶ್ರೀಮತಿ ಸುಚಿತ್ರಾರವರದ್ದು ವೃಶ್ಚಿಕ ಲಗ್ನ. ಶನಿಯ ದೆಶೆಯಲ್ಲಿ ಸುಮಾರು ಏರಿಳಿತವನ್ನ ಕಂಡಿದ್ದು ಇವರುಗಳಿಗೆ ಬರುವಂತಹ ಬುಧ ದೆಶೆ (ಅಕ್ಟೋಬರ್, ೨೦೧೯ರಿಂದ) ಬಹಳ ಹಸಿರನ್ನ ಕಾಣುವರು. ಈ ಸಮಯದಲ್ಲಿ ಇವರುಗಳು ಓಂದು ಕೈಪಿಡಿಯನ್ನೇ ತಂದಾರು. ನಮ್ಮ ವಿದ್ಯಾರ್ಥಿ ಅಜಯ್ ಅವರದ್ದೂ ವೃಸ್ಚಿಕ ಲಗ್ನವಾಗಿದ್ದು, ಗುರು, ರವಿ ಮತ್ತು ಕೇತುಗ್ರಹರು ಲಗ್ನಸ್ಥಿತರಾಗಿರುತ್ತಾರೆ. ಅಂದರೆ ಒಬ್ಬ ಯೋಗಕಾರಕ, ಹಾಗೂ ಇನ್ನೊಬ್ಬ ಶುಭ ಗ್ರಹರು ಲಗ್ನಸ್ಥಿತನಾಗಿದ್ದು ಯೋಗಕಾರಕನಾದ ಬುಧನ ದೆಶೆಯು ೦೪-೦೪-೨೦೨೧ರ ವರೆಗೆ ನಡೆಯುವುದರಿಂದ, ಇವರೂ ಕೂಡ ಜ್ಯೋತಿಷ್ಯವನ್ನ ಈ ಸಮಯದಲ್ಲಿ ಕಲಿಯುತಿದ್ದಾರೆ ಅನ್ನಿಸುತ್ತದೆ. ಇವರಿಗೆ ಗುರು ಅಂತರ್ದೆಶೆಯಲ್ಲಿ , ಅಂದರೆ ಜುಲೈ ೨೦೧೮ ರ ಒಳಗೆ ಮದುವೆ ಯೋಗವುಂಟು. ಅಂದರೆ ಗುರು ಗ್ರಹವು ವೃಶ್ಚಿಕ ರಾಶಿಯನ್ನ ಪ್ರವೇಶಿಸಿದಾವಾಗ ಇವರುಗಳಿಗೆ ಗುರುಬಲ ಬಂದಿದ್ದು ಕುಟುಂಬ ಸ್ಥಾನಾಧಿಪತಿಯಾದ ಗುರುವಿನ ಅಂತರದೆಶೆಯಲ್ಲಿಯೇ ಇವರಿಗೆ ಕುಟುಂಬವನ್ನ ವಿಸ್ಥರಿಸುವ ಯೋಗವನ್ನ ನಾನು ಕಾಣುತ್ತೇನೆ.

9.     ಧನೂರ ಲಗ್ನ:- ಈ ಲಗ್ನದವರಿಗೆ ಶುಕ್ರನೊಬ್ಬನೇ ಅಶುಭನು. ಕುಜ ಮತ್ತು ರವಿಗಳು ಶುಭಪ್ರದರು. ರವಿ ಮತ್ತು ಬುಧರು ಯೋಗಕಾರರು. ಶನಿ ಮತ್ತು ಶುಕ್ರರು ಮಾರಕರು. ಗುರು ಗ್ರಹರು ಸಮಫಲದಾಯಕರು.

10.                       ಮಕರ ಲಗ್ನದವರಿಗೆ :- ಇವರುಗಳಿಗೆ ಕುಜ, ಗುರು ಮತ್ತು ಚಂದ್ರರು ಅಶುಭದಾಯಕರು. ಬುಧ ಮತ್ತು ಶುಕ್ರರು ಶುಭದಾಯಕರು. ಕುಜನು ಭಾದಕನು (ಚರ ರಾಶಿಗೆ ೧೧ನೇ ಸ್ಥಾನಾಧಿಪತಿಯು ಭಾದಕನು) ಶುಕ್ರನು ಕೇಂದ್ರ-ತ್ರಿಕೋಣದ ಅಧಿಪತಿಯಾದುದರಿಂದ ಯೋಗಕಾರಕನು. ರವಿಯು ಮಧ್ಯಮನು.


11.                       ಕುಂಭಲಗ್ನಕ್ಕೆ :- ಗುರು, ಚಂದ್ರ ಹಾಗೂ ಕುಜರು ಪಾಪರು. ಶುಕ್ರ, ಶನಿಗಳು ಶುಭರು. ಶುಕ್ರನೊಬ್ಬನೇ ರಾಜಯೋಗಕಾರಕನು. ರವಿ, ಕುಜ ಮಾರಕರು. ಗುರು ಮಧ್ಯಮನು, ಅದೂ ಮಿಥುನದಲ್ಲಿರುವಾಗ.

12.                       ಮೀನಲಗ್ನದವರಿಗೆ :- ಶನಿ , ರವಿ ಮತ್ತು ಬುಧರು ಅಶುಭರು. ಕುಜ ಮತ್ತು ಚಂದ್ರರು ಶುಭದರು. ಕುಜ ಮತ್ತು ಗುರು ಸೇರಿದ್ದರೆ ಯೋಗಕಾರಕರು.ಶನಿ ಮತ್ತು ಬುಧರು ಮಾರಕರು. ಕುಜನು ಮಾರಕೇಶನಾದರೂ ನವಮೇಶನಾಗಿದ್ದುದರಿಂದ ಮಾರಕನು ಆಗುವುದಿಲ್ಲ. ನಮ್ಮಲ್ಲಿಯ ಭೀಷ್ಮ ಪಿತಾಮಹರಾದ ಶ್ರೀಮಾನ್ ಎಮ್ ಎಸ್ ಹೆಬ್ಬಾರ್  ಅವರದ್ದು ಮೀನ ಲಗ್ನ. ಇವರಿಗೆ ಬುಧ ದೆಶೆ, ಹಾಗೂ ಕುಜ ಅಂತರ್ದೆಶೆ (೦೨-೦೭-೨೦೧೬ ರಿಂದ ೨೯-೦೬-೨೦೧೭) ರ ವರೆಗೆ  ಇವರು ತಮ್ಮ ಕಳತ್ರರನ್ನ ಕಳೆದುಕೊಂಡಿರಬೇಕು. ಯಾಕೆ? ಕುಜನು ಇವರ ಕಳತ್ರ ಸ್ಥಾನದಲ್ಲಿಯೇ ಇರುವನು. ದೆಶೆಯೂ ಮಾರಕನಾದ ಬುಧನ ದೆಶೆ. ಇಷ್ಟಾದರೂ ಸಹ ಇವರುಗಳು ಬಹಳ ಜಾಗರೂಕರಾಗಬೇಕು, ಕಾರಣ ಈ ಮಾರಕನ ದೆಶೆಯು ಜನುವರಿ ೧, ೨೦೨೫ ರವರೆಗೆ ನಡೆಯುತದೆ.
ಇವಿಷ್ಟು ನನ್ನ ಅನ್ನಿಸಿಕೆಗಳು. ನಿಮಗೇನಾದರೂ ತೋಚಿದಲ್ಲಿ ಸಲಹೆಗಳನ್ನ ಕೊಡಬಹುದು.

ಡಾಕ್ಟರ್ಪಾರಂಪಳ್ಳೀ ಸುರೇಂದ್ರ ಉಪಾಧ್ಯ.ಎಮ್.ಎಸ್.ಸಿ.;ಪಿ.ಹೆಚ್.ಡಿ,
(ಜ್ಯೋತಿಷ)

೧೦/೦೧/೨೦೧೭

No comments:

Post a Comment