Friday 10 March 2017

ಮುಹೂರ್ತದಲ್ಲಿ ನಾವುಗಳು ಪರಿಗಣಿಸಬೇಕಾದ ಕೆಲವು ಮುಖ್ಯ ಸಂಗತಿಗಳು

(Astrology – Numerology – Matrimony – Reiki Master – Acupressure Therapist)

ಮುಹೂರ್ತದಲ್ಲಿ ನಾವುಗಳು ಪರಿಗಣಿಸಬೇಕಾದ ಕೆಲವು ಮುಖ್ಯ ಸಂಗತಿಗಳು
1.            ಪಂಚಾಂಗ ಶುಧ್ಧಿ:- ಶುಭವಾರ, ಶುಭ ನಕ್ಷತ್ರ, ಶುಭ ತಿಥಿ, ಶುಭ ಯೋಗ ಹಾಗೂ ಶುಭ ಕರಣಗಳಿಂದ ಮುಹೂರ್ತವು ಕೂಡಿರಬೇಕು.
2.      ಪಾಪಕರ್ತರಿ ದೋಷ:- ಮುಹೂರ್ತ ಲಗ್ನವು ಪಾಪಕರ್ತರಿ ದೋಷದಿಂದ ಮುಕ್ತವಾಗಿರಬೇಕು.
3.      ಚಂದ್ರ ದೋಷ:- ಚಂದ್ರನು ಮುಹೂರ್ತ ಲಗ್ನದಿಂದ ೬,೮ ಮತ್ತು ೧೨ನೇ ಮನೆಯಲ್ಲಿರಕೂಡದು.
4.      ಸಗ್ರಹ ಚಂದ್ರ ದೋಷ. ಮುಹೂರ್ತದಲ್ಲಿ ಚಂದ್ರನು ಯಾವ ಶುಭ ಯಾ ಅಶುಭ ಗ್ರಹಗಳ ಯುತಿಯನ್ನ ಹೊಂದಿರಬಾರದು.
5.      ಭ್ರಗು ಷಟ್ಕ :- ಮುಹೂರ್ತ ಲಗ್ನದಲ್ಲಿ ಶುಕ್ರನು ೬ ನೇ ಮನೆಯಲ್ಲಿದ್ದರೆ ತೊಂದರೆ. ೬ರಲ್ಲಿ ಶುಕ್ರನು ಉಛ್ಚನಾಗಿ ಶುಭ ಗ್ರಹಗಳ ಜೊತೆಗಿದ್ದರೂ ಆ ಮುಹೂರ್ತವನ್ನ ಪರಿಗಣಿಸಲೇ ಬಾರದು.
6.      ಅಷ್ಟಮ ಕುಜ:- ಮುಹೂರ್ತ ಲಗ್ನದಲ್ಲಿ ಕುಜನು ಆಷ್ಟಮದಲ್ಲಿದ್ದರೆ ಕಾರ್ಯದ ಉದ್ದೇಷಕ್ಕೆ ತೊಂದರೆ.ಕುಜನು ಎಷ್ಟೇ ಬಲಯುತನಾಗಿದ್ದರೂ, ಇದನ್ನ ನಿವಾರಿಸಿಕೊಳ್ಳಬೇಕು.
7.      ತಿಥಿ ಗಂಡಾಂತರ:- ಪೂರ್ಣ ತಿಥಿಗಳಾದ ಪಂಚಮಿ, ದಶಮಿ ಪೂರ್ಣಿಮೆಗಳ ಕೊನೇ ೨ ಘಟಿ (೪೮ ನಿಮಿಷ) ನಂದ ತಿಥಿಗಳಾದ ಪಾಡ್ಯಮಿ, ಷಷ್ಠಿ, ಏಕಾದಶಿಗಳ ಪ್ರಾರಂಭದ ೨ ಘಟಿ (೪೮ ನಿಮಿಷ) ತಿಥಿ ಗಂಡಾಂತರವೆನಿಸುತ್ತದೆ.
8.      ಲಗ್ನ ಗಂಡಾಂತರ:- ಮೇಶ, ಸಿಂಹ ಹಾಗೂ ಧನುಸ್ಸು ರಾಶಿಗಳ ಮೊದಲ ೨ ಘಳಿಗೆಗಳು, ಮೀನ, ಕಟಕ್ ಹಾಗೂ ವೃಷ್ಚಿಕ ರಾಶಿಗಳ ಕೊನೆಯ ೨ ಘಳಿಗೆಗಳು ಲಗ್ನ ಗಂಡಾಂತರ್ವೆನಿಸುತ್ತದೆ.
9.      ಲಗ್ನ ದೋಷ :- ಮುಹೂರ್ತ ಲಗ್ನವನ್ನ ನಿರ್ದಿಶಷ್ಠಗೊಳಿಸುವಾಗ, ಮುಹೂರ್ತ ಲಗ್ನವು ವಧೂ-ವರರ ಜನ್ಮ ಲಗ್ನದಿಂದ ಅಷ್ಟಮ ಲಗ್ನವಾಗಿರದಂತೆ ನೋಡಿಕೊಳ್ಳಬೇಕು. ಜೊತೆಗೆ ಲಗ್ನ ತ್ಯಾಜ್ಯ ಕಾಲವನ್ನೂ ಪರಿಗಣಿಸಬೇಕು.
10.    ಗ್ರಹಣೋತ್ಪಾತ ದೋಷ:- ಯಾವ ನಕ್ಷತ್ರದಲ್ಲಿ ಗ್ರಹಣವಾಗುತ್ತದೆಯೋ, ಆ ನಕ್ಷತ್ರವನ್ನು ಮದುವೆಗೆ ೬ ತಿಂಗಳು ಬಿಡಬೇಕು.
11.    ವಾರ ದೋಷ:- ಶುಭ ಕಾರ್ಯಗಳಿಗೆ ಶುಭ ವಾರಗಳಾದ ಸೋಮ, ಬುಧ, ಗುರು ಶುಕ್ರವಾರಗಳನ್ನೇ ಪರಿಗಣಿಸುವುದು ಶ್ರೇಯಸ್ಕರ.
12.    ಮುಹೂರ್ತ :-ಮುಹೂರ್ತ ಅಂದರೆ ೨ ಘಟಿಗಳು.(೪೮ ನಿಮಿಷಗಳು). ಒಂದು ದಿನದಲ್ಲಿ ೬೦ ಘಟಿಗಳಿರುತ್ತವೆ. ಅಂದರೆ ಒಟ್ಟಿಗೆ ೩೦ ಮುಹೂರ್ತಗಳು ಆಗುತ್ತವೆ. ೧೫ ಮುಹೂರ್ತ ಬೆಳಿಗ್ಗೆಗೆ, ೧೫ ಮುಹೂರ್ತಗಳು ರಾತ್ರಿಗೆ. ಹಗಲಿನ ಮುಹೂರ್ತದಲ್ಲಿ ೧,,,೧೦,೧೧,೧೫ ನೇ ಮುಹೂರ್ತಗಳು ತ್ಯಾಜ್ಯ.
a.      ೧ನೇ ಮುಹೂರ್ತ ಅಂದರೆ ಆರಿದ್ರ       b.      ೨ನೇ ಮುಹೂರ್ತ ಆಶ್ಲೇಷ
c.       ೪ನೇ ಮುಹೂರ್ತ ಮಖಾ         d.      ೧೦ ನೇ ಮುಹೂರ್ತ ಜ್ಯೇಷ್ಠ
e.      ೧೧ನೇ ಮುಹೂರ್ತ ವಿಶಾಖ             f.       ೧೫ನೇ ಮುಹೂರ್ತ ಪುಬ್ಬ
g.      ಈ ಎಲ್ಲಾ ಮುಹೂರ್ತಗಳನ್ನ   h.      ವರ್ಜಿಸಬೇಕು.
i.      ರಾತ್ರಿ ಮುಹೂರ್ತದಲ್ಲಿ          j.      
k.      ೧ ಆರಿದ್ರ                         l.       ೬ ಭರಣಿ
m ಕೃತ್ತಿಕ ನಕ್ಷತ್ರಗಳನ್ನ ಪ್ರತಿನಿಧಿಸುವುದರಿಂದ ಇವುಗಳನ್ನ ತ್ಯಜಿಸಬೇಕು.

೧೩. ವಿಷ ಘಟಿ :- ಪ್ರತಿಯೊಂದು ನಕ್ಷತ್ರಕ್ಕೂ (ವಿವಿಧ ಘಟಿಗಳಲ್ಲಿ) ೪ ಘಟಿಗಳು ವಿಷ ಘಟಿಗಳಾಗಿರುತ್ತವೆ. ಇದನ್ನ ಮುಹೂರ್ತದಲ್ಲಿ ಪರಿಗಣಿಸಬೇಕು. ಪ್ರತಿಯೊಂದು ರಾಶಿಯಲ್ಲೂ ಪ್ರತಿ ನಕ್ಷತ್ರದ ವಿಷ ಘಟಿಗಳು ಯಾವ ಡಿಗ್ರಿಯಿಂದ ಯಾವ ಡಿಗ್ರೀವರೆಗೆ ಇದೆ ಎಂಬ ವಿವರಣೆ ಕೆಳಕಂಡಂತಿದೆ.

೧೪. ಮುಹೂರ್ತ ನಕ್ಷತ್ರಕ್ಕೆ ಯಾವುದು ವೇದ ನಕ್ಷತ್ರವಾಗಿರುತ್ತದೆಯೋ, ಆ ನಕ್ಷತ್ರದಲ್ಲಿ ಪಾಪ ಗ್ರಹಗಳಿರಬಾರದು.
೧೫. ಕ್ಷಯ ಮಾಸ , ಅಧಿಕ ಮಾಸ, ಕ್ಷಯ ತಿಥಿ, ವೃಧ್ಧಿ ತಿಥಿಗಳನ್ನ ಕೈ ಬಿಡಬೇಕು ಮುಹೂರ್ತ ನಿರ್ಣಯಮಾಡುವಾಗ.
೧೬. ಎಲ್ಲಾ ಮುಹೂರ್ತಗಳಿಗೂ ಸಮಾನವಾಗಿ ಪರಿಗಣಿಸಬೇಕಾದ ಮೂರು ಮುಖ್ಯ ಅಂಷಗಳಾದ (೧) ತಾರಾಬಲ, (೨) ಚಂದ್ರ ಬಲ (೩) ಪಂಚಕ ಈ ಮೂರನ್ನೂ ನೋಡಬೇಕು.
1.      ಜ್ಯೋತಿಷ್ಯ ಶಾಸ್ತ್ರದಲ್ಲಿ, ಮುಹೂರ್ತ ಭಾಗವು ಅತ್ಯಂತ ವಿಷೇಷತೆಯನ್ನ ಪಡೆದಿದೆ. ಯಾವುದೇ ಕಾರ್ಯವನ್ನ ಮಾಡುವಾಗ, ಸಂಕಲ್ಪವನ್ನ ಮಾಡುತ್ತೇವೆ. ಅದರಲ್ಲಿ ನಾವು ಶುಭ ವಾರ, ಶುಭ ತಿಥಿ, ಶುಭ ನಕ್ಷತ್ರ, ಶುಭ ಯೋಗ ,ಶುಭ ಕರಣ ಎಂದು ಹೇಳುತ್ತೇವೆ. ಹಾಗಾದರೆ ಈ ಯೋಗಗಳೆಂದರೆ ಏನು?
2.      ಒಟ್ಟಿಗೆ ನಮ್ಮಲ್ಲಿ ೨೭ ಯೋಗಗಳು ಇವೆ. ಅವುಗಳು ಯಾವುದೆಂದರೆ:-
a.      ವಿಷ್ಕಂಭ, ಪ್ರೀತಿ, ಆಯುಶ್ಮಾನ್, ಸೌಭಾಗ್ಯ, ಶೋಭನ, ಅತಿಗಂಡ,ಸುಕರ್ಮ, ಢೃತಿ, ಶೂಲ, ಗಂಡ, ಧೃವ,ವ್ಯಾಘಾತ, ಹರ್ಷಣ, ವಜ್ರ,ಸಿಧ್ಧಿ, ವ್ಯತಿಪಾತ, ವರಿಯಾನ್, ಪರಿಘ, ಶಿವ, ಸಿಧ್ಧ, ಸಾಧ್ಯ, ಶುಭ, ಸುಕ್ಲ, ಬ್ರಹ್ಮ, ಐಂದ್ರ, ವೈಧೃತಿ ಎಂದಿದ್ದು ಈ ಯೋಗಗಳು ಸಂಸ್ಕ್ರೂತದಲ್ಲಿದ್ದು ತನ್ನದೇ ಆದ ಅರ್ಥಗಳನ್ನ ಹೊಂದಿದ್ದು, ಮುಂದೆ ನಡೆಯುವಂತಹ ಶುಭ ಕಾರ್ಯದಲ್ಲಿ ಈ ಯೋಗದ ಅರ್ಥಕ್ಕನುಸಾರವಾಗಿ ಫಲಗಳನ್ನ ಕೊಡುತ್ತವೆ.
b.      ಈ ೨೭ ಯೋಗಗಳಲ್ಲಿ ೯ ಯೋಗಗಳು ಅಶುಭ ಯೋಗಗಳು. ಅವುಗಳು ಯಾವುದೆಂದರೆ, ವಿಷ್ಕಂಭ, ಶೂಲ, ಗಂಡ, ವ್ಯಾಘಾತ, ವಜ್ರ, ವ್ಯತಿಪಾತ, ಪರಿಘ, ವೈಧೃತಿ ಮತ್ತು ಅತಿಗಂಡ ಯೋಗಗಳು ಸರ್ವತ್ರ ತ್ಯಾಜ್ಯವಾಗಿದೆ. ಆದರೆ ಯಾವುದೇ ಅನಿವಾರ್ಯ ಸಂದರ್ಭದಲ್ಲಿ, ಪರಿಹಾರವನ್ನ ಮಾಡಿ ಮುಂದುವರಿಯಬೇಕಾಗಿದೆ. ಆಗ ಈ ಯೋಗದಿಂದ ನಡೆಯುವ ದುಷ್ಫಲಗಳು ಕಡಿಮೆಯಾಗಲಿಕ್ಕಿದೆ.


3.ವಿಷ್ಕಂಭ:- ವಿಷದಿಂದ ಕೂಡಿದಂತಹದ್ದು. ಇದರಲ್ಲಿ ನಡೆದಂತಹ ಕಾರ್ಯಗಳಲ್ಲಿ ಜನರಲ್ಲಿ ವೈಮನಸ್ಸು, ದ್ವೇಷ, ಅಸೂಹೆಗಳನ್ನು ಮತ್ತು ಕಲಹಗಳನ್ನ ಎದುರಿಸಬೇಕಾಗುತ್ತದೆ.
a.      ಪರಿಹಾರ:- ಕುಜಗ್ರಹಕ್ಕೆ ಹೋಮ, ಶಾಂತಿ ಮತ್ತು ಸುಭ್ರಮಣ್ಯನ ಪೂಜೆ.
4.      ಶೂಲ:- ಎಂದರೆ ಬಾಣ, ಕತ್ತಿ ಎಂಬರ್ಥ. ಈ ಯೋಗದಲ್ಲಿ ನಡೆಯುವಂತಹ ಕಾರ್ಯಗಳಿಗೆ ಶಸ್ತ್ರ ಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಗೆ ಒಳಗಾಗುವ ಸಂಭವ ಹೆಚ್ಚು.
a.      ಪರಿಹಾರ:- ದುರ್ಗಾದೇವಿಯ ಪೂಜೆ, ಹೋಮ ಮತ್ತು ಶಾಂತಿ.
5.      ಗಂಡ ಪ್ಲುಸ್ ಅತಿಗಂಡ:- ಯಾವುದೇ ವಿಧವಾದ ಗಂಡಾಂತ್ರಗಳು ಸಂಭವಿಸಬಹುದು ಮತ್ತು ಅಫ್ಘಾತಗಳು ಸಂಭವಿಸಬಹುದು.
a.      ಪರಿಹಾರ:- ಕುಜಗ್ರಹಕ್ಕೆ ಅಥವಾ ಸರ್ಪಶಾಂತಿ, ಹೋಮ ಮಾಡಬೇಕು.
6.      ವ್ಯಾಘಾತ:- ಎಂದರೆ ಮಾನಸಿಕವಾಗಿ ಆಘಾತ, ಣೋವು, ಚಿಂತೆ, ಮಾನಸಿಕ ತುಮುಲತೆ ಎಲ್ಲಾ ಎದಿರಾಗುತ್ತೆ.
a.      ಪರಿಹಾರ:- ಕೇತು ಗ್ರಹಕ್ಕೆ ಹೋಮ ಅಥವಾ ಶಾಂತಿ ಮತ್ತು ವಿನಾಯಕನ ಪೂಜೆ.
7.      ವಜ್ರ ಯೋಗ:- ಆಯುಧ ಅಥವಾ ಶಸ್ತ್ರ. ಇದನ್ನ ಶುಭ ಕಾರ್ಯಗಳಲ್ಲಿ ಉಪಯೋಗಿಸಲಾಗುವುದಿಲ್ಲ, ಹಾಗೂ ಈ ಸಂದರ್ಭದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಬಹಳ ಕಠೋರವಾಗಿರುತ್ತೆ.
a.      ಪರಿಹಾರ:- ಗುರುಗ್ರಹಕ್ಕೆಶಾಂತಿ ಅಥವಾ ಶಿವನ ಆರಾಧನೆ.
8.      ವ್ಯತಿಪಾತ ಯೋಗ:- ವ್ಯತಿರಿಕ್ತ ಅಥವಾ ಇಛ್ಚೆಗೆ ವಿರುಧ್ಧವಾಗಿ ಕಾರ್ಯಗಳು ನಡೆಯುತ್ತೆ.
a.      ಪರಿಹಾರ:- ರಾಹು,ಕೇತು ಅಥವಾ ಪಿತೃ ಸಂಬಂಧ ಕಾರ್ಯಗಳನ್ನ ಮಾಡಿ ಮುಂದುವರಿಯಬೇಕು.
9.      ಪರಿಘ ಯೋಗ :- ಪರಿಘ ಅಂದರೆ ವಿಘ್ನ ಅಥವಾ ಅಡ್ಡಿ ಪಡಿಸುವುದು. ನಡೆಯುವ ಕಾರ್ಯಗಳು ಅರ್ಧದಲ್ಲೇ ನಿಂತುಹೋಗುವುದು. ಮುಂದೆ ತೊಂದರೆಗಳುಂತಾಗುವುದು.
a.      ಪರಿಹಾರ:- ಸುದರ್ಷನ ಅಥವಾ ಮಹಾಗಣಪತಿ ಪೂಜೆ, ಹೋಮ ಮತ್ತು ಶಾಂತಿ.
10.    ವೈದೃತಿ ಯೋಗ:- ಎಂದರೆ ವೈಧವ್ಯ ಉಂಟಾಗುವುದು. ಹಾಗೂ ಸಂಬಂಧಗಳು ಕೆಟ್ಟುಹೋಗುವುದು.
a.      ಪರಿಹಾರ:- ಶಿವನ ಆರಾಧನೆ ಅಥವಾ ಶುಕ್ರ ಗ್ರಹಕ್ಕೆ ವಿಶೇಷವಾದ ಪೂಜೆ, ಹೋಮ ಮತ್ತು ಶಾಂತಿ.


ಪಾರಂಪಳ್ಳೀ ಡಾ.ಸುರೇಂದ್ರ ಉಪಾಧ್ಯ, ಎಮ್.ಎಸ್.ಸಿ.;ಪಿ.ಹೆಚ್.ಡಿ.
(ಜ್ಯೋತಿಷ)

೨೬/೧೧/೨೦೧೬

No comments:

Post a Comment