Monday 13 March 2017

ಸಂಖೆ ೯ ಹೇಗಿದೆ ಅಂತ ನಾವೀಗ ನೋಡೋಣವೇ?

ಸಂಖೆ ೯ ಹೇಗಿದೆ ಅಂತ ನಾವೀಗ ನೋಡೋಣವೇ?


⦁ ಸಂಖ್ಯೆ ೯ ಅಂದರೆ ಕುಜ ಗ್ರಹ, ಶೌರ್ಯಕ್ಕೆ, ಧರ್ಯಕ್ಕೆ ಕಾರಕ.
⦁ ಇವರುಗಳು ಸೇನಾಧಿಪತಿ, ಬ್ರಿಗೇಡಿಅಯರ್ಸ್ ಆಗಲು ಅರ್ಹರು.
⦁ ಇವರುಗಳು ಸ್ಪೋರ್ಟ್ಸ್ಮೆನ್ ಆಗಲೂ ಲಾಯಕ್ ಆದಂತಹ ವ್ಯಕ್ತಿಗಳು.
⦁ ಆದರೆ ಇವರುಗಳು ಕೋಪಿಸ್ಟರು. ಇಲ್ಲದೇ ಇದ್ದರೂ ಮುಸುಂಡಿ ಮುಖವನ್ನ ಮಾಡಿಕೊಂಡೇ ಇರುವವರು.
⦁ ನಕ್ಕರೆ ಎಲ್ಲಿ ಹಲ್ಲುಗಳು ಉದುರಿ ಹೋಗುತ್ತವೋ ಅಂತ ಇವರಿಗೆ ಅನ್ನಿಸಬಹುದು.
⦁ ಈ ಸಂಖ್ಯೆ, ಅದೇ -ವ್ ಆದಲ್ಲಿ ಬಹಳ ಜಗಳಗಂಟರಾಗುತ್ತಾರೆ. ಕಡಿಮೆ ಮಾತನಾಡುತ್ತಾರೆ. ಖಾರವಾಗಿಯೂ ಮಾತನಾಡುತ್ತಾರೆ.
⦁ ೯ ನೇ ಸಂಖೆಯು ಸಂಖೆಗಳಲ್ಲಿ ಕೊನೆಯ ಸಂಖೆ. ಅಂದರೆ ಇವರು ಸೇನಾಧಿಪತಿಯವರೆಗೆ ಹೋಗಬಹುದು. ಅದೇ ಕಡೆಯ ಹುದ್ದೆ.
⦁ ಅಂದರೆ ಸಂಖೆ ೯ ಸತ್ತರೆ, ದೇಶವೇ ಸತ್ತು ಹೋಗುತ್ತೆ.
⦁ ಇವರುಗಳಿಗೆ ೧,೩ ಮತ್ತು ೬ ಲಕ್ಕಿ ಕೂಬ್ ಸಂಖೆಗಳು. ಆದರೆ ೧ ರ ಜೊತೆಯಲ್ಲಿ ಎಗೋ ಕ್ಲೇಷ್ ಆಗುವುದರಲ್ಲಿ ಎಳ್ಳಸ್ಟೂ ಸಂದೇಹವೇ ಬೇಡ.
⦁ ೩ ಮತ್ತು ೬ ರ ಜೋಡಿ ಬಹಳ ಒಳ್ಳೆಯ ಜೋಡಿ ಇವರುಗಳಿಗೆ.
⦁ ೯ ಕುಂಕುಮವಾದಲ್ಲಿ ೩ ಅರಸಿನವಾಗುತ್ತೆ. ಹಳದಿ ಮತ್ತು ಕುಂಕುಮದ ಜೋಡಿ ಅತೀ ಶುಭ ಎಂದು ನಿಮಗೆಲ್ಲಾ ತಿಳಿದಿದೆ.
⦁ ಆದ್ದರಿಂದ ಇವರುಗಳಿಗೆ ೩ ರ ಜೊತೆಯಲ್ಲಿ ಕೊಟ್ಟು ವಿವಾಹವನ್ನ ಮಾಡಿದಲ್ಲಿ ಬಹಳ ಶೈನ್ ಆಗುವುದರಲ್ಲಿ ಸಂದೇಹವೇ ಇಲ್ಲ.
⦁ ಸಂಖೆ ೧ ಅಂದರೆ ರಾಜ, ಸಂಖೆ ೯ ಅಂದರೆ ಸೇನಾಧಿಪತಿ. ಇವರಿಬ್ಬರೂ ಸೇರಿದಲ್ಲಿ ಡೈನಾಸ್ಟ್ಯನ್ನ ವಿಸ್ತರಿಸಬಹುದು.
⦁ ಸಂಖೆ ೨ ಮತ್ತು ೮ ಇವರಿಗೆ ಡೆಡ್ ಓಪೊಸಿಟ್. ಆದರೆ ಜೀವನದಲ್ಲಿ ಈ ಸಂಖೆಗಳೇ ಫ಼ಾಲೋ ಮಾಡುತ್ತಿರುತ್ತವೆ.
⦁ ೯ ಕ್ಕೆ ೫ ಮತ್ತು ೭ ಕೂಡಾ ಆಗಿ ಬರೋಲ್ಲ. ಸಂಖೆ ೪ ಅಂತೂ ಆಗೋದೇ ಇಲ್ಲ. ಕುಜ ಮತ್ತು ರಾಹು ಸೇರಿದಲ್ಲಿ ಜೈಲು ವಾಸದಂತಹ ಕಸ್ಟಬರುತ್ತೆ.
⦁ ಜಾತಕದಲ್ಲಿ ಕುಜ ಮತ್ತು ರಾಹು ಜೋಡಿಗಳು ಲಗ್ನದಿಂದ ೧೨ ನೇ ಮನೆಯಲ್ಲಿದ್ದಲ್ಲಿ ಜೈಲ್ ವಾಸವೂ ಬರಬಹುದು.
⦁ ಕೆಲವೊಂದು ಉದಾಹರಣೆಯನ್ನ ಕೊಡುವುದಾದರೆ, ಶ್ರೀಮತಿ ಸೋನಿಯಾ ಗಾಂಧಿ, ಕಿರಣ್ ಬೇಡಿ, ಜಯಾ ಭಾದುರಿ ಬಚನ್ ಸಂಖೆ ೯ ರವರು.
⦁ ಕನ್ನಡ ಸಿನೇಮಾ ರಂಗದ ಶಂಕರ್ ನಾಗ, ಹಿಂದೀ ಚಿತ್ರ ರಂಗದ ಅಕ್ಷಯಕುಮಾರ, ಟಾಮಿಲ್ ಡೈರೆಕ್ಟರ್ ಕೆ ಬಾಲ್ಚಂದರ್, ಸಂಖೆ ೯ ರವರು.
⦁ ಹಾಗೆಯೇ ಕರ್ನಾಟಕದ ಕಮಿಷನರ್ ಆಫ಼್ ಪೋಲೀಸ್ ಎಸ್.ಪಿ. ಸಾಂಗ್ಲಿಯಾನ, ಯೂರಿ ಗೆಗೇರಿಯನ್ ಮುಂತಾದವರು ಸಂಖೆ ೯ ರಲ್ಲಿ ಜನಿಸಿದವರು.
⦁ ನೋಡಿ ಸೋನಿಯಾ ಗಾಂಧಿ ಮತ್ತು ರಾಜೀವ ಗಾಂಧಿಯ ಜೋಡಿ ಅಟ್ಟರ್ ಫ಼ೈಲ್ಯೂರ್ ಅಂತ ತೆಗೆದುಕೊಳ್ಳೋಣವೇ? ನಿಮಗೆ ಬಿಟ್ಟಿರುತ್ತೇನೆ.
⦁ ಅಕ್ಷಯ ಕುಮಾರ (೯) ಮತ್ತು ರಾಜೇಷ ಖನ್ನ (೨) :- ಅಸ್ಟೊಂದು ಒಳ್ಳೆಯದಿಲ್ಲವೆಂತ ತಿಳಿಯೋಣವೇ?.
⦁ ಕಿರಣ ಬೇಡಿ ತಿಹಾರ್ ಜೈಲಿನಲ್ಲಿ ಕ್ರಾಂತಿಯನ್ನ ತಂದವರು ಅಂತ ನಮಗೆಲ್ಲಾ ತಿಳಿದಿರುವ ವಿಷಯವೇ.
⦁ ಸೋನಿಯಾ ಗಾಂಧಿ ಮತ್ತು ಪಿ ಚಿದಂಬರಂ (೭) ಇವರ ಜೋಡಿ ಅಸ್ಟೇನೂ ಒಳ್ಳೆಯದಿಲ್ಲ ಅಂತ ತಿಳಿದಿದೆ.
⦁ ಸೋನಿಯಾ (೯) ಮತ್ತು ಡಾಕ್ಟರ್ ಮನ್ಮೋಹನ್ ಸಿಂಘರ (೮) ಜೋಡಿ ಕೂಡಾ, ಮನ್ಮೋಹನ ಸಿಂಘರ ಬಾಯಿಯನ್ನೇ ಬಂದು ಮಾಡಿಸಿತೇ
⦁ ಇಲ್ಲಾ ಶ್ರೀಯುತರಾದ ಮನಮೋಹನ ಸಿಂಘರ ಹುಟ್ಟು ಗುಣವೇ ಹಾಗೆಯೋ?.
⦁ ಈ ಸಂಖೆಯು ಹೋಸ್ಪಿಟಾಲಿಟಿಗಗಂತೂ ಅಲ್ಲವೇ ಅಲ್ಲ. ನಿಮಗೆ ಹಾಗೆಂದು ಒಂದು ವೇಳೆ, ಆದರ ಆತಿಥ್ಯ ಬೇಕಾದಲ್ಲಿ ಸಂಖೆ ೨ ಮತ್ತು ೭ ರ ಹತ್ತಿರ ಹೋಗಿ.
⦁ ಇವರುಗಳು ಸಮವಸ್ತ್ರವನ್ನ ಧರಿಸಿದಲ್ಲಿ ಬಹಳ ಶೈನ್ ಆಗುವುದರಲ್ಲಿ ಸಂದೇಹವೇ ಇಲ್ಲ.
⦁ ಇವರುಗಳು ಜೀವನದಲ್ಲಿ ರಿಸ್ಕ್ ಫ಼ೇಕ್ಟರ್ ನೋಡೋದೇ ಇಲ್ಲ.
⦁ ಇವರುಗಳಿಗೆ ಶತ್ರುಗಳು ಇವರ ಕೋಪದ ನುಡಿಗಳಿಂದ ಹುಟ್ಟುತ್ತವೆ.
⦁ ೯ ಮತ್ತು ೬ ಉಲ್ಟಾ ಪಲ್ಟಾ ಸಂಖೆಗಳು. ಅರ್ಥಾತ್ ಇವರುಗಳಿಗೆ ಖಂಡಿತ ಲಕ್ಷ್ಮಿಯು ಒಲಿದು ಬರುವುದರಲ್ಲಿ ಸಂದೇಹವೇ ಇಲ್ಲ.

⦁ ಇವರಿಗೆ ಸುಬ್ರ್ಹಮಣ್ಯನು ಅಥವಾ ಷಣ್ಮುಖನು ಪ್ರಧಾನ ದೇವರು.
⦁ ಸಂಖ್ಯೆ ೯ ಕುಜನ ಕಾರಕತ್ವಗಳನ್ನೆಲ್ಲಾ ಗುಣದಿಷೆಯಾಗಿ, ಗುಣಲಕ್ಷಣಗಳಾಗಿ ಹೊರ ಹೊಮ್ಮುತ್ತವೆ, ಪ್ರತಿಬಿಂಬಿಸುತ್ತವೆ.
⦁ ಅಂದರೆ ದರ್ಪ, ಧೈರ್ಯ, ಸಾಹಸ, ಟೈಮ್ ಶಿಸ್ತು ಎಲ್ಲಾ ಈ ಸಂಖ್ಯೆಯವರಿಗೆ ಇದೆ.
⦁ ಇವುಗಳೆಲ್ಲಾ ಕಾವಲು ಕಾಯುತಕ್ಕವನಿಗೆ ಮಾತ್ರ ಬರುತ್ತವೆ.
⦁ ಆದ್ದರಿಂದ ಈ ಸಂಖ್ಯೆಯವರು ಯಾವಾಗಲೂ ಡೇಂಜರ್ ಜ಼ೋನ್ ನಲ್ಲಿಯೇ ಇರುತ್ತಾರೆ.
⦁ ಅದಕ್ಕೇ ಇವರುಗಳು ಕಾವಲು ಕಾಯುವಂತಹ ಆರ್ಮಡ್ ಗಾರ್ಡ್ಸ್ ಹುದ್ದೆ, ಇಲ್ಲಾ ಪೋಲೀಸ್ ಹುದ್ದೆ, ಇಲ್ಲಾ ಡಿಫ಼ೆನ್ಸ್ ಹುದ್ದೆ ಯಲ್ಲಿ ಲಾಯಕ್.
⦁ ಇವರುಗಳು ಜೀವನದಲ್ಲಿ ರಿಸ್ಕನ್ನ ತೆಗೆದುಕೊಳ್ಳುವುದರಿಂದ, ಏಟಿ.ಎಮ್ ವಿಭಾದಲ್ಲಿ ಸೆಕ್ಯುರಿಟಿ ಹುದ್ದೆಗೇ ಲಾಯಕ್ ಅಂತ ನನಗನ್ನಿಸುತ್ತೆ.
⦁ ಇವರುಗಳು ಭಾರೀ ಧೈರ್ಯವಂತವರು.
⦁ ಕುಜನು ಬಲವಾಗಿದ್ದಲ್ಲಿ ದೇಹ ಕೂಡ ಬಹಳ ದಸ್ಟ ಪುಸ್ಟರಾಗಿರುತ್ತದೆ.
⦁ ಇವರಿಗೆ ಕೋಪವೊಂದೇ -ವ್ ಅಥವಾ ವೀಕ್ ಪೋಯಿಂಟ್.
ಬರೆದು ಪ್ರಸ್ತುತ ಪಡಿಸಿದವರು

ಪಾರಂಪಳ್ಳಿ ಸುರೇಂದ್ರ ಉಪಾಧ್ಯ
10/12/2015

No comments:

Post a Comment