ವಿವಿಧ
ಭಾವಗಳಲ್ಲಿ ರವಿಸ್ಥಿತ ಫಲಗಳು
1.
ರವಿಯು
ಲಗ್ನದಲ್ಲಿಯೇ (ತನುಭಾವ)ಇದ್ದರೆ ಸ್ವಲ್ಪವೇ ತಲೆಕೂದಲು, ಪ್ರವೃತ್ತಿಗಳಲ್ಲಿ ಉದಾಸೀನತೆ, ಮಹಾಕೋಪ,
ಮಹಾಶಕ್ತಿ, ನೀಳದೇಹ, ಮಾನವಂತ, ಕ್ರೂರದೃಷ್ಟಿ, ಕ್ಷೀಣ ದೇಹ, ಮಹಾವೀರ, ಕ್ಷಮೆ ಇಲ್ಲದಾತ,
ದಯಾಶೂನ್ಯನೂ ಆಗುತ್ತಾನೆ. ಕಟಕ ಲಗ್ನದಲ್ಲಿ ರವಿ ಇದ್ದರೆ-ಹೂಕಣ್ಣೂ, ಮೇಷ ಲಗ್ನದಲ್ಲಿ ರವಿ
ಇದ್ದರೆ ತಿಮಿರವೆಂಬ ನೇತ್ರರೋಗಿ, ಸಿಂಹಲಗ್ನದಲ್ಲಿ ರವಿ ಇದ್ದರೆ-ರಾತ್ರಿ ಕಣ್ಣೂ ತೋರದಾತ,
ತುಲಾಲಗ್ನದಲ್ಲಿ ರವಿ ಇದ್ದರೆ ದಾರಿದ್ರ್ಯಪೀಡಿತ, ಮಕ್ಕಳನ್ನು ಕಳೆದುಕೊಳ್ಳುವಾತನು
(ಕಲ್ಯಾಣವರ್ಮರ ಸಾರವಳಿಯಲ್ಲಿಯೂ ಕೂಡಾ ಇದೇ ಅಭಿಪ್ರಾಯವು, ಜಾತಕ ಪಾರಿಜಾತದಲ್ಲಿ ವೈದ್ಯನಾಥರು
ಸ್ವಲ್ಪ ಉಣ್ಣುವರು, ನಟನೆ ಮಾಡುವಾತನೆಂದು ಸೇರಿಸಿದ್ದಾರೆ. ಉಚ್ಛದಲ್ಲಿ ಲಗ್ನದಲ್ಲಿ ರವಿ
ಇದ್ದರೆ-ಜ್ನಾನ ಆಚಾರ ಯಶಸ್ಸು ವೃಧ್ಧಿ ಎಂದಿದ್ದಾರೆ. ಚ.ಚಿಂತಾಮಣಿಯಲ್ಲಿ ವಾತ ಪಿತ್ತರೋಗೀ
ಎಂದರು)
2.
ಧನಭಾವದಲ್ಲಿ
ರವಿಸ್ಥಿತ ಫಲಗಳು:- ವಿದ್ಯೆ, ವಿನಯ, ಧನಾಹೀನನು, ತಪ್ಪು ಮಾತನಾಡುವನು. ಸಾರಾವಳಿಯಲ್ಲಿ
ಅರಸನಿಂದ, ಚೋರನಿಂದ ಧನ ನಷ್ಟ ಎಂದರು. ಮುಖ ರೋಗಿ, ವೈಭವವಿಲ್ಲದ ಜೀವನ ಎಂದರು.
ವೈದ್ಯನಾಥರು-ವಾಗ್ಮಿ, ತ್ಯಾಗಿ, ಶತ್ರುಗಳಿಲ್ಲದಾತನು ಎಂದರು. ಚ.ಚಿಂತಾಮಣಿಯವರು, ಪಶುಲಾಭ,
ಭಾರ್ಯಾಕಲಹವನ್ನು ಸೇರಿಸಿದ್ದಾರೆ. ಮಾನಸಾಗರಿಯಲ್ಲಿ-ಭಾಗ್ಯಹೀನನನಾದರೂ, ಲೋಹ, ತಾಮ್ರ
ಮುಂತಾದವುಗಳಿಂದ ಧನವನ್ನ ಸಂಪಾದಿಸುವುರೆಂದು ಹೇಳಿದರು.
|
|
|
ರಾಹು
|
|
|
ಚಂದ್ರ
|
ಲಗ್ನ
ಕೇತು
|
ಶುಕ್ರ
ಕುಜ
|
|
ಜವಾಹರ್ಲಾಲ್
ನೆಹರೂಜಿ
೧೪/೧೧/೧೮೮೯
ರಾತ್ರಿ ೧೧.೩೦
|
ಚಂದ್ರ
ಲಗ್ನ
|
|
ಎಮ್.ಎಸ್.ಓಬಿರೋಯ್.
೧೫/೦೮/೧೯೦೦ ಭೌನ್ (ಪಾಕಿಸ್ತಾನ್)
|
ಬುಧ
|
|||
|
ಶನಿ
|
|
ರವಿ
|
|||||
ಗುರು
ಕೇತು
|
ರವಿ
|
ಶುಕ್ರ
ಬುಧ
|
ಕುಜ
|
(ಶನಿ)
|
ಗುರು
ರಾಹು
|
|
|
ಶುಕ್ರ
(ಬುಧ)
ರವಿ
|
|
ಲಗ್ನ
ಗುರು
ರಾಹು
|
ಚಂದ್ರ
|
|
ಶನಿ
|
ರಾಹು
|
ಶುಕ್ರ
ಕುಜ
|
ರವಿ
ಗುರು
|
ಶನಿ
|
ಪ್ರೊಫ಼ೆಸರ್ ವಿ.
ಏಪ್ರಿಲ್, ೧೯೬೫
೮.೨೯ ಬೆಳಿಗ್ಗೆ
ಪುನರ್ವಸು-೩
|
|
|
ಅಧ್ಯಾಪಕಿ ಸು.
ಜೂನ್ ೧೯೬೬
ಮಧ್ಯಾಹ್ನ ೩.೪೩
ಚಿತ್ತ-೪
|
ಬುಧ
|
|||
|
(ಕುಜ)
|
|
|
|||||
|
ಕೇತು
|
|
|
|
ಲಗ್ನ
|
ಚಂದ್ರ
ಕೇತು
|
|
ಶನಿ
|
ರಾಹು
|
ರವಿ
ಬುಧ
|
ಲಗ್ನ
ಶುಕ್ರ
|
|
ಚಂದ್ರ
|
(ಗುರು) ಕೇತು
|
|
|
|
ವಿದ್ಯಾರ್ಥಿನಿ ಶ್ರೀ.
ಮೇ ೧೯೬೭
ಬೆಳಿಗ್ಗೆ ೭.೪೫
ಪೂ.ಆಷಾ-೪
|
ಗುರು
|
|
ವಿದ್ಯಾರ್ಥಿನಿ ಲ.
ಡಿಸೆಂಬರ್ ೧೯೭೬
ರಾತ್ರಿ ೧೦ ಗಂಟೆ
ರೇವತಿ-೪
|
ಶನಿ
|
|||
|
|
ಶುಕ್ರ
|
ಲಗ್ನ
|
|||||
ಚಂದ್ರ
|
|
ಕೇತು
|
|
ರವಿ
(ಬುಧ)
ಕುಜ
|
|
ರಾಹು
|
|
|
|
|
|
|
|
|
ಚಂದ್ರ
|
ಲಗ್ನ
|
ಗುರು
|
ವಿದ್ಯಾರ್ಥಿನಿ ಸಾ.
ಜನುವರಿ ೧೯೬೩
ಸಾಯಂಕಾಲೆ ೬.೧೫,ಚಿತ್ತ-೨
|
ಲಗ್ನ,ಕುಜ
ರಾಹು
|
|
ವಿದ್ಯಾರ್ಥಿ ಪಾ.ಸುರೇಂದ್ರ ೭/೧೦/೧೯೫೨
ರಾತ್ರಿ ೧೧.೪೫
ರೋಹಿಣೀ-೨
|
ಕೇತು
|
|||
ಕೇತು,ಶನಿ
ರವಿ,(ಬು)
|
|
ರಾಹು
|
|
|||||
|
|
|
ಚಂದ್ರ
|
ಕುಜ
|
|
ಶುಕ್ರ
ಬುಧ
|
ರವಿ
ಶನಿ
|
ಚಂದ್ರ
|
|
ರಾಹು
|
|
|
|
ಗುರು
ಕೇತು
|
ಲಗ್ನ
|
|
|
ವಿದ್ಯಾರ್ಥಿ ಅಜ್.
ಡಿಸೆಂಬರ್ ೧೯೮೩, ಬೆಳಿಗ್ಗೆ ೬.೩೦,ಪೂ.ಭಾ-೪
|
|
ಶುಕ್ರ
|
ವಿದ್ಯಾರ್ತಿ ಜಗ.
ಮಖಾ ನಕ್ಷತ್ರ
|
(ಶನಿ)
|
|||
|
|
|
ಚಂದ್ರ
|
|||||
ಬುಧ
|
ಲಗ್ನ,ಗುರು
ರವಿ,ಕೇತು
|
ಶನಿ
ಶುಕ್ರ
|
ಕುಜ
|
ರವಿ
ಕುಜ (ಬುಧ)
|
|
ರಾಹು
|
|
ಲಗ್ನ
|
|
ರವಿ
|
ಶುಕ್ರ
ಬುಧ
|
|
|
(ಶನಿ)
|
|
|
ಶನಿ
|
ಅತಿಥಿ ಹೆಚ್
ಮೇ ೧೯೩೫
ಬೆಳಿಗ್ಗೆ ೧.೪೫
ಉತ್ತರಾಶಾಢ-೩
|
ಕೇತು
|
ರಾಹು
|
ವಿದ್ಯಾರ್ಥಿ-ಶಿವ್
ಸಪ್ಟೆಂಬರ್ ೧೯೭೦, ಬೆಳಿಗ್ಗೆ ೬.೦೮
ಹಸ್ತ-೧
|
|
|||
ಚಂದ್ರ
ರಾಹು
|
|
|
ಚಂದ್ರ
ಕುಜ, ಬುಧ
ಕೇತು
|
|||||
|
|
(ಗುರು)
|
ಕುಜ
|
|
|
ಗುರು
ಶುಕ್ರ
|
ಲಗ್ನ
ರವಿ
|
|
|
|
ಗುರು
|
|
|
|
ಬುಧ
ಶುಕ್ರ
|
ರವಿ
ಕೇತು
ಕುಜ
|
|
ಹಿರಿಯ ನಾಗರಿಕರಾದ ಹೈಮಾ
ಶನಿಯ ಪ್ರಕಾರ,
ಇವರಿಗೆ ೬೪ ವರ್ಷವಾಗಿರುತ್ತೆ.
|
ಕೇತು
ಶುಕ್ರ
|
|
ಹಿರಿಯ ನಾಗರಿಕರಾದ
ಗಾಯತ್ರೀ ಪ್ರಾಧ್ಯಾಪಕಿ
|
ಗುರು
|
|||
ರಾಹು
|
ರವಿ
ಕುಜ
|
|
ಚಂದ್ರ
|
|||||
ಲಗ್ನ
|
|
ಶನಿ
ಚಂದ್ರ
|
ಬುಧ
|
ಲಗ್ನ
ರಾಹು
|
|
|
|
1.
೩ನೇ ಮನೆಯಲ್ಲಿ ರವಿಸ್ಥಿತನಿದ್ದರೆ, ಮಹಾಶಕ್ತಿವಂತನು, ಶೂರನು,
ಐಶ್ವರ್ಯವಂತನು, ಉದಾರ ದಾನವನ್ನ ಮಾಡುವಾತನು, ಶತ್ರುಗಳನ್ನು ಗೆಲ್ಲುವಾತನು ಆಗುತ್ತಾನೆ.
ಸಾರಾವಳಿಯಲ್ಲಿ ಸಹೋದರರ ನಷ್ಟವನ್ನು ಸೇರಿಸಿದ್ದಾರೆ. ಜಾ.ಪಾ.ದಲ್ಲಿ ದುರ್ಜನರಿಂದ ಸೇವಿಸಲ್ಪಡುತ್ತಾನೆಂದೂ
ಹೇಳಿರುತ್ತಾರೆ. ಮಾ.ಸಾ.ದಲ್ಲಿ ಮಡದಿ ಮಕ್ಕಳ ಸುಖವಿದೆ ಎಂದೂ ಹೇಳಿರುತ್ತಾರೆ. ಧನಿಕನು,
ಸ್ತ್ರೀಪ್ರೀತಿಕರನು, ವಿಹಾರಕ್ಕೆ ವುಚ್ಚವನ್ನ ಮಾಡುತ್ತಾನೆಂದೂ ಹೇಳಿದ್ದಾರೆ. ಚ.ಚಿಂ.ನಲ್ಲಿ
ತೀರ್ಥಯಾತ್ರಾಪ್ರಿಯನೆಂದೂ, ರಾಜಮಾನ್ಯರೆಂದೂ ಹೇಳಿರುತ್ತಾರೆ. ಈ ಭಾವಕ್ಕೆ ಜಾತಕ ಸಾರದೀಪದ ನೃಸಿಂಹ
ದೈವಜ್ನರು- ಲೋಭಿ, ಹಿಂಸಕನೆಂದು ಸೇರಿಸಿದ್ದಾರೆ. ಹೋರಾ-ಸಾರಾವಳೀ, ಜಾತಕ ಪಾರಿಜಾತ ಮತ್ತು
ಫಲದೀಪಿಕಾಗಳ ಅಭಿಪ್ರಾಯಗಳು ಸಾಮಾನ್ಯ ಸಮಾನವಾಗಿರುತ್ತವೆ. ಜಾ.ಸಾರಾದೀಪ, ಮಾನಸಾಗರೀ,
ಚ.ಚಿಂತಾಮಣಿಕಾರರು ಹಲವೆಡೆ ವಿಭಿನ್ನ ರೀತಿಯಾಗಿ ಹೇಳಿರುತ್ತಾರೆ. ಸಾರೋಧ್ಧಾರ ಗ್ರಂಥದಲ್ಲಿ
ಹೆಚ್ಚು ಸಾರವನ್ನ ವಿವರಿಸಿದ್ದಾರೆ.
2.
ಸುಖಬಾವದಲ್ಲಿ ರವಿಸ್ಥಿತ ಫಲಗಳು :- ೪ನೇ ಭಾವದಲ್ಲಿ
ರವಿಸ್ಥಿತನಿದ್ದರೆ, ಅಸುಖಿಯಾಗುತ್ತಾರೆ. ಬಂಧುಹೀನನು, ಭೂಮಿ ಇಲ್ಲದಾತನು, ಎರಡು ಮನೆಯುಳ್ಳವನು,
ಅರಸನ ಕಾರ್ಯದರ್ಶಿ, ಪಿತ್ರಾರ್ಜಿತ ಸಂಪದ್ವಯಕರನು. ಸಾ.ಲೀ-ವಾಹನವಿಲ್ಲದಾತ ಹೃದ್ಯೋಗಿ,
ಕೆಟ್ಟರಾಜನ ಸೇವಕನು.ಜಾ.ಪಾ.-ಧನ, ಧಾನ್ಯ, ಬುಧ್ಧಿರಹಿತನಾದ, ಹೃದ್ರೋಗಿ, ಧನಿಕ,
ರಾಜಪ್ರಿಯನು,ಸತ್ಕಳತ್ರನು, ಆಗಿರುತ್ತಾನೆ. ದ್ರವ್ಯಮಾನ ವೃಧ್ಧಿಗೊಂದು ಹೆರವರು ಅಸೂಯೆಯನ್ನ
ಪಡುತ್ತಾರೆ. ದೂರದೇಶ ಸಂಚಾರಿ, ಮನಃಶಾಂತಿ ಇಲ್ಲದವ,
ಶತ್ರುಗಳಿಂದ ಮಾನಭಂಗವು. ಜಾತಕ ಸಾರಾದೀಪದಲ್ಲಿ ಪಿತೃ ಸಂಪತ್ತಿಗೆ ತನ್ನ ಸಂಪತ್ತನ್ನು
ಸೇರಿಸುತ್ಟಾನೆಂದರು.
3.
ಪಂಚಮಭಾವದ ರವಿಸ್ಥಿತ ಫಲಗಳು:- ಸುಖವಿಲ್ಲ, ಧನವಿಲ್ಲ, ಆಯುಷ್ಯದ
ಕೊರತೆ. ಪುತ್ರರಿಲ್ಲ, ಬುಧ್ಧಿವಂತನು. ಕಾಡು ಸಂಚಾರದಲ್ಲಿ ಇಷ್ಟವುಳ್ಳವನು. ಸಾರಾವಳಿಯಲ್ಲಿ – ಕೃಷಿಕನು,
ದುರ್ಗಸೇವಕನು, ಗಿರಿಸಂಚಾರಿ, ಮೇಧಾವಿ, ಚಂಚಲನು. ಜಾತಕ ಪಾರಿಜಾತದಲ್ಲಿ ರಾಜಪ್ರಿಯನೂ ಆಗುತ್ತಾನೆ
ಎಂದು ಹೇಳಿದ್ದಾರೆ. ಚ.ಚಿಂತಾಮಣಿಯಲ್ಲಿ ಪ್ರಥಮ ಪುತ್ರನ ಮರಣದಿಂದ ದುಃಖ, ಕುಶಾಗ್ರಮತಿ,
ಮಂತ್ರವಾದಿ, ನೀತಿ ಶಾಸ್ತ್ರಜ್ನ, ವಂಚಕನು, ಹಣದ ಜಾಗ್ರತೆ ಇಲ್ಲದವನು ಜೀವನದಲ್ಲಿ ಏಳು
ಬೀಳುಗಳಿರುತ್ತವೆ ಎಂದು ಹೇಳಿರುತ್ತಾರೆ. ಉದರ ರೋಗದಿಂದ ಅಂತ್ಯದಲ್ಲಿ ಮರಣ ಎಂದಿದ್ದಾರೆ. ಆದರೆ
ಇನ್ನೊಂದು ಗ್ರಂಥದಲ್ಲಿ ದುಃಖ, ಯೌವನದಲ್ಲಿ ಧನಹೀನನು, ರೋಗಿಷ್ಠನು, ಒಬ್ಬನೇ ಪುತ್ರನು,
ಅನ್ಯಗ್ರಹವಾಸಿಯು, ಧನಹೀನನೂ ಆಗುತ್ತಾನೆಂದೂ ಹೇಳಿದ್ದಾರೆ.
4.
೬ನೇ ಭಾವದಲ್ಲಿ ರವಿ ಇದ್ದಲ್ಲಿ-ಕೀರ್ತಿವಂತ, ಗುಣಾಶೀಲನು, ಜಯಹೊಂದುವ,
ವೈಭವಯುತ ರಾಜನು ಆಗುತ್ತಾನೆ. ಸತಾವಳೀ ಲೀಯಲ್ಲಿ- ಅತಿಕಾಮಿ, ಅತಿ ಹಸಿವೆ, ಬಲಿಷ್ಠ, ಶ್ರೀಮಂತ,
ವಿಖ್ಯಾತನು, ಅರಸನೋ, ಸೇನಾಪತಿಯೋ ಆಗುತ್ಟಾನೆ. ಜಾ.ಪಾ.ದಲ್ಲಿ ಕಾಮಿಯು, ಶೂರನು, ರಾಜಪೂಜ್ಯನು,
ಸತ್ಕೀರ್ತಿವಂತನು, ಅಭಿಮಾನೌಳ್ಳವನು ಆಗುತ್ತಾನೆ. ಚ.ಚಿಂತಾಮಣಿಯಲ್ಲಿ ರಾಜನು ಶಿಕ್ಷಿಸುವ ಸಂಭವ,
ಧನವ್ಯಯ,ಬಂಧುಮಿತ್ರರಿಂದಲೂ ಧನವ್ಯಯ, ತಾಯಿಯ ಮನೆಯಲ್ಲಿ ಸದ ಆಪತ್ತುಗಳು, ಆನೆ ಇತ್ಯದಿಯಿಂದ,
ವಾಹನ್ದಿಂದ ಬೀಳುವುದು, ಪ್ರಯಾಣಾಪತ್ತು. ದಾರಿಯಲ್ಲಿ ದರೋಡೆಯಾಗುವ ಯೋಗವು. ಮಾ.ಶಾ.ದಲ್ಲಿ
ಯೋಗಾಭ್ಯಾಸ, ಬುಧ್ಧಿವಂತ, ಸುಂದರ, ಸ್ವಜನ ಹಿತಕಾರಿಯು, ಗೃಹಾದಿ ಸುಖವುಳ್ಳವನು, ಉತ್ತಮ
ಕರ್ಮಿಯು, ಕ್ರೀಡಾ ತಜ್ನನು.
5.
೭ನೇ ಭಾವ ಕಳತ್ರಭಾವದ ರವಿಸ್ಥಿತ ಫಲಗಳು:-ರಾಜನ ವಿರುಧ್ಧ
ಬಂಡವೇಳುವಾತನು. ಕೆಟ್ಟ ರೂಪದ ಶರೀರ. ಸದಾದಾರಿ ನಡೆವಾತ, ಹೆಂಡತಿ ಇಲ್ಲದಾತ, ಆಗಾಗ ಅವಮಾನ
ಹೊಂದುವಾತನು. ಶ್ರಾವಳೀ ಲೀ.ಪ್ರಕಾರ
ಸಂಪತ್ತಿಲ್ಲದವನು, ಸೋಲುವಾತನು, ರೋಗಿಯು, ರಾಜಬಂಧನ ದುಃಖಿ, ಸ್ತ್ರೀದ್ವೇಷಿಯು,. ಜಾತಕ ಪಾರಿಜಾತದ
ಪ್ರಕಾರ, ಅತಿ ಕೋಪಿ, ಅತಿ ದುಷ್ಟನು. ಚ. ಚಿಂತಾಮಣಿಯ ಪ್ರಕಾರ, ಭಾರ್ಯಾ ದುಃಖ ಉಳ್ಳವನು, ಭಾರ್ಯಾ
ರೋಗದಿಂದ ದುಃಖಿ, ಇಷ್ಟ ಪ್ರಾಪ್ತಿ ಇಲ್ಲದ ದುಃಖ, ಕ್ರಯವಿಕ್ರಯದಲ್ಲಿ ನಷ್ಟ,
ಪ್ರತಿಸ್ಪರ್ದಿಗಳಿಂದ ಚಿಂತೆ, ಬಂಧುಹೀನ, ನಿದ್ರಾಹೀನತೆ,. ಮಾ.ಸಾ ಪ್ರಕಾರ ಸದಾಕ್ರೀಡಾಸಕ್ತನು,
ಸುಖಹೀನನು, ಪಾಪಿಯು, ಡೊಳ್ಳು ಹೊಟ್ಟೆ ಇಲ್ಲದವ, ಮಧ್ಯಮ ಗಾತ್ರದವನು, ಕೆಂಚು ತಲೆಯವನು, ಕಪಿಲ
ಕಣ್ಣುಳ್ಳವನು, ಕುರೂಪಿಯು. ಜಾತಕ ಸಾರದೀಪರು ಇದನ್ನೆಲ್ಲಾ ಒಪ್ಪಿ, ೩೭ನೇ ವರ್ಷಕ್ಕೆ ಭಾರ್ಯಾ
ಮರಣಯೋಗವಿದೆ ಎಂದು ಹೇಳಿರುತ್ತಾರೆ.
6.
೮ನೇ ಆಯುರ್ಭಾವದ ರವಿಸ್ಥಿತ ಫಲಗಳು:- ಅಲ್ಪಾಯು, ಬಂಧುಹೀನ,
ದರಿದ್ರನು, ಕಣ್ಣುಕಾಣದವನು, ದುಃಖ ಹೀನನು,
ಅಲ್ಪಕಾಲ ಜೀವಿಯು, ಇಷ್ಟಜನರ ವಿರಹದ ದುಃಖ. ಜಾತಕ ಪಾರಿಜಾತರ ಪ್ರಕಾರ, ಸುಂದರ, ಕಲಹ ಪ್ರವೀಣ,
ಅತೃಪ್ತನು,. ಚ.ಚಿಂತಾಮಣಿಯ ಪ್ರಕಾರ, ಪ್ರವೃತ್ತಿಯಲ್ಲಿ
ಅಸ್ಥಿರನು. ವಿದೇಶವಾಸದಿಂದ ಅಲ್ಲಿಯ ಹೆಣ್ಣನ್ನು ಮದುವೆಯಾಗುತ್ತಾನೆ. ವೇಶಾಪ್ರಿಯನು,
ಅಭ್ಯಕ್ಷ,ಬಕ್ಷ್ಯಕನು. ಚೋರರಿಂದ ದ್ರವ್ಯಾಪಹಾರ, ಕಾಲಕ್ಕೆ ತಕ್ಕಂತೆ ವರ್ತಿಸದೆ-ಅಧಿಕ ಧನವ್ಯಯಿ,
ಗುಹ್ಯರೋಗಿ. ಮಾ.ಸಾ ಪ್ರಕಾರ, ದಾನಿ, ಪಂಡಿತರ ಸೇವೆಗೈವಾತ, ಚಂಚಲನು, ಬಹುಭಾಷಿ, ರೋಗಿ,
ಸುಳ್ಳುಗಾರ, ರತಿಕ್ರೀಡೆಯಲ್ಲಿ ವಸ್ತ್ರಮಲಿನ ಮಾಡಿಕೊಳ್ಳುವಾತ, ನೀಚಾಶ್ರಯಿ. ಜಾ.ಸಾ.ದೀ ಪ್ರಕಾರ,
೩ನೇ ವರ್ಷದಲ್ಲಿ ಮ್ತ್ಯುಭಯ, ರವಿ ಉಚ್ಛನಾಗಿದ್ದರೆ-ಭಕ್ತಿಯಿಂದ ಅಗ್ನಿಪ್ರವೇಶಮಾಡಿ ದೇಹ ತ್ಯಾಗ
ಯೋಗ ಜೀವನದಲ್ಲಿದೆ.
7.
ನವಮ ಭಾವದಲ್ಲಿ ರವಿ ಇದ್ದರೆ-ತಂದೆ ಒಟ್ಟಿಗೆ ಇರುವುದಿಲ್ಲ ಅಥವಾ
ತಂದೆಯನ್ನು ಬೇಗನೇ ಕಳಕೊಳ್ಳುತ್ತಾನೆ.ಪುತ್ರ,ಬಂಧುಗಳ ಜೊತೆ ಸೇರಿರುವಾತ, ದೇವ ವಿಪ್ರಾದಿ ಭಕ್ತ.
ಸಾರವಳೀ ಪ್ರಕಾರ, ಧನವಂತ, ಅತಿ ಭಕ್ತಿ, ಪಿತೃದ್ವೇಷಿ, ಸ್ತ್ರೀವಿರೋಧಿ. ಜಾತಕ ಪಾರಿಜಾತದ ಪ್ರಕಾರ
ಸ್ವಧರ್ಮ ತ್ಯಾಗ, ಪರಧರ್ಮಾನುನಾಯಾಯಿ. ಚ.ಚಿಂತಾಮಣಿಯಪ್ರಕಾರ ದುಷ್ಟನು, ಚಿಂತಾಕುಲ, ಯೋಚನಾಮಗ್ನ,
ತಪಸ್ವೀವೇಷ ಧರಿಸಿ ಜನರನ್ನು ಮರುಳು ಮಾಡುವವನು. ಕಪಟಿ, ಸಹೋದರ ಪೀಡಿತನು. ಮಾ.ಸಾ.ಪ್ರಕಾರ,
ಸತ್ಯವಾದಿ, ಒಳ್ಳೆಯ ತಲೆಕೂದಲು, ಸ್ವಜನ ಹಿತಕಾರಿ, ಬಾಲ್ಯದಲ್ಲಿ ರೋಗಿ, ನಂತರ ಸ್ಥಿರನು,
ವಿವಿಧರೀತಿಯಿಂದ ಧನ ಸಂಪಾದಿಸುವನು ಹಾಗೂ ದೀರ್ಘಾಯುಷಿಯು ಆಗಿರುತ್ಟಾನೆ. ಜಾ.ಸಾ.ದೀ ಪ್ರಕಾರ
ಧರ್ಮಿಷ್ಠ, ೯ನೇ ವಯಸ್ಸಿನಲ್ಲಿ ತೀರ್ಥಕ್ಷೇತ್ರ ಯಾತ್ರಾ ಯೋಗವಿದೆ.
8.
೧೦ನೇ ಕರ್ಮ ಭಾವದ ರವಿಸ್ಥಿತ ಫಲಗಳು:-ಒಳ್ಳೆಯ ಸಂತಾನವಂತ,
ವಾಹನದೊಡೆಯ, ಸರ್ವರೂ ಸ್ತುತಿಸುತ್ಟಾರೆ. ಮಹಾ ಬುಧ್ಧಿವಂತ, ಐಶ್ವರ್ಯವಂತ, ಬಲಿಷ್ಠನು, ರಾಜನಾಗುತ್ತಾನೆ. ಸಾರಾವಳಿಯ ಪ್ರಕಾರ ಅತಿ ಬುಧ್ಧಿವಂತ, ವೈಭವಜೀವಿ,ಸರ್ವಸಿಧ್ಧತೆಯೊಡನೆ ಕಾರ್ಯಾರಂಭ,ಪ್ರಶಂಸಾರ್ಹನು, ಧನ ವಾಹನ ಬಂಧು ಪುತ್ರಾದಿಯುತ, ಶೂರ, ಧೈರ್ಯವಂತ. ಜಾತಕ ಪಾರಿಜಾತದ ಪ್ರಕಾರ ಪಿತೃ ಸಂಪತ್ತು ಹೊಂದುವಾತ, ವಿದ್ಯಾವಂತ, ಕೀರ್ತಿಶಾಲಿ, ರಾಜಸಮಾನನು. ಚ.ಚಿಂತಾಮಣಿಯ ಪ್ರಕಾರ ಎಲ್ಲ ಶ್ರಮ ಸಾರ್ಥಕ. ತಾಯಿಗೆ ಕಷ್ಟ ಕೊಡುವಾತ, ಸರ್ವಾರ್ಥ ಸಿಧ್ಧಿ, ಇಷ್ಟ ಜನರಿಂದ ಬೇರೆ ಇರುವಾತನು, ಮನಸ್ಚಿಂತೆ, ಇದರಿಂದ ಬರುತ್ತಿರುವುದು. ಮಾ.ಸಾ ಪ್ರಕಾರ ಸದ್ಗುಣಿ, ಸುಖೀ, ನೃತ್ಯ ಗೀತಾದಿ ಪ್ರಿಯ, ರಾಜಪೂರಿತ, ಕೋಪಿಷ್ಟ, ಕೋಮಲ, ಕೃಶ, ಸ್ವಚ್ಚ, ಶರೀರಿಯು.
9.
೧೧ ನೇ ಲಾಭಭಾವಸ್ಥ ರವಿಫಲ:- ಬಹು ಧನಿಕನು-ಸಂಪನ್ನ, ದೀರ್ಘಾಯುಷ್ಮಂತ, ದುಃಖವಿಲ್ಲದಾತ, ಜನಪತಿಯಾಗುತ್ತಾನೆ. ಸಾರಾವಲೀ-ಧನ ಸಂಗ್ರಹಿ, ಬಲಿಷ್ಠ, ದ್ವೇಷಿ, ದುಡಿಮೆಯಾತ, ವಿಧೇಯರಾದ ದಾಸರು, ಪ್ರೀತಿಯವರಿಲ್ಲ, ವಿಧೇಯ, ಸಾಧಕನು. ಜಾಪಾ ಪ್ರಕಾರ ಸರ್ವೈಶ್ವರ್ಯಯುತನು, ಪುತ್ರಸುಖಿ, ದಾನಿ, ಸ್ತ್ರೀಸುಖಯುತನು,. ಚ. ಚಿಂತಾಮಣಿಯ ಪ್ರಕಾರ ರಜಧನ ಪ್ರಾಪ್ತಿ, ರಾಜಮುದ್ರೆಯೊತ್ತುವ ಅಧಿಕಾರಿ, ಪ್ರತಾಪಿ, ಶ್ತ್ರುಜಿತ, ಮಕ್ಕಳ ರೋಗಾದ್ಯನರ್ಥದಿಂದ ಧನವ್ಯಯ. ಮಾ.ಸಾ. ಪ್ರಕಾರ ರಾಜಗ್ರಹ ಸೇವಾನಿರತ, ಸುಖೀ, ಗುಣಿ, ಕಾಮಿನೀ ಸಂಮೋಹಕ, ಸ್ವಜಾತಿ ಪ್ರೇಮಿ. ಜಾ.ಸಾ ಪ್ರಕಾರ ೨೪ ಕ್ಕೆ ಸಂತಾನಲಾಭ, ಮಂತ್ರಿ, ಜನದ್ವೇಷಿ, ಧನಸಂಗ್ರಹಿ, ಭೃತ್ಯಹೀನನು.
10.
೧೨ನೇ ವ್ಯಯಭಾವಸ್ಥ ರವಿಸ್ಥಿತ ಫಲಗಳು.:- ಪಿತೃ ವಿರೋಧಿ, ಕಣ್ಣು ಕಾಣದಾತ, ಧನಹೀನ, ದರಿದ್ರ, ಪುತ್ರಹೀನನು. (ಸಾರಾವಲೀಯ ಪ್ರಕಾರ, ಅಂಗವಿಕಲ, ಒಂದು ಕಣ್ಣು, ಜಾತಿಹೀನ, ಬಂಜೆಯ ಗಂಡ, ಪಿತೃದ್ವೇಷಿ, ಅಲ್ಪನು. ಜಾ.ಪಾ ಪ್ರಕಾರ ಅಂಗಹೀನ, ಪುತ್ರಸುಖ, ಧೀರ, ಸಂಚಾರಶೀಲನು, ಪತಿತನು. ಚ.ಚಿಂತಾಮಣಿಯ ಪ್ರಕಾರ ನೇತ್ರರೋಗಿ, ಶತ್ರುಗಳನ್ನು ಗೆಲ್ಲುವಾತ, ಸಂಪತ್ತಿನವೃಧ್ಧಿಗೆ ಶರೀರದ ಗೊಡವೆ ಇಲ್ಲದೆ ದುಡಿಯುತ್ತಾನೆ. ಮರ್ಯಾದೆಗೆ ಪೇಚಾಡುತ್ತಾನೆ. ತಂದೆಯ ಸಹೋದರರು ಕಷ್ಟಕ್ಕೊಳಗಾಗುವರು. ಸಂಚಾರದಲ್ಲಿ ಹಾನಿಗೊಳ್ಳುತ್ತಾರೆ. ಮಾ.ಸಾ. ಪ್ರಕಾರ ಜಡ, ಪರರ್ಸ್ತ್ರೀರಹಿತ, ಪಕ್ಷಿಹಂತಕ, ಕುರೂಪಿ, ದುರ್ಬುಧ್ಧಿ, ರಾಜಧನಲಾಭ, ಪುರಾಣಿಕರಿಗೆ ವಿರೋಧಿ, ಕಣಕಾಲಲ್ಲಿ ರೋಗಿ, ದುರ್ಬಲನು. ಜಾ.ಸಾ.ದೀ ಪ್ರಕಾರ, ಈತನ ಧನ್ ರಾಜ ಬೊಕ್ಕಸಕ್ಕೆ ಹೋಗುವುದು, ಸಂತಾನಹೀನ, ಒಕ್ಕಣ್ಣಾಚಾರಿ, ಜಾತಿಬ್ರಷ್ಟನು.
ಸಂಕಲನ
ಡಾಕ್ಟರ್ ಪಾರಂಪಳ್ಳೀ ಸುರೇಂದ್ರ ಉಪಾಧ್ಯ,ಎಮ್.ಎಸ್.ಸಿ.;ಪಿ.ಹೆಚ್.ಡಿ.
೦೭/೦೧/೨೦೧೬
No comments:
Post a Comment