ಲಗ್ನ,
ಚಂದ್ರ, ತತ್ಕಾಲ ಗೃಹ ಸಂಪತ್ತಿ ಹಾಗೂ
ರಾಶಿಕುಂಡಳಿಯನ್ನ ತಯಾರಿಸುವ ಬಗೆ
ಉದಾಹರಣೆ :- ಜಾತಕನು ತಾ ೫/೧/೧೯೭೯ ರಂದು
ಸಾಯಂಕಾಲ ೪.೫೫ ಕ್ಕೆ ರೇಖಾಂಷ 78E5’ ಹಾಗೂ ಅಕ್ಷಾಂಶ 18N40’ ಜನ್ಮವನ್ನ ಇತ್ತಳು. ಆವತ್ತಿನ ಭುಕ್ತಿ ೧.೨೫ ಅಂತ ತೆಕ್ಕೊಳ್ಳೀ.
೫/೧/೧೯೭೯ ರಂದು, ಸೂರ್ಯ ಉದಯ ಸಮಯ :- ೬.೫೧ ಡ್ರಿಕ್ ಪಂಚಾಂಗ, ಗೂಗಲ್ ಪ್ರಕಾರ.
ಈಗ ನಿಜ಼ಾಮಾಬಾದಿನ ಲಗ್ನ ಪ್ರಮಾಣವನ್ನ
ಸುತ್ತೂರು ಪಂಚಾಂಗದ ಪೇಜ್ ೨೯ ರಿಂದ ನೋಡೋಣ.
ಅಕ್ಷಾಂಶ ೨೬ ರ ಎದಿರು ಕೋಸ್ಟಕ ಕೊಟ್ಟ
ಪ್ರಕಾರ, ಘಟಿ ಹಾಗೂ ವಿಘಟಿ ಮತ್ತು ಗಂಟೆ ಮತ್ತು
ನಿಮಿಷಗಳಲ್ಲಿ ಲಗ್ನ ಪ್ರಮಾಣವನ್ನ ಕೊಟ್ಟಿರುತ್ತಾರೆ.
ಅದರೆ ಪ್ರಕಾರ ಈ ರೀತಿ ಲಗ್ನ ಪ್ರಮಾಣ
ಇರುತ್ತೆ.
ಮೇಷ :-
೧.೪೩
ವೃಷಭ :- ೧.೫೯
ಮಿಥುನ :- ೨.೧೩
ಕಟಕ :- ೨.೧೩
ಸಿಂಹ :- ೨.೦೮
ಕನ್ಯಾ :- ೨.೦೭
ತುಲಾ :- ೨.೧೧
ವೃಸ್ಚಿಕ :- ೨.೧೪
ಧನುಸು :- ೨.೦೭
ಮಕರ :- ೧.೫೦
ಕುಂಭ :- ೧.೩೮
ಮೀನ :- ೧.೩೬
ಸೂರ್ಯನು ೧೫/೧೨/೧೯೭೮ ರಂದು ಧನೂರ್
ರಾಶಿಯಲ್ಲಿರುತ್ತಾನೆ.
ಅಂದರೆ ಧನೂರ್ ರಾಶಿಯ ಪ್ರಮಾಣ, ಮೇಲಿನ
ಕೋಸ್ಟಕದಂತೆ
ಧನೂರ್ ರಾಶಿಯ ಪ್ರಮಾಣ :- ೨.೦೭
ಇದರಿಂದ ಆವತ್ತಿನ ಭುಕ್ತಿಯನ್ನಕಳೆ :-
೧.೨೫
---------------
:-
೦.೪೨
ಸೂರ್ಯೋದಯವನ್ನ ಕೂಡಿಸಿ :- ೬.೫೧
-----------------
:-೭.೩೩
ಇದಕ್ಕೆ ಮುಂದಿನ ಲಗ್ನ ಪ್ರಮಾಣ ಕೂಡಿಸಿ
ಮಕರ ಲಗ್ನ ಪ್ರಮಾಣ :-೧.೫೦
ಕುಂಭ ಲಗ್ನ ಪ್ರಮಾಣ :-೧.೩೮
ಮೀನ ಲಗ್ನ ಪ್ರಮಾಣ :-೧.೩೬
ಮೇಶ ಲಗ್ನ ಪ್ರಮಾಣ :-೧.೪೩
ವೃಷಭ ಲಗ್ನ ಪ್ರಮಾಣ :-೧.೫೯
-----------------
:-೧೬.೧೯
ಮಿಥುನ ಲಗ್ನ ಪ್ರಮಾಣ :- ೨.೧೩
-------------------
:-೧೮.೩೨
-------------------
ನಮ್ಮ ಜಾತಕನ ಹುಟ್ಟು ಸಮಯ :-೧೬.೫೫.೦೦ (ಸಂಜೆ ೪.೫೫)
ಆದ್ದರಿಂದ ನಮ್ಮ ಲಗ್ನ
ಮಿಥುನದಲ್ಲಿ ಬರುತ್ತೆ!
ಮಿಥುನ ಲಗ್ನ ಪ್ರಮಾಣ :- ೨.೧೪
:-
೧೩೪ ’ = ೯ ಪಾದಗಳು
ಒಂದು ಪಾದವೆಂದರೆ :- ೧೫’ (ಎಪ್ರೋಕ್ಸ್)
ಮೇಲಿನ ಪ್ರಕಾರ, ಮಿಥುನ ಲಗ್ನಾರಂಭ:- ೧೬.೧೯
ಇದಕ್ಕೆ
೧ ನೇ ಪಾದವನ್ನ ಕೂಡಿಸಿ :- ೧೫
ಇದಕ್ಕೆ
೨ನೇ ಪಾದವನ್ನ ಕೂಡಿಸಿ :- ೧೫
----------------------------------------
:- ೧೬.೪೯
ಇದಕ್ಕೆ
೩ನೇ ಪಾದವನ್ನ ಕೂಡಿಸಿ :- ೧೫
------------------------
:- ೧೭.೦೪
----------------------
ಅಂದರೆ ನಮ್ಮ ಜಾತಕನ ಲಗ್ನವು ಮಿಥುನ-೩ನೇ
ಪಾದದಲ್ಲಿ ಬರುತ್ತೆ. ಅಂದರೆ ಆರ್ದ್ರಾ-೧ ನೇ ಪಾದವಾಗಿರುತ್ತೆ.
೨. ಈಗ ಚಂದ್ರನ ರಾಶಿಯನ್ನ ಕಂಡು
ಹುಡುಕೋಣ:-
ತಾರೀಕು ೦೫/೦೧/೧೯೭೯ ರಲ್ಲಿ ಉತ್ತರಾಭಾದ್ರ
ಬೆಳಿಗ್ಗೆ೯.೦೭ ವರೆಗೆ ಇತ್ತು. ತದ ನಂತರ ರೇವತಿ ನಕ್ಷತ್ರ ಶುರುವಾಯಿತು. ಈ ರೇವತಿಯು ತಾರೀಕು
೬/೦೧/೧೯೭೯ ರಲ್ಲಿ ಬೆಳಿಗ್ಗೆ ೦೯.೦೨ ರ ವರೆಗೆ ಇದ್ದಿತ್ತು.
ಅಂದರೆ ರೇವತಿ ನಕ್ಷತ್ರದ ಪ್ರಮಾಣ
೦೫/೦೧/೧೯೭೯ :- ೦೯.೦೭ (-)
೦೬/೦೧/೧೯೭೯ :- ೦೯.೦೨
------------------------
:-
೨೪.೦೫ = ೪ ಪಾದ
ರೇವತೀ ಒಂದು ಪಾದ :- ೦೬.೦೧
ರೇವತೀ ಪ್ರಾರಂಭ (೦೫/೦೧/೧೯೭೯):- ೦೯.೦೭
ಇದಕ್ಕೆ ಒಂದನೇ ಪಾದವನ್ನ ಕೂಡಿಸಿ:- ೦೬.೦೧
ಇದಕ್ಕೆ ೨ನೇ ಪಾದವನ್ನ ಕೂಡಿಸಿದರೆ:- ೦೬.೦೧
-------------------------
:-
೨೧.೦೯
----------------------------
ಅಂದರೆ ಚಂದ್ರನ ನಕ್ಷತ್ರವು
ರೇವತೀ ೨ನೇ ಪಾದದಲ್ಲಿ ಬರುತ್ತೆ.
ಈಗ ತತ್ಕಾಲ ಗ್ರಹ ಸಂಪತ್ತಿಯನ್ನ ಬರೆಯೋಣ :-
ಲಗ್ನ ಮಿಥುನ ಆರ್ದ್ರ-೧
ಸೂರ್ಯ ಧನೂರ ಪೂರ್ವಾಷಾಢ-೩
ಚಂದ್ರ ಮೀನ ರೇವತಿ-೨
ಬುಧ ಧನೂರ ಮೂಲ-೧
ಕುಜ ಧನೂರ ಪೂರ್ವಾಷಾಢ-೪
ಗುರು ವ. ಕಟಕ ಪುಷ್ಯ-೩
ಶುಕ್ರ ವೃಸ್ಚಿಕ ಅನುರಾಧ-೧
ಶನಿ ಸಿಂಹ ಉತ್ತರ-೩
ರಾಹು ಸಿಂಹ ಉತ್ತರ-೧
ಕೇತು ಕುಂಭ ಪೂರ್ವಾಭಾದ್ರ-೩
ಮಾಂದಿ ಮಕರ ಶ್ರವಣ-೪
ರಾಶಿ ಕುಂಡಲಿ
ಚಂದ್ರ
|
|
|
ಲಗ್ನ
|
ಕೇತು
|
ರಾಶಿ ಕುಂಡಳಿ ೦೫/೦೧/೧೯೭೯
೭೮.೦೯ (ಪೂರ್ವ) ೧೮.೬೭(ಉತ್ತರ)
|
ಗುರು(ವಕ್ರಿ)
|
|
|
ಶನಿ ರಾಹು
|
||
ರವಿ ಬುಧ
ಕುಜ
|
ಶುಕ್ರ
|
|
|
ನವಾಂಶ ಕುಂಡಳಿ
|
ಬುಧ
|
|
ಕೇತು
|
ಶನಿ
|
ನವಾಂಶ ಕುಂಡಳಿ
೦೫/೦೧/೧೯೭೯
೭೮.೦೯ (ಪೂರ್ವ)
೧೮.೬೭(ಉತ್ತರ)
|
ಮಾಂದಿ
|
|
ಚಂದ್ರ
|
|
||
ಲಗ್ನ
ರಾಹು
|
ಕುಜ
|
ರವಿ
ಗುರು(ವಕ್ರಿ)
|
|
ದಶಾ ಪಧ್ಧತಿ :-
ರೇವತೀ -೨ ನೇ ಪಾದ ಅಂದರೆ ನಡೆಯುತ್ತಿರುವುದು
ಬುಧ ದಶೆ. ಅಂದರೆ ಬುಧ ದೆಶೆಯು ೧೭ ವರ್ಷಗಳ ಕಾಲ ನಡೆಯುತ್ತದೆ. ಆದರೆ ರೇವತಿಯು ಪ್ರಾರಂಭವಾದದ್ದು
ತಾರೀಕು ೦೫/೦೧/೧೯೭೯ ರ ಬೆಳಿಗ್ಗೆ ೯.೦೭
ಹುಟ್ಟುವವರೆಗೆ ರೇವತೀ ವ್ಯಾಪ್ತಿಯು ೧೬.೫೫ ರ
ವರೆಗೆ ಅಂದರೆ (೧೬.೫೫- ೯.೦೭) = ೭ಗಂಟೆ ೪೮ ನಿಮಿಷಗಳ ಕಾಲ ರೇವತಿಯು ಗರ್ಭದಲ್ಲಿಯೇ
ಮುಗಿದಿತ್ತು!
ಆದರೆ ಪೂರಾ ರೇವತಿಯ ವ್ಯಾಪ್ತಿಯು ೨೪ ಗಂಟೆ
೦೫ ನಿಮಿಷಗಳು. ಅಂದರೆ ಇದು ಬುಧ ದೆಶೆ ೧೭ ವರ್ಷಗಳಿಗೆ ಸಮವಾಗಿರುತ್ತೆ.
ಅರ್ಥಾತ್ ೨೪.೦೫ ----------à ೧೭ ವರ್ಷ
೭.೪೮ -----------?
?
೭.೪೮ * ೧೭ / ೨೪.೦೫
ಇದನ್ನ ನಿಮಿಷಗಳಿಗೆ ತುರ್ಜಮೆ ಮಾಡಿದಲ್ಲಿ,
೭೯೫೬/೧೪೪೫
=೫ ವರ್ಷ, ೬ ತಿಂಗಳು ೨ ದಿನಗಳು. ಇದನ್ನ
ಪೂರಾ ೧೭ ವರ್ಷಗಳಲ್ಲಿ ಕಳೆದಾವಾಗ, ಮಿಕ್ಕ ಬುಧ ದೆಶೆಯು ನಮಗೆ ಸಿಗುತ್ತದೆ.
ಅಥವಾ
೧೯೭೯/೦೧/೦೫ ಇದರಲ್ಲಿ ೫ ವರ್ಷ ೬ ತಿಂಗಳು ೨ ದಿನಗಳನ್ನ ಕಳೆದಾವಾಗ ನಮಗೆ ರೇವತಿಯ
ಪ್ರಾರಂಭ್ದ ವರ್ಷ ಸಿಗುತ್ತವೆ.
ಅಂದರೆ ಬುಧ ದೆಶೆಯು ೧೯೭೩/೦೫/೦೩ ಯಲ್ಲಿ
ಪ್ರಾರಂಭವಾಗಿದ್ದು, ೧೯೯೦/೦೫/೦೩ ಗೆ ಅಂತ್ಯಗೊಳ್ಳುತ್ತದೆ. ಆಮೇಲೆ ಕೇತು ದೆಶೆ ೭ ವರ್ಷ, ತದನಂತರ
ಶುಕ್ರ ದೆಶೆ ೨೦ ವರ್ಷ ಶುರುವಾಗುತ್ತೆ. ಅರ್ಥಾತ್ ಶುಕ್ರ ದೆಶೆಯು ೨೦೧೭/೦೬/೦೩ಕ್ಕೆ
ಅಂತ್ಯಗೊಳ್ಳುತ್ತದೆ.
ಆದ್ದರಿಂದ, ರವಿ ದೆಶೆ ಶುರುವಾಗುವ ಮುನ್ನ,
ಜಾತಕನು ೬ ತಿಂಗಳು ಮುಂಚೆಯೇ ಶುಕ್ರಾದಿತ್ಯ ಸಂಧಿ ಶಾಂತಿಯನ್ನ ಮಾಡಬೇಕಾಗುತ್ತೆ! ಹೇಗೆ
ಮಾಡಿದಲ್ಲಿ ಜಾತಕನಿಗೆ ಬಹಳ ಉತ್ತಮ ರೀತಿಯಲ್ಲಿ ರವಿದೆಶೆಯು ಹೋಗಲಿದೆ. ಯಾಕೆಂದರೆ ರವಿಯೇ
ಆರೋಗ್ಯಕಾರಕನು. ರವಿಯೇ ಕಳತ್ರ ಸ್ಥಾನದಲ್ಲಿ ಕುಳಿತಿರುವನು. ರವಿಯೇ ಮೀನ ರಾಶಿಗೆ ರೋಗಕಾರಕನೂ
ಹೌದು. ಆದ್ದರಿಂದ, ಆದಿತ್ಯವಾರದಂದು ಒಂದು ತಾಮ್ರದ ಕವಳಿಗೆಯಲ್ಲಿ ನೀರನ್ನ ಸೂರ್ಯನಿಗೆ ಬೆಳಿಗ್ಗೆ
ಎದ್ದು ಸೂರ್ಯೋದಯದ ಕಾಲದಲ್ಲಿ ಅರ್ಘ್ಯ ರೂಪದಲ್ಲಿ ಕೊಟ್ಟಲ್ಲಿ ಬಹಳ ಒಳ್ಳೆಯದಾಗಲಿದೆ.
ಬರೆದವರು ಪಾರಂಪಳ್ಳೀ
ಸುರೇಂದ್ರ ಉಪಾಧ್ಯ, ೧೮/೦೫/೨೦೧೬
No comments:
Post a Comment