ಭಚಕ್ರದ
(ಜ಼ೋಡಿಯಾಕ್) ೧೨ ರಾಶಿಗಳ ಬಗ್ಗೆ ಹೆಚ್ಚಿನ ವಿವರಣೆಗಳು
೧.
ಮೇಷ ರಾಶಿ:- ಇದು
ಕಾಲಪುರುಷನ ಪ್ರಥಮ ರಾಶಿ. ಮೇಷ ರಾಶಿಯು ಕಾಲಪುರುಷನ ತಲೆಯನ್ನ ಸೂಚಿಸುತ್ತದೆ. ಇದು ಅಗ್ನಿ ತತ್ವದ
ರಾಶಿ. ಇದು ಚರ ರಾಶಿಯು ಕೂಡ. ಇದರ ಅಧಿಪತಿ ಕುಜ. ಕುಜನಿಗೆ ೨ ಮನೆಗಳ ಆಧಿಪತ್ಯವನ್ನ
ಕೊಟ್ಟಿರುತ್ತಾರೆ. ಒಂದು ಮೇಷ ರಾಶಿಯಾದರೆ, ಇನ್ನೊಂದು
ವೃಶ್ಚಿಕ ರಾಶಿ. ಮೇಷ ರಾಶಿಯು ಅಗ್ನಿ ತತ್ವದ್ದಾದರೆ, ವೃಸ್ಚಿಕ
ರಾಶಿಯು ಜಲ ತತ್ವದ್ದು. ಮೇಷ ರಾಶಿಯು ಧನಾತ್ಮಕ ರಾಶಿಯಾದಲ್ಲಿ (+ವ್), ವೃಸ್ಚಿಕ
ರಾಶಿಯು ಋಣಾತ್ಮಕ (-ವ್) ರಾಶಿಯಾಗಿರುತ್ತದೆ. ಈ ರಾಶಿಯವರಲ್ಲಿ ಜಠರಾಗ್ನಿ ಬಹಳ ಹೆಚ್ಚು
ಇರುತ್ತದೆ. ಇದಕ್ಕೆ ಕಾರಣ ಅಗ್ನಿ ತತ್ವದಿಂದಾಗಿ. ಆದ್ದರಿಂದಲೇ ಇವರುಗಳಲ್ಲಿ ಒಂದು ತರಹದ ಹೊಟ್ಟೆ
ಕಿಚ್ಚು ಜಾಸ್ತಿ ಇರುತ್ತದೆ. ಇವರ ಇನ್ನೊಂದು ದುರುದ್ವೇಶವೇನೆಂದರೆ, ಇವರಿಗಿಂತ
ಮೇಲೆ, ಬೇರವರು
ಬರಬಾರದು ಎನ್ನುವುದು. ಹಾಗೆಯೇ ಇವರ ಮಕ್ಕಳೂ ಕೂಡ ಬೇರವರ ಮಕ್ಕಳಕ್ಕಿಂತ ಯಾವಾಗಲೂ ಉತ್ತಮ ಮಟ್ಟ
ಅಥವಾ ದರ್ಜೆಯಲ್ಲಿಯೇ ಇರಬೇಕು ಎನ್ನುವುದು. ಈ ಹೊಟ್ಟೇ ಕಿಚ್ಚು ಕೂಡಲೇ ಇವರ ಮುಖದಲ್ಲಿ ಎದ್ದು
ಕಾಣಿಸುತ್ತವೆ ಹಾಗೂ ಅದನ್ನ ಬೇಗಲೇ ಹೊರಗೆ ಕೂಡಾ ಹಾಕುತ್ತಿರುತ್ತಾರೆ. ಈ ರಾಶಿಯ ಗುರುತು ಟಗರು.
ಟಗರಿನ ತಲೆ ಬಹಳ ಗಟ್ಟಿ. ಟಗರಿಗೆ ೪ ಸಣ್ಣ ಕಾಲುಗಳಿವೆ.
ಇವರ ಹಣೆಯಲ್ಲಿಕೂಡಾ ಒಂದು ಗುರುತು ಇರುತ್ತದೆ. ಅದಕ್ಕೆ ಈ ರಾಶಿಯು ಶಿರೋದಯವಾಗಿರುತ್ತೆ.
ಇವರುಗಳು ಟಗರಿನಂತೆ ಸಣ್ಣ ಗಾತ್ರದವರಾಗಿದ್ದು, ಬೇರವರಿಗೆ
ಹೊಡೆಯುವ ಹಾಗೆ ಇರುತ್ತಾರೆ. ಇವರ ಯುವಕಾವಸ್ಥೆಯು ಬಹಳ ಶಕ್ತಿಶಾಲಿಯಾಗಿದ್ದು, ಇವರುಗಳು
ಯಾವಾಗಲೂ ಸೀರಿಯಸ್ ಆಗಿಯೇ ಇರುತ್ತಾರೆ.
ಫ಼ೈಟಿಂಗ್ ನೇಚರನ್ನ ಹೊಂದಿರುವಂತಹ ವ್ಯಕ್ತಿಗಳೆಂದರೆ ಈ ಮೇಷ ರಾಶಿಯವರು. ಇವರುಗಳು
ವಯಸ್ಸಿನವರಿಗಿಂತ ಬಹಳ ಚಿಕ್ಕವರಾಗಿ ಕಾಣಿಸುತ್ತಾರೆ. ಟಗರು ತಿನ್ನುವುದು ಸ್ವಲ್ಪ ಸ್ವಲ್ಪ. ಅದೇ
ರೀತಿಯಲ್ಲಿ, ಇವರುಗಳು
ಸ್ವಲ್ಪ ಸ್ವಲ್ಪವನ್ನೇ ತಿನ್ನುತ್ತಿರುತ್ತಾರೆ. ಪ್ರತೀ ಎರಡು ಗಂಟೆಗಳಿಗೊಮ್ಮೆ ಇವರು ಏನಾದರೇ
ಮೇಯುತ್ತಿರುತ್ತಾರೆ. ಅಗ್ನಿ ತತ್ವ ರಾಶಿಯ ಪ್ರಥಮ ರಾಶಿ ಇದು. ಈ ರಾಶಿಯವರು, ಅರ್ಥಾತ್
ಅಗ್ನಿ ತತ್ವದವರು ಬೇಗನೆ ಜೀರ್ಣಿಸಿಕೊಳ್ಳುತ್ತಾರೆ. ಟಗರು ಇರುವ ಸ್ಥಳವೇ ಬಯಲು ಸೀಮೆ ಪ್ರದೇಶ
ಹಾಗೂ ಗುಡ್ಡ ಗಾಡು ಪ್ರದೇಶ. ಈ ಪ್ರದೇಶಗಳಲ್ಲಿ ಬಹಳ ಆರಾಮವಾಗಿ ತಮ್ಮ ಮೇವನ್ನ ತಿನ್ನುತ್ತಾ
ಇರುತ್ತವೆ. ಅದೇ ರೀತಿ, ಈ ರಾಶಿಯವರೂ ಕೂಡ ಹಾಗೆಯೇ. ಇವರುಗಳು ದೊಡ್ಡ
ಪ್ರದೇಷಗಳಲ್ಲಿ ಸುಮ್ಮನಿರುತ್ತಾರೆ. ಇವರಿಗೆ ತಿರುಗಾಡಲು ಫ಼್ರೀ ಜಾಗವಿರಬೇಕು ಅಸ್ಟೆ.
ಇವರುಗಳಿಗೆ ಕೋಪ ಬಹು ಬೇಗ ಬರುತ್ತೆ. ಆದರೆ ಅಸ್ಟೇ ಬೇಗನೆ ಕೋಪವನ್ನ ತಣ್ಣಗೆ ಮಾಡಿಕೊಳ್ಳುತ್ತಾರೆ.
ಟಗರಿನ ಗುಣವೇ ಹಾಗೆ. ಕಾರಣ ಈ ರಾಶಿ ಚರ ರಾಶಿ. ಅಂದರೆ ಯಾವುದೇ ಗುಣಗಳನ್ನ ಸ್ಥಿರ ರಾಶಿಯವರಂತೆ
ಮನಸ್ಸಿನಲ್ಲಿ ಹೆಚ್ಚಿಗೆ ಇಟ್ಟುಕೊಳ್ಳಲಾರರು. ಇದು ಧರ್ಮ ತತ್ವದ ರಾಶಿ. ಆದ್ದರಿಂದ ಇವರುಗಳು
ಧರ್ಮರಾಯನ ತರಹ ಇರುತ್ತಾರೆ. ಇದು ಕಾಲಪುರುಷನ
ಮೊದಲನೇ ರಾಶಿ. ಇದು ವಿಷಮ ರಾಶಿ. ಎಲ್ಲಾ ವಿಷಮ ರಾಶಿಗಳು ಪುರುಷ ರಾಶಿ. ಎಲ್ಲಾ ಬೆಸ ರಾಶಿ ಅಂದರೆ
ಸಮ ರಾಶಿಗಳು ಸ್ತ್ರೀ ರಾಶಿ. ಆದ್ದರಿಂದ ಇದು ಪುರುಷ ರಾಶಿ. ಇದರ ಬಣ್ಣ ರಕ್ತ ಕೆಂಪು. ಕಾರಣ
ಟಗರಿನ ಕಣ್ಣು ಕೆಂಪು ಬಣ್ಣದ್ದು. ಇದು ಪ್ರಥಮ ಅಗ್ನಿತತ್ವದ ರಾಶಿಯಾದ ಕಾರಣ ಇಲ್ಲಿ ಜೀವ
ಹುಟ್ಟುತ್ತದೆ. ಈ ರಾಶಿಯವರು ಟಗರಿನ ಹಾಗೆ ಬಹಳ ವರಟು ಸ್ವಭಾವದವರು.
ಉದಾಹರಣೆಗಾಗಿ, ನಾವು ಸ್ವಾಮಿ ವಿವೆಕಾನಂದರ ಜಾತಕವನ್ನ ತೆಗೆದುಕೊಳ್ಳೋಣ:-
Ne
|
Mars
Pl
|
Ketu
Ur.
|
||||||
Swami Vivekananda
12/1/1863,6.20
Lat 22.30 N
Long.88.20 E
|
||||||||
Ven
Mer
|
||||||||
Sun
|
Rahu
|
Jup
|
Sat
Mon
|
ಆ ಜಾತಕದಲ್ಲಿ, ಪ್ರಥಮ ಧರ್ಮ ಸ್ಥಾನವಾದ ಮೇಷ ರಾಶಿಯಲ್ಲಿ ಕುಜನು ಸ್ವಸ್ಥಾನದಲ್ಲಿಯೇ
ಇದ್ದಾನೆ. ೨ನೇ ಧರ್ಮ ಸ್ಥಾನವಾದ ಸಿಂಹವು ಖಾಲಿ. ಮೂರನೇ ಧರ್ಮ ಸ್ಥಾನವಾದ ಧನುಸ್ ರಾಶಿಯಲ್ಲಿ
ಸೂರ್ಯನು ಉಪಸ್ಥಿತನು. ಕುಜ ಮತ್ತು ಸೂರ್ಯನು ಸ್ವಾಮಿ ವಿವೇಕಾನಂದರ ಜಾತಕದಲ್ಲಿ ಧರ್ಮದ ಸೂಚಕ
ಗ್ರಹಗಳು. ಕುಜನು ಸೈನ್ಯದ ಕೊಮ್ಮಾಂಡರ್ ಆದಲ್ಲಿ, ಸೂರ್ಯನು ಎಲ್ಲಾ ಗ್ರಹಗಳ ರಾಜ.
(In
Swamii's horoscope, the first zodiacal sign of religion - Aries has his ruler
Mars present there, the second sign of dharma Leo is empty and Sun is in the
third sign (Sagittarius). Sun is very prominent in Sagittarius as the ruler of
this sign is Jupiter and he is very much friendly towards Sun. These two
planets – Mars and Sun are the true representative Swami’s dharma chart. Mars
is the commander of the army and Sun is the king as per savants of astrology.)
ಎರಡನೇ ಉದಾಹರಣೆಗಾಗಿ ಶ್ರೀ ರಾಮಕ್ರಷ್ಣ ಪರಮ ಹಂಸರ ಜಾತಕವನ್ನ
ತೆಗೆದುಕೊಳ್ಳೋಣ.
ರಾಮಕೃಷ್ಣ ಪರಮಹಂಸರ ಜಾತಕದಲ್ಲಿ, ಧರ್ಮ ತ್ರಿಕೋಣದಲ್ಲಿ ಯಾವುದೇ ಗ್ರಹಗಳಿಲ್ಲ. ಅದೇ ಲಗ್ನದಿಂದ ೧,೫, ಮತ್ತು ೯ ನೇ ಧರ್ಮದ
ಮನೆಯಲ್ಲಿ ಸೂರ್ಯ, ಬುಧ ಮತ್ತು ಚಂದ್ರ (೧) ಹಾಗೂ ಗುರು (೫) ಮತ್ತು ಶನಿ (೯) ಇದ್ದಾರೆ.
ಇದು ಏನನ್ನ ತೋರಿಸುತ್ತದೆ ಅಂದರೆ, ಅವರಿಗೆ ಹಿಂದು ಧರ್ಮದ ಬಗ್ಗೆ ಅರಿವು ಇರುವುದಲ್ಲದೆ, ಹಲವು ಧರ್ಮಗಳಲ್ಲಿಕೂಡಾ ಅರಿವು ಇದೆ. ಧರ್ಮ ಸ್ಥಾನದಲ್ಲಿರುವ ಉಛ್ಚ
ಶನಿಯಿಂದಾಗಿ ಹಾಗೂ ಭಾಗ್ಯ ಹಾಗೂ ಧರ್ಮ ಸ್ಥಾನದ ಮತ್ತು ಸುಖ ಸ್ಥಾನದ ಅಧಿಪತಿ ಶುಕ್ರನು ಉಛ್ಚ
ಸ್ಥಿತಿಯಲ್ಲಿರುವ ಕಾರಣ ಮತ್ತು ೪ನೇ ಮನೆಯ ಅಧಿಪತಿಯು ತಾಯಿಯನ್ನ ಪ್ರತಿನಿಧಿಸುವುದರಿಂದ ಹಾಗೂ
ಕುಂಭ ರಾಶಿಯಲ್ಲಿರುವ ಮಾತ್ರು ಕಾರಕ ಚಂದ್ರನಿಂದಾಗಿ, ಶ್ರೀ ರಾಮಕೃಷ್ಣಪರಮ ಹಂಸರು ದಕ್ಷಿಣೇಷ್ವರ ಕಾಳಿಯನ್ನ
ಆರಾಧಿಸುವವರಾಗಿದ್ದರು.
(In Ramakrishna's horoscope – there is no planet in the dharma
triangle. But, if we find dharma houses (1, 5 and 9) – we will find series of planets – Sun, Moon, Mercury, Jupiter and
Saturn. This indicates his vast knowledge in various religions apart from
Hinduism. Extremely powerful Saturn in Kama triangle and also an exalted 9th lord
(who is also the fourth lord – represents mother) and Moon
(Mother) in Aquarius – made
him a worshipper of a mother goddess– a great devotee of mother
goddess Kali.)
೨. ವೃಷಭ ರಾಶಿ :- ಇದು ಕಾಲಪುರುಷನ ಎರಡನೇ ರಾಶಿ. ಇದು ಕಾಲಪುರುಷನ ಮುಖವನ್ನ
ಸೂಚಿಸುತ್ತದೆ. ಇದು ಭೂ ತತ್ವದ ಸ್ಥಿರ ರಾಶಿ. ಇದು ಬೆಸ ರಾಶಿ. ಇದು ಸ್ತ್ರೀ ರಾಶಿ. ಬೆಸ
ರಾಶಿಗಳೆಲ್ಲಾ ಸ್ತ್ರೀ ರಾಶಿ. ವಿಷಮ ರಾಶಿಗಳೆಲ್ಲಾ ಪುರುಷ ರಾಶಿ. ವಿಷಮ
ರಾಶಿಗಳು ಯಾವುದೆಂದರೆ, ೧,೩,೫,೭,೯ ಮತ್ತು ೧೧. ಅದೇ ಬೆಸ ರಾಶಿಗಳು ೨,೪,೬,೮,೧೦ ಮತ್ತು ೧೨ ನೇ ರಾಶಿಗಳು. ಇದು ಪ್ರಥ್ವಿ ತತ್ವದ ಮೊದಲನೇ ರಾಶಿ.
ಇದರ ಅಧಿಪತಿ ಶುಕ್ರ. ಈ ರಾಶಿಯನ್ನ ಎತ್ತು (ಗೂಳಿ) ಪ್ರತಿನಿಧಿಸುತ್ತೆ. ಗೂಳಿ ೨೪ ಗಂಟೆಯೂ
ಕೆಲಸವನ್ನ ಮಾಡುವುದಿಲ್ಲ. ಅದಕ್ಕೆ ಅವಾಗಾವಾಗ ವಿಶ್ರಾಂತಿ ಬೇಕೇ ಬೇಕು. ಗೂಳಿಯ ಹೊಟ್ಟೆಯೂ
ದೊಡ್ಡದು. ಅದರಂತೆ ಈ ರಾಶಿಯವರೂ ಕೂಡ ಯಾವಾಗಲೂ ಕೆಲಸವನ್ನ ಮಾಡಲಾರರು. ಇವರುಗಳು ಅವಾಗಾವಾಗ
ವಿಶ್ರಾಂತಿಯನ್ನ ತೆಗೆದುಕೊಳ್ಳುತ್ತಾರೆ. ಇವರುಗಳು ತಿನ್ನುವುದೂ ಹಾಗೆಯೇ. ಸರಿಯಾಗಿ ತಮ್ಮ
ಹೊಟ್ಟೆಯನ್ನ ತುಂಬಿಸಿಕೊಳ್ಳುತ್ತಾರೆ. ಇದು ಸ್ತ್ರೀ ರಾಶಿಯಾದ ಕಾರಣ, ಇವರುಗಳು ಸೌಂದರ್ಯಕ್ಕೆ ಹೆಚ್ಚು ಹೆಚ್ಚು ಪ್ರಾಧಾನ್ಯತೆಯನ್ನ
ಕೊಡುತ್ತಾರೆ. ಈ ರಾಶಿಯವರ ಕಣ್ಣುಗಳು ಬಹಳ ಚೆನ್ನಾಗಿರುತ್ತವೆ. ಇವರ ಮುಖವೂ ಬಹಳ ಚಂದ. ಇವರುಗಳು
ಅಲಂಕಾರ ಪ್ರಿಯರು. ಇವರುಗಳು ಹೆಚ್ಚಿನ ಸೌಲಭ್ಯಗಳನ್ನ ಪಡೆಯುವರು. ಇವರುಗಳು, ಎತ್ತಿನ ಗುಣ ಲಕ್ಷಣಗಳಲ್ಲಿ ಒಂದಾದ ಶ್ರಮ ಜೀವಿಗಳು. ಆದರೆ ಈ ಶ್ರಮವು
ಒಂದು ನಿಯಮಿತ ಸಮಯದಲ್ಲಿ ಮಾತ್ರ!. ಬಾಕಿ ಸಮಯದಲ್ಲಿ ಇವರುಗಳು ಆರಾಮವನ್ನ
ತೆಗೆದುಕೊಳ್ಳುತ್ತಿರುತ್ತಾರೆ. ಕೆಲಸವು ಎಸ್ಟಿರುತ್ತೋ ಅಸ್ಟೆಯೇ ವಿಶ್ರಾಂತಿ ಇವರುಗಳಿಗೆ ಬೇಕು.
ಇನ್ನು ಎತ್ತಿನ ಆಹಾರ ಶುಧ್ಧ ಆಹಾರ. ಅದಕ್ಕೆ ರುಚಿ ಇರಬೇಕು. ಸಿಕ್ಕ, ಸಿಕ್ಕಿದ್ದೆಲ್ಲಾ ತಿನ್ನೋಲ್ಲ. ಇವರುಗಳೂ ಹಾಗೆಯೇ. ರುಚಿ ರುಚಿಯಾಗಿ
ತಿನ್ನುತ್ತಾರೆ. ಹೇಗೆ ಬಟ್ಟೆಯನ್ನ ಚೆನ್ನಾಗಿ ಧರಿಸುತ್ತಾರೋ, ಹಾಗೆಯೇ ಆಹಾರದಲ್ಲಿಯೂ ಕೂಡ ಇವರ ರುಚಿ ಬಹಳ ಚೆನ್ನಾಗಿರುತ್ತೆ. ಇವರು
ಲೈಕ್ ಮಾಡುವ ಬಣ್ಣ ಶ್ವೇತ ವರ್ಣ (ಬಿಳಿ).
ಇವರುಗಳ ಶರೀರ ಬಹಳ ಮೃದು .ಇವರುಗಳು ಕಲಾ ಪ್ರಿಯರು. ಕಾರಣ ಇವರ ಅಧಿಪತಿ ಶುಕ್ರ ೬೪
ಕಲೆಗಳ ರಾಜ. ಆದ್ದರಿಂದ ಕಲೆಯ ಉಗಮವೇ ವೃಷಭ ರಾಶಿ. ಕಲೆಗಳಿಗೆ ಬುನಾದಿಯನ್ನ ಹಾಕುವವರೇ ಈ ರಾಶಿಯ
ಜನರು. ಈ ಕಲೆಯನ್ನ ಮುನ್ನೆಡೆಸುವವರು ಮಿಥುನ ರಾಶಿಯವರು. ಇದು ಅರ್ಥದ ರಾಶಿ. ಅಂದರೆ ಇವರು ಹಣದ
ರಾಶಿಯಲ್ಲಿಯೇ ಕುಳಿತಿರುವಂತಹವರು.
ಅರ್ಥ ಜಾತಕಕ್ಕೆ ಉದಾಹರಣೆ-೧ :-ಇದು ಬಿಲ್ ಗೇಟ್ಸನ ಜಾತಕ.
Ne
|
Mars
Pl
|
Ketu
Ur.
|
Mon
|
Ketu
|
Asc
|
|||
Swami Vivekananda
12/1/1863,6.20
Lat 22.30 N
Long.88.20 E
|
Bill Gates
28/10/1955;20.58
Lat:47.36 N
Long:122.20 W
|
Ur
|
||||||
Ven
Mer
|
Pl
Jup
|
|||||||
Sun
|
Rahu
|
Jup
|
Sat
Mon
|
Rahu
|
Ven. Sat
Sun Ne
|
Mer
Mars
|
In Billionaire Bill Gates's
chart, Ketu, Mercury and Mars are in the Artha triangle. Mercury and Mars
combination has a direct aspect of Moon from the 7th house. There is no planet
in the 2nd, 6th and 10th house. Though Mercury,
Mars and Moon combination bestows abundant wealth, Ketu's presence in Taurus
made him start from a scratch.
ಬಿಲ್ಲಿಯನೇರ್
ಬಿಲ್ ಗೇಟ್ಸ್ ಅವರ ಜಾತಕದಲ್ಲಿ, ಕೇತು ವೃಷಭದಲ್ಲಿ (೨) , ಬುಧ
ಮತ್ತು ಮಂಗಲ್ ಗ್ರಹಗಳು ಕನ್ಯಾದಲ್ಲಿ(೬) ಅಂದರೆ
ಅರ್ಥ ತ್ರಿಕೋಣ ಸ್ಥಾನಗಳಲ್ಲಿ ಉಪಸ್ಥಿತರಿದ್ದಾರೆ. ಬುಧ ಮತ್ತು ಮಂಗಲರಿಗೆ ಚಂದ್ರನ ನೇರ
ದೃಸ್ಟಿ ಇದೆ. ಹಾಗೆಯೇ, ಲಗ್ನದಿಂದ ೨,೬, ಮತ್ತು
೧೦ ನೇ ಸ್ಥಾನಗಳಲ್ಲಿ ಯಾವುದೇ ಗ್ರಹಗಳಿಲ್ಲ. ಮಂಗಲ್, ಬುಧ ಹಾಗೂ
ಚಂದ್ರನ ಯುಕ್ತಿಯಿಂದಾಗಿ ಅವರ ಹತ್ತಿರ ಹೇರಳ ಸಂಪತ್ತು ಇರುವ ಹಾಗಾಯಿತು. ಅದೇ ಕೇತುವಿನ
ಉಪಸ್ಥಿತಿ ವೃಶಭದಲ್ಲಿರುವುದರಿಂದಾಗಿ, ಸ್ಕ್ರೇಚಿನಿಂದ ಅವರು ಶುರುಮಾಡುವ ಹಾಗಾಯಿತು.
ಉದಾಹರಣೆ
೨:- ಮೆಡೋನಾರವರ ಜಾತಕವನ್ನ ತೆಗೆದುಕೊಳ್ಳೋಣ :-
In the multi-millionaire pop
princess Madonna's chart – the Artha triangle is vacant and also there is no
planet in 2nd, 6th and 10th house from the ascendant. There are four planets in
dharma triangle – viz., Mars, Ketu, Moon and Mercury. We will find Moon,
Mercury and Mars are the planets – who get exalted in Artha triangle. Her Ketu
in Aries (the first sign of dharma triangle) made her struggle for money in her
early years.
ಅದೇ
ಮೆಡೋನಾರವರ ಜಾತಕವನ್ನ ತೆಗೆದುಕೊಂಡಾವಾಗ, ಎಲ್ಲಾ ಅರ್ಥ
ತ್ರಿಕೋಣ ಸ್ಥಾನಗಳೂ ಖಾಲಿ ಇದ್ದಾವೆ. ಅಂದರೆ ೨,೬
ಮತ್ತು ೧೦ ನೇ ಸ್ಥಾನಗಳು ಖಾಲಿ. ಆದರೆ ಮಂಗಲ್, ಕೇತು, ಚಂದ್ರ
ಮತ್ತು ಬುಧ ಗ್ರಹಗಳು ಧರ್ಮದ ತ್ರಿಕೋಣದಲ್ಲಿ ಉಪಸ್ಥಿತವಿದ್ದಾವೆ. ಕೇತು ಗ್ರಹವು ಅವಳನ್ನ
ಪ್ರಾರಂಭದ ಸಮಯದಲ್ಲಿ ಸ್ಟ್ರಗಲ್ ಮಾಡುವ ಹಾಗೆ ಮಾಡಿಸಿತು.
ಮಿಥುನ ರಾಶಿ
:- ಕಾಲಪುರುಷನ ೩ ನೇ ರಾಶಿ. ಇದು ಕುತ್ತಿಗೆ ಮತ್ತು
ಭುಜವನ್ನ ಸೂಚಿಸುತ್ತದೆ. ಇದು ವಾಯು ತತ್ವದ ಪ್ರಥಮ ರಾಶಿ. ಇದು ದ್ವಿಸ್ವಭಾವ ರಾಶಿ. ಇದು ವಿಷಮ ರಾಶಿ. ಇವರುಗಳು ಹಾಗೂ ಸೈ, ಹೀಗೂ
ಸೈ ಎನ್ನುವ ಜನರು. ಆದ್ದರಿಂದ ಇದು ಪುರುಷ ರಾಶಿ. ಇದನ್ನ ಒಂದು ಸ್ತ್ರೀ ಹಾಗೂ ಒಂದು ಪುರುಷನ
ಅಂದರೆ ಯುವಕ ಯುವಕಿಯರ ಜೋಡಿ ಪ್ರತಿನಿಧಿಸುತ್ತೆ.
ಮೇಷ ರಾಶಿಯಲ್ಲಿ ಹುಟ್ಟಿ, ವೃಷಭದಲ್ಲಿ ಹುಲ್ಲ (ಆಹಾರ) ತಿಂದು, ಮಿಥುನದಲ್ಲಿ
ಸ್ತ್ರೀ-ಪುರುಷರು ಸೇರಿ ಸಂಗ ಜೀವನವನ್ನಕಲಿಯುತ್ತಾರೆ. ಆ ಮೇಲೆ ಕಟಕದಲ್ಲಿ ಬದುಕಲು
ಕಲಿಯುತ್ತಾರೆ. ಸಿಂಹದಲ್ಲಿ ಮಕ್ಕಳನ್ನ ಮಾಡುತ್ತಾರೆ. ಕನ್ಯಾ , ತುಲಾದಲ್ಲಿ
ಬದುಕಲು ಬೇಕಾಗುವ ವ್ಯವಹಾರಗಳನ್ನ ಮಾಡುತ್ತಿರುತ್ತಾರೆ. ವೃಸ್ಚಿಕದಲ್ಲಿ ಧನ ಸಂಪತ್ತನ್ನ
ಸಂಗ್ರಹಿಸಿ ಇಡುತ್ತಾರೆ. ಹೀಗೆ ಕಾಲಪುರುಷನ ಕಾಲ ಚಕ್ರವು ಮುಂದುವರಿದು, ಮೀನದಲ್ಲಿ
ಮೋಕ್ಷವನ್ನ ಪಡೆಯುತ್ತಾರೆ. ಹೇಗಿದೆ ನೋಡಿ ನಮ್ಮ ಭಚಕ್ರದ (ಕುಂಡಳಿಯ)ಕಮಾಲ್.
ಒಂದು
ವೇಳೆ ಮಿಥುನ ರಾಶಿಯವರು ಸ್ತ್ರೀ ಆದಲ್ಲಿ, ಅವರಿಗೆ
ಪುರುಷ ಬೇಕು, ಅದೇ
ಪುರುಷ ಆದಲ್ಲಿ ಅವರಿಗೆ ಸ್ತ್ರೀ ಬೇಕು. ಅಂದರೆ ಇವರಿಬ್ಬರ ಜೋಡಿ ಇದ್ದಲ್ಲಿ ಮಾತ್ರ ಕಮುನಿಕೇಷನ್
ಡೆವೆಲಪ್ಮೆಂಟ್ಸ್ ಸಾಧ್ಯ. ಆದರೆ ಜನರು ಮಾತ್ರ ಇವರನ್ನ ಗೇಲಿ ಮಾಡುತ್ತಾರೆ. ಕಾರಣ ಮಿಥುನದ
ಪುರುಷನ ಹೆಚ್ಚಿನ ಸಂಗಾತಿಯರೇ ಹೆಣ್ಣು ಮಕ್ಕಳು. ಅದೇ ರೀತಿ ಮಿಥುನದ ಸ್ತ್ರೀಯರ ಹೆಚ್ಚಿನ
ಸಂಗಾತಿಯರು ಗಂಡು ಮಕ್ಕಳು. ಇವರುಗಳು ಮಾಡುವಂತಹ
ರೀಸರ್ಚ್ ಕೆಲಸವು ಸಕ್ಸಸ್ ಆಗಲು ಈ ರೀತಿಯ ಸಂಗ ಜೀವನ ಅತ್ಯಗತ್ಯ. ಆವಾಗಲೇ ಮಾಡಿದಂತಹ
ಕೆಲಸವು ಗುಣ ಮಟ್ಟವನ್ನ ಸಾಧಿಸಲು ಸಾಧ್ಯ. ಒಂಟಿ ಜೀವದಲ್ಲಿ ಅದು ಅಸಾಧ್ಯವೆಂತಲೇ ವಿಧಿ ಇವರಿಬ್ಬರ
ಜೋಡಿಯನ್ನ ಇಲ್ಲಿ ತೊಡಗಿಸಿಕೊಂಡ. ಮಿಥುನದವರು ಹೊಸ ಹೊಸ ವಿಷಯಗಳನ್ನ ಕಂಡು ಹಿಡಿಯುವುದರಲ್ಲಿ ಬಹಳ
ಶ್ರೇಷ್ಠ. ಸಮಾಜದಲ್ಲಿ ಪರಿವರ್ತನೆಯನ್ನ ತರುವವರೇ ಈ ರಾಶಿಯ ಜನರು. ಇವರುಗಳು ಯಾವಾಗಲೂ ಹೊಸ ಹೊಸ
ವಿಷಯಗಳನ್ನೇ ಇಸ್ಟ ಪಡುತ್ತಾರೆ. ಇಲ್ಲಿ ಕಲೆಯನ್ನ ಜಾಸ್ತಿಯಾಗಿ ಪ್ರಯೋಗಿಸುತ್ತಾರೆ. ವೃಷಭದಲ್ಲಿ
ಉಗಮವಾದಂತಹ ಕಲೆಯನ್ನ ಇವರುಗಳು ಜಾಸ್ತಿ ಪ್ರಯೋಗವನ್ನ ಮಾಡುವರು. ಈ ರಾಶಿಯು ಸ್ಪೋರ್ಟ್ಸ್ ರಾಶಿ
ಕೂಡ. ಎಲ್ಲಿ ಸ್ತ್ರೀ-ಪುರುಷರ ಜೋಡಿ ಇರುತ್ತವೆಯೋ ಅಲ್ಲಿ ಎಲ್ಲವುದರಲ್ಲಿಯೂ ಪ್ರೋಗ್ರೆಸ್ಸ್
ಉಂಟು. ಅದು ಬೆಳೆಯುತ್ತೆ. ಆದ್ದರಿಂದ ಎಲ್ಲಾ ಬೇಳೆಯುವಂತಹ ವಿಷದಲ್ಲಿ ಸ್ತ್ರೀ-ಪುರುಷರು ಇರಲೇ
ಬೇಕು. ಆದ್ದರಿಂದಲೇ ಟೆಕ್ನೋಲೊಜಿಯಲ್ಲಿ ರೀಸರ್ಚ್ ಡೆವೆಲಪ್ಮೆಂಟ್ಸ್ ಈ ರಾಶಿಯವರೇ ಹೆಚ್ಚು
ಮಾಡುವರು. ಈ ರಾಶಿಯ ಅಧಿಪತಿ ಬುಧ. ಈ
ರಾಶಿಯವರೊಡನೆ ಬಹಳ ಕೇರಫ಼ುಲ್ ಆಗಿರಬೇಕು. ಏಕೆಂದರೆ ಇವರಿಗೆ ತಲೆ ಕೆಟ್ಟರೆ ಬಹಳ ಕೆಟ್ಟವರು.
ಮಿಥುನ ರಾಶಿಯು ಧನಾತ್ಮಕ ರಾಶಿ.(+ವ್) ವಾಯು ತತ್ವದ ಅತೀ ಬುಧ್ಧಿವಂತ ರಾಶಿ ಇದು. ಈ ರಾಶಿಯವರು
ಕಾಮ ತತ್ವದವರು. ಆದ್ದರಿಂದ ಇವರುಗಳಿಗೆ ಕಾಮದಲ್ಲಿ ಅತೀ ಹೆಚ್ಚಿನ ಆಸೆ. ವಾಯು ತತ್ವದವರು ಬಹಳ
ಶಿಸ್ತು ಬಧ್ಧರು. ಇವರುಗಳು ಬಹಳ ಇಂಡಿಪೆಂಡೆಂಟ್ ವ್ಯಕ್ತಿಗಳು. ಈ ರಾಶಿಯವರು ಎಸ್ಟೇ ವಯಸ್ಸಾಗಲೀ, ಇವರು
ಮಕ್ಕಳಂತೆ ವರ್ತಿಸುವುದು ಜಾಸ್ತಿ. ಇನ್ನೊಂದು ವಿಷಯವೇನೆಂದರೆ ಮಕ್ಕಳು ೬-೧೨ ವಯಸ್ಸಿನವರಿಗೇ
ಬುಧ್ಧಿವಂತಿಕೆ ಜಾಸ್ತಿ. ಆದ್ದರಿಂದ ಈ ರಾಶಿಯವರು ಬಹಳ ಬುಧ್ಧಿವಂತರು. ಕಟಕ ದಲ್ಲಿ ಇವರು
ದೊಡ್ಡವರಾಗಿ ಸಂಸಾರವನ್ನ ಮಾಡುವವರಾಗುತ್ತಾರೆ. ಮಿಥುನ ರಾಶಿಯವರು ನೋಡಲು ಅಸ್ಟೊಂದು ಚೆನ್ಣಾಗಿ
ಕಾಣಿಸಲಾರರು. ಆದರೆ ಇವರುಗಳು ಮೇಕಪ್ ಮಾಡಿಕೊಂಡು ಪ್ರಸೆಂಟೇಬಲ್ ಆಗಿರುತ್ತಾರೆ. ಮೈಕಲ್ ಜಾಕ್ಸನ್
ಈ ರಾಶಿಯವರು. ಕಪ್ಪಗಿರುವಂತಹವರು ಬಿಳಿಯಾಗಿ ಕಾಣಿಸಿಕೊಂಡರು. ಅಂದರೆ ಬರೇ ಮೇಕಪನಿಂದ ಇವರ
ಸುಂದರತೆ ಎದ್ದು ಕಾಣಿಸುವ ಹಾಗೆ ಮಾಡಿಸುತ್ತಾರೆ. ಮಿಸ್ಸ್ ವರ್ಲ್ಡಗೆ ಸ್ಪರ್ದಿಸುವವರು ಹೆಚ್ಚಾಗಿ
ಮಿಥುನ ರಾಶಿಯವರೇ ಆಗಿರುತ್ತಾರೆ. ಅವರು ನೋಡಲು ಅಸ್ಟೊಂದು ಚೆನ್ನಾಗಿರೋಲ್ಲ. ಬರೇ ಮೇಕಪನಿಂದ
ಎವಾರ್ಡ್ಸಗಳನ್ನ ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ಮಿಥುನ ರಾಶಿಯ ದೇವರು ಭಗವಾನ್ ವಿಷ್ಣು.
ಆತನು ಅಲಂಕಾರ ಪ್ರಿಯ. ಇದು ಕಾಮದ ರಾಶಿ. ಮೇಷ ರಾಶಿ ಧರ್ಮ ತತ್ವದ ರಾಶಿಯಾದಲ್ಲಿ, ವೃಷಭ
ರಾಶಿಯವರು ಅರ್ಥ ತತ್ವದವರು. ಮಿಥುನದವರು ಕಾಮ ರಾಶಿಯವರು. ಅದೇ ಕಟಕದವರು ಮೋಕ್ಷ ರಾಶಿಯವರು.
ಹೀಗೆಯೇ ಈ ಸೈಕಲ್ ಮುಂದುವರಿಯುತ್ತದೆ.
Let's
start with the table for kama – triangle.
Kama
Triangle (Table 3)
Sign
|
Owner/Ruler
|
Place
of Exaltation
|
Place
of Debilitation
|
Gemini
|
Mercury
|
||
Libra
|
Venus
|
Saturn
|
Sun
|
Aquarius
|
Saturn
|
- -
Example
-1
In
Ramakrishna Paramhansa's chart – there are five planets in kama – triangle and
amongst them Saturn is the most powerful. Shows the power of his devotion.
Saturn is in the 9th from the ascendant shows the dharma, also exalted 9th lord
Venus – made him one great exponent of religion (dharma).
ಶ್ರೀ ರಾಮಕೃಷ್ಣರ ಜಾತಕದಲ್ಲಿ ಕಾಮದ ತ್ರಿಕೋಣದಲ್ಲಿ ೫ ಗ್ರಹಗಳು
ಉಪಸ್ಥಿತವಿದ್ದಾವೆ. ಕುಂಭ ಲಗ್ನದಲ್ಲಿಯೇ ಮೂರು ಗ್ರಹಗಳಾದ ಚಂದ್ರ, ಕುಜ ಹಾಗೂ ಸೂರ್ಯನು , ಪಂಚಮ ಹಾಗೂ ನವಮ ಸ್ಥಾನಗಳಲ್ಲಿ ಗುರು ಮತ್ತು ಶನಿ ಗ್ರಹಗಳು ಉಪಸ್ಥಿತವಿದ್ದಾವೆ.
ಶನಿಯು ಧರ್ಮ ಸ್ಥಾನದಲ್ಲಿ ಉಛ್ಚನಿದ್ದಾನೆ. ೯ನೇ ಮನೆಯ ಅಧಿಪತಿ ಶುಕ್ರನು ಕೂಡ ಮೀನ ರಾಶಿಯಲ್ಲಿ
ಉಛ್ಚನಿರುವುದರಿಂದ
ಶ್ರೀರಾಮಕೃಷ್ಣರು ಒಬ್ಬ ಧಾರ್ಮಿಕ ಗುರುವಾಗಲು ಕಾರಣ.
In
Swami Vivekananda's chart - Jupiter is the only planet in Kama – triangle and from 3rd ,7th and 11th from
the Ascendant –
Jupiter is placed in 11th (Libra) and there is no other planet present.
So his desire is solely derived by Jupiter - the planet for knowledge. Jupiter
has a direct aspect of Mars from Aries [the first sign of dharma – triangle and 5th (the 2nd house of dharma) from his
ascendant]. This combination made him one of the very best thinkers and
enlightened monks of all time.
ಸ್ವಾಮಿ ವಿವೇಕಾನಂದರ ಜಾತಕದಲ್ಲಿ ಗುರು ಒಬ್ಬನೇ ಕಾಮದ ಮನೆಯಲ್ಲಿ
ಇರುವನು. ಲಗ್ನದಿಂದ ಕಾಮ ತ್ರಿಕೋಣಗಳಾದ ೩,೭ ಮತ್ತು ೧೧ ನೇ ಸ್ಥಾನಗಳಲ್ಲಿ, ಗುರು ೧೧ ನೇ ಮನೆಯಾದ ತುಲಾ ರಾಶಿಯಲ್ಲಿರುವನು. ಆದ್ದರಿಂದ ಆತನ
ಇಛ್ಛೆಗಳು ಏನಾದರೂ ಇದ್ದಲ್ಲಿ ಈ ಗುರುವಿನಿಂದ ಮಾತ್ರವೇ ಸಾಧ್ಯ. ಕಾರಣಾ ಗುರುವು ಪ್ಲೇನೆಟ್ ಆಫ಼್
ನೋಲೆಡ್ಜ್. ಈ ಗುರುವಿನ ಮೇಲೆ ಧರ್ಮ ತ್ರಿಕೋಣಗಳಲ್ಲಿ ಒಂದಾದ ಮೇಷ ರಾಶಿಯಿಂದ ಕುಜನು
ವೀಕ್ಷಿಸುತ್ತಿರುವನು. ಇದು ಲಗ್ನದಿಂದ ೫ ನೇ ಮನೆಯಾಗಿರುತ್ತೆ.ಈ ಒಂದು ಯುಕ್ತಿ ಸ್ವಾಮಿ
ವಿವೇಕಾನಂದರನ್ನ ಒಬ್ಬ ಅತೀ ಉತ್ತಮ ಯಾಚನೆಯನ್ನ ಮಾಡುವವ ಮತ್ತು ಸ್ವಾಮಿಯವರನ್ನ ಯಾವಾಗಲೂ
ಸ್ಫೂರ್ತಿಯಿಂದ ಇರಲು ಸಾಧ್ಯ ಮಾಡಿದೆ.
In
Madonna's chart - Jupiter and Rahu combination in Libra is the only combination
available, there is no other planet present in the kama – triangle and also from 3rd ,7th and 11th from
the Ascendant. This combination has a direct aspect of Mars, Ketu combination
from Aries. Jupiter is knowledge and Rahu in Libra especially in a Nakshatra
(star) ruled by Mars represents performing arts/ cinema/ video/ picture – aspect of Mars and Ketu
indicates success after initial struggle but denies a peaceful marital life.
|
Ketu
Mars
|
|
|
|
|
|
|
|
|
Madona
16/08/1958;7.00
Lat : 43.36 N
Long: 83.53 W
|
Ven Sun Ur
|
|
|
|
|||
|
Mer
Mon Asc
|
|
|
|||||
|
Sat
|
Rahu Jup
Nep
|
|
|
|
|
|
A strange coincidence -
In
Swami Vivekananda's and Madonna's chart – Jupiter is placed in Libra, in a
nakhshatra (star) ruled by Mars. In both the charts – Jupiter has a strong aspect of
Mars from the Aries. Jupiter represents
voice and Mars represents vocal skill. Swamiji was a great orator and a
very well-known Indian classical singer of his time. Madonna is a singer,
dancer, actress and a director. The
difference is in the nakshatra (star), in the Swamiji's chart, Mars is in
Ashwini nakshatra ruled by Ketu and in the Madonna's chart Mars is in the
Bharani nakshatra ruled by Venus. Ketu represents moksha/dharma and
Venus represents artha/kama, hence the difference.
ಕಟಕ ರಾಶಿ.:- ಇದು ಕಾಲಪುರುಷನ ೪ ನೇ ರಾಶಿ. ಇದು ಮನುಷ್ಯನ ಎದೆಯ ಭಾಗವನ್ನ
ಸೂಚಿಸುತ್ತದೆ. ಭಚಕ್ರದಲ್ಲಿ ಇದು ಜಲ ತತ್ವದ ಪ್ರಥಮ ಚರ ರಾಶಿ. ಇದು ಜಲಚರ ರಾಶಿ. ಆದರೆ ಶುಧ್ಧ
ಜಲ. ಯಾವ ಪಾತ್ರೆಯಲ್ಲಿ ಹಾಕಿದರೂ ಅದರದ್ದೇ ಆದ ಆಕಾರವನ್ನ ತೆಗೆದುಕೊಳ್ಳುತ್ತೆ. ಅಂದರೆ ಆಯಾ
ವಾತಾವರಣಕ್ಕೆ, ಅವರವರಿಗೆ ಅನುಕೂಲಕರವಾಗಿ ಹೊಂದಿಕೊಂಡು ಹೋಗುವಂತಹ ರಾಶಿ ಇದು. ಇದು
ಸಮ ಅಂದರೆ ಬೆಸ ರಾಶಿ ಅಂದರೆ ಇದು ಸ್ತ್ರೀ ರಾಶಿ. ಇದರ ಅಧಿಪತಿ ಚಂದ್ರ. ಸೌಂದರ್ಯಕ್ಕೆ ಕಾರಕ
ಗ್ರಹ. ಆದ್ದರಿಂದಲೇ ಈ ರಾಶಿಯ ಸ್ತ್ರೀಯರು ಬಹಳ ಸುಂದರವಾಗಿ ಕಾಣಿಸುತ್ತಾರೆ. ಇವರುಗಳಿಗೆ ಮಿಥುನ
ರಾಶಿಯವರಂತೆ ಮೇಕಪ್ ಅನ್ನುವುದು ಬೇಡವೇ ಬೇಡ. ಹಾಗೆಯೇ ಇವರುಗಳು ಚಂದವಾಗಿರುತ್ತಾರೆ. ಆದರೆ ಈ
ರಾಶಿಯವರಿಗೆ ೧೫ ದಿನ ಹುಣ್ಣಿಮೆ. ಮತ್ತೆ ೧೫ ದಿನ ಅಮವಾಸ್ಯೆ. ಅಂದರೆ ಮೊದಲ ೧೫ ದಿನ ವೃಧ್ಧಿ
ಚಂದ್ರ, ಮತ್ತೆ ೧೫ ದಿನ ಕ್ಷೀಣ ಚಂದ್ರ. ಅಂದರೆ ಇವರುಗಳು ಮಾನಸಿಕ
ತುಮುಲತೆಯಿಂದ ನರಳುವ ಜನರು. ಇವರುಗಳು ಮಾನಸಿಕ ರೋಗಿಗಳೆಂದರೂ ತಪ್ಪಾಗದು. ಮಾನಸಿಕ ಚಿಂತೆ
ಇವರಿಗೆ ಸದಾ ಕಾಡುತ್ತಿರುತ್ತೆ. ಆದ್ದರಿಂದ ಇವರುಗಳು ನಿದ್ದೇ ಮಾತ್ರೆಗೆ ಶರಣು ಹೋಗುವುದು
ಜಾಸ್ತಿ. ಇದರಿಂದ ಹೊರಗೆ ಬರುವುದು ಅವರುಗಳಿಗೆ ಕಸ್ಟಕರವಾಗಬಹುದು. ಇನ್ನು ಕೆಲವರು
ಆತ್ಮಹತ್ಯಕ್ಕೂ ಶರಣು ಹೋಗಲು ಸಾಧ್ಯ. ಇದಕ್ಕೆ
ಅವರ ಜಾತಕದಲ್ಲಿ ಚಂದ್ರನ ಜೊತೆಗೆ ರ್ ರಾಹು ಅಥವಾ ಕೇತುಗ್ರಹಗಳಿದ್ದಲ್ಲಿ ನೂರಕ್ಕೆ ನೂರು ಇದು
ಸತ್ಯ. ಇವರುಗಳಿಗೆ ಎಮೋಷನಲ್ ಎಟೇಚಮೆಂಟ್ಸ್ ಜಾಸ್ತಿ ಇರುತ್ತೆ. ಇವರು ಎಲ್ಲಿಯೇ ಹೋದರೂ
ಮಾತನಾಡುವುದು ತಮ್ಮ ಮಕ್ಕಳದ್ದೇ. ಇವರ ಮಕ್ಕಳು ಮಾಡಿದ್ದೇ ಸರಿ. ಅವರೇನು ಮಾಡಿದರೂ ಅವರನ್ನ
ಹೊಗಳಿ ಹೊಗಳಿ ಅಟ್ಟಕ್ಕೆ ಏರಿಸಿ ಬಿಡುತ್ತಾರೆ. ಆದರೆ ಇವರು ಎಣಿಸದ್ದು ಆಗದೇ ಹೋದಲ್ಲಿ, ಇವರಿಗೆ ಎಲ್ಲಿಲ್ಲದ ಕಸಿವಿಸಿ. ಕಾರಣ ಇದು ಋಣಾತ್ಮಕ ರಾಶಿ.
(-ವ್) ಈ ರಾಶಿಯ ಪ್ರಾಣಿ ೧೨ ಕಾಲಿನ ಏಡಿ.
(ಕ್ರೇಬ್). ಮೇಷದಲ್ಲಿ ನಾವು ನೋಡಿದೆವು ೪ ಸಣ್ಣ ಕಾಲಿನ ಟಗರು. ವೃಷಭದಲ್ಲಿ ನೋಡಿದೆವು ೪ ಕಾಲಿನ
ಎತ್ತು. ಮಿಥುನದಲ್ಲಿ ನೋಡಿದೆವು ೨ ಕಾಲಿನ ಇಬ್ಬರು ಮನುಷ್ಯರನ್ನ. ಅದೇ ಕಟಕದಲ್ಲಿ ನಾವೀಗ
ನೋಡುತ್ತೇವೆ, ೧೨ ಕಾಲಿನ ಏಡಿ. ಈ ಪಾಣಿ ಹೇಗೆಂದರೆ ಜನರು ಯಾರೂ ಇಲ್ಲದಿರುವಾಗ
ನೀರಿನಿಂದ ಹೊರಗೆ ಬರುತ್ತೆ. ಜನರು ಬಂದಾವಾಗ ಗುಡು ಗುಡು ಓಡಿ ತನ್ನ ಬಿಲವನ್ನ ಸೇರಿಕೊಳ್ಳುತ್ತೆ
ಇಲ್ಲಾ ಜಲದಲ್ಲಿ ಸೇರುತ್ತೆ. ಅರ್ಥಾತ್, ತಮ್ಮನ್ನ ತಾವು ರಕ್ಷಣೆಯನ್ನ ಮಾಡಲು ಇವರುಗಳು ಏನು ಬೇಕಾದರೂ
ಮಾಡಿಯಾರು. ಏಡಿಯ ಹೃದಯ ಭಾಗ ಬಹಳ ಕಠಿಣ. ಕಾರಣ ಬಿಲವನ್ನ ಸೇರಿದಂತಹ ಏಡಿಯನ್ನ ಒಂದು ವೇಳೆ
ಬಿಲದಿಂದ ಕೈ ಹಾಕಿ ಎಳೆದು ಹೊರಗಡೆಗೆ ಹಾಕಲು ಪ್ರಯತ್ನಿಸಿದರೆ, ಬಹಳ ಕಠಿಣ ಪರಿಷ್ರಮದಿಂದ ಅದು ಹೊರಗೆ ಬರುತ್ತೆ ಅಥವಾ
ಎಳೆಯಲ್ಪಡುತ್ತದೆ. ಈ ರಾಶಿಯವರದ್ದೂ ಕೂಡ ಹಾಗೆಯೇ. ಏನೇ ಹೇಳಿದರೂ ಇವರು ಜಪ್ಪಯ್ಯಾ ಅಂತ ತಮ್ಮ
ಹೇಳಿಕೆಯನ್ನ ಬದಲಿಸದೆ ಅದಕ್ಕೇ ಅಂಟಿಕೊಂಡು ಇರುತ್ತಾರೆ. ಅಸ್ಟೊಂದು ಗಟ್ಟಿ ಹೃದಯ ಹಾಗೂ ಒರಟು
ಸ್ವಭಾವ ಇವರದ್ದು. ತಾವು ಹೇಳಿದಂತಹ
ಹೇಳಿಕೆಗಳನ್ನ ಕಣ್ಣು ಮುಚ್ಚಿ ತೆರೆಯುವುದರೊಳಗೆ ಅದನ್ನ ಬದಲಾಯಿಸದೇ ಇದ್ದರೆ ಅವರು ಕಟಕ
ರಾಶಿಯವರೇ ಅಲ್ಲ. ತಾವು ಹೇಳಲೇ ಇಲ್ಲ ಅಂತ ಪ್ರತಿಪಾದಿಸುವ ಏಕೈಕ ರಾಶಿಯವರೆಂದರೆ ಈ ಕಟಕ
ರಾಶಿಯವರು. ಇವರಿಗೆ ಮಾನ, ಮರ್ಯಾದೆ ಎನ್ನುವುದು
ಕೇಳಲೇ ಬೇಡಿ. ಈ ರಾಶಿಯು ಮೋಕ್ಷ ರಾಶಿ.
ಅಂದರೆ ಕಟಕದವರು ಮಹಾ ಜ್ನಾನಿಗಳು. ಇವರು ಎಲ್ಲವುದನ್ನೂ ಕಲಿತಿರುತ್ತಾರೆ. ಇವರು ಯಾವುದೇ ವಿಷಯಗಳ
ಬಗ್ಗೆ ಗೊತ್ತಿಲ್ಲಾ ಅಂತ ಹೇಳುವುದಿಲ್ಲ. ಜ್ಯೋತಿಷ್ಯ , ವಿಜ್ನಾನ, ರಾಜಕೀಯ, ಸಿನೇಮಾರಂಗ, ಇಲ್ಲಾ ಕಾಮರ್ಸ,ಅಥವಾ ಜೋಕುಗಳ ಬಗ್ಗೆಯೇ ತೆಗೆದುಕೊಳ್ಳಿ. ಇವರಿಗೆ ಗೊತ್ತಿಲ್ಲದ
ವಿಷಯಗಳಿಲ್ಲ. ಇವುಗಳ ಬಗ್ಗೆ ಸಾಕಸ್ಟು ತಿಳಿದುಕೊಂಡವರೆಂದರೆ ಈ ರಾಶಿಯವರು. ಆದ್ದರಿಂದ ಈ
ರಾಶಿಯವರು ಬಹಳ ಜ್ನಾನಿಗಳು ಎಂದರೆ ತಪ್ಪಾಗದು. ಇದು ಒಂದು ಜ್ನಾನದ ರಾಶಿ. ಭಚಕ್ರದಲ್ಲಿಯೇ ಎಲ್ಲವುದರ ಬಗ್ಗೆ ತಿಳಿದುಕೊಂಡಂತಹ
ಏಕೈಕ ಜ್ನಾನದ ರಾಶಿಯೆಂದರೆ ಕಟಕ ರಾಶಿ. ಇದು ಮಾತೃ ರಾಶಿ ಕೂಡ. ಅಂದರೆ ಎಲ್ಲವುದನ್ನೂ
ಪರರಿಗೆ ಹಂಚಿಕೊಂಡೂ ತಿನ್ನುವ ಹವ್ಯಾಸ ಇವರಿಗುಂಟು. ಆದರೆ ಈ ರಾಶಿಯವರಲ್ಲಿ ಇನ್ನು ಕೆಲವರು
ಇದ್ದಾರೆ. ಬೇರವರು ಅವರ ಮುಂದೆ ಇದ್ದರೂ ಸಹ, ಅವರು ಮಾತ್ರ ಕೊಂಕಣೆಯರ ಮನೆಯ ಕಡೆಯುವ ಕಲ್ಲಿನಂತೆ ಏನಾದರೊಂದು
ಮೇಯುತ್ತಿರುತ್ತಾರೆ. ಅವರಿಗೆ ಎದಿರು ಗಡೆ ಇದ್ದಂತಹ ವ್ಯಕ್ತಿಗಳಿಗೆ ಕೊಡಬೇಕೂ ಅನ್ನುವ
ಪರಿಜ್ನಾನ ಇಲ್ಲ. ಇವರನ್ನ ನಂಬಿದವರನ್ನ ೧೦೦
ಕ್ಕೇ ೧೦೦ ಇವರುಗಳು ರಕ್ಷಣೆಯನ್ನ ಕೊಡುತ್ತಾರೆ ಎನ್ನುವುದು ಗ್ಯಾರಂಟಿ. ಇವರದ್ದು ಒಂದು ವಿಶೇಷವೇನೆಂದರೆ ಇವರ ಸಂಸಾರದ ಪೂರಾ ರಕ್ಷಣೆಯನ್ನ ಇವರುಗಳು
ಮಾಡುತ್ತಿರುತ್ತಾರೆ. ಅವರುಗಳು ಹೇಳುವುದು ಸುಳ್ಳೋ ಅಥವಾ ಸತ್ಯವೋ ತಿಳಿಯದು. ಆದರೆ ತಮ್ಮ
ಮಕ್ಕಳನ್ನ ಮಾತ್ರ ರಕ್ಷಣೆ ಮಾಡುವಲ್ಲಿ ಕಟಕ ರಾಶಿಯವರು ಎತ್ತಿದ ಕೈ. ಇಡೀ ಭಚಕ್ರದಲ್ಲಿ
ಬೇರಾವ ರಾಶಿಯವರೂ ಇವರಸ್ಟು ಮಕ್ಕಳಿಗೆ ರಕ್ಷಣೆ ಕೊಡುವಸ್ಟು
ಬೇರವರು ಕೊಡಲಾರರು. ಕಾರಣ ಇದು ಮಾತೃ ರಾಶಿ. ಇವರದ್ದೊಂದು ನೂಕ್ಲಿಯಸ್ ಸಂಸಾರವೆಂದರೆ
ತಪ್ಪಾಗದು. ಬೇರವರಿಗೆ ತಿಂಡಿ ಹಾಕಿದ್ದಾರೋ ಇಲ್ಲವೋ ಈ ರಾಶಿಯವರಿಗೆ ಬೇಡವೇ ಬೇಡ. ಒಂದು
ಪಂಕ್ತಿಯಲ್ಲಿಇವರ ಮಕ್ಕಳೇ ಕುಳಿತ್ತಿದ್ದಲ್ಲಿ, ಅವರುಗಳಿಗೆ ಮೊದಲು ಗಮನನ್ನವ ಕೊಡಲು ಈ ಕಟಕ ರಾಶಿಯವರು ಹೇಳುವರು.
ಅಸ್ಟೊಂದು ಮಮಕಾರ ಹಾಗೂ ಕುರುಡುತನ ಈ ರಾಶಿಯವರಿಗೆ.
ಬೇರವರೇನಾದರೂ ಈ ಬಗ್ಗೆ ಹೇಳಿದಲ್ಲಿ, ಇವರ ಕಿವಿಯ ಮೇಲೆ ಬೀಳೋದೇ ಇಲ್ಲ. ತಾಯಿಯ ಗುಣವೇ ಹಾಗೆ. ಮಕ್ಕಳ
ವಿಷದಲ್ಲಿ ಮಾತ್ರ ಅಂಧರಾಗುತ್ತಾರೆ, ಹಾಗೂ ಅಂಧಕಾರ ಅವರ ಕಣ್ಣುಗಳಿಗೆ ಪರದೆಯಾಗಿ ಬಿಡುತ್ತೆ. ಪರರ
ನಿಸ್ಟುರತೆಯನ್ನ ಕೂಡಾ ಆ ತಾಯಿ ಸಹಿಸುತ್ತಾಳೆ ಎಂದರೆ ನಂಬುವಿರಾ?. ಇವರೂ ಕೂಡ ಹಾಗೆಯೇ. ಬೇರೆ ವಿಚಾರದಲ್ಲಿ ಎಲ್ಲರನ್ನೂ ಒಂದೇ ಕೋನದಿಂದ
ನೋಡಿದರೂ, ತಮ್ಮ ಮಕ್ಕಳ ವಿಚಾರದಲ್ಲಿ ಮಾತ್ರ ಅವರ ದೃಸ್ಟಿ ಬೇರೆಯೇ ಇರುತ್ತದೆ.
ಇನ್ನೊಂದು ಕಟಕ ರಾಶಿಯವರ ವಿಶೇಷತೆ ಏನೆಂದರೆ, ಇವರುಗಳ ಕೈಯಲ್ಲಿ ಸಾಧ್ಯವಾದರೆ ಅಥವಾ ಅವರಿಗೆ ಸಹಾಯವನ್ನ ಮಾಡುವ ಯೋಗ್ಯತೆ ಇದ್ದಲ್ಲಿ ಖಂಡಿತವಾಗಿಯೂ, ಅವರುಗಳಿಗೆ ಸಹಾಯವನ್ನೂ ಮಾಡುತ್ತಾರೆ. ಇನ್ನು ಇವರುಗಳು ಇರುವ ಸ್ಥಳ ಯಾವುದೆಂದರೆ, ಕೊಳ, ಬಾವಿ, ಕೆರೆ, ಕಲ್ಯಾಣಿ ಇತ್ಯಾದಿಗಳು ಇವರ ಹತ್ತಿರ ಇರಲೇ ಬೇಕು. ಕೊನೆಯ ಪಕ್ಷ ಒಂದು
ಸಣ್ಣ ನೀರು ಸಂಗ್ರಹಿಸುವ ಸಂಪು ಆದರೂ ಪರವಾಗಿಲ್ಲ, ಇವರ ಮನೆಯಲ್ಲಿ ಅಥವಾ ಪಕ್ಕದಲ್ಲಿ ಇರಲೇ ಬೇಕು. ಹೀಗೆ ಸಣ್ಣ ಮಾತ್ರದ
ಜಲದ ರಾಶಿಯವರು, ಕಟಕ ರಾಶಿಯವರು. ಒಂದು ವೇಳೇ ಇವರೆಲ್ಲಿಯಾದರೂ ಮನೆಯನ್ನ ಕಟ್ಟುವುದಾದರೆ, ಕೊನೆಯಲ್ಲಿ ನೋಡಿ ನೀರು ಸ್ಟೋರೇಜಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನ
ಇವರುಗಳು ಕೊಡದೇ ಇರೋದೇ ಇಲ್ಲ.ಅದಕ್ಕಾಗಿಯೇ ಕೆಲವು ಜ್ಯೋತಿಷ್ಯಗಾರರು ನಿಮ್ಮ ಮನೆಯ ಹತ್ತಿರ
ಗುಮ್ಮಿ, ಕೆರೆ ಅಥವಾ ಬಾವಿ ಇದೆಯಲ್ಲ ಅಂತ ಬಂದಂತಹ ಕಟಕದ ವ್ಯಕ್ತಿಗಳಿಗೆ
ಪ್ರಶ್ನೆಯನ್ನ ಹಾಕಿ ಕನ್ಫ಼ರ್ಮೇಷನ್ ಮಾಡುವುದುಂಟು. ಅದೇ ನೋಡಿ ವೃಷಭದವರು ಹೊಲ, ಗದ್ದೆಯಂತಹ ವಿಶಾಲವಾದ ಸ್ಥಳದಲ್ಲಿ ಇರುವಂತಹ ಅಥವಾ ವಾಸವನ್ನ
ಮಾಡುವಂತಹ ಜನರು. ಇದಕ್ಕೆ ಕಾರಣ, ವೃಷಭವು ಭೂ ತತ್ವದ ರಾಶಿ. ಅದೇ ಮಿಥುನದವರು ಪಟ್ಟಣದಲ್ಲಿ
ಇರುವಂತಹ ಜನರು. ಕಾರಣ ಅವರುಗಳು ವಾಯು
ತತ್ವದವರು. ಒಂದಂತೂ ಸತ್ಯ. ಕಟಕ ರಾಶಿಯ ಹೆಂಗಸರೆಂತೂ ರಾಣಿಯಂತೆ ಮೆರೆದಾಡುವವರು. ಕಾರಣ
ಕಟಕವು ಚಂದ್ರನ (ರಾಣಿಯ) ರಾಶಿ. ಇನ್ನೊಂದು
ವಿಶೇಷವೇನೆಂದರೆ ಕಟಕ ರಾಶಿಯ ಚಂದ್ರನೆಲ್ಲಿಯಾದರೂ ಕೆಟ್ಟಿದ್ದಲ್ಲಿ, ರಾಹು ಅಥವಾ ಕೇತುವಿನ ಯುಕ್ತಿ ಅಥವಾ ದೃಸ್ಟಿಗೆ ಬಿದ್ದಲ್ಲಿ, ಇವರುಗಳು ವಾಮಾಚಾರಕ್ಕೂ ಇಳಿಯುತ್ತಾರೆ. ಸಿಕ್ಕ ಸಿಕ್ಕ ಕಡೆಯಲ್ಲಿ ಮಾಟ
ಮತ್ತು ಮಂತ್ರವಾದಿಗಳನ್ನ ಕಂಡು ಲಿಂಬೇ ಹಣ್ಣಿನ ದೀಪ ಹಾಗೂ ಲಿಂಬೇ ಹಣ್ಣು ಇರುವ ಪೂಜೆ
ಪುನಸ್ಕಾರಗಳಿಗೆ ಶರಣು ಹೋಗುತ್ತಾರೆ. ಬೇರವರಬಗ್ಗೆ ಹೊಟ್ಟೇ ಕಿಚ್ಚಿನ ಉರಿಯನ್ನ
ಉಗುಳುತ್ತಿರುತ್ತಾರೆ.
Moksha – triangle
To
understand moksha triangle, we will need to know the dharma triangle too. Let's
first look at the following tables to understand the basic nature of the signs
involved.
Dharma Triangle (Table 4)
Sign
|
Owner/Ruler
|
Place of Exaltation
|
Place of Debilitation
|
Aries
|
Mars
|
Sun
|
Saturn
|
Leo
|
Sun
|
||
Sagittarius
|
Jupiter
|
Rahu
|
Moksha Triangle (Table 5)
Sign
|
Owner/Ruler
|
Place
of Exaltation
|
Place
of Debilitation
|
Scorpio
|
Mars
|
||
Pisces
|
Jupiter
|
Venus
|
Mercury
|
Cancer
|
Moon
|
Mars
|
Moksha
is the ultimate State; therefore it also suggests a complete mastery of a
subject or an crowning attitude. The following examples will elucidate the
matter further -
Example -1
In the
chart of Nobel laureate Rabindranath Tagore – Jupiter and Moon are the two
planets present in the moksha triangle. ಬ್ರಹಸ್ಪತಿ ಮತ್ತು ಚಂದ್ರನು ಮೋಕ್ಷ ತ್ರಿಕೋಣ ಸ್ತಾನಗಳಾದ ೫ ಮತ್ತು ೧
ನೇ ಸ್ಥಾನಗಳಲ್ಲಿ ಉಪಸ್ಥಿತರು. Jupiter in Cancer (ruled by Moon)
and Moon in the Pisces (ruled by Jupiter). ಇದು ಒಂದು ಪರಿವರ್ತನ ಯೋಗವಾಗಿರುತ್ತೆ. ಕಾರಣ ಬ್ರಹಸ್ಪತಿಯು ಚಂದ್ರನ
ರಾಶಿಯಾದ ಕಟಕದಲ್ಲಿ ಇರುವನು ಮತ್ತು ಚಂದ್ರನು ಬ್ರಹಸ್ಪತಿಯ ಮನೆಯಲ್ಲಿ ಉಪಸ್ಥಿತನು.There
is an exchange of place between these two planets. From the Ascendant, Mars and
Ketu are present in the 4th house and other houses (8th and 12th) are
empty. ಲಗ್ನದಿಂದ ೪ ನೇ
ಮನೆಯಲ್ಲಿ ಮಂಗಲ್ ಮತ್ತು ಕೇತು ಉಪಸ್ಥಿತರಿದ್ದರೆ, ೮ ಮತ್ತು ೧೨ ನೇ ಮನೆಗಳು ಖಾಲಿ ಉಂಟಾಗಿದಿ. So,
Jupiter and Moon will provide excellent moksha yoga and Mars +Ketu combination
in Gemini (a sign ruled by Mercury which represents writing) will provide him
the path. ಬ್ರಹಸ್ಪತಿ ಮತ್ತು
ಚಂದ್ರರು ಒಳ್ಳೇ ಮೋಕ್ಷ ಯೋಗವನ್ನ ಕೊಟ್ಟಿದ್ದರೆ, ಮಂಗಲ್ ಮತ್ತು ಕೇತು ಮಿಥುನ ರಾಶಿ ಅಂದರೆ ಬರೆವಣಿಗೆಗೆ ಪ್ರಖ್ಯಾತನಾದ
ಬುಧನ ರಾಶಿಯಲ್ಲಿದ್ದು ರಬೀಂದ್ರನಾಥ ಟಾಗೋರವರಿಗೆ ಒಳ್ಳೇ ಸ್ಫೂರ್ತಿ ಮತ್ತು ಶಕ್ತಿಯನ್ನ
ಕೊಟ್ಟಿರುವವು. Gemini is a Kama - triangle sign, so these planets
will be his driving force. The ruler of Gemini – Mercury is situated in Aries
(dharma triangle) with exalted Sun and Venus. Both Sun and Venus are in a
nakshatra ruled by Venus – which made him a prolific song
writer and composer of music and dance drama. ಮಿಥುನ ರಾಶಿಯ ಅಧಿಪತಿಯಾದ ಬುಧ ಗ್ರಹವು ಸೂರ್ಯ ಮತ್ತು ಶುಕ್ರನೊಡನೆ
ಮೇಷದಲ್ಲಿದ್ದು ರಬೀಂದ್ರನಾಥ ಟಾಗೋರ್ ಅವರಿಗೆ ಸಂಗೀತದಲ್ಲಿಯೂ ಕೂಡ ಬರೆಯಲು ಪ್ರೋತ್ಸಾಹವನ್ನ
ಕೊಟ್ಟಿರುವವು. ಇದಕ್ಕೆ ಕಾರಣ ಅದು ಧರ್ಮ ತ್ರಿಕೋಣ ಹಾಗೂ ಸೂರ್ಯನು ಉಛ್ಚನಾಗಿ ಮೇಷದಲ್ಲಿ
ಉಪಸ್ಥಿತನು.We have discussed earlier that Mars represents
vocal skill and Jupiter - the voice, this combination also made him a singer
but Ketu made him give up singing at a later part of his life. ಮಂಗಲ್ ಗಾಯನಕ್ಕೆ ಒತ್ತು ಕೊಟ್ಟಲ್ಲಿ ಬ್ರಹಸ್ಪತಿಯು ಒಳ್ಲೇ
ಧ್ವನಿಯನ್ನ ಕೊಟ್ಟಿರುವನು. ಅದೇ ಕೇತುಗಹವು ಕೊನೆಯಲ್ಲಿ ಸಂಗೀತವನ್ನ ಬಿಡಲು ಪ್ರೋತ್ಸಾಹವನ್ನ
ಕೊಡಿಸಿದನು. ಕಾರಣ ಕೇತು ಮೋಕ್ಷ ಕಾರಕ ಗ್ರಹ. ಸಂಗೀತದಿಂದ ಮೋಕ್ಷವನ್ನ ಕೊಡಿಸಿದ.Moon
is situated in the Pisces – the 3rd and final sign of moksha
triangle. Moon represents fine arts/picture/painting/drawing. ಅದೇ ಚಂದ್ರನು ಮೂರನೇ ಹಾಗೂ ಕೊನೆಯ ಮೋಕ್ಷ ತ್ರಿಕೋಣವಾದ ಮೀನದಲ್ಲಿ
ಉಪಸ್ಥಿತನಿದ್ದು, ಫ಼ೈನ್ ಆರ್ಟ್ಸ್ ಬಗ್ಗೆ ಅವರಿಗೆ ಸ್ಫೂರ್ತಿಯನ್ನ ಕೊಟ್ಟನು. Rabindranath
started painting at the age of almost 70.
All
these combinations helped him to get the ultimate success in the field of art
and culture.
Example-2
ಶ್ರೀ ರಾಮಕೃಷ್ಣ ಪರಮಹಂಸರ ಜಾತಕದಲ್ಲಿ, ಶುಕ್ರ ಹಾಗೂ ಕೇತು ಗ್ರಹಗಳು ಮೋಕ್ಷ ಸ್ಥಾನದಲ್ಲಿ ಉಛ್ಛವಾಗಿ
ಉಪಸ್ಥಿತವಾಗಿದರುವುದು. ಅದೇ ಲಗ್ನದಿಂದ, ಉಛ್ಚ ರಾಹು ೪ ನೇ ಮನೆಯಲ್ಲಿ, ಮತ್ತು ಕುಜ ಗ್ರಹ ೧೨ನೇ ಮನೆಯಲ್ಲಿ ಉಛ್ಛವಾಗಿ ಉಪಸ್ಥಿತವಾಗಿರುವುದು.
ಈ ಎಲ್ಲಾ ಗ್ರಹಗಳು ಉಛ್ಛವಾಗಿದ್ದು ಮೋಕ್ಷ ಯೋಗಕ್ಕೆ ಸಾಕಸ್ಟು ಶಕ್ತಿಯನ್ನ ತುಂಬಿಸಿದೆ.
ಆದ್ದರಿಂದಲೇ ಇವರೊಬ್ಬರು ಉತ್ತಮ ಸೈಂಟ್ಸಗಳಲ್ಲಿ ಒಬ್ಬರೆಂದರೆ ತಪ್ಪಾಗದು.
In
Ramakrishna Parmahansa's chart – exalted Venus and exalted Ketu
are situated in the moksha triangle. From the Ascendant, exalted Rahu is in the
4th and exalted Mars is in the 12th. All these planets are in
exalted mode, bestowing the grandest power possible for a moksha yoga. It is said
that he was amongst the greatest sages India has ever produced.
ಸಿಂಹ ರಾಶಿ :- ಕಾಲಪುರುಷನ ೫ ನೇ ರಾಶಿ ಇದು. ಇದು ಹೊಟ್ಟೆಯ ಭಾಗವನ್ನ
ನಿರೂಪಿಸುತ್ತೆ. ಇದು ೨ನೇ ಅಗ್ನಿ ತತ್ವದ,
ಸ್ಥಿರ ರಾಶಿ. ಇದರ
ಅಧಿಪತಿ ಸೂರ್ಯ. ಇದು ಬೆಸ ರಾಶಿ. ಆದ್ದರಿಂದ ಇದು ಪುರುಷನ ರಾಶಿ. ಇದು ಧನಾತ್ಮಕ (+ವ್) ರಾಶಿ.
ಕಟಕ ರಾಣಿಯ ರಾಶಿ ಆದಲ್ಲಿ, ಈ ರಾಶಿ ರಾಜನ ರಾಶಿ. ಆದರೆ ಸೋಂಬೇರಿಗಳಲ್ಲಿ ಮಹಾ ಸೋಮಾರಿ
ರಾಶಿಯವರೆಂದರೆ ಈ ರಾಶಿಯವರೇ. ಕಾರಣ ಈ ರಾಶಿಯನ್ನ ಸಿಂಹವು ಪ್ರತಿನಿಧಿಸುತ್ತೆ. ಸಿಂಹ ಯಾವಾಗಲೂ
ಕಾಡಿನಲ್ಲಿರುವ ಪ್ರಾಣಿ. ಸಿಂಹ ತನಗೆ ಬೇಕು ಅಂದಾವಾಗಲೇ ಬೇಟೆಯನ್ನ ಮಾಡುತ್ತೆ. ಮತ್ತುಳಿದ ಸಮಯದಲ್ಲಿ
ನಿದ್ದೆ ಮಾಡುತ್ತಿರುತ್ತೆ. ಸಿಂಹ ಬಹಳ ಸೋಂಬೇರಿ ಪ್ರಾಣಿ. ಈ ರಾಶಿಯವರೂ ಹಾಗೆಯೇ. ಯಾವಾಗಲೂ
ನೋಡಿದಾವಾಗ ನಿದ್ದೆ ಮಾಡುತ್ತಿರುತ್ತಾರೆ. ಇವರು ಹಳ್ಳಿಯಲ್ಲಿ ಹುಟ್ಟಿದವರಾದರೂ ಸರಿ, ಪಟ್ಟಣಕ್ಕೆ ಬಂದಲ್ಲಿ ಇವರುಗಳು ರಾಜನಂತೆ ಇರುತ್ತಾರೆ. ಇದು ಅಧಿಕಾರದ
ರಾಶಿ. ಅಗ್ನಿ ತತ್ವದವರೆಲ್ಲಾ ಅಧಿಕಾರ ದಾಹಿಗಳು.
ಆದರೆ ಇವರು ಮೇಷದವರಂತೆ ಅಲ್ಲ. ಇಲ್ಲಿ ಒಂದು ವೇಳೆ ಇವರಿಗೆ ಕೋಪ ಬಂತೆಂದರೆ, ಇವರು ಶಿಕ್ಷೆಯನ್ನ ಕೊಡುತ್ತಾರೆ. ಇದು ಶಿಕ್ಷೆ ಕೊಡುವ ರಾಶಿ. ಕಾರಣ
ಇದು ೨ನೇ ಅಗ್ನಿ ತತ್ವದ ರಾಶಿ. ಇವರದ್ದು ಯಾವಾಗಲೂ ಶ್ರೀಮಂತ ಜೀವನ. ಅಧಿಕಾರ, ಅಂತಸ್ತು, ಸ್ಟೇಟಸ್ ಈ ರಾಶಿಯವರಿಗೆ ಸದಾ ಇರುತ್ತೆ.ಇವರಲ್ಲಿ ಲೀಡರ್ಶಿಪ್
ಕ್ವೇಲಿಟಿ ಬಹಳವಾಗಿ ಇರುತ್ತೆ.ಇವರ ಹಿಂದೆ, ಮುಂದೆ ಜನರು ಸದಾ ಇರುತ್ತಾರೆ. ಕಾರಣ ಇದು ರಾಜ ರಾಶಿ. ಇವರುಗಳು
ಕಟಕದವರಿಗಿಂತ ಸ್ವಲ್ಪ ಮುಂದುವರಿದಂತಹ ರಾಶಿ. ಈ ಸಿಂಹ ೪ ಕಾಲಿನದ್ದು. ಬಹಳ ಕ್ರೂರಿ. ಅಂತೆಯೇ
ಇವರುಗಳು ಕೂಡ ಬಹಳ ಕ್ರೂರಿ ಸ್ವಭಾವದವರು. ಇವರುಗಳಲ್ಲಿ ಕರುಣೆ ಸ್ವಲ್ಪವೂ ಇಲ್ಲ. ಇವರ ಮಕ್ಕಳು
ಮಾತ್ರ ಸರಿ ಇದ್ದರೆ ಸರಿ. ಬೇರವರ ಮಕ್ಕಳು ಹಾಳಾಗಿ ಹೋಗಲಿ ಎಂಬ ಬುದ್ಧಿಯೂ ಇವರಲ್ಲಿದೆ. ಇವರುಗಳು
ಮನೆಯಲ್ಲಿರುವುದು ಕಡಿಮೆ. ಅದೇಕೆ ನೀವು ಸಿಂಹವನ್ನೇ ಗಮನಿಸಿ ನೋಡಿ. ಅದು ಒಂದು ವೇಳೆ ಇದ್ದರೂ
ಒಂಟಿಯಾಗಿಯೇ ಇರುತ್ತದೆ. ಹಾಗೆಯೇ ಈ ರಾಶಿಯವರೂ ಕೂಡಾ ಹಾಗೆಯೇ. ಯಾವುದೇ ಉಪಾಯವಿದ್ದಲ್ಲಿ
(ಪ್ಲ್ಯಾನ್) ಅಥವಾ ಯಾವುದೇ ಗುಟ್ಟನ್ನ ಗುಟ್ಟಾಗಿ ಇಡುವಲ್ಲಿ ಇವರುಗಳು ಬಹಳ ನಿಸ್ಸೀಮರು.
ಆದ್ದರಿಂದಲೇ ಇವರುಗಳು ಜನರನ್ನ ಹಾಗೂ ಸಿಚುಯೇಷನ್ನ ಕಂಟ್ರೋಲ್ ತರಲು ಸಾಧ್ಯ. ಆದ್ದರಿಂದಲೇ
ಇವರುಗಳು ರಾಜ್ಯಭಾರವನ್ನ ಅಥವಾ ಅಧಿಕಾರವನ್ನ ಚಲಾಯಿಸಲು ಸಾಧ್ಯ. ಈ ಕಟಕ ಮತ್ತು ಸಿಂಹದವರು
ದರಿದ್ರರಾಗಿ ಹುಟ್ಟಿದರೂ, ಶ್ರೀಮಂತರಾಗಿ ಬಾಳುತ್ತಾರೆ. ಸಿಂಹ ರಾಶಿಯವರ ಒಂದು ವಿಶೇಷವೇನೆಂದರೆ, ಇವರುಗಳು ಹೇಳಿದ್ದನ್ನ ಬೇರವರು ಕೇಳಲೇ ಬೇಕು. ಅದೇ ದರ್ಪ ಮತ್ತು
ಅಧಿಕಾರವೆಂದು ಹೇಳುವುದು. ಇದು ಧರ್ಮದ ರಾಶಿಯೂ ಕೂಡ. ಇವರಲ್ಲಿ ಯಾವುದೇ ಯಜಮಾನಿಕೆಯನ್ನ
ಒಪ್ಪಿಸಿದರೆ, ಅದನ್ನ ಉತ್ತಮ ರೀತಿಯಲ್ಲಿ ನಿರ್ವಹಿಸುವರು. ಇವರಲ್ಲಿಯೂ ಕೂಡಾ ಕುಂಭ
ರಾಶಿಯವರಂತೆ ಹೇರಾ ಫ಼ೇರಿ ಸ್ವಲ್ಪವೂ ಇಲ್ಲ.
ಕನ್ಯಾ ರಾಶಿ :- ಇದು ಕಾಲಪುರುಷನ ೬ ನೇ ರಾಶಿ. ಅಂದರೆ ರೋಗದ ರಾಶಿ. ಕೋರ್ಟು ಕಚೇರಿಯ
ರಾಶಿ. ಪೋಲೀಸ್ ಸ್ಟೇಷನ್ನಿನ ರಾಶಿ. ಇದು ಕಿಬ್ಭೊಟ್ಟೆ ಮತ್ತು ಹೊಟ್ಟೆಯ ಕೆಳಭಾಗವನ್ನ
ತೋರಿಸುತ್ತೆ. ಇವರ ಸೊಂಟ ಬಹಳ ಚೆನ್ನಾಗಿರುತ್ತೆ.ಇದು ಸಮ ಅಂದರೆ ಬೆಸ ರಾಶಿ. ಇದು ದ್ವಿಸ್ವಭಾವದ
ರಾಶಿ. ಅಂದರೆ ಸ್ತ್ರೀ ರಾಶಿ. ಇದು ಪ್ರಥ್ವಿ ತತ್ವದ ೨ನೇ ರಾಶಿ ಭಚಕ್ರದಲ್ಲಿ. ಈ ರಾಶಿಯ ಅಧಿಪತಿ
ಕೂಡ ಬುಧನೇ. ಆದರೆ ಇದು ಬೆಸ ರಾಶಿ ಆದ್ದರಿಂದ ಇದು ಸ್ತ್ರೀ ರಾಶಿ. ಅಧಿಪತಿ ಬುಧನಾದ್ದರಿಂದ
ಇವರುಗಳು ಬಿಸಿನೆಸ್ಸಿಗೆ ಹೇಳಿ ಮಾಡಿಸಿದವರು. ಇವರುಗಳು ಹತ್ತು ಜನರಿದ್ದಲ್ಲಿ ಬಿಸಿನೆಸ್
ಮಾಡುವರು. ಈ ರಾಶಿಯ ಚಿಹ್ನೆ ಕನ್ಯಾ, ಅಂದರೆ ಸ್ತ್ರೀ. ಅಂದರೆ ಅಲಂಕಾರ ಪ್ರಿಯಳಾದ ಕನ್ಯ. ಬಿಸಿನೆಸ್ಸಿಗಾಗಿ
ಮಾಡಿಕೊಂಡಂತಹ ಅಲಂಕಾರದ ಕನ್ಯ. ಇವರುಗಳಿಗೆ ಭೂಮಿ, ಒಡವೆಗಳ ಆಸೆ ಜಾಸ್ತಿ. ಆದ್ದರಿಂದ ಒಂದು ವೇಳೆ ಕನ್ಯಾ ರಾಶಿಯ ಗಂಡಸರೇ
ಇದ್ದಲ್ಲಿ, ಅವರುಗಳು ಹೆಣ್ಣಿನಂತೆ ೧೦ ಬೆರಳುಗಳಿಗೆ ಉಂಗುರ, ಕೈಗೆ ಬ್ರೇಸ್ಲೆಟ್ಸ್, ಕೊರಳಿಗೆ ಸರಗಳನ್ನ ಹಾಕುವುದರಲ್ಲಿ ನಿಸ್ಸೀಮರು. ಈ ರಾಶಿಯವರ ಮೈಕಟ್ಟು
(ಪಿಸಿಕ್ಸ್) ಬಹಳ ಚಂದ. ಇವರುಗಳು ಸೀರೆಯನ್ನ ಉಡುವಲ್ಲಿ, ಆಭರಣಗಳನ್ನ ತೊಡುವಲ್ಲಿ , ತಿರುಗುವಲ್ಲಿ ಇವರ ದೇಹದ ಫ಼ಿಟ್ನೆಸ್ ಮೈಂಟೈನ್ ಮಾಡಿಕೊಳ್ಳುತ್ತಾರೆ.
ಈ ರಾಶಿಯವರು ಬಹಳ ಬುದ್ಧಿವಂತರು. ಇಲ್ಲಿ ಅಧಿಪತಿ ಬುಧನೇ ಆದರೂ ಆತ ಮಿಥುನದವರಂತೆ ಬಾಲಿಷನಲ್ಲ.
ಇಲ್ಲಿರುವ ಬುಧನು ಬಹಳ ಪ್ರಭುದ್ದನು (ಮೇಚೂರ್ಡ್). ಒಂದು ಹೆಣ್ಣು , ಅಲಂಕಾರಯುಕ್ತರಾಗಿ, ಸ್ತ್ರೀವೇಷಧಾರಿಯಾಗಿ ಮೋಸವನ್ನ ಮಾಡಿದ ಹಾಗೆಯೇ ಈ ರಾಶಿಯವರು ಮೋಸವನ್ನ
ಮಾಡುತ್ತಾರೆ. ಇವರು ಬಹಳ ಜಿಪುಣಾಗ್ರೇಸರುಗಳು. ಕಾಫಿಯನ್ನ ಗುಂಪಿನಲ್ಲಿ ಕುಡಿದಲ್ಲಿ, ಇವರುಗಳು ಕಾಸನ್ನ ಬಿಚ್ಚೋದಿಲ್ಲ. ಬಿಸಿನೆಸ್ಸಿಗೆಂದೇ ಹೇಳಿ ಮಾಡಿಸಿದ
ಭಗವಂತನ ಒಂದು ಮೌಲ್ಡ್ ಅಂದರೂ ತಪ್ಪಲ್ಲ. ಇವರುಗಳು ಇರೋ ಜಾಗ, ಬಹಳ ಕ್ರೌಡೆಡ್ ಸ್ಥಳ. ನಮ್ಮ ಬೆಂಗಳೂರಿನಲ್ಲಿ ಚಿಕಪೇಟೆ, ಬಳೇಪೇಟೆಯಂತಹ ನಿಬಿಡವಾದ ಸ್ಥಳ. ಅದೇ ದೆಹಲಿಯಾದರೆ ಚಂದನೀ ಚೌಕ್, ಕನ್ನಾಟ್ ಸರ್ಕಸ್ ಇರುವಂತಹ ಜಾಗದಲ್ಲಿ ಹೆಚ್ಚು ಸಿಗುತ್ತಾರೆ.
ಇವರದ್ದು ಒಂದು ವಿಶೇಷವೇನೆಂದರೆ, ನಿಮ್ಮ ಗಮನವನ್ನ ತಮ್ಮ ಕಡೆಗೆ ಎಳೆಯುವುದು. ಇದು ಒಂದು ವ್ಯಾಪಾರದ
ಸೂತ್ರವೇ ಸರಿ. ಕನ್ಯಾದಲ್ಲಿ ಇರುವುದು ಋಣಾತ್ಮಕವಾದ (-ವ್) ಬುಧ. ಈ ರಾಶಿಯವರು ೨ ಕಾಲಿನ
ವ್ಯಕ್ತಿಗಳು. ಮೊದಲೆರಡು ರಾಶಿಗಳಲ್ಲಿ ಪ್ರಾಣಿಗಳಾದರೆ, ಮಿಥುನದಲ್ಲಿ ಮನುಷ್ಯ ಬಂದ. ಅದೇ ಕಟಕದಲ್ಲಿ ೧೨ ಕಾಲಿನ ಏಡಿ ಬಂದರೆ, ಸಿಂಹದಲ್ಲಿ ೪ ಕಾಲಿನ ಪ್ರಾಣಿ, ಸಿಂಹ ಬಂದಿತು. ಅದೇ ಕನ್ಯಾದಲ್ಲಿ ಮತ್ತೆ ಮನುಷ್ಯನೇ ಬಂದ. ಇನ್ನು
ತುಲಾದಲ್ಲಿ ಏನಿದೆಯೆಂದು ನಾವೀಗ ನೋಡೋಣ. ಇದು ಅರ್ಥದ ರಾಶಿ. ಇವರುಗಳು ಒಟ್ಟಾರೆ ವ್ಯಾಪಾರ ಮಾಡಿ
ಲಾಭವನ್ನ ಗಳಿಸುವರು. ಕನ್ಯಾದವರು ಬಹಳ ಕೀಳು ದರ್ಜೆಯಿಂದ ಮೇಲಿನವರೆಗೆ ವ್ಯಾಪಾರವನ್ನ ಮಾಡಿ
ಮೇಲಕ್ಕೆ ಬರುತ್ತಾರೆ. ಇವರುಗಳ ರಕ್ತದಲ್ಲಿಯೇ ಬಿಸಿನೆಸ್ಸ್ ಹರಿದಾಡುತ್ತಿರುತ್ತದೆ. ಈ
ರಾಶಿಯಲ್ಲಿ ಬುಧ ಬೇರೆ ಉಛ್ಛ. ಇಲ್ಲಿ ಶುಕ್ರನು ನೀಚನಾಗುತ್ತಾನೆ. ಆವಾಗ ಹೆಣ್ಣುಮಕ್ಕಳು ಬಹಳ
ತೊಂದರೆಗಳನ್ನ ಅನುಭವಿಸುತ್ತಾರೆ. ಆವಾಗಲೇ ಈ ರಾಶಿಯವರು ಡೈಯಮಂಡ್ ರಿಂಗ್ ಧರಿಸಬೇಕು, ಇಲ್ಲಾ ಶುಕ್ರನಿಗೆ ಶಾಂತಿಯನ್ನ ಮಾಡಬೇಕು.
ತುಲಾ ರಾಶಿ:- ಈ ರಾಶಿ ಕಾಲಪುರುಷನ ೭ನೇ ಭಾವ. ಇದರ ಅಧಿಪತಿ ಶುಕ್ರ. ಇದು ಬೆಸ ರಾಶಿ
ಧನಾತ್ಮಕ (+ವ್) ರಾಶಿ. ಇದರ ಚಿಹ್ನೆ ತಕ್ಕಡೀ. ೨ನೇ ವಾಯು ತತ್ವದ , ಕಾಮದ ರಾಶಿ. ಇದು ಚರ ರಾಶಿ ಕೂಡ. ವ್ಯಾಪಾರ ಮನೋಭಾವ ಇರುವ ಶ್ರೀಮಂತ
ರಾಶಿಯೇ ತುಲಾ ರಾಶಿ. ಇವರುಗಳು ನ್ಯಾಯ, ಧರ್ಮದ ರೀತಿ ವ್ಯಾಪಾರವನ್ನ ಮಾಡಿ ಲಾಭಾವನ್ನ ಗಳಿಸುವ್ವರು ತುಲಾ
ರಾಶಿಯವರು. ವೃಷಭದ ಶುಕ್ರ ಋಣಾತ್ಮಕನು (-ವ್). ಅದೇ ತುಲಾ ಶುಕ್ರನು ಧನಾತ್ಮಕನು. ಆದರೆ ತುಲಾ
ರಾಶಿಯವರು ಡೀಸೆಂಟ್ ಆಗಿ, ನ್ಯಾಯ ರೀತಿಯಲ್ಲಿ, ಧರ್ಮದಿಂದ ಬಿಸಿನೆಸ್ ಮಾಡಿ ಮೇಲಕ್ಕೆ ಬರುತ್ತಾರೆ. ಇವರುಗಳು
ಹುಟ್ಟುವಾಗ ಕೆಳದರ್ಜೆಯ ಚಿಟಿಯಲ್ಲಿದ್ದರೂ, ಮುಂದೆ ಮುಂದೆ ಹೋದಂತೆ ಇವರುಗಳು ಒಳ್ಳೇ ಫ಼ಾರ್ವರ್ಡ್ ಸಿಟಿಯಲ್ಲಿ
ಸೆಟ್ಲ್ ಆಗುವಂತಹ ಕೆಟೆಗರಿಗೆ ಸೇರಿದವರು. ಹಳ್ಳಿಯಲ್ಲಿ ಹುಟ್ಟಿದರೂ ಒಳ್ಳೇ ಮೋಡರ್ನ್ ಸಿಟಿಯಲ್ಲಿ
ಜೀವನವನ್ನ ಮಾಡುವಂತಹ ಏಕೈಕ ರಾಶಿಯೇ ತುಲಾ ರಾಶಿ.
ತುಲಾದವರು ಬಿಸಿನೆಸ್ ಮಾಡುವಲ್ಲಿ ಸ್ಟೇಂಡರ್ಡ್ ಮೈಂಟೈನ್ ಮಾಡುತ್ತಾರೆ. ಇವರುಗಳು ಹಯಸ್ಟ್
ಡಿಗ್ನಿಫ಼ಾಯಿಡ್ ಹುದ್ದೆಯನ್ನ ಅಲಂಕಾರವನ್ನ ಮಾಡುತ್ತಾರೆ. ಇವರೊಬ್ಬರು ಗ್ಲೇಮರ್ ಜೀವಿಗಳು.
ಇವರುಗಳು ಆಧುನಿಕ ಶೈಲಿಗಳಿಗೆ ಹೆಚ್ಚು ವಾಲುತ್ತಾರೆ. ಕಾಮದಲ್ಲಿ ಕೂಡಾ ಇವರುಗಳು ಬಹಳ ಡೀಸೆಂಟ್
ಇರುತ್ತಾರೆ. ಇವರುಗಳು ರೋಯಲ್ ವ್ಯಕ್ತಿಗಳು. ಲಉರ್ಯ್ ಬಟ್ಟೆಯನ್ನ ಹಾಕುತ್ತಾರೆ. ಬೇರೊಬ್ಬರ
ಮನೆಗೆ ಊಟಕ್ಕೆ ಬರಲೊಲ್ಲ. ಅದೇ ಫ಼ಿವೆ ಸ್ಟಾರ್ಸ್ ಹೋಟೆಲ್ಲಿಗೆ ಹೋಗಿ ಊಟವನ್ನ ಮಾಡುವ ಜನರಿವರು.
ಇವರುಗಳು ಧರಿಸುವುದನ್ನ ಇನ್ನೊಬ್ಬರು ಕಾಪಿ ಮಾಡಲು ಅಸಾಧ್ಯ. ಇವರ ರೂಮಿಗೆ ಹೋದಲ್ಲಿ ಪರ್ಫ಼ೂಮ್ಸ್
ಪರಿಮಳ ಬಂದೇ ಬರುತ್ತೆ. ರಾಜಕೀಯದಲ್ಲಿ ಬಹಳ ಟಾಪ್ ಹುದ್ದೆಯನ್ನ ಅಲಂಕಾರ ಮಾಡುವ್ವರೇ ಈ ತುಲಾ
ರಾಶಿಯವರು. ಇವರುಗಳು ಸಾಯುವರೆಗೆ ವಿದ್ಯಯನ್ನ ಕಲೀತಿರುತ್ತಾರೆ. ವಾಯು ತತ್ವದಲ್ಲಿ ಪ್ರಥಮವಾಗಿ
ಬಂದವನೇ ಬುಧ ಗ್ರಹ. ಅದೇ ವಾಯು ತತ್ವದಲ್ಲಿ ಎರಡನೆಯವನಾಗಿ ಬಂದವನೇ ಶುಕ್ರನು. ಮಿಥುನ ರಾಶಿಯವರು
ವಿಮಾನವನ್ನ ಅನ್ವೇಷಣೆಯನ್ನ ಮಾಡಿದ. ಆದರೆ ತುಲಾದವರು ಅದೇ ಮಿಥುನದವರು ಮಾಡಿದಂತಹ ವಿಮಾನದಲ್ಲಿ
ಅಡುಗೆ ಮನೆ ಇರಬೇಕು, ಏರಕಂಡಿಷನ್ ಸವಲತ್ತುಗಳು ಇರಬೇಕು, ಟಾಯಿಲೆಟ್ , ಬೆಡ್ ರೂಂ ಕೂಡ ಅಲ್ಲಿಯೇ ಇರಬೇಕೆನ್ನುವವರು ಈ ತುಲಾ ರಾಶಿಯವರು.
ಲಕ್ಸುರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನ ಕೊಡುವವರೇ ಈ ತುಲಾ ರಾಶಿಯವರು. ಇವರುಗಳು ದೊಡ್ಡ
ಕಾರುಗಳನ್ನೇ ಉಪಯೋಗಿಸುತ್ತಾರೆ.
ವೃಸ್ಚಿಕ ರಾಶಿ :- ಕಾಲಪುರುಷನ ೮ ನೇ ಭಾವ. ಅಧಿಪತಿ ಕುಜ. ಮೇಷ ರಾಶಿಯಲ್ಲಿ ಕುಜನು ಧನಾತ್ಮಕನಾಗಿದ್ದಲ್ಲಿ, ಇಲ್ಲಿ ಕುಜನು
ಋಣಾತ್ಮಕನು. ಇದು ಸ್ಥಿರ ರಾಶಿ. ಇದು ಜಲ ತತ್ವದ ರಾಶಿ. ಆದರೆ ಈ ಜಲ ಬಹಳ ಆಳವಾದದ್ದು.
ಆಳವಾದ ಜಲದಲ್ಲಿ ಕೊಚ್ಚೆ ನೀರೂ ಸೇರಿರುತ್ತೆ. ಆಳವಾದ ನೀರಲ್ಲಿ ಡ್ರೈನೇಜ್ ನೀರೂ ಸೇರಿರುತ್ತೆ. ಈ
ಜಲದಲ್ಲಿ ಧೂಳು ಬಹಳ. ಅಂದರೆ ಕಲುಷಿತ ನೀರು ಇರುವಂತಹ ಸ್ಥಳ. ಬಣ್ಣ ಕೆಂಪು. ಅಂದರೆ ಇವರುಗಳು ಬಹಳ ಆಳವಾಗಿ ಯೋಚನೆ ಮಾಡುವಂತಹ ಜನರು.
ಈ ರಾಶಿಯನ್ನ ಗುರ್ತಿಸುವುದೇ ಚೇಳು. ಚೇಳಿಗೆ ಕಚ್ಚಲಿಕ್ಕೆ ಎರಡು ಬಾಯಿ ಇರುತ್ತೆ. ಹಾಗೆಯೇ ಇವರೂ
ಕೂಡ ಹಾಗೆಯೇ. ಕಚ್ಚಲು ಕಾಯುತ್ತಿರುತ್ತಾರೆ. ಒಂದು ವೇಳೆ ಕಚ್ಚಲು ಬಂದಲ್ಲಿ
ಎದಿರುಗಡೆಯಲ್ಲಿದ್ದವರನ್ನ ಮುಗಿಸಿಯೇ ಬಿಡುತ್ತಾರೆ. ಇದು ಋಣಾತ್ಮಕವಾದ ರಾಶಿ. ಮೂಲವನ್ನ ಶೋಧಿಸುವಂತಹ
ರಾಶಿ. ಒಂದು ಸಣ್ಣ ವಿಚಾರಕ್ಕೆ ರೆಕ್ಕೆ ಪುಕ್ಕ ಕಟ್ಟುವುದೆಂದರೆ ಈ ವೃಸ್ಚಿಕ ರಾಶಿಯವರು. ಮೊಲ ಓಡಿ ಹೋಯಿತೆಂದರೆ, ಊರೇ ಓಡಿ ಹೋಯಿತೆನ್ನುವಂತಹ ಜನರು ಇವರು. ಪತ್ತೇ ದಾರಿ ಕಾದಂಬರಿ ಬರೆಯಲು ಇವುರುಗಳು ಬಹಳ
ಫ಼ೇಮಸ್. ಇವರದ್ದು ಸಂಶೋಧನಾತ್ಮಕ ಮನೋಭಾವನೆ. ಆದ್ದರಿಂದ ಸೂಕ್ಷ್ಮವಾಗಿ ಓಪರೇಷನ್ ಮಾಡುವಂತಹ
ಕೆಲಸವಾಗಲೀ, ಗಡಿಯಾರ ಕೆಲಸವನ್ನೇ ಮಾಡುವಲ್ಲಿ ಇವರುಗಳು ಹೆಚ್ಚಿಗೆ ಇರುತ್ತಾರೆ.
ಇದೊಂದು ಸ್ತ್ರೀ ರಾಶಿ. ಇವರುಗಳು ಮುಂದಿನ ಪೀಳಿಗೆಗೆ ಗುಪ್ತ ಧನವನ್ನ ಸೇರಿಸಿ ಇಡುತ್ತಾರೆ.
ಸಂಗ್ರಹ ಮಾಡುವಲ್ಲಿ ಬಹಳ ಖಧೀಮರು. ಇವರುಗಳು ಕೆಟ್ಟು ಹೋದದ್ದನ್ನ ರಿಪೇರಿ ಮಾಡಿ ಬಳಸುವಂತಹ
ಕೆಟೆಗರಿಗೆ ಸೇರಿದಂತಹವರು. ಇವರಲ್ಲಿ ಹಿಂಸಾತ್ಮಕ ಮನೋಭಾವನೆ ಜಾಸ್ತಿ. ಕೈಯಲ್ಲಿ ಆಗದೇ ಇದ್ದರೂ
ಬಾಯಲ್ಲಿ ಮಾಡಿ ತೋರಿಸುವಂತಹ ಜನರು. ಚೇಳಿನಂತೆ ಕುಟುಕಿ ಕುಟುಕಿ ಅವರನ್ನ ದಾರಿಗೆ ತರುವಲ್ಲಿ
ಇವರುಗಳು ಪ್ರಸಿದ್ಧರು. ಇದು ಮೋಕ್ಷ ತತ್ವದ ರಾಶಿ.
ಆದ್ದರಿಂದ ಆಳವನ್ನ ಹುಡುಕಿಕೊಂಡು ಹೋಗುತ್ತಾರೆ. ಇದು ಕೊನೆಯ ಜಲತತ್ವದ ರಾಶಿಯಾದ ಕಾರಣ
ಮಗನ ಸ್ವಾತಂತ್ರ್ಯವನ್ನು ಕೂಡ ಮೊಟಕುಗೊಳಿಸುವ ದುಸ್ಟ ಸ್ವಭಾವ ಇವರಲ್ಲಿ ಜಾಸ್ತಿ ಇರುತ್ತೆ. ಕಾರಣ
ಇದು ಕೊಚ್ಚೆ ನೀರು. ಪ್ರಪಂಚದಲ್ಲಿರುವ ಕೆಟ್ಟ ಸ್ವಭಾವ ಇವರಲ್ಲಿರುವಸ್ಟು ಯಾರಲ್ಲಿಯೂ ಇಲ್ಲ!
ಭಯಂಕರವಾದ ಅತೀ ಹೆಚ್ಚು ಕುಡಿತ, ಅತೀ ಹೆಚ್ಚು ಋಣಾತ್ಮಕ ಚಿಂತನೆ ಇವರಲ್ಲಿ ಜಾಸ್ತಿ. ಇವರೊಬ್ಬರು ಬಹಳ
ಸೇಡಿಸ್ಟಿಕ್ ಅಂದರೆ ಏನೂ ತಪ್ಪಾಗೋಲ್ಲ. ಇವರುಗಳು ಇರೋದೇ ಹೀಗೆ. ಇನ್ನೊಬ್ಬರ ಏಳುವಿಕೆಯನ್ನ ಒಂದು
ಚೂರೂ ಸಹಿಸದ ಜನಾಂಗ ಇವರದ್ದು. ಕುಟುಂಬದವರ ರಕ್ಷಣೆ, ಮುಂದಿನ ಜನಾಂಗಕ್ಕಾಗಿ ನಿಧಿಯನ್ನ ಸಂಗ್ರಹಿಸುವಲ್ಲಿ ಇವರದ್ದು ಮೇಲು
ಕೈ. ಬರೇ ನಾಲ್ಕು ಸೀರೆಯಲ್ಲಿಯೇ ಕಳೆಯುವಲ್ಲಿ ಇವರುಗಳು ಬಹಳ ನಿಸ್ಸೀಮರು. ಒಂದು ಸೀರೆಯನ್ನ
ತೊಳೆದು ಮರು ದಿನ ಅದೇ ಸೀರೆಯನ್ನ ಹಾಕುವಲ್ಲಿಯೂ ಇವರದ್ದೇ ಮೇಲುಗೈ. ಇವರಲ್ಲಿ ಡ್ರೆಸ್ಸಿಂಗ್
ಸೆನ್ಸ್ ಅಸ್ಟೊಂದು ಇಲ್ಲ. ಚೊಕ್ಕ ಕೂಡ ಇವರಲ್ಲಿ ಇಲ್ಲ. ವೃಶ್ಚಿಕ ರಾಶಿಯು ಒಂದು ಕೀಟ ರಾಶಿ.
ಇದು ದೇಹದ ಗುಪ್ತ ಭಾಗವನ್ನ ನಿರೂಪಿಸುತ್ತೆ.
ಧನುಸ್ಸು ರಾಶಿ :- ಇದು ಕಾಲಪುರುಷನ ೯ನೇ ಬೆಸ ರಾಶಿ. ಇದು ಧರ್ಮ ರಾಶಿ. ಇದು ಅಗ್ನಿ
ತತ್ವದಲ್ಲಿ ಕೊನೆಯ ದ್ವಿಸ್ವಭಾವ ರಾಶಿ. ಇದನ್ನ ನಿರೂಪಿಸುವುದು ಕುದುರೇ ದೇಹ, ಮನುಷ್ಯನು ಹಿಡಿದಂತಹ ಬಾಣ. ಅಂದರೆ ೬ ಕಾಲುಗಳ ರಾಶಿ. ಪ್ರಾಣಿ ಹಾಗೂ
ಮನುಷ್ಯನು ನಿರೂಪಿಸಿದಂತಹ ರಾಶಿ. ಅಗ್ನಿತತ್ವದ ರಾಶಿಯಲ್ಲಿಯೇ ಇದೊಂದು ದೊಡ್ಡ ಅಗ್ನಿ ರಾಶಿ.
ಇವರುಗಳು ಯುಧ್ಧ ಪ್ರಿಯರು. ಇದು ೩ನೇ ಹಾಗೂ ಕೊನೆಯ ಅಗ್ನಿ ರಾಶಿ. ಆದ್ದರಿಂದ ಇವರುಗಳು
ಮಂತ್ರಿಯಂತೆ ವರ್ತಿಸುತ್ತಾರೆ. ಸಿಂಹ ರಾಶಿಯವರು ರಾಜನಂತೆ ವರ್ತಿಸಿದರೆ, ಇವರುಗಳು ಮುಖ್ಯ ಮಂತ್ರಿ ಆಗ್ತಾರೆ. ಯಾವ ಸಮಯದಲ್ಲಿ ಅಪಾಯ ಬಂದರೆ
ಹೇಗೆ ರಕ್ಷಣೆ ಮಾಡಬೇಕು, ಜನರಿಗೆ ಹೇಗೆ ಸವಲತ್ತುಗಳನ್ನ ಕೊಡಬೇಕು, ಮಠಗಳನ್ನ ಕಟ್ಟಿಸಬೇಕು, ಎಲ್ಲೆಲ್ಲಿ ವಿಶ್ರಾಂತಿ ಸ್ಥಳ ಬೇಕು ಎಂಬುದನ್ನ ಚಿಂತಿಸುವ ಜನರು
ಇವರು. ಜನರಿಗೋಸ್ಕರವೇ ಇರುವಂತಹ ರಾಶಿ ಇದು.
ಒಟ್ಟಾರೆ ಜನರಿಗೋಸ್ಕರ ಇರುವಂತಹ ಸಂಸ್ಕಾರವನ್ನ ಉಳಿಸುವಂತಹ ಮನುಷ್ಯ ತತ್ವ ಇರುವಂತಹ
ರಾಶಿ ಇವರದ್ದು. ಹೋರಾಟವನ್ನ ಮಾಡುವ ನಾಲ್ಕು ಕಾಲಿನ ಕುದುರೆಯೂ ಇದೆ. ಬಾಣವನ್ನ ಬಿಟ್ಟು ದಾರಿಗೆ
ತರುವಂತಹ ಮನುಷ್ಯನೂ ಇದ್ದಾನೆ. ಇದರ ಅಧಿಪತಿ ದೇವ ಗುರು ಬ್ರಹಸ್ಪತಿ. ಧನಾತ್ಮಕವಿರುವ
ಪುರುಷತತ್ವದ ರಾಶಿ.ಜೀವನವನ್ನ ಬಹಳಸ್ಟು ವೇಗದಿಂದ ತೆಗೆದುಕೊಂಡು ಹೋಗುವಂತಹ ಅಗ್ನಿ ತತ್ವದ ರಾಶಿ.
ಅತೀ ಉತ್ತಮವಾದ ಧರ್ಮ ತತ್ವ ಇರುವಂತಹ ರಾಶಿ. ಇಲ್ಲಿ ನ್ಯಾಯ ಸಿಗುತ್ತೆ. ಇವರುಗಳು ಕೆಟ್ಟದ್ದು
ಮಾಡಲಾರರು.
ಮಕರ ರಾಶಿ.:- ಇದು ಕಾಲಪುರುಷನ ೧೦ ನೇ ರಾಶಿ. ಸ್ತ್ರೀ ರಾಶಿ. ಚರ ರಾಶಿ. ಅರ್ಥ
ರಾಶಿ. ಪ್ರಥ್ವೀ ತತ್ವದ ರಾಶಿ. ಈ ರಾಶಿಯ ಅಧಿಪತಿ ಶನಿ ಮಹಾರಾಜ. ಹೇಗೆ ಕರ್ಮವನ್ನ ಮಾಡುತ್ತಾನೋ, ಹಾಗೆಯೇ ಜೀವನವನ್ನ ಸಾಗಿಸುವ ರಾಶಿ. ಶನಿ ಮಂದ ಗ್ರಹ. ಇಲ್ಲಿ ಕೂಲಿ
ಆಳುಗಳು ಜಾಸ್ತಿ. ಇದನ್ನ ನಿರೂಪಿಸುವುದು ಮೊಸಳೆ. ಮೊಸಳೆ ಗದ್ದೆಯಲ್ಲಿಯೂ ಇರುತ್ತೆ, ಗುಹೆಯಲ್ಲಿಯೂ ಇರುತ್ತೆ ನೀರಿನಲ್ಲಿಯೂ ಇರುತ್ತೆ. ಮೊಸಳೆಯ ಮೈ ಒರಟು.
ಆದ್ದರಿಂದ ಇವರದ್ದೂ ತುಂಬಾ ಒರಟು ಸ್ವಭಾವ. ಇವರ ಬಣ್ಣ ಕೆಂಪು. ಈ ರಾಶಿ ತೊಡೆಯನ್ನ ತೋರಿಸುತ್ತೆ.
ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ ಇವರದ್ದೇ ಜಾಸ್ತಿ. ಇವರುಗಳು ಬಂಡೆಕಲ್ಲನ್ನ ಒಡೆಯುವವರು.
ಶ್ರಮ ಜೀವಿಗಳು. ಬಾವಿಯನ್ನ ತೋಡುವವರು. ಯಾವುದೇ ಕಸ್ಟಕರವಾದ ಕೆಲಸವಿದ್ದಲ್ಲಿ ಅದನ್ನ ಮಾಡಿ
ತೋರಿಸುವಂತಹ ಜನರು ಇವರು. ಆರೋಗ್ಯ ಚೆನ್ನಾಗಿರುತ್ತೆ. ಇವರದ್ದು ಸಾಧಾರಣ ಜೀವನ. ಅಸ್ಟೊಂದು
ಶ್ರೀಮಂತರಲ್ಲ. ಶರೀರದ ಸಹಾಯ ಜಾಸ್ತಿ ಇವರಲ್ಲಿ. ಶಕ್ತಿ ಪ್ರದರ್ಶನ ಜಾಸ್ತಿ. ತಲೆಗೆ ಹೆಚ್ಚು
ಕೆಲಸವನ್ನ ಕೊಡುವಂತಹವರಲ್ಲ.ಒಳ್ಳೇ ಜಗಳಗಂಟರು. ಕೀಳು ಮಟ್ಟದ ಜೀವನವನ್ನ ಸಾಗಿಸುವಂತಹವರು.
ಪ್ರಥ್ವೀ ತತ್ವದಲ್ಲಿ ಮಕರದವರಿಗೆ ಹಟ ಸ್ವಭಾವ ಜಾಸ್ತಿ. ಅದೇ ವ್ರಷಭದವರಿಗೆ ಮೊಂಡು ಸ್ವಭಾವ ಜಾಸ್ತಿ. ಮಕರ ರಾಶಿಯ
ಶನಿ -ವ್ ಶನಿ. ಅದೇ ಕುಂಭ ರಾಶಿಯ ಶನಿ +ವ್ ಶನಿ.
ಕುಂಭ ರಾಶಿ :- ಇದು ಬೆಸ ರಾಶಿ. ಪುರುಷ ರಾಶಿ. ಧನಾತ್ಮಕ (+ವ್) ರಾಶಿ. ಇದು ವಾಯು
ತತ್ವದ ಕೊನೆಯ ರಾಶಿ. ಇದು ಕಾಲ ಪುರುಷನ ೧೧ ನೇ ರಾಶಿ. ಇದು ಕಾಲನ್ನ ಸೂಚಿಸುತ್ತೆ. ಇದು ಶನಿಯ
ರಾಶಿ. ಇದಕ್ಕೆ ಅಧಿಪತಿ ಶನಿ ಮಹಾರಾಜ. ಇದು ಶನಿಗೆ ತ್ರಿಕೋಣ ಸ್ಥಾನವೂ ಹೌದು. ಇವರು ವಾಯು
ತತ್ವದಲ್ಲಿ ಮಹಾ ಪ್ರಚಂಡರು. ತತ್ವ ಜ್ನಾನಿಗಳು (ಫಿಲೋಸಫ಼ರ್ಸ್). ಕುಂಭ ರಾಶಿಯ ಸಂಕೇತ ಕುಂಭ.
ಇವರು ಬಹಳ ಸ್ಟ್ರಿಕ್ಟ್. ಬೈದೇ ಬಿಡುತ್ತಾರೆ. ಇವರು ಬಹಳ ಪ್ರೇಕ್ಟಿಕಲ್ ಮನುಷ್ಯರು.
ಇವರೆಲ್ಲಿಯಾದರೂ ಉನ್ನತ ಹುದ್ದೆಯಲ್ಲಿದ್ದರೆ ದೇಶ ಉದ್ಧಾರವಾಗುತ್ತೆ. ಇವರಲ್ಲಿ
ನಗೆಯನ್ನುವುದಕ್ಕೆ ಅರ್ಥವೇ ಇಲ್ಲ. ಕುಂಭದಂತೆ ಮುಸುಂಡಿಯನ್ನ ಮಾಡಿಕೊಂಡೇ ಇರುತ್ತಾರೆ. ಶನಿ ಒಬ್ಬ ಒಳ್ಳೆಯ ಪ್ರಾಧ್ಯಾಪಕ. ಇವರೆಲ್ಲಿಯಾದರೂ
ಕ್ಲಾಸನ್ನ ತೆಗೆದುಕೊಂಡರೆ, ಪ್ರತಿಯೊಬ್ಬರನ್ನೂ ಐ ಟು ಐ ಕೋಂಟೇಕ್ಟನ್ನ ಇಟ್ಟು ದೃಸ್ಟಿಸಿ ಅವರ
ಬಗ್ಗೆ ತಿಳಿದುಕೊಳ್ಳುವವರು.ಇವರೊಬ್ಬ ಪ್ರಾಮಾಣಿಕ ಶ್ರಮ ಜೀವಿ. ಬಹಳ ಕಠಿಣ ಶ್ರಮವನ್ನ
ತೆಗೆದುಕೊಳ್ತಾರೆ. ಇವರಿಗೆ ಎಲ್ಲಿಯಾದರೂ ಇವರಿಗೆ ದಕ್ಕಬೇಕಾದಕ್ಕಿಂತ ಹೆಚ್ಚಿಗೆ ಕೊಟ್ಟಲ್ಲಿ
ವಾಪಾಸು ಕೊಡುವುದಲ್ಲದೆ, ನಿಮಗೆರಡು ಬುದ್ಧಿವಾದದ ಮಾತನ್ನೂ ಕೇಳಿಸುವರು. ಇವರುಗಳು ಪೂರಾ ಲೈಫ಼್
ಟೈಮ್ನಲ್ಲಿ ತತ್ವಗಳಿಗೆ ಬೆಲೆಯನ್ನ ನಿಗದಿ ಪಡಿಸುತ್ತಾರೆ. ಬಹಳ ಪ್ರಿನ್ಸಿಪಲ್ಡ್ ವ್ಯಕ್ತಿ.
ಇವರುಗಳು ಎಲ್ಲಿಯಾದರೂ ಮನೆಯಲ್ಲಿ ಒಬ್ಬರು ಇದ್ದರೆ ಅವರ ತಪ್ಪುಗಳನ್ನೆಲ್ಲಾ ತಿದ್ದಿ, ಮನೆಯವರನ್ನೆಲ್ಲಾ ಕಂಟ್ರೋಲಿಗೆ ತರುವಲ್ಲಿ ಬಹಳ ಉಸ್ತಾದ್. ಹೇರಾ
ಫ಼ೇರಿ ಅವರಿಗೆ ಆಗಿ ಬರುವುದಿಲ್ಲ. ಇವರಲ್ಲಿ ಅರ್ಥ ಪೂರಿತ ಕಾಮವುಂಟು. ಇವರುಗಳು ಸ್ಪೆಲ್ಲಿಂಗ್
ಚೆಕ್ ಮಾಡುವಂತಹ ತಾಳ್ಮೆಯನ್ನ ಪಡೆದಂತಹ ವಾಯು ತತ್ವದವರು. ಅದೇ ತುಲಾದವರು ಸೂಪರ್ ಫ಼ೋಕಸ್ ಮಾಡಿ
ಈ ಸ್ಪೆಲ್ಲಿಂಗ್ ಚೆಕಗಳಂತಹದ್ದನ್ನ ನೆಗ್ಲೆಕ್ಟ್ ಮಾಡುವಂತಹವರು. ಇವರಲ್ಲಿ ನೋಲೆಡ್ಜ್ ಬಹಳ ಅಪಾರ.
ಇವರಿಗೆ ಅಪಾರವಾದ ಮೆಮರಿ ಕೂಡ. ತತ್ವಗಳನ್ನೆಲ್ಲಾ ಅರೆದು ಕುಡಿದಿರುತ್ತಾರೆ. ಇವರನ್ನ
ಎನ್ಜೋಯ್ಮೆಂಟ್ಸಗಳಿಗೆ ಕರೆದಲ್ಲಿ ಬರೋದೇ ಇಲ್ಲ. ಇವರೂ ಕೂಡ ಮಿಥುನದವರಂತೆ ಒಂಟಿ ಜೀವಿ. ಇವರದ್ದು
ಸಿಸ್ಟಮೇಟಿಕ್ ಜೀವನ.ಒಂದು ವೇಳೆ ಶನಿ ಮಹಾತ್ಮನಿಗೆ ಹೆದರಬೇಕಾದಲ್ಲಿ ಇವರಿಗೆ ನೀವು ಹೆದರಬೇಕು.
ಇವರುಗಳು ಎಚ್ಚರಿಕೆಯನ್ನ ಕೊಡುವ ಜನರು. ಬಹಳ ಹುಷಾರಾಗಿ ಇವರೊಂದಿಗೆ ವರ್ತಿಸುತ್ತಿರಬೇಕು.
ಮೀನ ರಾಶಿ :- ಕಾಲ ಪುರುಷನ ೧೨ ನೇ ಹಾಗೂ ಕೊನೆಯ ರಾಶಿ. ಇದು ಕೊನೆಯ ಮೋಕ್ಷ ತತ್ವದ
ಸ್ತ್ರೀ ರಾಶಿ. ಈ ರಾಶಿಯ ಅಧಿಪತಿ ದೇವ ಗುರು ಬ್ರಹಸ್ಪತಿ. ಸ್ತ್ರೀ ತತ್ವದಲ್ಲಿ ಋಣಾತ್ಮಕ(-ವ್)
ರಾಶಿ. ಈ ರಾಶಿಯು ದೊಡ್ಡ ದೊಡ್ಡ ನದಿಗಳನ್ನ, ಸಮುದ್ರವನ್ನ ಗುರುತಿಸುತ್ತದೆ. ನದಿ ಎಂದ ಮೇಲೆ ಮೀನುಗಳು ಇದ್ದೇ
ಇರುತ್ತವೆ. ಈ ರಾಶಿಯ ಚಿಹ್ನೆ ಕೂಡ ಎರಡು ಮೀನುಗಳು. ಮೀನು ಸಂಘ ಜೀವಿ. ಆದ್ದರಿಂದ ಇವರ ಜೊತೆಗೆ
ಸ್ನೇಹಿತರು ಅನೇಕರು. ಇದು ಅಂತ್ಯ ರಾಶಿ.
ಆದ್ದರಿಂದ ಇವರುಗಳು ಸ್ವಾರ್ಥಿಗಳು. ಹೆಸರು ಮತ್ತು ಕೀರ್ತಿಗೋಸ್ಕರ ಇವರುಗಳು ಸ್ನೇಹಿತರನ್ನ
ಮಾಡಿಕೊಳ್ಳುತ್ತಾರೆ. ಸಮುದ್ರದ ಒಳಗೆ ಏನಿರುತ್ತದೋ ಗೊತ್ತಿಲ್ಲ. ಅಂದರೆ ಇವರದ್ದು ಬಹಳ ಕಠಿಣ
ಮನಸ್ಸು. ಹೆಸರು, ಕೀರ್ತಿ ಬರುವಲ್ಲಿ ಇವರು ದಾನ ಧರ್ಮಗಳನ್ನ ಮಾಡುತ್ತಾರೆ. ಇವರುಗಳು ಶೋ
ಆಫ಼್ ಜಾಸ್ತಿ ಮಾಡುತ್ತಾರೆ. ಅತ್ಯಂತ ಶ್ರೀಮಂತ ರಾಶಿ. ದ್ವಿಸ್ವಭಾವದ ಅಂತ್ಯಮ ರಾಶಿ. ಅಂದರೆ
ಎಲ್ಲಾ ಕಡೆಯಲ್ಲಿಯೂ ತಮ್ಮ ಕಾಲನ್ನ ಹಾಕುತ್ತಾರೆ. ಊರಿಗೆ ಉಪಕಾರಿ, ಮನೆಗೆ ಹೆಮ್ಮಾರಿ ಇವರು. ಕೆಲವೊಮ್ಮೆ ಹಣ ಕೊಟ್ಟು ಸ್ನೇಹಿತರನ್ನ
ಮಾಡುತ್ತಾರೆ. ಕೀರ್ತಿಗೋಸ್ಕರ ಪರ ಜನರನ್ನ ತಮ್ಮ ಸ್ನೇಹಿತರನ್ನಾಗಿ ಮಾಡಿಸಿಕೊಳ್ಳುತ್ತಾರೆ.
ಇವರನ್ನ ಎಲ್ಲಿಯಾದರೂ ಹೇಳಿದಲ್ಲಿ ನಿಮಗೆ ಮೋಕ್ಷ ಮಾಡುವುದು ಖಂಡಿತ. ನಿಮ್ಮನ್ನ ನಿರ್ನಾಮ
ಮಾಡುತ್ತಾರೆ. ಕಾರಣ ಇದು ಮೋಕ್ಷ ರಾಶಿಯೂ ಹೌದು. ಅಂದಮೇಲೆ, ಇಲ್ಲಿ ಅವರಿಗೆ ದುಃಖ ಉಂಟು.
ಗುರು ಮತ್ತು ಬುಧನು ಅಂದರೆ ಜ್ನಾನ ಮತ್ತು ಬುದ್ಧಿ ಯಾರ ಜಾತಕದಲ್ಲಿ ಒಳ್ಳೆಯದಿರುತ್ತೋ, ಆ ಜಾತಕನು ಒಳ್ಳೆಯ ಜೀವನವನ್ನ ಸಾಗಿಸುತ್ತಾರೆ. ಮೀನ ರಾಶಿಯವರು
ಕರುಣೆಯ ರಾಶಿ. ಇಲ್ಲಿ ಮಿಥುನ ರಾಶಿಯು ಬುಧನ ರಾಶಿ. ಅಂದರೆ ವಿದ್ಯ ಮತ್ತು ಬುಧ್ಧಿಯ ರಾಶಿ. ಅದೇ
ಮೀನ ಮತ್ತು ಧನಸ್ಸು ಗುರುವಿನ ರಾಶಿ. ಕನ್ಯಾ ರಾಶಿ
ಕೂಡ ಬುಧನ’ ಉಛ್ಛ ಕ್ಷೇತ್ರ. ಅಂದರೆ ಭಚಕ್ರದಲ್ಲಿ ಮೂಲೆಯ ರಾಶಿಗಳು ಕಂಭದಂತೆ ಕೆಲಸವನ್ನ
ಮಾಡುತ್ತದೆ. ಈ ಕಂಭಗಳು ಸ್ಟ್ರೋಂಗ್ ಇದ್ದಲ್ಲಿ, ಆ ಜಾತಕನು ಬಹಳ ಸಂತೋಷ ಹಾಗೂ ಉತ್ತಮ ಜೀವನವನ್ನ ನಡೆಸಬಹುದು. ಮೀನ
ರಾಶಿಯವರದ್ದು ದೊಡ್ಡ ಆಸೆ ಇರುವಂತಹವರು. ಇವರು ಹುಟ್ಟಿರೋದೇ ಲೋಕ ಕಲ್ಯಾಣಕ್ಕಾಗಿ. ಮಾನವೀಯತೆ
ಇರುವುದೆಂದರೆ ಈ ರಾಶಿಯವರಿಗೆ. ಸತ್ತ ಮೇಲೂ ಇವರ
ಹೆಸರು ಇರಬೇಕು ಅನ್ನುವುದು ಇವರ ಆಸೆ.
ಬರೆದವರು/ ಕಂಪಾಯಿಲ್ ಮಾಡಿದವರು
Dr.ಪಾರಂಪಳ್ಳಿ ಸುರೇಂದ್ರ ಉಪಾಧ್ಯ,M.Sc.;Ph.D.
(Astrology)
೦೧/೦೨/೨೦೧೬
No comments:
Post a Comment