Friday 10 March 2017

ಇಂಟರೆಸ್ಟಿಂಗ್ ಎನಾಲಿಸಿಸ್


ಇಂಟರೆಸ್ಟಿಂಗ್ ಎನಾಲಿಸಿಸ್

ಉದಾಹರಣೆ :- ಜಾತಕಳು ಜನುವರಿ, ೧೯೭೯ ರಂದು ಸಾಯಂಕಾಲ ೪.೫೫ ಕ್ಕೆ ರೇಖಾಂಷ 78E5’ ಹಾಗೂ ಅಕ್ಷಾಂಶ 18N40’ ಜನ್ಮವನ್ನ ಇತ್ತಳು. ಆವತ್ತಿನ ಭುಕ್ತಿ ೧.೨೫ ಅಂತ ಇಟ್ಟುಕ್ಕೊಳ್ಳೀ.

೫/೧/೧೯೭೯ ರಂದು, ಸೂರ್ಯ ಉದಯ ಸಮಯ :-  ೬.೫೧                    ಡ್ರಿಕ್ ಪಂಚಾಂಗ, ಗೂಗಲ್ ಪ್ರಕಾರ.

ಅಂದರೆ ಚಂದ್ರನ ನಕ್ಷತ್ರವು ರೇವತೀ ೨ನೇ ಪಾದದಲ್ಲಿ ಬರುತ್ತೆ.


ಈಗ ತತ್ಕಾಲ ಗ್ರಹ ಸಂಪತ್ತಿಯನ್ನ ಬರೆಯೋಣ :-

ಲಗ್ನ             ಮಿಥುನ        ಆರ್ದ್ರ-೧
ಸೂರ್ಯ       ಧನೂರ         ಪೂರ್ವಾಷಾಢ-೩
ಚಂದ್ರ           ಮೀನ           ರೇವತಿ-೨
ಬುಧ             ಧನೂರ         ಮೂಲ-೧
ಕುಜ              ಧನೂರ         ಪೂರ್ವಾಷಾಢ-೪
ಗುರು ವ.        ಕಟಕ             ಪುಷ್ಯ-೩
ಶುಕ್ರ                     ವೃಸ್ಚಿಕ          ಅನುರಾಧ-೧
ಶನಿ               ಸಿಂಹ            ಉತ್ತರ-೩
ರಾಹು           ಸಿಂಹ            ಉತ್ತರ-೧
ಕೇತು             ಕುಂಭ           ಪೂರ್ವಾಭಾದ್ರ-೩
ಮಾಂದಿ         ಮಕರ           ಶ್ರವಣ-೪

ರಾಶಿ ಅಥವಾ ಲಗ್ನ ಕುಂಡಲಿ


ಚಂದ್ರ



ಲಗ್ನ

ಕೇತು


ರಾಶಿ ಕುಂಡಳಿ
೦೫/೦೧/೧೯೭೯
೭೮.೦೯ (ಪೂರ್ವ)
೧೮.೬೭(ಉತ್ತರ)

ಗುರು(ವಕ್ರಿ)



ಶನಿ
ರಾಹು
ರವಿ
ಬುಧ
ಕುಜ



ಶುಕ್ರ









ನವಾಂಶ ಕುಂಡಳಿ





ಬುಧ


ಕೇತು

ಶನಿ

ನವಾಂಶ ಕುಂಡಳಿ
೦೫/೦೧/೧೯೭೯
೭೮.೦೯ (ಪೂರ್ವ)
೧೮.೬೭(ಉತ್ತರ)
ಮಾಂದಿ

ಚಂದ್ರ


ಲಗ್ನ
ರಾಹು


ಕುಜ
ರವಿ
ಗುರು(ವಕ್ರಿ)


ದಶಾ ಪಧ್ಧತಿ :-

ರೇವತೀ -೨ ನೇ ಪಾದ ಅಂದರೆ ನಡೆಯುತ್ತಿರುವುದು ಬುಧನ ದಶೆ. ಅಂದರೆ ಬುಧ ದೆಶೆಯು ೧೭ ವರ್ಷಗಳ ಕಾಲ ನಡೆಯುತ್ತದೆ. ಆದರೆ ರೇವತಿಯು ಪ್ರಾರಂಭವಾದದ್ದು ತಾರೀಕು ೦೫/೦೧/೧೯೭೯ ರ ಬೆಳಿಗ್ಗೆ ೯.೦೭
ಹುಟ್ಟುವವರೆಗೆ ರೇವತೀ ವ್ಯಾಪ್ತಿಯು ೧೬.೫೫ ರ ವರೆಗೆ ಅಂದರೆ (೧೬.೫೫- ೯.೦೭) = ೭ಗಂಟೆ ೪೮ ನಿಮಿಷಗಳ ಕಾಲ ರೇವತಿಯು ಗರ್ಭದಲ್ಲಿಯೇ ಮುಗಿದಿತ್ತು!

ಆದರೆ ಪೂರಾ ರೇವತಿಯ ವ್ಯಾಪ್ತಿಯು ೨೪ ಗಂಟೆ ೦೫ ನಿಮಿಷಗಳು. ಅಂದರೆ ಇದು ಬುಧ ದೆಶೆ ೧೭ ವರ್ಷಗಳಿಗೆ ಸಮವಾಗಿರುತ್ತೆ.

ಅರ್ಥಾತ್ ೨೪.೦೫      ----------à ೧೭ ವರ್ಷ
೭.೪೮                            -------------- ?

೭.೪೮ * ೧೭ / ೨೪.೦೫
ಇದನ್ನ ನಿಮಿಷಗಳಿಗೆ ತುರ್ಜಮೆ ಮಾಡಿದಲ್ಲಿ, ೭೯೫೬/೧೪೪೫
=೫ ವರ್ಷ, ೬ ತಿಂಗಳು ೨ ದಿನಗಳು. ಇದನ್ನ ಪೂರಾ ೧೭ ವರ್ಷಗಳಲ್ಲಿ ಕಳೆದಾವಾಗ, ಮಿಕ್ಕ ಬುಧ ದೆಶೆಯು ನಮಗೆ ಸಿಗುತ್ತದೆ.
ಅಥವಾ  ೧೯೭೯/೦೧/೦೫ ಇದರಲ್ಲಿ ೫ ವರ್ಷ ೬ ತಿಂಗಳು ೨ ದಿನಗಳನ್ನ ಕಳೆದಾವಾಗ ನಮಗೆ ರೇವತಿಯ ಪ್ರಾರಂಭ್ದ ವರ್ಷ ಸಿಗುತ್ತವೆ.

ಅಂದರೆ ಬುಧ ದೆಶೆಯು ೧೯೭೩/೦೫/೦೩ ಯಲ್ಲಿ ಪ್ರಾರಂಭವಾಗಿದ್ದು, ೧೯೯೦/೦೫/೦೩ ಗೆ ಅಂತ್ಯಗೊಳ್ಳುತ್ತದೆ. ಆಮೇಲೆ ಕೇತು ದೆಶೆ ೭ ವರ್ಷ, ತದನಂತರ ಶುಕ್ರ ದೆಶೆ ೨೦ ವರ್ಷ ಶುರುವಾಗುತ್ತೆ. ಅರ್ಥಾತ್ ಶುಕ್ರ ದೆಶೆಯು ೨೦೧೭/೦೬/೦೩ಕ್ಕೆ ಅಂತ್ಯಗೊಳ್ಳುತ್ತದೆ.
ಆದ್ದರಿಂದ, ರವಿ ದೆಶೆ ಶುರುವಾಗುವ ಮುನ್ನ, ಜಾತಕನು ೬ ತಿಂಗಳು ಮುಂಚೆಯೇ ಶುಕ್ರಾದಿತ್ಯ ಸಂಧಿ ಶಾಂತಿಯನ್ನ ಮಾಡಬೇಕಾಗುತ್ತೆ! ಹೇಗೆ ಮಾಡಿದಲ್ಲಿ ಜಾತಕನಿಗೆ ಬಹಳ ಉತ್ತಮ ರೀತಿಯಲ್ಲಿ ರವಿದೆಶೆಯು ಹೋಗಲಿದೆ. ಯಾಕೆಂದರೆ ರವಿಯೇ ಆರೋಗ್ಯಕಾರಕನು. ರವಿಯೇ ಕಳತ್ರ ಸ್ಥಾನದಲ್ಲಿ ಕುಳಿತಿರುವನು. ರವಿಯೇ ಮೀನ ರಾಶಿಗೆ ರೋಗಕಾರಕನೂ ಹೌದು. ಆದ್ದರಿಂದ, ಆದಿತ್ಯವಾರದಂದು ಒಂದು ತಾಮ್ರದ ಕವಳಿಗೆಯಲ್ಲಿ ನೀರನ್ನ ಸೂರ್ಯನಿಗೆ ಬೆಳಿಗ್ಗೆ ಎದ್ದು ಸೂರ್ಯೋದಯದ ಕಾಲದಲ್ಲಿ ಅರ್ಘ್ಯ ರೂಪದಲ್ಲಿ ಕೊಟ್ಟಲ್ಲಿ ಬಹಳ ಒಳ್ಳೆಯದಾಗಲಿದೆ.

ಈಗ ಈ ಜಾತಕದ ವಿಮರ್ಷೆಯನ್ನ ಮಾಡೋಣವೇ?


1.              ಮೊದಲನೇ ಭಾವವು ಲಗ್ನವಾಗಿರುತ್ತದೆ. ಅದು ಜಾತಕಳ ವ್ಯಕ್ತಿತ್ವ, ಬಣ್ಣ, ಆರೋಗ್ಯ, ಕನಸುಗಳು, ವಂಶ, ತಲೆ ಮತ್ತು ಸಹಜ ನಡುವಳಿಕೆಗಳನ್ನು ಸೂಚಿಸುತ್ತದೆ. ಈ ಭಾವದ ಕಾರಕ ಗ್ರಹ ಗುರು ಆಗಿರುತ್ತದೆ.
2.              ಎರಡನೇ ಭಾವವು ಮಾತು, ಸಂಪತ್ತು, ಐಶ್ವರ್ಯ, ಆಹಾರ, ಪ್ರೈಮರೀ ವಿದ್ಯಾಭ್ಯಾಸ, ಬಲ ಕಣ್ಣು, ಮುಖ ಮತ್ತು ಅತ್ತೆ-ಮಾವರ ಮನೆಯನ್ನ ಸೂಚಿಸುತ್ತದೆ. ಈ ಭಾವದ ಕಾರಕ ಗ್ರಹವೂ ಗುರುವಾಗಿರುತ್ಟಾನೆ.
3.              ಮೂರನೇ ಭಾವವು ಸೋದರ-ಸೋದರಿಯರು, ಧೈರ್ಯ, ವ್ಯವಹಾರ (ಸಂವಾದ), ಸಣ್ಣ ಪುಟ್ಟ ಸಂಚಾರ, ಸಾಹಸ, ಸೈನಿಕ ಮತ್ತು ಶರೀರದ ಭುಜದ ಭಾಗಗಳನ್ನ ಸೂಚಿಸುತ್ತದೆ. ಈ ಭಾವದ ಕಾರಕ ಗ್ರಹ ಕುಜನಾಗಿರುತ್ತಾನೆ.
4.              ನಾಲ್ಕನೇ ಭಾವವು ತಾಯಿ, ವಿದ್ಯ, ಸುಖ, ಹಾಯಿಸ್ಕೂಲಿನ ವಿದ್ಯಾಭ್ಯಾಸ ಭೂಮಿಯೊಳಗಿನ ನಿಕ್ಷೇಪ,ಭೂಮಿ, ಕಟ್ಟಡಗಳು, ಪಬ್ಲಿಕ್ ಹಾಗೂ ಶರೀರದಲ್ಲಿಯ ಹೃದಯ ಭಾಗವನ್ನ ಸೂಚಿಸುತ್ತದೆ. ಈ ಭಾವದ ಕಾರಕರು ಚಂದ್ರ ಮತ್ತು ಬುಧರು ಆಗಿರುತ್ತಾರೆ.
5.              ಪಂಚಮ ಭಾವವು ಪೂರ್ವ ಪುಣ್ಯ ಸ್ಥಾನ, ಮಕ್ಕಳ ಸುಖ, ಮಕ್ಕಳಿಂದ ಸುಖ, ಬುಧ್ಧಿವಂತಿಕೆ, ಲವ್ ಏಂಡ್ ರೋಮೇನ್ಸ್, ಮಂತ್ರಗಳು, ಒಂದಕ್ಕಿಂತ ಹೆಚ್ಚಿನ ಸಂಪಾದನೆ ಮತ್ತು ಶರೀರದ ನಾಭಿಯ ಪ್ರದೇಶವನ್ನ(ಉದರ) ಸೂಚಿಸುತ್ತದೆ. ಈ ಭಾವದ ಕಾರಕ ಗ್ರಹವು ಗುರುವಾಗಿರುತ್ತದೆ.
6.              ಆರನೇ ಭಾವವು ಋಣ, ರೋಗ ಹಾಗೂ ರಿಪುವಿನ ಮನೆ. ೬ ನೇ ಭಾವವು ಕೋರ್ಟ್ಸ್ ಲಿಟಿಗೇಷನ್, ಕೋರ್ಟ್ಸ್ ಮೊಕ್ಕದ್ದಮಾದ ಮನೆಯಾಗಿರುತ್ತದೆ. ೬ ನೇ ಮನೆಯು ಜೂಜಿನ ಮನೆ ಹಾಗೂ ನಿಮ್ಮ ಪರಿಕಲ್ಪನೆಗಳ ಮನೆಯಾಗಿರುತ್ತದೆ. ಶರೀರದಲ್ಲಿನ ಕೆಳಭಾಗದ ಹೊಟ್ಟೆಯನ್ನ ಸೂಚಿಸುತ್ತದೆ. ಈ ಭಾವದ ಕಾರಕ ಗ್ರಹಗಳು ಶನಿ, ಕುಜ ಮತ್ತು ಬುಧರಾಗಿರುತ್ತಾರೆ.
7.              ಏಳನೇ ಭಾವವು ಕಳತ್ರ (ಗಂಡ ಅಥವಾ ಹೆಂಡತಿ), ವೈವಾಹಿಕ ಜೀವನ, ವ್ಯಾಪಾರದಲ್ಲಿನ ಭಾಗಸ್ಥರು, ವಿರೋಧ, ಪ್ರಯಾಣ, ವಿರುಧ್ಧ ಲಿಂಗ, ಕಿಡ್ನಿಯನ್ನ ಸೂಚಿಸುತ್ತದೆ. ಈ ಭಾವದ ಕಾರಕ ಗ್ರಹವು ಶುಕ್ರನಾಗಿರುತ್ತಾನೆ.

8.              ೮ ನೇ ಭಾವವು ಆಯುಸ್ಸು, ಮರಣ, ಗುಪ್ತ ವಿಚಾರಗಳು, ರಂಧ್ರಗಳು, ಮತ್ತು ಕತ್ತಲೆ, ಅನಿರೀಕ್ಷಿತ ಅದೃಷ್ಟ, ಲೈಂಗಿಕ ಚಟುವಟಿಕೆಗಳು, ಗುಪ್ತಾಂಗ ರೋಗಗಳು, ವೀರ್ಯ ಮತ್ತು ಜನನೇಂದ್ರಿಯಗಳನ್ನ ಸೂಚಿಸುತ್ತದೆ. ಈ ಭಾವದ ಕಾರಕ ಗ್ರಹವು ಶನಿಯಾಗಿರುತ್ತದೆ.
9.              ೯ ನೇ ಭಾವವು ತಂದೆ, ಆಸ್ತಿ, ನ್ಯಾಯ, ಧರ್ಮ ಮತ್ತು ಧಾರ್ಮಿಕ ಸಂಸ್ಥೆಗಳು ಹಾಗೂ ತೊಡೆಗಳನ್ನ ಸೂಚಿಸುತ್ತದೆ.
10.        ಹತ್ತನೇ ಭಾವವು ವೃತ್ತಿ ಮತ್ತು ಚಟುವಟಿಕೆಗಳು, ಮಂಡಿಗಳನ್ನ ಸೂಚಿಸುತ್ತದೆ. ಈ ಭಾವದ ಕಾರಕ ಗ್ರಹವು ಶನಿಯಾಗಿರುತ್ತದೆ.
11.        ಈ ಭಾವವು ಎಲ್ಲಾ ವಿಧದ ಲಾಭಗಳನ್ನ, ಮರ್ಯಾದೆ, ಗೌರವ, ಆದಾಯ, ಹಿರಿಯಣ್ಣ, ಹಿರಿಯಕ್ಕ ಹಾಗೂ ಕಾಲಿನ ಮೀನ ಖಂಡವನ್ನ ಸೂಚಿಸುತ್ತದೆ. ಈ ಭಾವದ ಕಾರಕ ಗ್ರಹವು ಗುರುವಾಗಿರುತ್ತದೆ.
12.           ಹನ್ನೆರಡನೇ ಭಾವವು ಖರ್ಚು, ವೆಚ್ಚ, ವಿದೇಶ ಯಾತ್ರೆ, ಕಾರಾಗ್ರಹ ವಾಸ, ಆಸ್ಪತ್ರೆ ಸೇರುವುದು, ಶಯನ ಸುಖ ಹಾಗೂ ಕಾಲಿನ ಪಾದಗಳನ್ನ ಸೂಚಿಸುತ್ತದೆ. ಈ ಭಾವದ ಕಾರಕರು ಶನಿ, ಗುರು ಮತ್ತು ಕೇತು ಗ್ರಹಗಳು.
13.           ಈ ಜಾತಕಳ ಲಗ್ನವು ಮಿಥುನವಾಗಿದ್ದು, ಇದರ ಅಧಿಪತಿ ಬುಧ ಗ್ರಹವಾಗಿರುತ್ತದೆ. ಈ ಬುಧನು ಕೇಂದ್ರ ಸ್ಥಾನವಾದ ೭ ರಲ್ಲಿ ಉಪಸ್ಥಿತನಾಗಿರುತ್ತಾನೆ. ಆತನ ಜೊತೆಯಲ್ಲಿ, ಮೂರನೇ ಮನೆಯ ಅಧಿಪತಿಯಾದ ಸೂರ್ಯನು ಹಾಗೂ ೬ ಮತ್ತು ೧೧ ನೇ ಮನೆಯ ಅಧಿಪತಿ ಕುಜನು ಉಪಸ್ಥಿತರಿದ್ದಾರೆ. ಕುಜನಿಗೆ ಬುಧನು ಶತ್ರುವಾದಲ್ಲಿ, ಬುಧನಿಗೆ ಕುಜನು ಸಮನಾಗುತ್ತಾನೆ.
14.           ೨ನೇ ಮನೆಯು ಕಟಕವಾಗಿದ್ದು, ಕಟಕದಲ್ಲಿ ೭ನೇ ಮನೆ ಹಾಗೂ ೧೦ ನೇ ಮನೆಯ ಅಧಿಪತಿ ಗುರು ಗ್ರಹವು ವಕ್ರಿಯಾಗಿ ಕುಳಿತಿದ್ದಾನೆ. ಕಟಕದ ಅಧಿಪತಿ ಚಂದ್ರ ೧೦ ನೇ ಮನೆಯಾದ ಮೀನದಲ್ಲಿ ಉಪಸ್ಥಿತನು.

15.           ಮೂರನೇ ಮನೆಯಲ್ಲಿ ೮ ಮತ್ತು ೯ ನೇ ಮನೆ ಅಧಿಪತಿಯಾದ ಶನಿಗ್ರಹನು ರಾಹುವಿನೊಂದಿಗೆ ಉಪಸ್ಥಿತನು.
16.           ೪ ನೇ ಮನೆಯಲ್ಲಿ ಯಾವ ಗ್ರಹಗಳೂ ಇಲ್ಲ. ಆದರೆ ಈ ಮನೆಯ ಅಧಿಪತಿ ಬುಧನು ಕಳತ್ರ ಸ್ಥಾನವಾದ ೭ ರಲ್ಲಿ ಸ್ಥಿರನಾಗಿದ್ದಾನೆ.
17.           ಪಂಚಮ ಸ್ಥಾನದಲ್ಲಿ ಯಾವ ಗ್ರಹಗಳೂ ಇಲ್ಲ. ಅದೇ ಪಂಚಮಾಧಿಪತಿ ಹಾಗೂ ವ್ಯಯಾಧಿಪತಿಯಾದ ಶುಕ್ರನು ೬ ನೇ ಮನೆಯಲ್ಲಿ ಉಪಸ್ಥಿತನು.
18.           ಕೇಂದ್ರ ಹಾಗೂ ತ್ರಿಕೋಣ ಸ್ಥಾನಗಳು ಬಹಳ ಶುಭಪ್ರದ. ಅಂದರೆ ಲಗ್ನ, ಕನ್ಯಾ, ಧನೂರ್ ಹಾಗೂ ಮೀನದಲ್ಲಿರುವ ಗ್ರಹಗಳು (೧,೪,೭, ಮತ್ತು ೧೦ ನೇ ಮನೆಗಳು)ಶುಭ ಫಲಗಳನ್ನೇ ಕೊಡುವನು. ಅಂತೆಯೇ ತ್ರಿಕೋಣ ಸ್ಥಾನಗಳಾದ ಒಂದನೇ, ಪಂಚಮ ಹಾಗೂ ನವಮ (೧, ೫, ಮತ್ತು ೯ ನೇ ಮನೆಗಳು) ಸ್ಥಾನದಲ್ಲಿರುವ ಗ್ರಹಗಳೂ ಕೂಡ ಒಳ್ಳೆಯ ಫಲಗಳನ್ನೇ ಕೊಡುವನು.
19.           ಮೇಲಿನ ಕುಂಡಳಿಯಲ್ಲಿ ಮೊದಲನೇ ಮನೆಯಾದ ಲಗ್ನದಲ್ಲಿ ಯಾವ  ಗ್ರಹಗಳೂ ಇರದಿದ್ದರೂ ಸಹ, ಅದರ ಅಧಿಪತಿಯಾದ ಬುಧ ಗ್ರಹನು ೭ ನೇ ಮನೆಯಲ್ಲಿ ಅಂದರೆ ಕೇಂದ್ರ ಸ್ಥಾನ ಸ್ಥಿತನು. ಆದ್ದರಿಂದ ಆತನು ಒಳ್ಳೆಯ ಫಲಗಳನ್ನೇ ಕೊಡುವನು. ಅಂದರೆ ಈ ಜಾತಕಳು ಸಾಮಾನ್ಯವಾಗಿ ಆರೋಗ್ಯವಂತರಾಗಿ ಇವರ ಕನಸುಗಳೆಲ್ಲಾ ನೆರವೇರುವಲ್ಲಿ ಸಂಶಯವೇ ಬೇಡ. ಇವರಿಗೆ ಸಿಗುವಂತಹ ಗಂಡನು ಅತೀ ಬುಧ್ಧಿವಂತ ಹಾಗೂ ಒಳ್ಳೇ ವಿದ್ಯಾವಂತನಾಗಿರುತ್ತಾನೆ. ಆತನು ಒಳ್ಳೇ ವ್ಯವಹಾರ ಜ್ನಾನಿಯೂ, ಒಳ್ಳೆಯ ಮಾತುಗಾರನೂ ಆಗಿರುತ್ತಾನೆ. ಸೂರ್ಯನು ಬುಧನೊಡನೆ ಇರುವುದರಿಂದ ಆತನು ಒಳ್ಳೇ ಧೈರ್ಯಶಾಲಿಯೂ, ತನ್ನ ವೃತ್ತಿಯಲ್ಲಿ ಸದಾ ಸಂಚಾರವನ್ನೂ ಮಾಡುವಂತನೂ ಆಗಿರುತ್ತಾನೆ. ಸೂರ್ಯನು ಆತನಿಗೆ ಒಳ್ಳೇ ಧೈರ್ಯವನ್ನೂ ಏಡ್ಮಿನಿಸ್ಟ್ರೇಷನ್ ಪವರನ್ನೂ ಕೊಡುವನು.

20.           ಇನ್ನು ೬ ನೇ ಮನೆ ಅಧಿಪತಿಯಾದ ಹಾಗೂ ಲಾಭಾಧಿಪತಿಯಾದ ಕುಜನು ಇವರೊಡನೆ ಇರುವುದರಿಂದ, ಇವಳಿಗೆ ಸಿಗುವ ಪತಿ ಪರಮೇಷ್ವರನು ಮುಂಗೋಪಿಯೂ, ಅತೀ ಧೈರ್ಯಶಾಲಿಯೂ ಆಗಿರುವನು. ಈ ಜಾತಕಳ ೬ ನೇ ಮನೆ ಹಾಗೂ ೧೧ ನೇ ಮನೆಯ ಕಾರಕತ್ವಗಳು ಎಲ್ಲಾ ಒಳ್ಳೆಯದಾಗಿಯೇ ಪರಿವರ್ತಿತವಾಗುವುದು. ಇದಕ್ಕೆ ಕಾರಣ, ಕುಜನು ಕೇಂದ್ರಸ್ಥಾನದಲ್ಲಿ ಉಪಸ್ಥಿತನಾಗಿರುವುದಕ್ಕಾಗಿ.
21.           ಇನ್ನು ಪಂಚಮಾಧಿಪತಿ ಹಾಗೂ ೧೨ ನೇ ಮನೆ (ವ್ಯಯಾ) ಅಧಿಪತಿಯಾಗಿ ಶುಕ್ರನು ತ್ರಿಕ್ ಸ್ಥಾನವಾದ ೬ ನೇ ಮನೆಯಲ್ಲಿ ಉಪಸ್ಥಿತನು. ಇದೊಂದು ಒಳ್ಳೇ ರಾಜ ಯೋಗವಾದ ವಿಮಲ ಯೋಗವಾಗಿರುತ್ತೆ. ಅಂದರೆ ಇವರಿಗೆ ೬ ನೇ ಮನೆಯ ಕಾರಕತ್ವಗಳೆಲ್ಲಾ +ವ್ ಆಗಿಯೇ ಪರಿವರ್ತನೆಗೊಳ್ಳುತ್ತವೆ. ೧೨ನೇ ಮನೆಯ ಕಾರಕತ್ವಗಳೂ ಸಹವು ಒಳ್ಳೇ ಶುಭದಾಯಕವಾಗಿರುತ್ತವೆ. ಅಂದರೆ ಇವರು ವಿದೇಶಕ್ಕೆ ಹೋಗುತ್ತಲೇ ಇರುತ್ತಾರೆ. ಖರ್ಚಿನಲ್ಲಿ ಜಾಸ್ತಿ ಆದರೂ ಸಹ, ಇವರಿಗೆ ಯಾವ ಕುಂದು ಕೊರತೆಗಳೂ ಕಾಣದು. ಕೋರ್ಟು ಕಚೇರಿಗಳಲ್ಲಿ, ಯಾವುದೇ ಕಾನೂನಿನ ಹೋರಾಟದಲ್ಲಿ, ಮುಕದ್ದಮಾದಲ್ಲಿ ಇವರಿಗೇ ಜಯ ಸಿಗುವುದರಲ್ಲಿ ಸಂದೇಹವೇ ಬೇಡ. ಇವರು ಕೈಗೆ ತೆಗೆದುಕೊಂಡಂತಹ ಕೇಸುಗಳಿಗೆ ಜಯ ಸಿಗುವುದರಲ್ಲಿ ಸಂದೇಹವೇ ಬೇಡ. ಇವರು ಶಯನ ಸುಖದಲ್ಲಿಯೂ ಸಿಹಿಯನ್ನೇ ಕಾಣುವರು. ಇವರ ಖರ್ಚು ಕೂಡಾ ಆಕಾಶದೆತ್ತರಕ್ಕೆ ಹೋಗುವುದು.
22.           ಅಷ್ಟಮಾಧಿಪತಿ ಹಾಗೂ ನವಮಾಧಿಪತಿಯಾದ ಶನೈಸ್ಚರನು ಸಾಮಾನ್ಯ ಮನೆಯಾದ ೩ ರಲ್ಲಿ ರಾಹುವಿನ ಜೊತೆಯಲ್ಲಿರುವನು. ಅಂದರೆ ಈ ಮನೆಯು ಕೇಂದ್ರ ಹಾಗೂ ಪಂಚಮ ಸ್ಥಾನವಲ್ಲವಾದ ಕಾರಣ ಇದನ್ನ ಅತೀ ಶುಭಪ್ರದನೆಂದು ಹೇಳಲಾಗುವುದಿಲ್ಲ. ಆದರೆ ಶನಿವತ್ ರಾಹು, ಅರ್ಥಾತ್ ರಾಹು ಕೂಡಾ ಶನಿಯ ಕಾರಕತ್ವಗಳನ್ನೇ ಕೊಡುವ ಕಾರಣ, ಮತ್ತು ರಾಹು ಹಾಗೂ ಶನಿಯು ತನ್ನದೇ ಆದ ತ್ರಿಕೋಣ ಸ್ಥಾನವಾದ ಕುಂಭವನ್ನ ನೋಡುವ ಕಾರಣ, ಜಾತಕಳು ಕೋಟ್ಯಾಧೀಷಳು ಆಗುವುದರಲ್ಲಿ ಸಂದೇಹವೇ ಬೇಡ! ಆದರೆ ಅದು  ಶನಿಯ ಮಂದ ತತ್ವಕ್ಕಾಗಿ ಸ್ವಲ್ಪ ನಿಧಾನವಷ್ಟೇ. ಶನಿಯು ಕೊಡುವಲ್ಲಿ ನಿಧಾನವನ್ನೇ ಮಾಡುವನಸ್ಟೇ ವಿನಹ, ಅದನ್ನ ಡಿನೈ ಮಾಡುವುದಿಲ್ಲ. ಶನಿಯನ್ನ ನಂಬಿದವರನ್ನ ಬಿಡುವುದೇ ಇಲ್ಲ. ಇವರ ಸಂಸಾರವು ಪ್ರತೀ ಶನಿವಾರದಂದು ಶನಿ ಮಂದಿರಕ್ಕೆ ಹೋಗಿ ಎಳ್ಲೆಣ್ಣೆ ದೀಪ ಹಚ್ಚಿ, ಕರಿ ಬಟ್ಟೆ ಮತ್ತು ಕರಿ ಎಳ್ಳನ್ನ ಹಾಕಿ ಬರುತ್ತಾರೆ. ಆದ್ದರಿಂದ ಇವರುಗಳಿಗೆ ಯಾವುದೇ ತೊಂದರೆಗಳು ಬರಲು ಸಾಧ್ಯವಿಲ್ಲ.
23.           ಇನ್ನು ದಶಮಾಧಿಪತಿಯಾದ ಗುರುವು ಹಾಗೂ ಕಳತ್ರ ಸ್ಥಾನಾಧಿಪತಿಯಾದ ಗುರುವು ಎರಡನೇ ಮನೆಯಲ್ಲಿ ವಕ್ರಿಯಾಗಿ, ಉಛ್ಛನಾಗಿರುವ ಕಾರಣ, ಜಾತಕಳಿಗೆ ಉತ್ತಮ ಅತ್ತೆ-ಮಾವಂದಿರ ಮನೆಯು ಸಿಗುತ್ತದೆ. ಆದರೆ ಅಲ್ಲಿಯೂ ಕೂಡ ಜಾತಕಳೇ ಲೀಡ್ ರೋಲನ್ನ ತಂದುಕೊಳ್ಳುವಳು. ಇದಕ್ಕೆ ಕಾರಣ ಗುರುವು ಉಛ್ಛನಾಗಿರುವುದು! ಆದರೆ ಮಿಥುನ ಲಗ್ನದವರಿಗೆ ಗುರುವು ಕೇದ್ರಾಧಿಪತಿ ದೋಶದಿಂದ ಕೂಡಿದ್ದರೂ, ಇದರಿಂದಾಗಿ  ಒಳ್ಳೆಯದನ್ನ ಮಾಡದೇ ಹೋದರೂ, ಹಾಳನ್ನಂತೂ ಮಾಡಲಾರ. ಜಾತಕಳಿಗೆ ಸೂರ್ಯ ದಶೆ, ಚಂದ್ರ ದೆಸೆ ಹಾಗೂ ಕುಜನ ದೆಶೆಯು ಒಳ್ಳೆಯದನ್ನೇ ಮಾಡುವನು. ಆದರೆ ಇವರಿಗೆ ೭ ನೇ ಮನೆಯ ಅಧಿಪತಿ ಗುರುವು ಭಾದಕಾಧಿಪತಿಯಾದ ಕಾರಣ ಗುರುವಿನ ದೆಶೆ ಹಾಗೂ ಅಂತರದೆಶೆಯಲ್ಲಿ ತೊಂದರೆಗಳು ಆಗುವ ಸಂದರ್ಭಗಳು ಕಾಣಸಿಗುತ್ತವೆ!





No comments:

Post a Comment