೯
ಗ್ರಹಗಳು ಮತ್ತು ಅದರ ವಿಶೇಷ ಗುಣಗಳು.
ರವಿ
:- ☉
· ರವಿಯು ಸಿಂಹ ರಾಶಿಯ ಅಧಿಪತಿ
· ಇದು ಅಗ್ನಿ ತತ್ವದ ಗ್ರಹ.
· ಪುರುಷ ಗ್ರಹ.
· ಸರ್ಕಾರಿ ನೌಕರಿಯಲ್ಲಿ ಇರುವವರು.
· ಅಧಿಕಾರವನ್ನ ನಡೆಸುವವರು.
· ದರ್ಪದಿಂದ ಸದಾ ಇರುವವರು.
· ಅಹಂಕಾರದಿಂದ ಮೆರೆಯುವವರು.
· ಆಡಳಿತ (ಇವರು ಆಡಳಿತವನ್ನ ಚೆನ್ನಾಗಿ ಮಾಡುತ್ತಾರೆ.)
· ನಾಯಕತ್ವವನ್ನ ಬಯಸುವವರು.
· ಒಂಟಿಯಾಗಿ ಕುಳಿತು ಯೋಚನೆಯನ್ನ ಮಾಡುವವರು
· ನ್ಯಾಯ ತೀರ್ಮಾನವನ್ನ ಮಾಡುವವರು.
· ಗುಂಡಾದ ಮುಖವಿರುವವರು
· ಇಅವ್ರುಗಳ ಮುಖ, ಅಸ್ಟೊಂದು ಆಕರ್ಷಣೆ ಇರೋದಿಲ್ಲ(ಕಾರಣ ಸಿಂಹದ ಮುಖವೇ ಹಾಗೆ).
· ಉಗ್ರ ಮನಸ್ಸಿರುವವರು.
· ಬಹಳ ಕೋಪಿಸ್ಟರು
· ಕಠಿಣ ಹೃದಯ ಇರುವವರು.
· ಶಿಕ್ಷೆಯನ್ನ ಕೊಡುವವರು.ಕಾರಣ ಇದು ರಾಜನ ರಾಶಿ.
· ಹೆಚ್ಚಿಗೆ ಕ್ಷಮಾಯಾಚನೆ ಇರೋಲ್ಲ ಇವರಲ್ಲಿ.
· ಗಂಭೀರ ನಡಿಗೆ ಉಳ್ಳವರು.
· ಒಳ್ಳೇ ಶ್ರೀಮಂತ ಗ್ರಹ
· ಸದಾ ಗೆಲ್ಲುವ ಹಂಬಲ
· ಇವರಿಗೆ ವಾಹನ ಸುಖವಿರುತ್ತದೆ.
· ಯಾವಾಗಲೂ ಡೋಮಿನೇಷನ್ ನೇಚರ್ ಇರುವವರು.
· ಮುಖ್ಯ ಮಂತ್ರಿ, ಮಂತ್ರಿ, ಎಮ್.ಎಲ್.ಏ ಎಲ್ಲಾ ಸಿಂಹ ರಾಶಿಯವರು.
· ರವಿಯನ್ನ ಕ್ರೂರ ಗ್ರಹವೆಂದೂ ಕರೆಯುತ್ತಾರೆ.
· ರವಿಯು ಜ್ನಾನವಂತ ಗ್ರಹ. ಆದರೆ ವಿದ್ಯಾವಂತ ಗ್ರಹವಲ್ಲ.
· ರವಿಯ ಸಂಖೆ ೧.
· ಪಿತೃ ಕಾರಕ.
· ಉಛ್ಛ ಸ್ಥಾನ ಮೇಷ ರಾಶಿ
· ಉಛ್ಛಾಂಶ ೧೦ *
· ಮೂಲ ತ್ರಿಕೋಣ ಸಿಂಹ ರಾಶಿ
· ದಶಾ ಅವಧಿ ೬ ವರುಷ.
· ಒಂದು ರಾಶಿಯಿಂದ ಇನ್ನೊಂದು ರಾಶಿಗೆ ೧ ತಿಂಗಳು.
· ಧಾನ್ಯ ಗೋಧಿ.
· ದಿಕ್ಕು ಪೂರ್ವ
· ಕಾರಕ ಪಿತ್ಥ
· ನೀಚ ಸ್ಥಾನ ತುಲಾ ರಾಶಿ
· ರವಿಯು ಮೂಳೆಯ ಕಾರಕ.
· ಇಂದ್ರಿಯ :- ಕಣ್ಣು.
· ಗೃಹ ಮಿತ್ರ :-ಚಂದ್ರ, ಕುಜ,ಗುರು, ಕೇತು.
· ಶತ್ರು :- ಶನಿ,ಶುಕ್ರ, ರಾಹು.
· ಸಮ ಗ್ರಹ :- ಬುಧ
· ರವಿಯ ರತ್ನ ಮಾಣಿಕ್ಯ
· ರವಿಯ ಬಣ್ಣ ಕೆಂಪು ಮತ್ತು ಗುಲಾಬಿ.
· ಪೀತಾಂಬರ ಇವರ ಮೆಟಲ್.
ಚಂದ್ರ
:-
☽
· ಕಟಕ ರಾಶಿಯ ಅಧಿಪತಿ.
· ಜಲತತ್ವದ ಗ್ರಹ.
· ಶಾಂತ ಸ್ವಭಾವದ ಗ್ರಹ.
· ಸುಂದರ ಕಣ್ಣುಗಳು ಇರುವವರು.
· ಕರುಣೆ ಇರುವವರು.
· ಸ್ತ್ರೀ ಗ್ರಹ.
· ಸಭ್ಯತೆ ಜಾಸ್ತಿ.
· ಮಾತೃ ಹೃದಯ ಇರುವವರು.
· ಚಂದ್ರನೂ ಸೂರ್ಯನಂತೆ ಅಧಿಕಾರ ಗ್ರಹ.
· ಇವರು ದಕ್ಷ ಆಡಳಿತಕಾರರು.
· ಆದರೆ ಇವರು ಹೊಂದಾಣಿಕೆಯನ್ನ ಮಾಡುವಂತಹವರು. ಕಾರಣ ಶಾಂತತೆಯೇ
ಪ್ರಾಧಾನ್ಯ ಇವರಿಗೆ.
· ಕಠಿಣ ಹೃದಯ ಇರುವವರು. ( ಯಾಕೆಂದರೆ ತಾಯಿ ಮಕ್ಕಳನ್ನ
ಹೊಡೆಯುತ್ತಿರುತ್ತಾರೆ)
· ಪರರಿಗೆ ಉಪಕಾರವನ್ನ ಮಾಡುವರು.
· ಜನರಿಗೆ ಸಹಾಯವನ್ನ ಮಾಡುವವರು.
· ಶ್ರೀಮಂತ, ಜ್ನಾನವಂತ, ಹಾಗೂ ವಿದ್ಯಾವಂತ ಗ್ರಹ.
· ಓದದೇನೇ ಜ್ನಾನವನ್ನ ಪಡೆಯುವವರೆಂದರೆ, ಇವರುಗಳು. ಎಲ್ಲಾ
ವಿಷಯಗಳಲ್ಲಿ ಒಳ್ಳೇ ಮಾಹಿರತೆ ಉಂಟು.
· ಒಳ್ಳೇ ಜ್ಯೋತಿಷ್ಯಗಾರನಿಗೆ ಚಂದ್ರನು ಒಳ್ಳೆಯವನಾಗಿರಬೇಕು.
· ಚಂದ್ರನು ಕ್ಷಮಾದಾಯಕ ಗ್ರಹ.
· ಇವರುಗಳು ಆಭರಣ ಪ್ರಿಯರು.
· ವಿವಿಧ ವಸ್ತುಗಳ ಪ್ರಿಯರು.
· ವೈಭವ ಜೀವನವನ್ನ ನಡೆಸುವವರು.
· ಇವರಿಗೆ ವಾಹನ ಸುಖವಿರುತ್ತದೆ.
· ಆದರೆ ಇಲ್ಲಿ ಸೇವಕರು ಡ್ರೈವ್ ಮಾಡಲು ಇರುತ್ತಾರೆ. ಇವರುಗಳು
ಸಾಮಾನ್ಯವಾಗಿ ಮಾಡೋಲ್ಲ.
· ಇಲ್ಲಿ ಹೆಚ್ಚಿಗೆ ಸ್ವತಂತ್ರ ಮನೋಭಾವನೆ ಇರುತ್ತದೆ.
· ಇವರು ಕುಟುಂಬ ನಿರ್ವಹಣೆಯಲ್ಲಿ ನಿಸ್ಸೀಮರು. ಪೈಸ ಪೈಸ ಲೆಕ್ಕ
ಹಾಕುತ್ತಾರೆ.
· ಒಳ್ಳೇ ಆಹಾರವನ್ನ ತಯ್ಯಾರು ಮಾಡುವವರು.
· ಇವರುಗಳು ಒಳ್ಳೇ ಭೋಜನ ಪ್ರಿಯರು ಕೂಡ. ಆಲ್ತು, ಫ಼ಾಲ್ತು
ತಿನ್ನೋಲ್ಲ.
· ಇವರುಗಳಿಗೆ ಅಡಿಗೆ ಪರ್ಫ಼ೆಕ್ಟ್ ಆಗಬೇಕು.
· ಚಂದ್ರನ ಸಂಖೆ ೨
· ಚಂದ್ರನ ಮಿತ್ರರು ರವಿ ಮತ್ತು ಬುಧ ಹಾಗೂ ಕೇತು.
· ಶತ್ರು ರಾಹು.
· ಸಮ ಗ್ರಹಗಳು ಕುಜ, ಗುರು, ಶುಕ್ರ ಮತ್ತು ಶನಿ.
· ಚಂದ್ರ ಮಾತೃ ಕಾರಕ.
· ಉಛ್ಛ ಸ್ಥಾನ :- ವೃಷಭ ರಾಶಿ.
· ನೀಚ ಸ್ಥಾನ :- ವೃಸ್ಚಿಕ ರಾಶಿ.
· ದಶಾ ವರ್ಷ :- ೧೦
· ಮೂಲ ತ್ರಿಕೋಣ :- ಕರ್ಕ ರಾಶಿ.
· ಉಛ್ಚಾಂಶ :- ೩ *
· ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಅವಧಿ ೨ ೧/೨ ದಿನ
· ದಿಕ್ಕು :- ವಾಯೂವ್ಯ.
· ಕಾರಕ :- ಕಫ
· ಲೋಹ :- ಬೆಳ್ಳಿ.
· ಅಂಗಾಂಗ :- ರಕ್ತ.
· ಇಂದ್ರಿಯ :- ನಾಲಿಗೆ.
· ಧಾನ್ಯ :- ಅಕ್ಕಿ
· ಇವರ ರತ್ನ ಮುತ್ತು.
· ಇದೇ ಚಂದ್ರ ಋಣಾತ್ಮಕನಾದಲ್ಲಿ, ಹೊಟ್ಟೇ ಕಿಚ್ಚು ಬಹಳ.
· ಇವರಲ್ಲಿ ಶಕ್ತಿ ಹೀನತೆ ಉಂಟಾಗುತ್ತದೆ.
· ಅಜೀರ್ಣತೆ ಜಾಸ್ತಿ
· ಆವಾಗಾವಾಗ ಟಾಯಿಲೆಟ್ಟಿಗೆ ಹೋಗುತ್ತಿರುತ್ತಾರೆ.
· ಹೊಟ್ಟೇ ಸಂಬಂಧಿತ, ಅಂದರೆ ಜಲ ಸಂಬಂಧಿತ ಕಾಹಿಲೆಗಳು ಜಾಸ್ತಿ.
· ಅದೇ ಚಂದ್ರ ಕೆಟ್ಟಲ್ಲಿ, ವಾಮಾಚಾರಕ್ಕೆ ಇಳಿಯುತ್ತಾರೆ.
· ಇವರು ಚಂದ್ರನಂತೆ ಬಳುಕು ದೇಹ. ಇವರ ಕಟ್ಟಿ ಹಿಂದೆ
ಬಂದಿರುತ್ತದೆ.
ಕುಜ
ಗ್ರಹ :-
· ಮೇಷ ಹಾಗೂ ವೃಸ್ಚಿಕ ರಾಶಿಗಳ ಅಧಿಪತಿ.
· ಅಗ್ನಿ ತತ್ವದ ಗ್ರಹ. ಅದಕ್ಕೇ ಮೇಷ ರಾಶಿಯ ಕುಜನಿಗೆ
ಪ್ರಾಮುಖ್ಯತೆ ಜಾಸ್ತಿ.
· ವೃಸ್ಚಿಕ ರಾಶಿಯ ಕುಜನ ಜಲ ತತ್ವಕ್ಕೆ ಅಸ್ಟೇನೂ ಪ್ರಾಮುಖ್ಯತೆ
ಕೊಡೋಲ್ಲ.
· ಕುಜನು ಪುರುಷ ಗ್ರಹ.
· ಈತ ಉಗ್ರ ಗ್ರಹನೂ ಹೌದು.
· ಒಳ್ಳೇ ಕೋಪಿಸ್ಠರು.
· ಬಣ್ಣ ರಕ್ತ ಕೆಂಪು.
· ದೇಹದಲ್ಲಿಯ ರಕ್ತ ಸೂಚಕ ಗ್ರಹ.
· ಹೊಡೆದಾಟಕ್ಕೆ, ಬಡಿದಾಟಕ್ಕೆ ಕಾರಕ ಗ್ರಹ.
· ಆದರೆ ಪರೋಪಕಾರಿ ಗ್ರಹ.
· ಸಾಮಾನ್ಯವಾಗಿ ಗೆಲ್ಲುವ ಗ್ರಹ.
· ಅಸ್ತ್ರ ಶಸ್ತ್ರಗಳ ಬಳಕೆಯನ್ನ ಮಾಡುವಂತಹ ಗ್ರಹ.
· ಪರರನ್ನ ಪೀಡಿಸುವ ಗ್ರಹ.
· ಸಮಾಜ ಘಾತಕ ಕೆಲಸಗಳನ್ನ ಮಾಡುವಂತಹ ಗ್ರಹ.
· ಆಕ್ರೋಷದ ಗ್ರಹ.
· ಒಂದು ಸಾಲಿನಲ್ಲಿ ನಿಂತಲ್ಲಿ, ಹಿಂದಿದ್ದವ ಕ್ರಮ ತಪ್ಪಿ ಮುಂದೆ ಹೋಗಿ ನಿಂತಿರುತ್ತಾನೆ.
· ಶರೀರ ಶಕ್ತಿಯನ್ನ ಉಪಯೋಗಿಸುವವ. ಯುಕ್ತಿಯನ್ನಲ್ಲ.
· ಕಿರುಚಿ ಅಥವಾ ಜೋರಾಗಿ ಮಾತನಾಡುವ ಗ್ರಹ.
· ಶರೀರ ಬಹಳ ಕಟ್ಟು ಮಸ್ತಾಗಿರುತ್ತೆ.
· ಆರೋಗ್ಯವಂತ ಗ್ರಹ.
· ನ್ಯಾಯವನ್ನ ಕೊಡಿಸುತ್ತಾರೆ.
· ಸಮಾಜ ಸೇವೆಯೇ ಇವರ ಗುರಿ. (ಪೋಲೀಸ್ ಹುದ್ದೆ, ಮಿಲಿಟರಿ ಹುದ್ದೆ, ನೇವ್ವಿ ಹುದ್ದೆ, ಆರ್ಮ ಗಾಡ್ಸ್
ಹುದ್ದೆ ಹೀಗೆ ಎಲ್ಲಿ ಡ್ರೆಸ್ಸ್ ಕೋಡ್ ಇರುತ್ತವೆಯೋ ಅಲ್ಲಿ ಇವರದ್ದೇ ಗುಂಪು. ಖಾದಿ ಧರಿಸುವವರೂ
ಹೆಚ್ಚು ಇವರೇ. ಅಂದರೆ ಮಂಗಲ್ ಬಹಳ ಸ್ಟ್ರೋಂಗ್)
· ಇವರದ್ದು ಕುಟುಂಬ, ನಾಡು, ದೇಷದ ರಕ್ಷಣೆಯೇ ಗುರಿ.
· ಹಿಟ್ಲರ್ ಅಂದಾಕ್ಷಣ ಕುಜನ ನೆನಪಾಗಬೇಕು ನಿಮಗೆಲ್ಲಾ.
· ಟೆರ್ರೋರಿಸ್ಟ್ಸಗಳೆಲ್ಲಾ ಯುವಕರೇ, ಹಾಗೂ ಇವರಲ್ಲಿ
ಕುಜನು ಬಹಳ ಸ್ಟ್ರೋಂಗ್.
· ಕೆಂಪು ಬಣ್ಣದ ಹವಳ ಇವರ ರತ್ನ.
· ಇವರಿಗೆ ಆಟಕ್ಕೆ ಬೇಕಾಗುವ ಶಕ್ತಿ ಕುಜನು ಕೊಡುತ್ತಾನೆ. ಆದರೆ
ಆಟಕ್ಕೆ ಕಾರಕನಲ್ಲ.
· ಸಂಖೆ ೯
· ಕಾರಕತ್ವ ಭ್ರಾತೃ
· ಉಛ್ಛಕ್ಷೇತ್ರ ಮಕರ ರಾಶಿ.
· ನೀಚ ಕ್ಷೇತ್ರ ಕರ್ಕ ರಾಶಿ.
· ದಶಾ ವರ್ಷ ೭.
· ಅಂಗಾಂಗ :- ಮಜ್ಜೆ.
· ಉಛ್ಚಾಂಶ :- ೨೮*
· ಓಮ್ದು ರಾಶಿಯಿಂದ ಇನ್ನೊಂದು ರಾಶಿಗೆ ೪೫ ದಿನಗಳು.
· ದಿಕ್ಕು :- ದಕ್ಷಿಣ
· ಲೋಹ : ತಾಮ್ರ
· ದೃಸ್ಟಿ :- ೪,೭ ಮತ್ತು ೮.
· ಮಿತ್ರ ಗ್ರಹಗಳಿ :- ಗುರು, ರವಿ ಮತ್ತು ಚಂದ್ರ
· ಶತ್ರುಗಳು :- ಬುಧ
· ಸಮ ಗ್ರಹಗಳು :- ಶುಕ್ರ ಮತ್ತು ಶನಿ.
ಬುಧ
ಗ್ರಹ:-
☿
· ಮಿಥುನ ಮತ್ತು ಕನ್ಯಾ ಅಧಿಪತಿ.
· ಇವರುಗಳು ಪಾದರಸದಂತೆ ಬಹಳ ಚುರುಕು ಸ್ವಭಾವ.
· ಎಲ್ಲವುದರಲ್ಲಿಯೂ ಚುರುಕುತನ. ಬರೇ ೫ ನಿಮಿಷಗಳಲ್ಲಿ ಇವರ ಸ್ನಾನ
ಮುಗಿಯುತ್ತದೆ.
· ಬರೇ ೩ ನಿಮಿಷಗಳಲ್ಲಿ ಇವರ ಊಟ ಮುಗಿಯುತ್ತೆ.
· ಮಾತು ಕೂಡ ಹಾಗೆಯೇ, ಒಳ್ಳೇ ಅರಳು ಹೊಟ್ಟಿದ ಹಾಗೆ ಮಾತನಾಡುತ್ತಾರೆ.
· ಕಾರಣ ಬುಧನು ಕಮ್ಯುನಿಕೇಷನ್ ಗ್ರಹ.
· ಮಿಥುನದಲ್ಲಿ ಧನಾತ್ಮಕ(+ವ್) ಮತ್ತು ಕನ್ಯಾದಲ್ಲಿ ಋಣಾತ್ಮಕ
(-ವ್)
· ಆದ್ದರಿಂದ ಮಿಥುನದ ವಾಯು ತತ್ವಕ್ಕೇ ಪ್ರಾಧಾನ್ಯ ಜಾಸ್ತಿ.
· ಕನ್ಯಾದ ಪ್ರಥ್ವೀ ತತ್ವಕ್ಕೆ ಅಸ್ಟೇನೂ ಪ್ರಾಧಾನ್ಯ ಕೊಡೋಲ್ಲ.
· ಎಲ್ಲಾ ಪುರುಷ ರಾಶಿಗಳಲ್ಲಿ ಗ್ರಹಗಳು
ಶಕ್ತಿಶಾಲಿಗಳಾಗಿರುತ್ತವೆ.
· ಎಲ್ಲಾ ಸ್ತ್ರೀ ರಾಶಿಗಳಲ್ಲಿ ಅವುಗಳು ಋಣಾತ್ಮಕವಾಗಿರುತ್ತವೆ.
· ಇವರುಗಳಲ್ಲಿ ಸದಾ ಎನಾದರೊಂದು ಕಲಿಯುವ ಚಟ ಜಾಸ್ತಿ.
· ಆದರೆ ಬುಧನದ್ದು ಮಕ್ಕಳ ಸ್ವಭಾವ. ಎಸ್ಟೇ ವಯಸ್ಸಾದರೂ ಚಿಕ್ಕ
ಮಕ್ಕಳಂತೆ ವರ್ತಿಸುತ್ತಾರೆ.
· ಒಳ್ಳೇ ಶೇಪ್ ಇರುವಂತಹವರು ಬುಧ ಗ್ರಹ.
· ಇವರಲ್ಲಿ ಕಾಲು ಮತ್ತು ದೇಹ ಒಂದೇ ಅಳತೆಯದ್ದಾಗಿರುತ್ತದೆ.
· ವ್ಯಾಪಾರ ಮನೋಭಾವ ಪ್ರತಿಯೊಂದರಲ್ಲಿಯೂ. ವರದಕ್ಷಿಣೆ
ವಿಚಾರದಲ್ಲಿಯೂ ಕೂಡ ವ್ಯಾಪಾರ ಭಾವನೆ ಜಾಸ್ತಿ.
· ಬಹು ಬುದ್ಧಿವಂತ ಗ್ರಹ. (Extra
Ordinary Brilliance.)
· ಗೂಢ ವಿದ್ಯಗಳನ್ನ ಅಧ್ಯಯನ ಮಾಡುವುದು
ಇವರುಗಳು ಜಾಸ್ತಿ.
· ಸಂಶೋಧನಾ ಮನೋಭಾವನೆ ಜಾಸ್ತಿ.(Researech
Oriented.)
· ಇವರುಗಳು ಹಣ ಕಾಸಿನ ವ್ಯವಹಾರಗಳನ್ನ ಮಾಡುವವರು. ಅದೇ ಗುರು ಗ್ರಹವು
ಹಣ ಕಾಸಿನ ಸಂಸ್ಥೆಯಲ್ಲಿ ಕೆಲಸವನ್ನ ಮಾಡುವವರು.
· ಯಾವಾಗಲೂ ಹೊಸತನ್ನೇ ಬಯಸುವರು.
· ಹಳೇದಲ್ಲ ಇಸ್ಟ ಆಗೋಲ್ಲ ಇವರಿಗೆ.
· ಎಲ್ಲಾ ಕಲೆಗಳಲ್ಲಿ(ನೃತ್ಯ, ಸಂಗೀತ, ಇತ್ಯಾದಿ) ಅಭಿರುಚಿ ಜಾಸ್ತಿ.
· ಸಾಹಿತ್ಯದಲ್ಲಿಯೂ ಇವರುಗಳು ಅಭಿರುಚಿಯನ್ನ ತೋರಿಸುವರು.
· ಒಳ್ಳೇ ಬರೆವಣಿಕೆಗಾರರು.
· ಒಳ್ಳೇ ಜ್ಯೋತಿಷ್ಯಗಾರರು.
· ಆಟಗಳಲ್ಲಿ , ಅದೂ (Indoor or Outdoor
Activities) ಯಾವುದೇ ಆಟ ಇರಬಹುದು.
· ಈ ಆಟಗಳಿಗೆ ಬೇಕಾಗುವ ಎನರ್ಜಿಯನ್ನ ಕೊಡುವ ಗ್ರಹ ಮಾತ್ರ ಕುಜ.
· ಇವರು ಕಾಣಲು ಸಣ್ಣಕ್ಕೆ, ಉದ್ದಕ್ಕೆ ಇರುತ್ತಾರೆ. ಸೊರಗಿ
ಹೋದವರಂತೆ ಕಾಣಿಸುತ್ತಾರೆ.
· Experts in
Fine Arts (ಇವುಗಳಲ್ಲಿ ಬುಧ ಮತ್ತು ಶುಕ್ರನ ಪಾತ್ರ ಬಹು ದೊಡ್ಡದು.)
· ಇವರೊಬ್ಬರು ಉತ್ತಮ ಪ್ರಾಧ್ಯಾಪಕರು.
· ಅಧಿಕ ಭೂಮಿ, ಹಣ, ಒಡವೆಗಳ ಸಂಗ್ರಹ ಜಾಸ್ತಿ ಇವರುಗಳಿಗೆ.
· ವಾಹನಗಳನ್ನೂ ಸಂಗ್ರಹ ಮಾಡುವಲ್ಲಿ ಇವನದ್ದೇ ಎತ್ತಿದ ಕೈ.
· ಮ್ರಧು ಭಾಷಿ.
· ಜಗಳ ಆಡೋಲ್ಲ. ಕಾರಣ ನಪುಂಸಕ ಗ್ರಹ. ಆದರೆ ಮೋಸ ಮಾಡುವುದರಲ್ಲಿ
ಎತ್ತಿದ ಕೈ.
· ಇವರ ಮುಖದಲ್ಲಿ ಮುಗ್ಧತೆ ಜಾಸ್ತಿ.
· ಇದೇ ಬುಧನು ಋಣಾತ್ಮಕನಾಗಿದ್ದಲ್ಲಿ:- ಚರ್ಮ ರೋಗ, ಅಜೀರ್ಣತೆ ಜಾಸ್ತಿ.
· -ವ್ ಬುಧನು ಅವರನ್ನ ಕುಂತಲ್ಲೇ ಕುಳಿತಿರುವಂತೆ ಮಾಡುತ್ತಾನೆ.
· ಸಿಕ್ಕಾಪಟ್ಟೆ ಅಶುತ್ವವಾಗಿರುತ್ತಾರೆ.
· ಬಣ್ಣ ಗಿಳಿ ಹಸಿರು.
· ರತ್ನ ಪಚ್ಚೆ ಅಥವಾ ಪನ್ನ.
· ದೊಡ್ಡ ತರದ ಮೋಡೆಲಿಂಗಿಗೆ ಬುಧನೇ ಅಧಿಪತಿ.
· ಸಂಖೆ ೫.
· ಕಾರಕತ್ವ :- ಕರ್ಮ
· ಉಛ್ಚ ಕ್ಷೇತ್ರ :- ಕನ್ಯಾ ರಾಶಿ.
· ಉಛ್ಚಾಂಶ :- ೧೫*
· ನೀಚ ಕ್ಷೇತ್ರ :- ಮೀನ ರಾಶಿ.
· ದಶಾ ವರ್ಷ :- ೧೭
· ಮೂಲ ತ್ರಿಕೋಣ :- ಕನ್ಯಾ ರಾಶಿ.
· ಅಂಗಾಂಗ :- ಚರ್ಮ.
· ಒಂದು ರಾಶಿಯಿಂದ ಇನ್ನೊಂದು ರಾಶಿಗೆ ೧ ತಿಂಗಳು.
· ಧಾನ್ಯ :- ಹೆಸರು ಕಾಳು.
· ದಿಕ್ಕು :- ಉತ್ತರ.
· ಕಾರಕ ತ್ರಿದೋಷ.
· ಲೋಹ :- ಸೀಸ
· ಮಿತ್ರ ಗ್ರಹಗಳು :- ಸೂರ್ಯ ಮತ್ತು ಶುಕ್ರ
· ಶತ್ರು :- ಚಂದ್ರ
· ಸಮ ಗ್ರಹ :- ಶನಿ, ಕುಜ ಮತ್ತು ಗುರು.
ಗುರು
ಗ್ರಹ :- ♃
· ಮೀನದಲ್ಲಿ ಆಕಾಶ ತತ್ವ ಹಾಗೂ ಧನುಸ್ಸನಲ್ಲಿ ಅಗ್ನಿ ತತ್ವ
· ಇಲ್ಲಿ ಧನುಸ್ಸಿನ ಅಗ್ನಿಗೇ ಪ್ರಾಮುಖ್ಯತೆಯನ್ನ ಕೊಡುತ್ತೇವೆ.
· ಇದು ದೊಡ್ಡ ಅಗ್ನಿ.
· ಗಾತ್ರದಲ್ಲಿ ದೊಡ್ಡ ಗ್ರಹ. ಅಂತೆಯೇ ಮನುಷ್ಯರೂ ಗುಂಡಾಗಿ
ದಪ್ಪವಾಗಿರುತ್ತಾರೆ.
· ಒಳ್ಳೇ ವಿದ್ಯಾವಂತರು.
· ಬಹಳ ತೇಜಸ್ವಿಗಳು
· ಧರ್ಮ ಪ್ರಚಾರಕರು ಹಾಗೂ ಧರ್ಮ ಭೋದಕರು.
· ಆದ್ದರಿಂದ ಇವರುಗಳಲ್ಲಿ ಧರ್ಮ ಗುರುಗಳೇ ಜಾಸ್ತಿ.
· ಉಪಾಧ್ಯಾಯ ವೃತ್ತಿಯಲ್ಲಿ ಇವರೇ ಜಾಸ್ತಿ ಕಾಣಿಸುತ್ತಾರೆ.
· ಇವರುಗಳು ಧರ್ಮ ಛತ್ರಗಳನ್ನ ಕಟ್ಟುವರು.
· ಜನತಾ ಸೇವೆ ಜಾಸ್ತಿ. ಇವರು ಸಮಾಜ ಸೇವೆ ಅಲ್ಲ, ಸಮಾಜ ಕಲ್ಯಾಣ
ಜಾಸ್ತಿ ಮಾಡುತ್ತಾರೆ.
· ಇವರು ಇರುವುದೇ ಲೋಕ ಕಲ್ಯಾಣ ಹಾಗೂ ಸಮಾಜ ಕಲ್ಯಾಣಕ್ಕಾಗಿ.
· ಬಡವರಿಗೆ, ಜನರಿಗೆ ಆಶ್ರಯಗಳನ್ನ ಕಟ್ಟಿಸಿ ಕೊಡುತ್ತಾರೆ.
· ಬೇರವರ ತಪ್ಪನ್ನ ತಿದ್ದುವಂತಹವರು. ಇದೇ ಬುದ್ಧಿ ಕುಂಭ
ರಾಶಿಯವರಿಗುಂಟು.
· ಪ್ರಪಂಚಕ್ಕೇ ಕಾನೂನನ್ನ ಬದಲಾವಣೆ ಮಾಡುವವರು. ಬಾಬಾ ಸಾಹೇಬ
ಅಂಬೇಡಕರನಂತೆ.
· ಪರಮ ದೈವ ಭಕ್ತರು.
· ಜ್ಯೋತಿಷ್ಯಗಾರರಿಗೆ ಗುರುವಿನ ಅನುಗ್ರಹ ಇದ್ದಲ್ಲಿ ಬಹಳ
ಒಳ್ಳೆಯದು.
· ಪುರೋಹಿತ ಕೆಲಸವನ್ನು ಮಾಡುವವರು ಇವರೇ ಜಾಸ್ತಿ.
· ಇವರು ಹಣ ಕಾಸು ಸಂಸ್ಥೆಯಾದ ರೆಸರ್ವ್ ಬೇಂಕ್, ಬ್ಯಾಕಿಂಗ್ ಕ್ಷೇತ್ರ
ದಲ್ಲಿ ಜಾಸ್ತಿ ಕಾಣ ಸಿಗುತ್ತಾರೆ.
· ಬುಧ ಗ್ರಹ ಹಣ ಕಾಸಿನ ವ್ಯವಹಾರವನ್ನ ಮಾಡುತ್ತಾರೆ. ಆದರೆ
ಇವರುಗಳು ಈ ಸಂಸ್ಥೆಯಲ್ಲಿ ಕೆಲಸವನ್ನ ಮಾಡುತ್ತಿರುತ್ತಾರೆ.
· ಇವರುಗಳು ವೈದ್ಯಕೀಯ ವೃತ್ತಿಯಲ್ಲಿ ಕೂಡ ಜಾಸ್ತಿ ಕಾಣ
ಸಿಗುತ್ತಾರೆ. ಕಾರಣ ಜನತಾ ಸೇವೆಯೇ ಜನಾರ್ಧನ ಸೇವೆ.
· ಆದರೆ ಅದೇ ಗುರು ಋಣಾತ್ಮಕವಾದಲ್ಲಿ:- ಬೇರವರನ್ನ ಬಯ್ಯುತ್ತಾರೆ.
· ಬೇರವರಿಗೆ ಶ್ರಾಪ ಹಾಕುತ್ತಾರೆ.
· ಇವರಿಗೆ ಹಳದಿ ಬಣ್ಣ ಹೆಚ್ಚು ಇಸ್ಟ.
· ಹೊಟ್ಟೇ ಕಿಚ್ಚನ್ನ ಪಡುತ್ತಿರುತ್ತಾರೆ.
· ಇನ್ನೊಬ್ಬರಿಗೆ ತೊಂದರೆಗಳನ್ನ ಕೊಡುವುದು ಜಾಸ್ತಿ ಆಗುತ್ತದೆ.
· ಪುಷ್ಯರಾಗ ಇವರ ಪ್ರೀತಿಯ ರತ್ನ.
· ಇವರುಗಳು ತುಂಬಾ ಲಕ್ಷಣವಂತರು.
· ಒಂದೇ ಶೇಪಿನಲ್ಲಿರುತ್ತಾರೆ. ಆದರೆ ಹೊಟ್ಟೆ ಮುಂದು ಬರುತ್ತದೆ.
· ಸಂಖೆ ೩
· ಕಾರಕತ್ವ :- ಪುತ್ರ
· ಉಛ್ಚ ರಾಶಿ ಕರ್ಕ
· ನೀಚ ರಾಶಿ ಮಕರ
· ಉಛ್ಚಾಂಶ :೫*
· ದಶಾ ವರ್ಷ ೧೬
· ಒಂದು ರಾಶಿಯಿಂದ ಇನ್ನೊಂದು ರಾಶಿಯ ಅವಧಿ ೧೨ ತಿಂಗಳು.
· ದಿಕ್ಕು :- ಈಶಾನ್ಯ.
· ಧಾನ್ಯ :- ಕಡ್ಲೆ
· ಅಂಗಾಂಗ :- ಕಿವಿ.
· ಕಾರಕ :- ಕಫ.
· ದೃಸ್ಟಿ :- ೫,೭ ಮತ್ತು ೯.
· ಮಿತ್ರ ಗ್ರಹಗಳು :- ಸೂರ್ಯ, ಚಂದ್ರ ಮತ್ತು ಕುಜ
· ಶತ್ರು ಗ್ರಹಗಳು :- ಶುಕ್ರ ಮತ್ತು ಬುಧ
· ಸಮ ಗ್ರಹಗಳು :- ಶನಿ.
ಶುಕ್ರ
ಗ್ರಹ :-
· ಶುಕ್ರನು ವೃಷಭ ಮತ್ತು ತುಲಾದ ಅಧಿಪತಿ.
· ವೃಷಭದಲ್ಲಿ ಪ್ರಥ್ವೀ ತತ್ವದಲ್ಲಿದ್ದರೆ, ತುಲಾದಲ್ಲಿ ವಾಯು
ತತ್ವದಲ್ಲಿರುವನು.
· ತುಲಾ ಶುಕ್ರನು ಬಹಳ ಧನಾತ್ಮಕನಾಗಿರುತ್ತಾರೆ. ಕಾರಣ ಅದು ಪುರುಷ
ರಾಶಿ.
· ಅದಕ್ಕೇ ತುಲಾ ಶುಕ್ರನಿಗೆ ಪ್ರಾಧಾನ್ಯ ಜಾಸ್ತಿ.
· ಅದೇ ವೃಷಭದಲ್ಲಿ ಋಣಾತ್ಮಕನಾದುದರಿಂದ, ಶಕ್ತಿ ಹೀನ.
· ಶುಕ್ರನು ಚಂದ್ರನಂತೆ ಸ್ತ್ರೀ ಗ್ರಹ.
· ಚಂದ್ರನಂತೆಯೇ ಸೌಂದರ್ಯಕ್ಕೆ ಕಾರಕ ಗ್ರಹ.
· ಒಳ್ಳೇ ಜ್ಯೋತಿಷ್ಯಗಾರರು. ಜ್ಯೋತಿಷ್ಯದಲ್ಲಿ ಪರಿಣಿತರು.
· ಇವರಿಗೆ ಒಂದು ಒಳ್ಳೇ ಸ್ಟೇಂಡರ್ಡ್ ಉಂಟು.
· ಶ್ರೀಮಂತ ಗ್ರಹ.
· ಯಾರನ್ನೂ ಅತಿಯಾಗಿ ನಂಬೋಲ್ಲ ಹಾಗೂ ಹತ್ತಿರಕ್ಕೆ ಸೇರಿಸೋಲ್ಲ.
· ಸದಾ ಸಂಶಯವನ್ನ ಪಡುವವರು.
· ಇವರು ಜನರನ್ನ ಜಾಸ್ತಿ ಸ್ನೇಹಿತರನ್ನಾಗಿ ಮಾಡಿಕೊಳ್ಳೋಲ್ಲ.
· ಇವರದ್ದು ಯಾವಾಗಲೂ ಒನ್ ವೇ ಟ್ರಾಫ಼ಿಕ್. ತಮ್ಮ ಕುದುರೆಗೆ ಮೂರೇ
ಕಾಲು ಎನ್ನುವವರು.
· ಕಾರಣ ಶುಕ್ರಚಾರ್ಯರಿಗೆ ಒಂದೇ ಕಣ್ಣು.
· ಇವರುಗಳು ಹೇಳಿದ್ದೇ ಸರಿ.
· ಇವರು ಶುಕ್ರಾಚಾರ್ಯನಂತೆ ಹಟ ಮಾಡುತ್ತಿರುತ್ತಾರೆ.
· ಲಗ್ನದಲ್ಲಿ ಶುಕ್ರ ಇದ್ದಲ್ಲಿ ಅವರು ನೂರಕ್ಕೆ ನೂರು ಟ್ರಾಫ಼ಿಕ್
ಕೆಡಿಸುತ್ತಾರೆ.
· ಶ್ರೀಮಂತ ವಸ್ತುಗಳ ಸಂಗ್ರಹವನ್ನ ಮಾಡುತ್ತಾರೆ.
· ಮನೆಯನ್ನ ಅಲಂಕಾರ ಮಾಡುವ ಗ್ರಹ.
· ಸುಗಂಧ ವಸ್ತುಗಳ ಸಂಗ್ರಹವನ್ನ ಮಾಡುವವರು.
· ಇವರದ್ದು ಅದ್ಧೂರಿತನದ, ಆಡಂಬರದ ಮನೆ.
· ಐಶಾರಾಮಿ ಜೀವನ ನಡೆಸುತ್ತಿರುತ್ತಾರೆ.
· ಇವರಲ್ಲಿ ದೊಡ್ಡ ಗಾಡಿ ಇದೆ ಎಂದರೆ ಇವರ ಶುಕ್ರ ಬಹಳ ಒಳ್ಳೆಯದು.
· ಇವರಲ್ಲಿಯ ಗಾಡಿ ಬಹಳ ನೀಟ್ ಎಂಡ್ ಕ್ಲೀನ್ ಆಗಿರುತ್ತದೆ.
· ಇವರುಗಳು ಒಳ್ಳೇ ನ್ಯಾಯವಂತರು.
· ಬಹಳ ಒಳ್ಳೆಯ ಹೊಂದಾಣಿಕೆಯನ್ನ ಮಾಡುವವರು.
· ಇವರುಗಳು ಭಾವನಾತ್ಮಕ ಜೀವಿಗಳು.
· ಇವರೂ ಕೂಡ ಶುಕ್ರಾಚಾರ್ಯನಂತೆ ಯಾರೊಂದಿಗೂ ಸೇರೋಲ್ಲ.ಒಂಟಿ
ಜೀವಿಗಳು.
· ವದ್ಯಕೀಯ ವೃತ್ತಿಯನ್ನ ಮಾಡುವವರು.
· ಒಳ್ಳೇ ಪ್ರಾಧ್ಯಾಪಕ ವೃತ್ತಿಯನ್ನ ಮಾಡುವವರು.
· ಶ್ರಂಗಾರ ವಿದ್ಯಗಳಲ್ಲಿ ಪ್ರವೀಣರು.
· ನವ ರಸ ವಿದ್ಯಗಳಲ್ಲಿ ಪರಿಣಿತರು.
· ೬೪ ಕಲೆಗಳ ರಾಜ.
· ಶುಕ್ರನು ಒಳ್ಳೇ ದಿದ್ದರೆ ಮನೆಯಲ್ಲಿ ಘಂ ಅನ್ನುವ ಸುಗಂಧದ
ಪರಿಮಳ ಬರುತ್ತೆ.
· ಅದೇ ಬುಧನು ಒಳ್ಳೆಯದಿದ್ದಲ್ಲಿ, ಮನೆ ತುಂಬಾ ಪೇಪರ್, ಗಲೀಜು ಇರುತ್ತೆ.
· ಅದೇ ಸೂರ್ಯನು ಸ್ಟ್ರೋಂಗ ಇದ್ದಲ್ಲಿ, ಕೆಲಸಗಾರು ಹೋಗಿ
ಬಾಗಿಲನ್ನ ತೆಗೆಯುತ್ತಾರೆ.
· ಅದೇ ಚಂದ್ರನು ಸ್ಟ್ರೋಂಗ್ ಇದ್ದಲ್ಲಿ, ಮನೆ ಒಡತಿ (ಹೆಂಡತಿ)
ಬಾಗಿಲನ್ನ ತೆಗೆಯುತ್ತಾರೆ.
· ಅದೇ ಮನೆ ತುಂಬಾ ಗಲೀಜುಗಳ ರಾಶಿ ಇದ್ದಲ್ಲಿ, ಶನಿ ಗ್ರಹ
ಶಕ್ತಿಶಾಲಿಯಾಗಿರುತ್ತೆ.
· ಕೆಟ್ಟ ಗುಣಾಗಳ ಶುಕ್ರ
· ಅದೇ ಶುಕ್ರನಲ್ಲಿ ಕೆಟ್ಟ ಗುಣವಿದ್ದಲ್ಲಿ, ಹೊಟ್ಟೇ ಕಿಚ್ಚು
ಜಾಸ್ತಿ.
· ಜನರ ಜೊತೆಗೆ ಸೇರೋದಿಲ್ಲ!
· ತನಗಿಂತಾ ಹೆಚ್ಚಿಗೆ ವಿದ್ಯ ಇತ್ತೆಂದರೆ, ಹೊಟ್ಟೇ ಕಿಚ್ಚು
ಜಾಸ್ತಿ ಬರುತ್ತೆ!
· ಒಂಟೀ ಜೀವಿಗಳು. ಇದಕ್ಕೆ ಕಾರಣ ಶುಕ್ರಾಚಾರ್ಯರು ಯಾರೊಂದಿಗೂ
ಸೇರೋಲ್ಲ! ಇದಕ್ಕೆ ಮತ್ತೊಂದು ಕಾರಣ ತನಗೇ ಎಲ್ಲಾ ೬೪ ಕಲೆಗಳೂ ಗೊತ್ತೆನ್ನುವ ಅಹಂ!
· ಆದರೆ ಇವರುಗಳು ಅತೀ ಉತ್ತಮ ರೀತಿಯಿಂದ ಹೊಂದಾಣಿಕೆಯನ್ನ
ಮಾಡಿಕೊಳ್ಳುವರು.
· ವಜ್ರ ಇವರ ರತ್ನ. ಪ್ಲೇಟಿನಮ್ ಸಿಲ್ವರ್
· ಬಿಳಿ ಬಣ್ಣ ಇವರ ಫ಼ೇವರೈಟ್.
· ಒಳ್ಳೇ ಸುಂದರವಾದ ಕೋಮಲ ಶರೀರ.
· ಒಳ್ಳೇ ಫ಼ೈನ್ ಮತ್ತು ದೊಡ್ಡ ಮೋಡೆಲಿಂಗಿಗೆ ಬುಧ ಅಧಿಪತಿ ಆದರೆ
ಫ಼ೈನ್ ಮೋಡೆಲಿಂಗಿಗೆ ಶುಕ್ರ ಒಳ್ಳೇದಾಗಿ
ಇರಬೇಕು.
· ಇವರುಗಳ ಸಂಖೆ ೬
· ಕಾರಕತ್ವ :- ಕಳತ್ರ
· ಉಛ್ಚ ರಾಶಿ :- ಮೀನ
· ನೀಚ ರಾಶಿ :-
ಕನ್ಯಾ
· ದಶಾ ವರ್ಷ:- ೨೦
· ಮೂಲತ್ರಿಕೋಣ :-ತುಲಾ ರಾಶಿ.
· ಉಛ್ಛಾಂಶ :-೨೭*
· ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬೇಕಾಗುವ ಅವಧಿ :- ೧
ತಿಂಗಳು.
· ದಿಕ್ಕು :- ಆಗ್ನೇಯ
· ಧಾನ್ಯ :- ಅವರೆ
· ಇಂದ್ರಿಯ :- ನಾಲಿಗೆ
· ಕಾತ್ರಕ :- ಕಫ
· ದೃಸ್ಟಿ :- ೭
· ಮಿತ್ರ ಗ್ರಹಗಳು :- ಬುಧ, ಶನಿ
· ಶತ್ರು ಗ್ರಹ :- ಸೂರ್ಯ ಮತ್ತು ಚಂದ್ರ
· ಸಮ ಗ್ರಹ :- ಕುಜ, ಗುರು
ಶನಿ
ಗ್ರಹ :-
♄
· ಮಕರ ಮತ್ತು ಕುಂಭದ ಅಧಿಪತಿ ಶನಿ ದೇವ.
· ಪ್ರಥ್ವಿ ತತ್ವ ಹಾಗೂ ವಾಯು ತತ್ವದ ಅಧಿಪತಿ.
· ಇಲ್ಲಿ ಕುಂಭದ ಶನಿಗೆ ಬಹಳ ಮಹತ್ವ ಉಂಟು. ಅಂದರೆ ವಾಯು ತತ್ವದ
ಶನಿ ದೇವನಿಗೆ.
· ಹಾಗೆಯೇ ಮಿಥುನದ ವಾಯು ತತ್ವದ ಬುಧನಿಗೆ ಮಹತ್ವ
ಕೊಟ್ಟಿರುತ್ತಾರೆ.
· ಇವರುಗಳು ಬಡಕಲು ಶರೀರದವರು.
· ಬಣ್ಣ ಕಪ್ಪು.
· ರೋಗಗ್ರಸ್ಥರಾಗಿ ಕಾಣಿಸುತ್ತಾರೆ.
· ಒಳ್ಳೇ ಶ್ರಮ ಜೀವಿಗಳು ಇವರುಗಳು.
· ತತ್ವ ಜ್ನಾನಿಗಳು. ಅದೂ ಕುಂಭ ರಾಶಿಯವರು ತತ್ವಜಾನಿಗಳು
(ಫಿಲೋಸಫ಼ರ್ಸ್).
· ಇವರುಗಳಿಗೆ ಸಿದ್ಧಾಂತದ ಮೇಲೆ ನಂಬಿಕೆಯನ್ನ ಇಡುವವರು.
· ಯಾರೂ ಮಾಡದ ಕೆಲಸವನ್ನ ಇವರು ಮಾಡುತ್ತಾರೆ.
· ಇವರು ತಾಂತ್ರಿಕ ವರ್ಗದಲ್ಲಿ ಕೆಲಸವನ್ನ ಮಾಡುವವರು.
· ಯಾವಾಗಲೋ ಮನೆಗೆ ಬರುತ್ತಾರೆಂದರೆ, ಅವರುಗಳು ಶನಿ
ತತ್ವದವರು.
· ಇವರುಗಳು ಒಳ್ಳೇ ಸಮಾಜ ಸೇವಕರು. ಅದೇ ಗುರು ತತ್ವದವರು, ಸಮಾಜ ಕಲ್ಯಾಣರು.
· ಇವರುಗಳು ಒಳ್ಳೇ ನ್ಯಾಯವಾದಿಗಳು.
· ಗೆಲ್ಲುವ ತನಕ ಹೋರಾಟವನ್ನ ಮಾಡುವಂತಹ ನಿಧಾನಿಗಳು. ಕಾರಣ ಶನಿಯು
ಮಂದ ಗ್ರಹ. ತಾಳ್ಮೆ ಬಹಳ.
· ಅದೇ ಬುಧ ಗ್ರಹ ಫಟ್ಟನೆ ಹೋಗಿ ಕೆಲಸವನ್ನ ಮುಗಿಸಿಯೇ
ಬಿಡುತ್ತಾರೆ.
· ಶನಿಯು ಮಂದ ಗ್ರಹ. ತಾಳ್ಮೆಯ ಗ್ರಹ.
· ಕೆಟ್ಟ ಶನಿ ಇದ್ದಲ್ಲಿ ಅವರು ಬಹಳ ಮೋಸಗಾರರು. ಕಳ್ಳ ತನ
ಮಾಡುವವರು.
· ಕೆಟ್ಟ ಚಟಗಳಿಗೆ ಬಲಿಯಾಗುವವರು.
· ಇವರುಗಳು ಕೆಟ್ಟದ್ದನ್ನ ಮಾಡಲೂ ಒಳ್ಳೇ ತಾಳ್ಮೆಯಿರುತ್ತದೆ.
· ಟೆಕ್ನೋಲಜಿಯನ್ನ ಒಳ್ಳೇ ರೀತಿಯಲ್ಲಿ ನಿಭಾಯಿಸುವವರು, ಹಾಗೂ ಸಂಶೋಧನೆಯನ್ನ
ಮಾಡುವವರು.
· ಬಡಕಲು ಶರೀರವಾದರೂ ಒಳ್ಳೇ ಬಲವಿರುವಂತಹ ಮೂಳೆಗಳನ್ನ
ಹೊಂದಿದವರು.
· ಆದರೆ ಅದೇ ಮೂಳೆಯಲ್ಲಿ ಶಕ್ತಿ ಹೀನತೆಯನ್ನೂ ಕಾಣುವವರು.
· ಇವರಿಗೆ ಮೊಣಕಾಲಿನ ನೋವು ಕಾಣಿಸಿಕೊಳ್ಳುತ್ತವೆ.
· ಹೊಟ್ಟೇ ಸಂಬಂಧಿತ ತೊಂದರೆಗಳು ಸರ್ವೇ ಸಾಮಾನ್ಯ.
· ಜನ ಸಂಘಟನೆಯನ್ನ ಮಾಡುವವರು.
· ಅದೇ ಮುಷ್ಕರವನ್ನೂ ಮಾಡುವವರು ಇವರೇ.
· ಕೊಳಕು ವಸ್ತ್ರ್ವನ್ನ ಧರಿಸುವವರು.
· ಕೊಳಕು ಮನೆಯಲ್ಲಿ ನೆಲೆಸುವವರು.
· ಯಾರಿಗೆ ಶನಿಯು ಪ್ರಬಲವಾಗಿದ್ದಾನೋ, ಅವರುಗಳು ಕಲ್ಲಿನ
ಇಟ್ಟಿಗೆಯ ಮನೆಯನ್ನ ಕಟ್ಟುವವರು.
· ಅದೇ ಕೆಟ್ಟ ಶನಿ ಇದ್ದಲ್ಲಿ, ಹಂಚಿನ ಮನೆಯಲ್ಲಿ ತಂಗುವವರು.
· ಬಾಗಿಲು ತೂತಾಗಿ ಕಾಣಿಸೋದು.
· ಹೊದೆಯುವ ಬಟ್ಟೆಗಳು ಕೊಳಕಾಗಿ ಕಾಣಿಸೋದು.
· ನೀಲಿ ಬಣ್ಣದ ಸಫ಼ಾಯರನ್ನ ಧರಿಸಬೇಕು.
· ಕಬ್ಬಿಣ ಇವರ ಲೋಹ.
· ಸಂಖೆ :- ೮
· ಕಾರಕತ್ವ:- ಆಯುಷ್ಯ
· ಉಛ್ಚ ರಾಶಿ :- ತುಲಾ
· ನೀಚ ರಾಶಿ :- ಮೇಷ
· ಉಛ್ಛಾಂಷ :- ೨೦*
· ದಿಕ್ಕು :- ಪಸ್ಚಿಮ
· ಅಂಗಾಂಗ :- ಸ್ನಾಯು
· ಇಂದ್ರಿಯ :- ಚರ್ಮ
· ಧಾನ್ಯ :- ಎಳ್ಳು.
· ಕಾರಕ :- ವಾತ
· ದೃಸ್ಟಿ :- ೩,೭ ಮತ್ತು ೧೦.
· ಮಿತ್ರ ಗ್ರಶಗಳು :- ಶುಕ್ರ ಮತ್ತು ಬುಧ.
· ಶತ್ರು ಗ್ರಹ :- ಸೂರ್ಯ ಮತ್ತು ಕುಜ.
· ಸಮ ಗ್ರಹ :- ಚಂದ್ರ ಮತ್ತು ಗುರು
·
ರಾಹು ಗ್ರಹವು ಶನಿ ತತ್ವದ ಮೇಲೆಯೇ ನಿರ್ಭರಿಸಿದೆ. ಅಂದರೆ
ರಾಹುವಿನ ತತ್ವಗಳೆಲ್ಲಾ ಶನಿಯ ತತ್ವದ್ದು.
ಅದೇ ಕೇತು ಗ್ರಹವು, ಕುಜ ಗ್ರಹದ ಮೇಲೆಯೇ ನಿರ್ಭರಿಸಿದೆ. ಕೇತುವಿನ ತತ್ವಗಳೆಲ್ಲಾ
ಕುಜನ ತತ್ವದ್ದು.
Dr.ಪಾರಂಪಳ್ಳಿ ಸುರೇಂದ್ರ ಉಪಾಧ್ಯ, M.Sc.;Ph.D.
(Astrology)
೦೮/೦೨/೨೦೧೬
ಮೌನಿ ಅಮವಾಸ್ಯೆ.
No comments:
Post a Comment