Saturday 25 March 2017

ಧನುರ್ಮಾಸದ ಮಹತ್ವವನ್ನ ಇಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ನಿಮಗೆ ಅದರಲ್ಲಿ ಆಸ್ತೆ ಎನ್ನುವುದಿದ್ದರೆ, ಓದಿ ಜೀರ್ಣಿಸಿಕೊಳ್ಳಿ

ಧನುರ್ಮಾಸದ ಮಹತ್ವವನ್ನ ಇಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ.
ನಿಮಗೆ ಅದರಲ್ಲಿ ಆಸ್ತೆ ಎನ್ನುವುದಿದ್ದರೆ, ಓದಿ ಜೀರ್ಣಿಸಿಕೊಳ್ಳಿ

1)       ಶ್ರೀ ಕೃಷ್ಣನು ಭಗವದ್ಗೀತದ ಚಾಪ್ಟರ್ ೧೦, ಶ್ಲೋಕ ೩೫ ರಲ್ಲಿ ಈ ರೀತಿ ಉದ್ಗರಿಸಿದ್ದಾನೆ. ಅದು ಏನೆಂದರೆ

                                                                                                                "ಮಾಸಾನಾಂ ಮಾರ್ಗಶಿರೋಹಂ"

·        ಸಾಮಾನ್ಯವಾಗಿ ಡಿಸೆಂಬರ್ ತಿಂಗಳು ೧೫ ಅಥವಾ ೧೬ ರಂದು ಬರುವ ಚಾಪೇ ಸಂಕ್ರಮಣದಿಂದ ಈ ಮಾಸ ಶುರುವಾಗುತ್ತದೆ.
·        ಅರ್ಥಾತ್, ಸೂರ್ಯನು ಧನುರ್ ರಾಶಿಗೆ ತನ್ನ ಕಾಲಿಡುತ್ತಾನೆಂದು ಆರ್ಥ. ಇದಕ್ಕೆ ಶೂನ್ಯ ಮಾಸವೆಂದೂ ಹೇಳುತ್ತಾರೆ. ಇದಕ್ಕೆ ಚಾಪಾ ಮಾಸವೆಂದೂ ಹೇಳುತ್ತಾರೆ. ಇನ್ನು ಕೆಲವು ಜಾಗದಲ್ಲಿ ಇದನ್ನ ಕೋದಂಡ ಮಾಸವೆಂದೂ ಕರೆಯುತ್ತಾರೆ. ಮತ್ತೆ ಕೆಲವರು ಇದನ್ನ ಕಾರ್ಮುಕ ಮಾಸವೆಂದೂ ಕರೆಯುತ್ತಾರೆ.
·        ಈ ಮಾಸದಲ್ಲಿ ಮದುವೆ ಅಥವಾ ಇನ್ನಿತರ ಮಂಗಳ ಕಾರ್ಯಕ್ರಮಗಳು ಜರುಗುವುದಿಲ್ಲ. ಅದೇ ರೀತಿಯಲ್ಲಿ ಆಷಾಢಾ ಮಾಸದಲ್ಲಿಯೂ ಈ ರೀತಿಯ ಮಂಗಳ ಕಾರ್ಯಕ್ರಮಗಳು ಜರುಗುವುದಿಲ್ಲ.
·        ಇನ್ನು ವಿಕ್ಕಿಪೀಡಿಯಾ ಎನನ್ನ ಹೇಳುತ್ತೆ ಅಂತ ನಾವು ಈಗ ತಿಳಿದುಕೊಳ್ಳೋಣ. ಧನುರ್ಮಾಸವು ವೈಕುಂಠ ಏಕಾದಶಿಯೆಂದು ಪ್ರಾರಂಭವಾಗಿ, ಉತ್ತರಾಯಣ ಪುಣ್ಣ್ಯ ಕಾಲದಂದು, ಅಂದರೆ ಪ್ರತೀ ಜನುವರಿ ೧೪/೧೫ ರಂದು, ಅರ್ಥಾತ್ ಮಕರಸಂಕ್ರಮಣದಂದು ಅಂತ್ಯ ಗೊಳ್ಳುತ್ತದೆ.
·        ಈ ಮಾಸ ವಿಷ್ಣುವಿನ ಆರಾಧನೆಗೆ ಬಹಳ ಪ್ರಾಮುಖ್ಯ. ಈ ಮಾಸ. ಬರೇ ವಿಷ್ಣುವಿನ ಆರಾಧನೇಗೇ ಮೀಸಲಾಗಿಡುತ್ತದೆ.
·        ಇನ್ನು ಈ ಧನುರ್ಮಾಸದ ವಿಶೇಷವೇನೆಂದರೆ, ಈ ತಿಂಗಳಲ್ಲಿಯೇ ಸುಬ್ರಹ್ಮಣ್ಯ ಷಷ್ಠಿ, ದತ್ತ ಜಯಂತಿ, ಮೆರ್ರೀ ಕ್ರಿಸ್ಮಸ್ ಹಬ್ಬ ಹಾಗೂ ಬಕ್ರೀದ್ ಹಬ್ಬ ಎಲ್ಲಾ ಬರುತ್ತವೆ.
·        ಆಯ್ಯಪ್ಪ ಮಾಲೆಯನ್ನೂ ಕೂಡಾ ಇದೇ ಮಾಸದಲ್ಲಿ ಹಾಕುತ್ತಾರೆ. ಇದೇ ಒಂದು ಮಾಸದಲ್ಲಿ ಪೂರಾ ಶೃಧ್ಧೆಯನ್ನ ಭಗವಂತನ ಸ್ಮರಣೆಗಾಗಿ ಜನರೆಲ್ಲಾ ಮೀಸಲಾಗಿಡುವುದು ಬಹಳ ವಿಶೇಷ.
·        ಈ ಧನುರ್ಮಾಸದ ವಿಶೇಷತೆಯನ್ನ ರಾಜಾ ಸತ್ಯಸಂದನ ಕಥೆಯ ಮೂಲಕ ನಾವು ತಿಳಿದುಕೊಳ್ಳಬಹುದು.
·        ಈ ಧನುರ್ಮಾಸದ ವಿಶೇಷತೆಯನ್ನ ಪಂಚರತ್ನಾಗಮನದಲ್ಲಿ ೪ ಚಾಪ್ಟರನಲ್ಲಿ ವರ್ಣಿಸಲ್ಪಟ್ಟಿದೆ. ಆಗ್ನೇಯ ಪುರಾಣದಲ್ಲಿಯೂ, ಸ್ಮೃತಿ ಮುಕ್ತಾವಳಿಯಲ್ಲಿಯೂ ಇದನ್ನ ಉಲ್ಲೇಖಿಸಿದೆ.
·        ಚಾಪ್ಟರ್-೧ ರಲ್ಲಿ, ಸುತಾ ಎನ್ನುವ ಮಹಾತ್ಮನು ಚಾಪಾ ತಿಂಗಳ ವಿಶೇಷತೆಯ ಬಗ್ಗೆ ಹಾಗೂ ನೀವುಗಳು ಕೆಲವೊಂದು ನೀತಿ ಮತ್ತು ನಿಯಮವನ್ನ ಈ ಶೂನ್ಯ ಮಾಸದಲ್ಲಿ ಪಾಲಿಸಿದಾಗ ನಿಮಗೆ ಲಭ್ಯವಾಗುವ ಒಳ್ಳೇ ಫಲಗಳ ಬಗ್ಗೆ ಹೇಳಿದೆ.
·        ಅದೇ ೨ನೆಯ ಚಾಪ್ಟರಿನಲ್ಲಿ ಹನ್ಸಾ ಎನ್ನುವ ಸುಪ್ರೀಮ್ ದೇವರ ಹತ್ತಿರ, ಬ್ರಹ್ಮದೇವನು ಈ ಶೂನ್ಯ ಮಾಸದ ಮಹತ್ವಗಳ ಬಗ್ಗೆ, ಸತ್ಯಸಂದನ ಕಥೆಯ ಮುಖಾಂತರ ಹೇಳಿದೆ.
·        ಚಾಪ್ಟರ್- ೩ ರಲ್ಲಿ, ಭಕ್ತರು ಯಾವರೀತಿಯ ಉತ್ತಮವಾದ ಕರ್ಮಗಳನ್ನ ಈ ತಿಂಗಳು ಮಾಡಿದಾವಾಗ ಸಿಗುವಂತಹ ಫಲಗಳ ಬಗ್ಗೆ ಉಲ್ಲೇಖಿಸಿದೆ. ಅದೇ ಈ ರೀತಿಯ ಕರ್ಮಗಳನ್ನ ಶೂನ್ಯ ಮಾಸದಲ್ಲಿ ಮಾಡದೇ ಇದ್ದಾವಾಗ ಏನು ಕೆಟ್ಟ ಫಲಗಳು ದೊರಕ್ಯಾವು ಎನ್ನುವುದರ ಬಗ್ಗೆಯೂ ಹೇಳಿದೆ.
·        ಚಾಪ್ಟರ್-೪ ರಲ್ಲೆ ಬ್ರಹ್ಮನಿಗೆ ಬೇರೆ ಬೇರೆ ರೀತಿಯ ಭೋಗಗಳನ್ನ ತಿನ್ನಿಸುವುದರ ಬಗ್ಗೆಯೂ ಹೇಳಲ್ಪಟ್ಟಿದೆ.
·        ಹಾಗಾದರೆ ನಾವುಗಳು ಏನನ್ನ ಮಾಡಬೇಕು ಈ ಶೂನ್ಯ ಮಾಸದಲ್ಲಿ ಅನ್ನುವುದರ ಬಗ್ಗೆ ಈಗ ತಿಳಿದುಕೊಳ್ಳೋಣ:-
1)      ಬೆಳಿಗ್ಗೆ ೪.೨೦ ಬ್ರಹ್ಮ ಮುಹೂರ್ತದಲ್ಲಿ (೧ ೧/೨ ಗಂಟೆ ಸೂರ್ಯೋದಯದ ಮುಂಚೆ) ಎದ್ದು, ನದಿಯಲ್ಲಿ ಅಥವಾ ತಣ್ಣಗಿನ ನೀರಿನಲ್ಲಿ ಸ್ನಾನವನ್ನ ಮಾಡಿ, ದೇವರನ್ನ ತೊಳೆದು, ಶ್ರಂಗರಿಸಿ ವಿಷ್ಣುನಾಮದಿಂದ ಹೊಗಳುವ ಕೆಲಸವನ್ನ ಪ್ರತಿ ನಿತ್ಯ ಮಾಡುತ್ತಿರಬೇಕು. ಇಲ್ಲಾ ಕೃಷ್ಣ ಅಸ್ಟೋತ್ತರ, ಪ್ರತೀ ಗುರುವಾರದಂದು, ಮಹಾಲಕ್ಷ್ಮಿ ಅಸ್ಟೋತ್ತರ, ಅಂಡಾಲ್ ಸ್ತೋತ್ರದ ಉಚ್ಚಾರಣೆ, ತಿರುಪಾವಿ ವೃತವನ್ನ ಆಚರಿಸುವುದು, ಕಾತ್ಯಾಯನಿ ವೃತವನ್ನ ಆಚರಿಸುವುದು :- ಹೀಗೆ ಈ ರೀತಿಯ ಪುಣ್ಯ ಕೆಲಸಗಳನ್ನ ಮಾಡುತ್ತಿರಬೇಕು.
2)      ಸೂರ್ಯೋದಯದ ಮುಂಚೆಯೇ ದೇವರ ಪೂಜೆಯನ್ನ ಮಾಡುತ್ತಿರಬೇಕು.
3)      ಆದಸ್ಟು ದೇವರ ಪೂಜೆಯನ್ನ ಸೂರ್ಯೋದಯದ ಮುಂಚೆಯೇ ಮಾಡಬೇಕು. ಇಲ್ಲಾ ಸೂರ್ಯೋದಯದ ಹೊತ್ತಿನಲ್ಲಿ ಮಾಡಬೇಕು.  ಅದೇ ನೀವು ಸೂರ್ಯೋದಯದ ನಂತರ ಪೂಜೆಯನ್ನ ಮಾಡಿದಲ್ಲಿ ಅದು ಮಧ್ಯಮ ವರ್ಗಕ್ಕೆ ಸೇರುತ್ತದೆ. ಆದರೆ ಮಧ್ಯಾಹ್ನ ಮಾಡುವ ಪೂಜೆ ಮಾಡದೇ ಇರುವುದಕ್ಕೆ ಸಮಾನವಾಗಿರುತ್ತದೆ.
4)      ಇನ್ನು ದೇವರ ಭೋಗವು ಮುದ್ಗನ್ನ (ಪೊಂಗಲ್) ಆಗಿರಬೇಕು. ಅದಕ್ಕೆ ಹೆಸರು ಬೇಳೆ ಮತ್ತು ಅಕ್ಕಿಯ ರೇಷ್ಯೋ ೨:೧ ಇರಬೇಕು. ಅದೇ ರೇಷ್ಯೋ ೧:೨ ಇದ್ದಲ್ಲಿ ಅದು ಮಧ್ಯಮವಾಗಿರುತ್ತದೆ. ಅದೇ ೧:೪ ಇದ್ದಲ್ಲಿ ಬಹಳ ಕೆಟ್ಟದ್ದು.
5)      ನೀವು ಮುದ್ಗನ್ನ ಅಥವಾ ಪೊಂಗಲ್ ಮಾಡುವ ವಿಧಾನ:-
·        ಹೆಸರುಬೇಳೆ, ಹಳದಿ, ಬೆಲ್ಲ , ಶುಂಠಿ ಇವೆಲ್ಲಾ ವಿಷ್ಣುವಿಗೆ ಪ್ರಿಯತಮವಾದದ್ದು. ಇನ್ನು ವೈಜ್ನಾನಿಕವಾಗಿ ಇದು ಬಹಳ ವಿಶೇಷ. ಏಕೆಂದರೆ ಚಳಿಗಾಲದಲ್ಲಿ ದೇಹಕ್ಕೆ ಉಷ್ಣವನ್ನ ಕೊಡುತ್ತದೆ ಈ ಪೊಂಗಲನ್ನ ತಿಂದಲ್ಲಿ. ಮತ್ತೆ ಇದರಲ್ಲಿ ದೇಹಕ್ಕೆ ಬೇಕಾಗುವ ಪೌಸ್ಟಿಕತೆ ಇದ್ದೇ ಇರುತ್ತದೆ.
·        ಇನ್ನು ವೈಕುಂಠ ಏಕಾದಶಿಯೂ ಇದೇ ಮಾರ್ಗಶಿರ ಮಾಸದಲ್ಲಿ ಬರುತ್ತದೆ. ಉತ್ತರದ ಬಾಗಿಲಿನ ಮುಖಾಂತರ ಈ ದಿನದಂದು ವೆಂಕಟೇಷ ಅಥವಾ ವಿಷ್ಣು ಅಥವಾ ವಿಷ್ಣುವಿನ ಅವತಾರವಾದ ಕೃಷ್ಣ ಯಾ ರಾಮರ ದರ್ಷನವನ್ನ ಮಾಡಿದರೆ ಸಿದಾ ಸ್ವರ್ಗಕ್ಕೆ ಹೋಗುತ್ತಾರೆಂದು ಉಲ್ಲೇಖವಿದೆ. ಇದಕ್ಕೊಂದು ಕಥೆ ಕೂಡಾ ಇದೆ. ಅದೇನೆಂದರೆ :-
·        ಮಹಾರಾಜಾ ವೈಕಾನ್ಸನಿಗೆ ಒಂದೊಮ್ಮೆ ಕನಸು ಬಿತ್ತಂತೆ. ಅದೇನೆಂದರೆ, ಅವರ ಕನಸಿನಲ್ಲಿ ಅವರ ತಂದೆ ಅಳುತ್ತಾ ಕುಳಿತಿದ್ದರಂತೆ. ಏನಂದು ಕೇಳಿದಾವಾಗ, ನರಕದಲ್ಲಿ ಕೊಡುವ ಯಾತನೆಯನ್ನ ಸಹಿಸಲು ಬಹಳ ಅಸಾಧ್ಯವೆಂದು ಹೇಳಿದರಂತೆ. ಮರುದಿನ ಆ ರಾಜನು ಬ್ರಾಹ್ಮಣರ ಸಭೆಯನ್ನ ಕರೆದು ಅದನ್ನ ವಿವರಿಸಿದಾವಾಗ, ಅವರೆಲ್ಲಾ ಪರ್ವತ ಮುನಿಗಳಲ್ಲಿ ಹೋಗಿ ಈ ಸಮಸ್ಯಯನ್ನ ವಿವರಿಸಿದರೆ ಅದಕ್ಕೆ ಪರಿಹಾರ ದೊರಕೀತು, ಏಕೆಂದರೆ ಆ ಮುನಿಗಳು ತ್ರಿಕಾಲಜ್ನರು ಅಂತ ಅವರೆಲ್ಲಾ ಹೇಳಿದರು. ಅದಕ್ಕೆ ಅವರಲ್ಲಿಗೆ ಹೋಗಿ ರಾಜನು ತನ್ನ ಸಮಸ್ಯಗಳನ್ನ ವಿವರಿಸಿ ಹೇಳಿದಾವಾಗ, ಅವರು ತಮ್ಮ ತ್ರಿಕಾಲ ಜ್ನಾನದಿಂದ ನೋಡಿ ಈ ರೀತಿಯಾಗಿ ವಿವರಿಸಿದರು. :- ಅಯ್ಯೋ ರಾಜನೇ, ನೀನು ಹಿಂದಿನ ಜನ್ಮದಲ್ಲಿ ಬೇಡ ಬೇಡವೆಂದು ನಿನ್ನ ಹೆಂಡತಿ ನಿನ್ನನ್ನ ಅಂಗಲಾಚಿ ಬೇಡಿದರೂ ಕೇಳದೆ, ನಿನ್ನ ಹೆಂಡತಿ ಮುಟ್ಟಾದಾವಾಗ ಅವಳನ್ನ ಸಂಭೋಗಿಸಿದ್ದಿ. ಅದಕ್ಕಾಗಿ ನಿನಗೆ ಈ ರೀತಿಯ ಸಂಕಸ್ಟಗಳು ಬಂದಿರುತ್ತದೆ. ಆದ್ದರಿಂದಲೇ ನೀನು ವೈಕುಂಠ ಏಕಾದಶಿಯಂದು ಉಪವಾಸವನ್ನ ಮಾಡಿ ದೇವರ ದರ್ಷನವನ್ನ ಪಡೆದೆಯೆಂದಾದರೆ, ನಿನ್ನ ಸಮಸ್ಯಗಳೆಲ್ಲಾ ದೂರವಾದೀತು ಅಂತ ಹೇಳಿದರಂತೆ. ದೇವರಿಗೆ ಉದ್ಗನ್ನ ಭೋಗ ಕೊಟ್ಟು , ಅದೇ ಪ್ರಸಾದವನ್ನ ನೀನು ಕೂಡಾ ತಿನ್ನಬೇಕು. ಆವಾಗಲೇ ನಿನ್ನ ತಂದೆಗೆ ಮೋಕ್ಷ ಅಂತೆಂದರಂತೆ. ಈ ಮಾಸದಲ್ಲಿ ತಿರುಮಲದಲ್ಲಿ ಗೋದಾ ದೇವಿ ಕಲ್ಯಾಣವನ್ನ ಮಾಡುತ್ತಾರಂತೆ. ಇನ್ನು ಕೆಲವರು ಗೋದಾದೇವಿ ವೃತವನ್ನೂ ಮಾಡುತ್ತಾರಂತೆ. ಇದಕ್ಕೆ ಧನುರ್ಮಾಸದ ವೃತವೆಂತಲೂ ಕರೆಯುತ್ತಾರೆ. ಮತ್ತೆ ಕೆಲವರು ಗೋದಾದೇವಿಯೇ ಬರೆದಂತಹ ತಿರುಪಾವಿಯ ೩೦ ಶ್ಲೋಕಗಳನ್ನ ಹೇಳುತ್ತಾರಂತೆ.  ತಮಿಳುನಾಡಿನಲ್ಲಿ ತಿರುಪಾವಿ ಮತ್ತು ತಿರುವೆಂಪಾವಿಯನ್ನ ಬಾಯಲ್ಲಿ ಉಚ್ಚರಿಸುತ್ತಾರಂತೆ.
·        ದಕ್ಷಬ್ರಹ್ಮನ ಮಗಳು ತನ್ನ ಗಂಡನಾದ ಈಶ್ವರನಿಗೆ ಆದ ವಮಾನವನ್ನ ತಾಳಲಾರದೆ, ದಕ್ಷಬ್ರಹ್ಮನು ಕೈಗೊಂಡ ಯಾಗಕುಂಡಕ್ಕೆ ಹಾರಿ ತನ್ನ ಪ್ರಾಣವನ್ನ ತೆಗೆದುಕೊಂಡು ಪಾರ್ವತಿಯಾಗಿ ಮರುಜನ್ಮವನ್ನ ಎತ್ತಿ ಹಿಡಿದಳಂತೆ. ಈ ಪಾರ್ವತೀ ದೇವಿಯು ತನಗೆ ಈಶ್ವರನೇ ಪತಿಯಾಗಬೇಕೆಂದು ಕಾತ್ಯಾಯನೀ ವೃತವನ್ನ ಕೈಗೊಂಡು, ತನಗೆ ಬೇಕಾಗುವ ಇಸ್ಟವನ್ನ ಸಿದ್ದಿಗೊಳಿಸಿದಳಂತೆ. ಹಾಗೆಯೇ ಈ ಗೋದಾದೇವಿಯು, ಈ ವಿಷ್ಣುವೇ ತನ್ನ ಪತಿಯಾಗಬೇಕೆಂದು ಗೋದಾದೇವಿ ವೃತವನ್ನ ಆಚರಿಸುತ್ತಾಳೆ. ಇದೇ ಮುಂದೆ ತಿರುಮಲದಲ್ಲಿ ಬಾಲಾಜಿ ಕಲ್ಯಾಣ ಮಹೋತ್ಸವವಾಗಿ ಆಚರಿಸಲ್ಪಡುತ್ತದೆ.
·        ಈ ಧನುರ್ಮಾಸವು ಉತ್ತರಾಯಣಕ್ಕೆ ಕೊನೇ ಮಾಸವಾಗಿರುತ್ತದೆ.ಇನ್ನು ಕೆಲವೆಡೆಯಲ್ಲಿ ಹೊಸ ಫ಼ಸಲು ಬಂದು ಅದನ್ನ ಮಕರಸಂಕ್ರಾಂತಿಯಂದು ಸೂರ್ಯ ದೇವನಿಗೆ ಅರ್ಪಿಸುತ್ತಾರಂತೆ. ಹೀಗೆ ಧನುರ್ಮಾಸದಲ್ಲಿ ದೇವರ ಕೆಲಸವು ಮಾತ್ರವೇ ನಡೆಯುತ್ತವೆಯೇ ವಿನಹ ಯಾವ ಮನುಷ್ಯರ ಮಂಗಳ ಕಾರ್ಯಕ್ರಮಗಳೂ ನಡೆಯುವುದಿಲ್ಲ ಮತ್ತೆ ಅದು ನಡೆಯಬಾರದು.

ಇದನ್ನ ಬರೆದವರು


Dr. ಪಾರಂಪಳ್ಳಿ ಸುರೇಂದ್ರ ಉಪಾಧ್ಯ, M.Sc., Ph.D (Astrology)
೦೫/೧೨/೨೦೧೫.

ನಾನು ಜನಶ್ರೀ ಟಿವಿಯಲ್ಲಿ ಕೂಡ ಹೇಳಿರುತ್ತೇನೆ.




No comments:

Post a Comment