Friday 10 March 2017

ಮದುವೆಗೆ ಯಾವ ಪಾರಾಮೀಟರನ್ನ ತೆಗೆದುಕೊಳ್ಳಬೇಕು?

ಮದುವೆಗೆ ಯಾವ ಪಾರಾಮೀಟರನ್ನ ತೆಗೆದುಕೊಳ್ಳಬೇಕು?
1.     ೭ನೇ ಮನೆ
2.     ೭ನೇಭಾವಾಧಿಪತಿ
3.     ೭ನೇ ಮನೆಯ ಕಾರಕ ಗ್ರಹ
4.     ನವಾಂಶದಲ್ಲಿ ಲಗ್ನಾಂಶ ಎಲ್ಲಿದೆ?
5.     ಡಿ-೧ ನೇ ಚಾರ್ಟ ಪ್ರಕಾರ ೭ನೇ ಅಧಿಪತಿ, ಡಿ-೯ ಚಾರ್ಟನಲ್ಲಿ ಎಲ್ಲಿದೆ?
6.     ಮದುವೆಗೆ ಕಾರಕ ಗ್ರಹನಾದ ಶುಕ್ರನು ನವಾಂಶದಲ್ಲಿ ಎಲ್ಲಿದ್ದಾನೆ?
7.     ಶ್ಲೋಕ ೨೦, ಪರಾಸರ ಹೋರಾ ಶಾಸ್ತ್ರದ ಪ್ರಕಾರ, ೭ನೇ ಅಧಿಪತಿ ಅವನ ಮನೆಯಲ್ಲಿಯೇ ಇರಬಹುದು ಅಥವಾ ಉಚ್ಛ ಸ್ಥಾನದಲ್ಲಿಯೂ ಇರಬಹುದು, ಆಗ ಜ್ಯೋತಿಷ್ಯಗಾರರು ಅಂತಹ ಜಾತಕರಿಗೆ, ಬರುವಂತಹ ಹೆಂಡತಿಯಿಂದ ತುಂಬಾ ಸಂತೋಷ ಸಿಗುತ್ತೇ ಅಂದು ಭವಿಷ್ಯವನ್ನ ನುಡಿಯಬೇಕು.
8.     ಅದೇ ಶ್ಲೋಕ ೧೪-೧೫ ರ ಪ್ರಕಾರ, ೭ನೇ ಮನೆಯ ಅಧಿಪತಿ ಒಂದು ವೇಳೆ ಉಚ್ಛ ಸ್ಥಾನದಲ್ಲಿದ್ದರೆ ಮತ್ತು ೭ನೇ ಮನೆಯನ್ನ ಶುಭ ಗ್ರಹರು ಆಕ್ಯುಪೈ ಮಾಡಿದ್ದರೆ, ಬಹು ಬಲಿಷ್ಠ ಲಗ್ನಾಧಿಪತಿಯು ೭ನೇ ಮನೆಯನ್ನ ಸೇರಿಕೊಂಡಿದ್ದರೆ, ಅವನಿಗೆ ಸಿಗುವಂತಹ ಹೆಂಡತಿ ಆದವಳು ಒಳ್ಳೇ ಗುಣವಂತೆಯೂ ಆಗಿದ್ದು, ಅವನ ಸಂಸಾರದ ವಿಸ್ತಾರವನ್ನ ಮಕ್ಕಳಿಂದಲೂ, ಮೊಮ್ಮಕ್ಕಳಿಂದಲೂ ವಿಸ್ತಾರವನ್ನ ಮಾಡುವಂತಹವನಾಗುತ್ತಾನೆ.
9.     ಅದೇ ಶ್ಲೋಕ ೧೮ ಏನನ್ನ ಹೇಳುತ್ತದೆಂದರೆ, ಚಂದ್ರನು ಒಂದುವೇಳೆ ಲಗ್ನದಿಂದ ೭ನೇ ಮನೆಯನ್ನ ಸೇರಿಕೊಂಡಿದ್ದಲ್ಲಿ, ಹಾಗೂ ಲಗ್ನಾಧಿಪತಿಯು ೧೨ನೇ ಭಾವವನ್ನ ಸೇರಿಕೊಂಡಿದ್ದು, ಹೆಂಡತಿಯ  ಕಾರಕ ಗ್ರಹ ಶುಕ್ರನು ಬಹಳ ವೀಕ್ ಆಗಿದ್ದಲ್ಲಿಅಂತಹವರಿಗೆ ಯಾವ ರೀತಿಯ ಸಂತೋಷವೂ ಸಿಗುವುದಿಲ್ಲಾ ಅಂತ ಹೇಳಿದ್ದಾರೆ.
10.                       ಅದೇ ಶ್ಲೋಕಾ ಸಂಖೆ ೭೯, ಚಾಪ್ಟರ್-೨೬ “ಇಫೆಕ್ಟ್ಸ್ ಆಫ್ ಭಾವಾ ಚಾರ್ಟ್ಸ್” ಏನನ್ನ ಹೇಳುತ್ತದೆಂದರೆ,೭ನೇ ಮನೆಯ ಅಧಿಪತಿ ಒಂದುವೇಳೆ ೭ನೇ ಮನೆಯನ್ನೇ ಸೇರಿಕೊಂಡಿದ್ದಲ್ಲಿ, ಅಂತಹ ಜಾತಕನಿಗೆ ಹೆಂಡತಿಯಿಂದ ಸಂತೋಷ ಸಿಗುವುದಲ್ಲದೆ, ಅವಳು ಬಹಳ ಧೈರ್ಯಶಾಲಿಯೂ , ಬುಧ್ಧಿವಂತಳೂ ಆಗಿರುತ್ತಾಳೆ. ಆದರೆ ಅವಳಿಗೆ ವಾಯು ಸಂಬಂಧಿತ ಕಾಹಿಲೆಗಳು ಬರುವ ಸಾಧ್ಯತೆ ಜಾಸ್ತಿ!
ಈ ಎಲ್ಲಾ ಸಂಯೋಜನೆಗಳು ಸಂತೋಷದ ಮದುವೆಗೆ ದಾರಿಗಳು?
·        ೭ನೇ ಮನೆಯು ಯಾವುದೇ ರೀತಿಯಿಂದ ಪಾಪಿ ಗ್ರಹಗಳಿಂದ ಕಲುಷಿತಗೊಳ್ಳಬಾರದು.
·        ೭ನೇ ಮನೆಯ ಅಧಿಪತಿಯೂ ಕೂಡಾ ಮೇಲಿನಂತೆಯೇ ಪಾಪಿ ಗ್ರಹಗಳಿಂದ ಕಲುಷಿತಗೊಳ್ಳಬಾರದು.
·        ೭ನೇ ಮನೆಯ ಅಧಿಪತಿಯು ಒಳ್ಳೇ ಮನೆಯನ್ನ ಜಾತಕದಲ್ಲಿ ಸೇರಿಕೊಂಡಿರಬೇಕು.
·        ಮದುವೆಯ ಕಾರಕ ಗ್ರಹವಾದ ಶುಕ್ರನೂ ಕೂಡ ಯಾವುದೇ ರೀತಿಯಿಂದ ಕಲುಷಿತಗೊಳ್ಳಬಾರದು.
·        ಡಿ-೯ ಲಗ್ನವು ಒಳ್ಳೇ ಅಂಶವನ್ನ ಸೇರಿಕೊಂಡಿರಬೇಕು.
·        ೭ನೇ ಅಧಿಪತಿಯೂ ಕೂಡ ಡಿ-೯ ಚಾರ್ಟ್ನಿನಲ್ಲಿ ಒಳ್ಳೇ ಅಂಶವನ್ನ ಆವರಿಸಿಕೊಂಡಿರಬೇಕು.
·        ಪಾಪಿ ಗ್ರಹಗಳು ಕೂಡ ಒಂದು ವೇಳೆ ೭ನೇ ಮನೆಯ ಅಧಿಪತಿಯಾದಲ್ಲಿ ಹಾಗೂ ೭ನೇ ಮನೆಯಲ್ಲಿಯೇ ಇದ್ದಲ್ಲಿ, ಆ ಮದುವೆಯೂ ಸಂತೋಷದ ಮದುವೆ ಆಗಿರುತ್ತೆ.
·        ಶುಭಗ್ರಹರ ದೃಷ್ಟಿಯು ೭ನೇ ಮನೆಗೆ ಹಾಗೂ ೭ನೇ ಮನೆಯ ಅಧಿಪತಿಗೆ ಬಿದ್ದಲ್ಲಿ ಅದು ಸಂತೋಷದ ಮದುವೆ ಆಗಿರುತ್ತೆ.
·         ಒಂದು ಮದುವೆ ಕುಂಡಳಿಯನ್ನ ವಿಶ್ಲೇಷಿಸೋಣ
ಶನಿ
ರಾಹು
ರವಿ   ಬುಧ
ಲಗ್ನ ಶುಕ್ರ


ರವಿ
ಶುಕ್ರ


ಡಿ-೧
೨೭/೫/೧೯೬೭,
೭.೪೫ ಎ.ಎಮ್.
ಗುರು

ಡಿ-೯
ರಾಹು ಕುಜ


ಕೇತು

ಚಂದ್ರ

ಕೇತು
ಕುಜ
ಲಗ್ನ
ಶನಿ
ಚಂದ್ರ

ಗುರು ಬುಧ
1.     ಶುಕ್ರನು ಲಗ್ನದಲ್ಲಿಯೇ ಉಪಸ್ಥಿತನು. ಅದೇ ನವಾಂಶದಲ್ಲಿ ಆತನು ಲಗ್ನದಿಂದ ೬ನೇ ಮನೆಯಲ್ಲಿ ತನ್ನ ಮನೆಯಾದ ವೃಷಭದಲ್ಲಿ ಉಪಸ್ಥಿತನು.
2.     ೭ನೇ ಮನೆಗೆ ಕುಜನ ೪ ನೇ ದೃಷ್ಟಿ ಬಿದ್ದಿದೆ. ಅಂತೆಯೇ ಮೀನದಲ್ಲಿರುವ ಶನಿಯ ೧೦ ನೇ ದೃಷ್ಟಿಬಿದ್ದಿದೆ.
3.     ನವಾಂಶದಲ್ಲಿ೭ನೇ ಮನೆಯ ಅಧಿಪತಿಯಾದ ಗುರುವಿನ ಮೇಲೆ ಯಾವುದೇ ಕೆಟ್ಟ ಗ್ರಹಗಳ ದೃಷ್ಟಿ ಬಿದ್ದಿಲ್ಲ.
4.     ಲಗ್ನದಲ್ಲಿರುವ ಶುಕ್ರನು ಯಾವುದೇ ರೀತಿಯಲ್ಲಿ ಕಲುಷಿತಗೊಳ್ಳಲಿಲ್ಲ.
5.     ಮದುವೇ ಕಾರಕ ಗ್ರಹ ಶುಕ್ರನ ಮೇಲೆ ಯಾವುದೇ ಪಾಪಿಗ್ರಹರ ದೃಷ್ಟಿ ಬಿದ್ದಿಲ್ಲ.
6.     ನವಾಂಶದಲ್ಲಿ ಲಗ್ನವು ಉತ್ತಮವಾದ ಅಂಶದಲ್ಲಿ(ಗುರುವಿನ) ಬಿದ್ದಿದೆ.
7.     ಹೆಂಗಸರಿಗೆ ಕುಜನು ಗಂಡನಾಗುತ್ತಾನೆ. ಅಂತೆಯೇ ಇವರ ಜಾತಕದಲ್ಲಿ ಕುಜನು ಲಾಭಾಧಿಪತಿಯಾದುದರಿಂದ, ತಾರೀಕು ೨೦/೧೦/೧೯೮೮, ಕುಜ ದೆಸೆ ಹಾಗೂ ಗುರು ಭುಕ್ತಿಯಲ್ಲಿ ನಡೆದಿದೆ.
8.     ಇವರ ಜಾತಕದಲ್ಲಿ ಚಂದ್ರನು ೭ನೇ ಮನೆಯಲ್ಲಿದ್ದ ಕಾರಣ ಬೇಗನೇ ಮದುವೆ ಆಗಿರುತ್ತೆ. ಆದರೆ ಇವರಿಗೆ ಮದುವೆ ಜೀವನದಲ್ಲಿ ಸುಖವಿರದು


ಪಾರಂಪಳ್ಳೀ ಸುರೇಂದ್ರ ಉಪಾಧ್ಯ

೦೫/೦೧/೨೦೧೭

No comments:

Post a Comment