Wednesday 8 March 2017

ಪ್ರಮುಖ ಟಿಪ್ಪಣಿಗಳು ನಿಮ್ಮ ಜೀವನದಲ್ಲಿ!

ಪ್ರಮುಖ ಟಿಪ್ಪಣಿಗಳು ನಿಮ್ಮ ಜೀವನದಲ್ಲಿ!

1.              ಮಿಥುನ ಲಗ್ನದವರಿಗೆ ಪಂಚಮಾಧಿಪತಿ ಶುಕ್ರನು ಇಸ್ಟದೇವತೆಯ ಕಾರಕನಾಗುತ್ತಾನೆ. ಆದ್ದರಿಂದ ಅವರುಗಳು ಯಾವುದೇ ಹೆಣ್ಣು ದೇವತೆಯನ್ನ , ಅಂದರೆ ವೈಭವ ಲಕ್ಷ್ಮಿ, ಜೈ ಸಂತೋಷಿಮಾತ ಅಥವಾ ವೈಷ್ಣವದೇವಿಯನ್ನ ಪೂಜಿಸಬೇಕು. ಆವಾಗಲೇ ಜಾತಕನಿಗೆ ಒಳ್ಳೆಯದಾಗುವುದು.
2.              ಹೀಗೆ ಒಳ್ಳೆಯದಾಗಲು ಡಿಗ್ರೀವೈಸ್ ಶುಕ್ರ ಗ್ರಹನು ಬಲವಾಗಿರಬೇಕು. ಅಂದರೆ, ಶುಕ್ರನು ೦ ಡಿಗ್ರಿಯಿಂದ ೩ ಡಿಗ್ರಿಯವರೆಗಿದ್ದರೆ, ಅಥವಾ ೨೭ ಡಿಗ್ರಿಯಿಂದ ೩೦ ಡಿಗ್ರಿ ಇದ್ದ ಪಕ್ಷದಲ್ಲಿ ಅದು ಆಗದು. ಕಾರಣ ಆ ಶುಕ್ರನಲ್ಲಿ ಯಾವ ಬಲವೂ ಇರದು. ೦ ಡಿಗ್ರಿಯಿಂದ ೩ ಡಿಗ್ರಿಯವರೆಗೆ ಬಾಲ್ಯಾವಸ್ಥೆ ಎಂದೂ , ೨೭ ಡಿಗ್ರಿಯಿಂದ ೩೦ ಡಿಗ್ರಿಯವರೆಗೆ ಮುದುಕನ ಅವಸ್ಥೆಯಲ್ಲಿ ಇರುತ್ತವೆ ಎಂದು ಅರ್ಥ. ಆವಾಗ ಅದಕ್ಕೆ ಬಲ ಇರುವುದಿಲ್ಲ. ಹೀಗಾದಾವಾಗ ಶುಕ್ರನ ದೆಸೆ ಹಾಗೂ ಅಂತರದೆಸೆಯಲ್ಲಿ ಯಾವ ಫಲಗಳನ್ನ ಕೊಡಬೇಕೋ, ಆ ಫಲಗಳನ್ನ ಕೊಡುವುದಿಲ್ಲ.
3.              ಅದೇ ಶುಕ್ರನು ೪ ಡಿಗ್ರಿಯಿಂದ ೨೬ ಡಿಗ್ರಿಯವರೆಗಿದ್ದಾವಾಗ, ಒಳ್ಳೆಯ ಫಲಗಳನ್ನೇ ನಿರೀಕ್ಷಿಸಬಹುದು.
4.              ಅದೇ ಶುಕ್ರನು ೬,೮ ಮತ್ತು ೧೨ ನೇ ಮನೆಯಲ್ಲಿರುವಾಗ, ಒಂದು ವೇಳೆ ವಿಪರೀತ ರಾಜಯೋಗದ ಅವಸ್ಥೆಯಲ್ಲಿ ಇರದಿದ್ದಲ್ಲಿ, ಒಳ್ಳೇ ಫಲಗಳನ್ನ ಕೊಡುವುದಿಲ್ಲ. ಕಾರಣ, ಈ ಮನೆಗಳನ್ನ  ದುಃಸ್ಥಾನವಂದು ಕರೆಯಲಾಗುತ್ತೆ. ಅದಕ್ಕೆ ಟ್ರಿಕ್ ಮನೆಗಳೆಂದೂ ಕರೆಯುವರು! ಆವಾಗ ಯಾರಾದರೂ ನಿಮಗೆ ಜಿರ್ಕಾನ್ ಅಥವಾ ವಜ್ರವನ್ನ ಧರಿಸಲು ಹೇಳಿದಲ್ಲಿ, ನೀವುಗಳು ಅದನ್ನ ಫಾಲೋ ಮಾಡಿದಲ್ಲಿ ನಿಮ್ಮ ಕಥೆ ಗೋವಿಂದ! ಆತನ ದೆಸೆ ಹಾಗೂ ಅಂತರ್ದೆಸೆಯಲ್ಲಿ ಬರಗುಡಿ ( ಬರ್ಬಾದ್) ಆಗುವುದು  ಖಂಡಿತ. ಆತನು ಅನ್ಯಥಾ ಜಾಸ್ತಿ ಖರ್ಚು, ಜಾಸ್ತಿ ಹಾಸ್ಪಿಟಲ್ ಖರ್ಚು ಮತ್ತು ಫಾಲ್ತು ಜೈಲ್ ಯಾತ್ರಾವನ್ನ ಕೂಡ ಆತನ ದೆಸೆ ಹಾಗೂ ಅಂತರ್ದೆಸೆಯಲ್ಲಿ ಮಾಡಿಸುತ್ತಾನೆ.
5.              ನಿಮ್ಮಲ್ಲಿ ಗಿಡ ನೆಡಲು ಸ್ಥಳ ಇಲ್ಲದಿದ್ದಲ್ಲಿ, ಮನಿ ಪ್ಲೇಂಟನ್ನ ಮನೆಯಲ್ಲಿ ಒಂದು ಬಾಟಲ್ನಲ್ಲಿಡಿ. ನಿಮಗೆ ಬರ್ಕತ್ ಬರಲು ಬಹಳ ಸಹಾಯವನ್ನ ಮಾಡುತ್ತೆ.
6.              ಯಾರ ಮನೆಯಲ್ಲಿ ಎಲೆಕ್ಟ್ರೋನಿಕ್ಸ್ ವಸ್ತು ಪದೇ ಪದೇ ಹಾಳು ಆಗುತ್ತದೋ ಅವರಿಗೆ ರಾಹುವಿನ ದೋಷ ವಿದೆಯೆಂದು ಅರ್ಥ. ಅಂತಹವರು ಒಂದು ತೆಂಗಿನ ಕಾಯಿಯನ್ನ ತೆಗೆದುಕೊಂಡು ಸಾಯಂಕಾಲದ ಹೊತ್ತಿನಲ್ಲಿ ಹರಿಯುವ ನೀರಿನಲ್ಲಿ ಬಿಟ್ಟಲ್ಲಿ, ನಿಮಗೆ ಅಥವಾ ನಿಮ್ಮ ಮನೆಯ ಮೇಲಿರುವ ರಾಹುವಿನ ದೋಷ ನಿವಾರಣೆಯಾಗುತ್ತದೆ. ಈ ಪ್ರಯೋಗವನ್ನ ಅಮವಾಸ್ಯೆಯಂದು ದಿನದಲ್ಲಿ ಯಾವಾಗಲಾದರೂ ಹರಿಯ ಬಿಡಬಹುದು ಅಥವಾ ಶನಿವಾರದಂದು ಸೂರ್ಯಾಸ್ಥದ ಸಮಯದಲ್ಲಿ ಹರಿಯ ಬಿಡಬೇಕು.
7.              ಒಂದು ವೇಳೆ ಗೋಚಾರದಲ್ಲಿ ಚಂದ್ರನು ನಿಮ್ಮ ರಾಶಿಯಿಂದ  ೧, , , , ೧೦ ಮತ್ತು ೧೧ ನೇ ಮನೆಗೆ ಬಂದಲ್ಲಿ ನಿಮಗೆ ದೇಹ ಸೌಖ್ಯ, ದ್ರವ್ಯ ಲಾಭ, ಸಂತೋಷ, ಸೌಖ್ಯ ವೃಧ್ಧಿ, ಸ್ಥಾನ ಸೌಖ್ಯ ಮತ್ತು ಇಷ್ಟಾರ್ಥ ಸಿಧ್ಧಿ ಆಗುತ್ತದೆ.
8.              ಅದೇ ಚಂದ್ರನು, ನಿಮ್ಮ ರಾಶಿಯಿಂದ ೨ ನೇ ಮನೆಯಲ್ಲಿದ್ದಾವಾಗ ಧನ ಹಾನಿ, ೪ನೇ ಮನೆಗೆ ಬಂದಾವಾಗ ರೋಗ ಭಯ, ೫ ನೇ ಮನೆಗೆ ಬಂದಾವಾಗ ಕಾರ್ಯ ವಿಕಲ್ಪ, ೮ ನೇ ಮನೆಗೆ ಬಂದಾವಾಗ ರೋಗ ವೃಧ್ಧಿ, ೯ ನೇ ಮನೆಗೆ ಬಂದಾವಾಗ ಕಾರ್ಯ ತಾಮಸ ಹಾಗೂ ೧೨ ನೇ ಮನೆ ಅಥವಾ ವ್ಯಯ ಸ್ಥಾನಕ್ಕೆ ಬಂದಾವಾಗ ವ್ಯರ್ಥ ಧನ ವ್ಯಯವಾಗುತ್ತದೆಂದು ಪಂಚಾಂಗ ಹೇಳುತ್ತೆ.
9.              ಉದಾಹರಣೆಗೆ ನಿಮ್ಮ ರಾಶಿಯು ವೃಷಭವಿದ್ದಾವಾಗ, ಗೋಚಾರದ ಚಂದ್ರನು ಮೀನಕ್ಕೆ ಬಂದಾವಾಗ ಅದು ನಿಮ್ಮ ರಾಶಿಯಿಂದ ೧೧ ನೇ ಮನೆಯಾಗುತ್ತೆ. ಆದ್ದರಿಂದ ನಿಮಗೆ ಮೇಲಿನ ರೀತ್ಯಾ, ನಿಮ್ಮ ಇಸ್ಟಾರ್ಥವು ಸಿಧ್ಧಿಯಾಗುತ್ತೇ ಅಂತ ಅರ್ಥ.
10.        ಅದೇ ರೀತಿ ಗೋಚಾರದಲ್ಲಿ ಚಂದ್ರನು ಧನೂರ್ ರಾಶಿಗೆ ಬಂದಾವಾಗ, ಅದು ನಿಮ್ಮ ರಾಶಿಯಿಂದ ೮ ನೇ ಮನೆ ಆಗುತ್ತೆ. ಆದ್ದರಿಂದ ನಿಮಗೆ ಯಾವುದಾದರೂ ಹಳೇ ರೋಗವಿದ್ದಲ್ಲಿ, ಅದು ಉಲ್ಭಣಿಸುತ್ತದೆ ಅಥವಾ ವೃಧ್ಧಿಯಾಗುತ್ತೆ ಅಂಬ ಅರ್ಥ ಬರುತ್ತೆ.
11.        ಮೀನ  ಲಗ್ನದವರಿಗೆ ಅಧಿಪತಿ ಗುರು. ಗುರು ಇವರಿಗೆ ದಶಮಾಧಿಪತಿ ಕೂಡ. ಯಾರ ಜಾತಕದಲ್ಲೇ ಆಗಲಿ, ಲಗ್ನಾಧಿಪತಿ ಒಳ್ಳೆಯದಿದ್ದಲ್ಲಿ, ಆತನು ಜೀವನದಲ್ಲಿ ಬಹಳ ಸುಖಿ.
12.        ಅದೇ ಲಗ್ನಾಧಿಪತಿಯು (ದುಃಸ್ಥಾನ) ಟ್ರಿಕ ಮನೆಗಳಲ್ಲಿ, ಅಂದರೆ ೬,೮ ಮತ್ತು ೧೨ ರಲ್ಲಿ ಇರಬಾರದು. ಇಲ್ಲಿ ಒಂದು ವೇಳೆ ಇದ್ದಲ್ಲಿ ಆ ಗ್ರಹ ವಿಪರೀತ ರಾಜ ಯೋಗದ ಕಂಡಿಷನಲ್ಲಿದ್ದರೆ ಮಾತ್ರ ಬಹಳ ಯೋಗಕಾರಕನಾಗಿ ಕೆಲಸವನ್ನ ಮಾಡುತ್ತಾನೆ.
13.        ಅದೇ ಲಗ್ನಾಧಿಪತಿಯು ,ಒಂದು ವೇಳೆ ಈ ವಿಪರೀತ ರಾಜ ಯೋಗದ ಕಂಡಿಷನಲ್ಲಿ ಇಲ್ಲದ ವೇಳೆ ಜಾತಕನ ಜೀವ ಹರಣ ಮಾಡುತ್ತಾನೆ. ಆತ ಎಲ್ಲಿ ಇದ್ದರೂ ಕೆಟ್ಟ ಫಲಗಳನ್ನೇ ಕೊಡುವನು. ಒಂದು ವೇಳೆ, ಇಲ್ಲಿ ಎಲ್ಲಾದರೂ ನೀವು ಏನೂ ತಿಳಿಯದೆ, ಜ್ಯೋತಿಷಿಯು ಹೇಳಿದನೆಂದು, ಆ ಗ್ರಹದ ರತ್ನವನ್ನ ಧರಿಸಿದರೀ ಎಂದರೆ ನಿಮ್ಮ ಕತೆ ಗೋವಿಂದ! ಯಾಕೆಂದರೆ, ಈ ರತ್ನವು ಇಲ್ಲಿ ಈ ಕೆಟ್ಟ ಮನೆಯ ಫಲಗಳನ್ನ ಏಕ್ಟಿವೇಟ್ ಮಾಡುತ್ತದೆ. ಆವಾಗ ಇವರಿಗೆ ಇನ್ನಸ್ಟು ಪ್ರೋಬ್ಲೆಮ್ಸ್ ಬರುತ್ತದೆ.
14.        ಆದ್ದರಿಂದಲೇ, ಇದಕ್ಕೆ  ನೀವು ಮಾಡಬೇಕಾದದ್ದು ಬರೇ ಪೂಜೆ ಮತ್ತು ಪಾಠ.
15.        ಇನ್ನು ಮೀನ ಲಗ್ನದವರಿಗೆ ಚಂದ್ರನು ಪಂಚಮಾಧಿಪತಿ ಆಗುತ್ತಾನೆ. ಚಂದ್ರನು ಕಟಕ ರಾಶಿಯ ಅಧಿಪತಿ. ಚಂದ್ರನಿಗೆ ಇಸ್ಟ ದೇವತಾ ಮಾ ಪಾರ್ವತಿ, ದುರ್ಗೆ ಅಥವಾ ಈಶ್ವರ. ಈಶ್ವರನಿಗೆ ಸೋಮವಾರ ಸೋಮವಾರದಂದು ಹಾಲನ್ನು ಹಾಕಿದರೆ ಬಹಳ ಒಳ್ಳೆಯದು. ಇಲ್ಲಾ ಈಶ್ವರನ ಉಪಾಸನೆ ಮಾಡಬಹುದು. ಸೋಮವಾರದಂದು ಉಪವಾಸವನ್ನ ಮಾಡಿದರೆ ಬಹಳ ಒಳ್ಳೆಯದು.
16.        ಬೆಳದಿಂಗಳಲ್ಲಿ ಹಾಲನ್ನ ರಾತ್ರಿ ಇಟ್ಟು ಬೆಳಿಗ್ಗೆ ಬೆಳಿಗ್ಗೆ ಕುಡಿದಲ್ಲಿ ಚಂದ್ರನು ಬಹಳ ಒಳ್ಳೆಯದನ್ನೇ ಮಾಡುತ್ತಾನೆ. ಅದೂ ಹುಣ್ಣಿಮೆಯ ಚಂದ್ರ ಬಹಳ ಪವರಫುಲ್ ಇರುತ್ತಾನೆ. ಈಗ ನಾವು ಈ ಪಂಚಮಾಧಿಪತಿಯಾದ ಚಂದ್ರನು ಜಾತಕದಲ್ಲಿ ಬೇರೆ ಬೇರೆ ಮನೆಯಲ್ಲಿ ಯಾವ ಯಾವ ಫಲಗಳನ್ನ ಕೊಡುತ್ತಾನೆಂದು ನೋಡೋಣವೇ?
17.        ಮೇಷ  ಲಗ್ನದವರಿಗೆ ಅಧಿಪತಿ ಮಂಗಲ್ ಗ್ರಹ. ಮಂಗಲ್ ಇವರಿಗೆ ಅಸ್ಟಮಾಧಿಪತಿ ಕೂಡ. ಈ ಲಗ್ನದವರಿಗೆ ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿ, ಆತನು ಪಂಚಮಾಧಿಪತಿಯು ಕೂಡ. ಚಂದ್ರನ ಇಸ್ಟ ದೇವತಾ ಮಾ ಪಾರ್ವತಿ, ದುರ್ಗೆ ಅಥವಾ ಈಶ್ವರ ಆದಲ್ಲಿ ಸೂರ್ಯನಿಗೆ ದೇವತೆ ಅವನೇ ಎಲ್ಲ! ಆದರೆ  ಈಷ್ವರನನ್ನ ಕೂಡಾ ಪೂಜಿಸಬಹುದು.
18.        ಈಶ್ವರನಿಗೆ ಸೋಮವಾರ ಸೋಮವಾರದಂದು ಹಾಲನ್ನು ಹಾಕಿದರೆ ಬಹಳ ಒಳ್ಳೆಯದು. ಇಲ್ಲಾ ಈಶ್ವರನ ಉಪಾಸನೆ ಮಾಡಬಹುದು. ಸೋಮವಾರದಂದು ಉಪವಾಸವನ್ನ ಮಾಡಿದರೆ ಬಹಳ ಒಳ್ಳೆಯದು. ಸೂರ್ಯ ನಮಃಸ್ಕಾರ ಬಹಳ ಒಳ್ಳೆಯದು. ದಿನಾ ಬೆಳಿಗ್ಗೆ ಸೂರ್ಯೋದಯದ ಹೊತ್ತಿಗೆ ೧೧ ಸೂರ್ಯನಮಃಸ್ಕಾರವನ್ನ ಮಾಡಿದರೆ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ ಮತ್ತು ಜಾತಕದಲ್ಲಿ ಸೂರ್ಯ ದೇವನೂ ಏಕ್ಟಿವೇಟ್ ಆಗುತ್ತಾನೆ. ಆರೋಗ್ಯಕಾರಕನೇ ಸೂರ್ಯ ದೇವ!
19.        ಸೂರ್ಯನಿಗೆ ಒಂದು ತಾಮ್ರದ ಕವಳಿಗೆಯಲ್ಲಿ ಇಲ್ಲಾ ಲೋಟದಲ್ಲಿ ಇಲ್ಲಾ ತಂಬಿಗೆಯಲ್ಲಿ ಜಲ್ (ನೀರು) ಅರ್ಘ್ಯವನ್ನ ದಿನಾ ಬೆಳಿಗ್ಗೆ ಸೂರ್ಯೋದಯದ ಹೊತ್ತಿನಲ್ಲಿ ಬಿಟ್ಟರೆ ನಿಮ್ಮನ್ನ ಎಲ್ಲಿಗೆ ಕೊಡೊಯ್ಯುತ್ತೆ ಅಂತ ನೀವೇ ನೋಡಿ.
20.         ಭಾನುವಾರದಂದು ಆದಿತ್ಯ ಹೃದಯ ಮಂತ್ರವನ್ನ ಜಪಿಸಿದಸ್ಟೂ ಒಳ್ಳೆಯದು. ಇದರಿಂದಾಗಿ ನಿದ್ದೆ ಬಾರದಿದ್ದವರಿಗೆ ಇದೊಂದು ಉತ್ತಮ ಔಷಧವೆಂದರೆ ನೀವು ನಂಬುವಿರಾ? ಈ ಬರಹಗಾರನೇ ಒಂದು ಉತ್ತಮ ಉದಾಹರಣೆ. ಆತನು ನಿದ್ದ್ರೆ ಇಲ್ಲದೆ ಬಹಳ ನೊಂದು ಬೆಂದು ಹೋಗಿರುವ. ಆತನಿಗೆ ಈ ಆದಿತ್ಯ ಹೃದಯ ಮಂತ್ರವೆನ್ನುವುದು ಒಂದು ಉತ್ತಮ ಅಮ್ರತ್ವಾಗಿ ಬಂದಿದೆ ಎಂದರೆ ನೀವು ನಂಬುವಿರಾ? ನೀವು ನಂಬಲಿಕ್ಕೇ ಬೇಕು! ಇದು ೧೦೦ ಕ್ಕೆ ನೂರು ಸತ್ಯ!.
21.         ಇಲ್ಲಾ ನವಗ್ರಹ ಹವನವನ್ನ ಮಾಡಿ ಸೂರ್ಯನಿಗೆ ಹೆಚ್ಚು ಮಂತ್ರವನ್ನ ಪಠಿಸಿದರೆ ಬಹಳ ಒಳ್ಳೆಯದು. ಇದನ್ನ ಸರ್ವೇ ಸಾಮಾನ್ಯವಾಗಿ ಶುಕ್ರಾದಿತ್ಯ ಸಂಧಿ ಶಾಂತಿಯನ್ನ ಮಾಡುವಾಗ ಮಾಡಿಸುತ್ತಾರೆ. ಒಟ್ಟಾರೆ ಸೂರ್ಯನನ್ನ ಮೇಲಕ್ಕೆ ಎತ್ತಬೇಕಸ್ಟೆ.
22.        ಸೂರ್ಯನು ಒಳ್ಳೆಯದಿದ್ದರೆ ನೀವು ಸರ್ಕಾರಿ ಹುದ್ದೆಯಲ್ಲಿ ಕೆಲಸವನ್ನ ಮಾಡುವವರಾಗಿರುತ್ತೀರ. ನಿಮಗೆ ಆಟೋಮೇಟಿಕ್ ಲೀಡರ್ಶಿಪ್ ಕ್ವೇಲಿಟಿ ಬರುತ್ತೆ. ನಿಮಗೆ ಅಧಿಕಾರ , ದರ್ಪ ಎಲ್ಲಾ ಸೂರ್ಯನಿಂದ ಬಳುವಳಿಯಾಗಿ ಬರುತ್ತೆ. ತಂದೆಯಿಂದ ಸಹಾಯ ಸಿಗುತ್ತೆ. ನೀವು ರಾಜಕೀಯದಲ್ಲಿ ಕಂಟೆಸ್ಟನ್ನ ಮಾಡಬಹುದು. ನೀವೊಬ್ಬರು ಗ್ರಾಮ ಪಂಚಾಯತ್ತಿನ ಅಧ್ಯಕ್ಷರೋ, ಇಲ್ಲಾ ಊರಿನ ಎಮ್.ಎಲ್.ಏ. ನೋ, ಇಲ್ಲಾ ಪಾರ್ಲಿಮೆಂಟ ಸದಸ್ಯರೋ, ಇಲ್ಲಾ ಒಬ್ಬ ಮಂತ್ರಿಯೋ ಇಲ್ಲಾ ಪ್ರೈಮ್ ಮಿನಿಸ್ಟರೋ ಆಗುವಲ್ಲಿ ಸೂರ್ಯ ದೇವ ಮದದ್ (ಸಹಾಯವನ್ನ) ಮಾಡುತ್ತಾನೆ.
23.        ಇನ್ನು ಕೆಲವರಿಗೆ ಸೂರ್ಯನು ದಶಮ ಸ್ಥಾನದಲ್ಲಿದ್ದರೂ (ಲಗ್ನದಿಂದ) ಅವರಿಗೆ ಸರ್ಕಾರಿ ಹುದ್ದೆಗಳು ಸಿಗೋದಿಲ್ಲ! ಇದಕ್ಕೆ ಕಾರಣವೇನೂ ಅಂತ ನಾವು, ಜ್ಯೋತಿಷಿಗಳು ಹುಡುಕಿದಾವಾಗ, ಅವರ ಜಾತಕದಲ್ಲಿ ನವಾಂಶದಲ್ಲಿ ಸೂರ್ಯನು ಶತ್ರುಗಳಾದ ಶುಕ್ರ ಹಾಗೂ ಶನಿಯ ಕ್ಷೇತ್ರದಲ್ಲಿ ಹೋಗಿ ಕುಳಿತಿರುವ!.
24.        ಇನ್ನು ಕೆಲವರ ಜಾತಕದಲ್ಲಿ, ಷಡ್ಬಲವನ್ನ ನೋಡಿದಾವಾಗ, ಅಲ್ಲಿ ಸೂರ್ಯನಿಗೆ ಯಾವ ಬಲವೂ ಬಂದಿರುವುದಿಲ್ಲ!. ಬೇಕಾದ ಬಿಂದುಗಳಿಗಿಂತ ಕಡಿಮೆ ಇರುತ್ತೆ. ಆವಾಗಲೂ ಸಹ ಅವರಿಗೆ ಸರ್ಕಾರಿ ಹುದ್ದೆ ಅಥವಾ ಸೂರ್ಯನ ಕಾರಕತ್ವಗಳು ಎಲ್ಲಾ ಉಲ್ಟಾ ಹೊಡೆಯುತ್ತವೆ!
25.        ಇನ್ನು ಕನ್ಯಾ ಲಗ್ನದವರಿಗೂ ಹಾಗೂ ತುಲಾ ಲಗ್ನದವರಿಗೂ ಶನಿಯೇ ಪಂಚಮದ ಅಧಿಪತಿಯಾದುದರಿಂದ, ಅವರುಗಳು ಶನೈಸ್ಚರನನ್ನ ಶನಿವಾರ, ಶನಿವಾರದಂದು ಹೋಗಿ ನೋಡಿಕೊಂಡೂ ಬರಬಹುದು. ನೋಡಿಕೊಂಡು ಬರುವುದೆಂದರೆ ಸುಮ್ಮನೇ ಅಲ್ಲ!. ಅಲ್ಲಿಗೆ ಹೋಗಿ ಕರಿ ಬಟ್ಟೇ, ಕರಿ ಎಳ್ಳೂ ಶನೈಸ್ಚರನಿಗೆ ಹೊದಿಸಿ, ಹಾಕಿ ಹಾಗೂ ಎಳ್ಳೇಣ್ಣೇ ದೀಪವನ್ನ ಹಚ್ಚಿ ಬರಬೇಕು!
26.        ಇಲ್ಲಾಂದ್ರೆ ನೀವು ಶನಿವಾರದಂದು ಹನುಮಾನ್ ಚಾಲೀಸಾವನ್ನ ಓದುತ್ತಾ ಬನ್ನಿನಿಮಗೆ ಬಹಳ ಒಳ್ಳೇಯದಾಗುವುದರಲ್ಲಿ ಸಂದೇಹವೇ ಇಲ್ಲ!
27.        ಇನ್ನು ವೃಸ್ಚಿಕದವರಿಗೆ ಹಾಗೂ  ಸಿಂಹದವರಿಗೆ ಪಂಚಮಾಧಿಪತಿ ಗುರು ಗ್ರಹವಾಗಿದ್ದು, ಅವರುಗಳು ಗುರುವಾರದಂದು ಉಪವಾಸವನ್ನ ಮಾಡಿದಲ್ಲಿ ಬಹಳ ಒಳ್ಳೇಯದು!
28.        ಹಾಗೆಯೇ  ಗುರು ದಕ್ಷಿಣಾಮೂರ್ತಿ, ಗುರು ರಾಘವೇಂದ್ರ ಸ್ವಾಮಿ ಇಲ್ಲ ಶಿರಡೀ ಸಾಯಿನಾಥನನ್ನ ಪೂಜಿಸಿದಲ್ಲಿ ಅವರಿಗೆ ಬಹಳ ಒಳ್ಳೆಯದೇ ಆಗುತ್ತೆ!
29.        ಇನ್ನು ಮೇಷ ಲಗ್ನ ಹಾಗೂ ಕಟಕ ಲಗ್ನದವರಿಗೆ ಇಸ್ಟದೇವತೆಯು ಕುಜನ ಸಂಬಂಧಿತವಾದದ್ದು. ಕಾರಣ ಅವರಿಗೆ ಪಂಚಮಾಧಿಪತಿ ಕುಜನಾಗಿರುತ್ತಾನೆ. ಅವಗಳು ಯಾವುದೆಂದರೆ, ಸ್ಕಂಧ, ಸ್ವಾಮಿ ಶರಣಂ ಐಯ್ಯಪ್ಪ, ಕುಕ್ಕೆ ಸುಬ್ರ್ಹ್ಮಣ್ಯ, ಹನುಮಂತ ಹಾಗೂ ನಮ್ಮ ದಕ್ಷಿಣದಲ್ಲಿ ಕುಜನಿಗೆ ಉಗ್ರ ನರಸಿಂಹ ಹಾಗೂ ದೇವಿಯನ್ನ ಹೇಳುವುದುಂಟು. ಅಂತಹವರು ಗುರು ನರಸಿಂಹನಿಗೆ ಪೂಜೆಯನ್ನ ಬುಧವಾರ ಹಾಗೂ ಶನಿವಾರದಂದು ಸಲ್ಲಿಸಬಹುದು. ಯಾವುದೇ ದುರ್ಗೆ, ಅದು ಕಟಿಲು ದುರ್ಗೆ ಆಗಬಹುದು, ಬ್ರಾಹ್ಮ್ಯ ದುರ್ಗಾ ಪರಮೇಷ್ವರಿ ಕಮಲಶಿಲೆಯಾಗಬಹುದು, ಇಲ್ಲಾ ಕೊಲ್ಲೂರು ಮುಕಂಬಿಕೆಯಾಗಬಹುದು, ಇಲ್ಲಾ ನಿಮ್ಮ ಇಸ್ಟದೇವತೆಯಾಗಿರಬಹುದು, ಇವುಗಳನ್ನ ಮಂಗಳವಾರ ಹಾಗೂ ಶುಕ್ರವಾರದಂದು ಪೂಜಿಸುತ್ತಾ ಬನ್ನಿ! ಒಳ್ಳೇಯದಾಗುತ್ತೆ!
30.        ಇನ್ನು ಕೆಲವರ ಜಾತಕದಲ್ಲಿ ಪಂಚಮದಲ್ಲಿ ಪಂಚ ಗ್ರಹಗಳು ಇರುತ್ತವೆ. ಅಂತಹವರಿಗೆ ಪೂರ್ವ ಜನ್ಮದ ಪುಣ್ಯ ಫಲಗಳು ಹೇರಳವಾಗಿರುತ್ತೆ. ಅಂತಲೇ ಜನ್ಮದಲ್ಲಿ ಅವರಿಗೆ ಪೂಜೆಯನ್ನ ಮಾಡಲು ಮನಸ್ಸೇ ಬರುವುದಿಲ್ಲ. ಇದು ಆಗಬಹುದು. ಇವರಿಗೆ ಜನ್ಮದಲ್ಲಂತೂ ಯಾವುದೇ ಅಡಚಣೆಗಳು ಬರಲಿಕ್ಕಿಲ್ಲಾ. ಆದರೆ ಅವರು ಮುಂದಿನ ತಮ್ಮ ಜನ್ಮಗಳಿಗೆ ಪೂಜೆ ಪುನಸ್ಕಾರ ಹಾಗೂ ಬೇರವರಿಗೆ ಪುರಸ್ಕಾರಗಳನ್ನ ಮಾಡದೆಯೇ ಪಾಪ ಕರ್ಮಗಳನ್ನ ಕಟ್ಟಿಕೊಂಡು ಶೇಖರಿಸುತ್ತಾರೆ. ಜಾಗ್ರತೆ ಇರಲಿ!
31.        ಇನ್ನು ಕೆಲವರು ಬರೇ ಪೂಜೆ ಪುನಸ್ಕಾರಗಳನ್ನ ಮಾಡುತ್ತಾ, ಹಣವನ್ನ ಗಂಟು ಕಟ್ಟುತ್ತಾ, ಬೇರವರಿಗೂ ಒಂದು ಪೈಸೆಯನ್ನೂ ದಾನವನ್ನ ಮಾಡದೆಯೇ, ಅನ್ನ ದಾನ, ಹಿರಣ್ಯ ದಾನ, ವಸ್ತ್ರ ದಾನ, ಭೂ ದಾನ, ಇತ್ಯಾದಿಗಳನ್ನ ಮಾಡದೆಯೇ ಇರುತ್ತಾರೆ. ಒಂದು ಪೈಸೆಯನ್ನೂ ಅವರುಗಳು ಹಸಿದು ಬಂದವರಿಗೆ ಕೊಟಿರಲಿಕ್ಕಿಲ್ಲ! ಅಂತಹವರಿಗೂ ದೇವರು ಅವರ ಪಾಪ ಕರ್ಮಗಳು ಎಸ್ಟು? ಹಾಗೂ ಪುಣ್ಯ ಕರ್ಮಗಳು ಎಸ್ಟೂ ಅಂತ ಖಂಡಿತಾ ಬರೆಯಲಿಕ್ಕಿದ್ದಾರೆ! ಜಾಗ್ರತೆ!  ಇವಿಸ್ಟು ನನಗೆ ತಿಳಿದದ್ದನ್ನ ನಿಮ್ಮ ಮುಂದಿಟ್ಟಿರುವೆ   


ಬರೆದವರು Dr.ಪಾರಂಪಳ್ಳೀ ಸುರೆಂದ್ರ ಉಪಾಧ್ಯ,Ph.D (  Astrology)
 ೧೭/೦೫/೨೦೧೬. ವೈಶಾಖ ಮಾಸ, ದ್ವಾದಶಿ ತಿಥಿ, ಬುಧವಾರ, ದುರ್ಮುಖಿ ಸಂ.

No comments:

Post a Comment