Friday 10 March 2017

“ಕ” ಸೆ ಕೃಷ್ಣ ,”ಕ” ಸೆ ಕಂಸ; “ರ” ಸೆ ರಾಮ,”ರ” ಸೆ ರಾವಣ.

ಕ” ಸೆ ಕೃಷ್ಣ ,”ಕ” ಸೆ ಕಂಸ; “ರ” ಸೆ ರಾಮ,”ರ” ಸೆ ರಾವಣ.


ಕ ಸೆ ಕೃಷ್ಣ ,ಕ ಸೆ ಕಂಸ
ರ ಸೆ ರಾಮ,ರ ಸೆ ರಾವಣ
ರಾಶಿ ಒಂದೇ, ನಕ್ಷತ್ರ ಒಂದೇ, ಅದೂ ಪುನರ್ವಸು, ಗುರುವಿನ ನಕ್ಷತ್ರ. ಆದರೆ ಗುಣಗಳು ಬೇರೆ ಬೇರೆ. ಏಕೆ? ರಾವಣ ಹುಟ್ಟಿದ್ದು ಮಿಥುನ ಹಾಗೂ ಕಟಕ ರಾಶಿಯ ಮಧ್ಯ ಭಾಗದಲ್ಲಿ. ಅದಕ್ಕೇ ರಾವಣನಿಗೆ ಜ್ಯೋತಿಷ್ಯ ಶಾಸ್ತ್ರ ಬಹಳ ಒಳ್ಳೆಯದಾಗಿ ಬರುತ್ತೆ. ಅದೇ ರಾಮನಿಗೆ ಅದು ಬರುತ್ತಿರಲಿಲ್ಲ. ಈ ವಿಭಿನ್ನತೆ ಏಕೆ? ಏಕೆಂದರೆ ಒಂದು ರಾಶಿಯು ೨ ೧/೨ ನಕ್ಷತ್ರಗಳಿಂದ ಕೂಡಿದೆ. ಒಂದು ನಕ್ಷತ್ರಕ್ಕೆ ೪ ಚರಣಗಳು ಅಥವಾ ಪಾದಗಳು. ಅಂದರೆ  ಒಂದೇ ರಾಶಿಯಲ್ಲಿ ೯ ಚರಣಗಳು ಅಥವಾ ಪಾದಗಳು ಇರುತ್ತವೆ. ಒಟ್ಟಿಗೆ ೧೨ ರಾಶಿಗಳು. ಆದ್ದರಿಂದ ೧೨ * ೯ = ೧೦೮ ಪಾದಗಳು. ಅದಕ್ಕಾಗಿಯೇ ಒಂದು ಜಪಮಾಲದಲ್ಲಿ ೧೦೮ ಮಣಿಗಳನ್ನ ಪೋಣಿಸಿ ಇಟ್ಟಿರುತ್ತಾರೆ. ಕಾರಣ ಯಾವಾಗಲೂ ಒಂದು ಜಪಮಾಲವನ್ನ ಜಪಿಸಿದರೆ ೧೦೮ ನಕ್ಷತ್ರದ ಪಾದಗಳಿಗೆ ಅಥವಾ ಅಶ್ವಿನಿ ದೇವತೆಗಳಿಗೆ ಆ ಜಪ ಸ್ಮರಣೆ ಸಂದಾಯವಾಗುತ್ತದೆ. ನಕ್ಷತ್ರಗಳನ್ನ ದೇವತೆಗಳೆಂದು ತಿಳಿಯಬೇಕು.

ಇನ್ನು ಸೂರ್ಯ ದೇವ, ಗ್ರಹಗಳ ರಾಜ. ಆದ್ದರಿಂದ ಯಾರಿಗೆ ಸೂರ್ಯ ಪ್ರಭಾವವಿದೆಯೋ, ಅವರು ರಾಜನಂತಿದ್ದರೆ, ಮಂಗಲ್ ಬ್ರಹ್ಮಾಂಡದಲ್ಲಿ ಸೇನಾಧಿಪತಿ ಕೆಲಸವನ್ನ ಮಾಡುವುದರಿಂದ ಸೇನಾಧಿಪತಿ ಕೆಲಸವನ್ನ ಮಾಡುತ್ತಾನೆ. ಚಂದ್ರನು ಅಂದಕ್ಕೆ,ಶೀತಕ್ಕೆ, ತಾಯಿಗೆ ಕಾರಕ ಗ್ರಹ. ಶುಕ್ರ ಕೂಡಾ  ಸುಂದರತ್ವಕ್ಕೆ, ಹೆಂಗಸಿಗೆ ಹಾಗೂ ಸೊಸೆಗೆ ಕಾರಕ ಗ್ರಹ. ಮತ್ತೆ ಗುರು ಗ್ರಹವು ಜೀವಕ್ಕೆಕಾರಕ ಗ್ರಹ. ಅಂದರೆ ಗುರು ಗ್ರಹವು ಜಾತಕನೇ ಆಗುತ್ತಾನೆ. ಗುರು ಗ್ರಹವು ಜ್ನಾನಕ್ಕೆ ಹಾಗೂ ಪುತ್ರನಿಗೆ ಕಾರಕ. ಆದ್ದರಿಂದ ಜಾತಕನಿಗೆ ಹೆಂಡತಿ ಸಿಗುತ್ತಾಳೋ ಇಲ್ಲವೋ ಎಂದು ತಿಳಿಯಲು ಗುರು ಮತ್ತು ಶುಕ್ರನ ಪೊದಿಷನ್ ಜಾತಕದಲ್ಲಿ ನೋಡಬೇಕು. ಅದೇ ಹೆಣ್ಣಿಗೆ ಗಂಡು ಸಿಗುತ್ತದೋ ಇಲ್ಲವೋ ಎಂದು ತಿಳಿಯಲು, ಗುರುವಿನ ಪೊದಿಷನ್ ನೋಡಬೇಕು. ಅದೇ ಗುರುವಿನ ಮುಂದೆ ರಾಹು ಯಾ ಕೇತುವಿದ್ದಲ್ಲಿ ಹೆಣ್ಣು ಸಿಗಲು ತೊಂದರೆ ಉಂಟು ಎಂದು ತಿಳಿಯಬೇಕು. ಅದೇ ಶುಕ್ರನ ಮುಂದೆ ರಾಹು ಅಥವಾ ಕೇತು ಇದ್ದಲ್ಲಿ ಗಂಡು ಸಿಗಲು ತೊಂದರೆ ಉಂಟು ಎಂದು ತಿಳಿಯಬೇಕು. ಗುರುವಿನ ಮುಂದೆ ಚಂದ್ರ ಇದ್ದಲ್ಲಿ ದೂರ ದೇಷಕ್ಕೆ ಇವರುಗಳು ಕೆಲಸಕ್ಕೆ ಹೋಗಲೇ ಬೇಕು. ಕಡೇ ಪಕ್ಷ ಸ್ವಂತ (ನೇಟಿವ್) ಮನೆ ಬಿಟ್ಟು ದೇಶದಲ್ಲೇ ದೂರದ ರಾಜ್ಯಕ್ಕೆ ಹೋಗುತ್ತಾರೆ. ಅದೇ ರೀತಿ ಗುರುವಿನ ಮುಂದೆ ಕೇತು ಇದ್ದರೂ ಕೂಡ, ಅವರು ವಲಸೆ ಹೋಗುವಂತಹ ಕೆಲಸಕ್ಕೆ ಹೋಗಲೇ ಬೇಕು. ಶನಿ ಗ್ರಹ ಕೆಲಸವನ್ನ ಕೊಡುವಂತಹ ಗ್ರಹ. ಶನಿಯ ಮುಂದೆ ಕೇತು ಗ್ರಹ ಜಲರಾಶಿಯಲ್ಲಿದ್ದ ಪಕ್ಷದಲ್ಲಿ, ಅವರುಗಳು ನೀರನ್ನ ದಾಟಿ ಕೆಲಸಕ್ಕೆ ಹೋಗಲೇ ಬೇಕು. ಶನಿ ಕಬ್ಬಿಣದ ಕಾರಕತ್ವ ಹೊಂದಿರುತ್ತದೆ. ಶನಿ ಧರ್ಮ ಹಾಗೂ ಕರ್ಮಗಳಿಗೆ ಕಾರಕ ಗ್ರಹ. ಶನಿ ನ್ಯಾಯಾಧೀಷ. ಶನಿ ನ್ಯಾಯ ಪ್ರಿಯ.  ಇನ್ನು ಬುಧನು ವಿದ್ಯ, ಬುದ್ಧಿ, ಜ್ಯೋತಿಷ್ಯ, ವ್ಯಾಪಾರ, ಬೇಂಕಿಂಗ್ ಹಾಗೂ ಕಂಪ್ಯೂಟರ್ ಕಾರಕ. ರಾಹು ಸಂಚಾರ ಪ್ರಿಯ. ರಾಹು ಮಾತಿನ ಕಾರಕ. ರಾಹು ಗ್ರಹವು ಮೋಸಕ್ಕೆ ಹಾಗೂ ಜೂಜಿಗೆ ಕಾರಕ ಗ್ರಹ. ಮತ್ತೆ ಕೇತು ಜ್ನಾನ ಕಾರಕ. ಕೇತು ವೈರಾಗ್ಯ ಕಾರಕ ಕೂಡ. ತಮಿಳಿನಲ್ಲಿ ಪ್ರಸಿಧ್ಧವಾದ ಸೂಕ್ತಿ ಹೇಳುವಂತೆ “ರಾಹುಪ್ಪೋ ಲ್ ಕುಡುಪ್ಪಾರಿಲ್ಲೈ , ಕೇತುಪ್ಪೋಲ್ ಕೆಡುಪ್ಪಾರಿಲ್ಲೈ” ಎಂಬಂತೆ ರಾಹುವು ಅಪರಿಮೈತವಾಗಿ ಕೊಡುತ್ತಾನೆ. ಅದೇ ಕೇತು ಗ್ರಹವು ಅಪರಿಮಿತವಾಗಿ ಕೆಡಿಸುತ್ತಾನೆ. ಅನುಭವದ ಪ್ರಕಾರ, ರಾಹುವಿನ ದೆಶೆಯಲ್ಲಿ ಅಭಿವೃಧ್ಧಿಯಾಗುತ್ತಾ ಹೋಗುತ್ತಾರೆ. ಅದೇ ಕೇತುವಿನ ದೆಸೆಯಲ್ಲಿ ಜಾತಕನು ಹೀನಸ್ಥಿತಿಗೆ ಬರುತ್ತಾರೆ ಇನ್ನು ಬುಧ –ಶುಕ್ರರಿಬ್ಬರು  ಸೇರಿದಲ್ಲಿ ಅಥವಾ ಯುಕ್ತಿಯಾದಲ್ಲಿ, ಲಕ್ಷ್ಮೀ ನಾರಾಯಣ ಯೋಗವುಂಟಾಗುತ್ತದೆ.  ಅದೇ ಗುರು-ಚಂದ್ರ ಸೇರಿದಲ್ಲಿ ಗಜಕೇಸರೀ ಯೋಗವುಂಟಾಗುತ್ತದೆ. ಹೀಗೆ ಅನೇಕಾನೇಕ ವಿಚಾರಗಳು ಒಂದು ಜಾತಕವನ್ನ ನೋಡಿದಾವಾಗ ಕಾಣ ಸಿಗುತ್ತವೆ. ಲಗ್ನ (೧), , ೭ ಮತ್ತು ೧೦ ವಿಷ್ಣುವಿನ ಸ್ತಾನವಾದರೆ, , , ಮತ್ತು ೯ ತ್ರಿಕೋಣ ಸ್ತಾನಗಳು ಲಕ್ಷ್ಮೀ ಸ್ತಾನವಾಗುತ್ತದೆ. ಅರ್ಥಾತ್, ಕೇಂದ್ರ ಸ್ತಾನಗಳು ವಿಷ್ಣುವಿನದ್ದಾದರೆ, ತ್ರಿಕೋಣ ಸ್ತಾನವು ಲಕ್ಷ್ಮಿಯದ್ದಾಗಿರುತ್ತದೆ. ಅಂತೆಯೇ ಚಂದ್ರ ಮತ್ತು ಸೂರ್ಯನಿಂದ ೬, ೭ ಮತ್ತು ೮ ರಲ್ಲಿ ಶುಭ ಗ್ರಹಗಳಿರುವುದು ಬಹಳ ಒಳ್ಳೆಯದು. ಆದರೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸ್ತಾನಗಳಲ್ಲಿ ಶುಭ ಗ್ರಹಗಳಿಗಿಂತ ಪಾಪಿ ಗ್ರಹಗಳಿರುವುದೇ ಒಳ್ಳೆಯದು. ಕಾರಣ -ವ್ * -ವ್ = +ವ್ ಬರುತ್ತೆ. ಹಾಗೆಯೇ ಶುಕ್ರ, ಮಂಗಲ್, ರಾಹು, ಶನಿ ಮತ್ತು ಕೇತು ಈ ಸ್ತಾನಗಳಲ್ಲಿ ಬಹಳ ಕಮಾಲ್ ಮಾಡುತ್ತವೆ.

ಜನ್ಮ ತಾರೆಯಿಂದ ಸೂರ್ಯನು ಒಂದು ರಾಶಿಗೆ ಪ್ರವೇಶ ಮಾಡಿದ ದಿನದ ತಾರೆಯವರೆಗೂ ಎಣಿಸಿ, ಈ ಸಂಖೆಯನ್ನು ೭ ರಿಂದ ಗುಣಿಸಿ. ಬಂದ ಗುಣಲಬ್ಧವನ್ನ ೮ ರಿಂದ ಭಾಗಿಸಿ. ಶೇಶವು ೧, ೨, ೩, ೪,೫, ೬, ೭, ೮ ಬಂದರೆ, ಕ್ರಮವಾಗಿ  ಈ ಸಂಖೆಗಳು ರೋಗ, ಲಾಭ, ಪ್ರಯಾಣ, ಕಾರಾಗ್ರಹವಾಸ, ಆರ್ಥಿಕ ಅಭಿವೃಧ್ಧಿ, ಸಂತೋಷ, ದೃವ್ಯನಾಶ ಮತ್ತು ಅನಿರೀಕ್ಷಿತ್ಸ ಮರಣ-ಇವುಗಳನ್ನ ಸೂಚಿಸುತ್ತೆ. ಚಂದ್ರನಿಗೆ ೧, ೩, ೬ ,೭, ೧೦ , ೧೧ ಶುಭ. ಕುಜನು ೩, ೬, ೧೧ ರಲ್ಲಿ ಶುಭ. ಬುಧನು ೨, ೪, ೬, ೮, ೧೦, ೧೧ ರಲ್ಲಿ ಶುಭನು.  ಗುರು ಗ್ರಹವು ೨, ೫, ೭, ೯ ಮತ್ತು ೧೧ ರಲ್ಲಿದ್ದರೆ ಶುಭನು. ಶುಕ್ರನಿಗೆ ೧, ೨, ೩, ೪, ೫, ೮, ೯, ೧೧  ಮತ್ತು ೧೨ ನೆಯ ಮನೆಗಳು ಶುಭ.  ಶನಿಗೆ ೩, ೬, ೧೧ ನೇ ಮನೆಗಳು ಶುಭ. ಅದೇ ರೀತಿ ರಾಹು ಮತ್ತು ಕೇತು ಗ್ರಹಗಳಿಗೂ ೩, ೬, ಮತ್ತು ೧೧ ನೇ ಮನೆಯು ಶುಭವಾಗಿರುತ್ತೆ. ಇದನ್ನ ನೀವು ಗೋಚಾರದ ಫಲಗಳನ್ನ ಹೇಳುವಾಗ, ಅಂದರೆ ದಿನ ಭವಿಷ್ಯ,  ವಾರ ಭವಿಷ್ಯ, ತಿಂಗಳ ಭವಿಷ್ಯ ಹೇಳುವಾಗ ಉಪಯೋಗಿಸಬೇಕು.


ಮೇಷ ರಾಶಿಯು ಅಶ್ವಿನಿ, ಪಾದ ೪, ಭರಣಿ, ಪಾದ ೪ ಹಾಗೂ ಕೃತ್ತಿಕಾ, ಪಾದ ೧ ರಿಂದ ಕೂಡಿರುತ್ತದೆ. ಅಶ್ವಿನಿ ನಕ್ಷತ್ರದ ಸ್ವಾಮಿ ಕೇತುವಾದರೆ, ಭರಣಿ ನಕ್ಷತ್ರದ ಸ್ವಾಮಿ ಶುಕ್ರನಾಗುತ್ತಾನೆ. ಕೃತ್ತಿಕಾ ನಕ್ಷತ್ರದ ಸ್ವಾಮಿ ಸೂರ್ಯನಾಗುತ್ತಾನೆ. ಆದ್ದರಿಂದಲೇ ಹೇಳುವುದು ರಾಶಿ ಒಂದೇ, ಆದರೆ ಗುಣಗಳು ಬೇರೆ ಬೇರೆ. ಕಾರಣ ಕೇತುವಿನ, ಶುಕ್ರ ಹಾಗೂ ಸೂರ್ಯನ ಕಾರಕತ್ವಗಳು ಬೇರೆ ಬೇರೆ ಇರುತ್ತವೆ. ಸೂರ್ಯನು ದರ್ಪಕ್ಕೆ, ಅಹಂಕಾರಕ್ಕೆ, ಅಧಿಕಾರಕ್ಕೆ, ತಂದೆಗೆ, ರಾಜನಿಗೆ, ಪ್ರೈಮ್ ಮಿನಿಸ್ಟರಿಗೆ ಇತ್ಯಾದಿಗಳಿಗೆ ಕಾರಕನಾದರೆ, ಶುಕ್ರನು ಲಕ್ಷ್ಮಿಗೆ, ಸೌಂದರ್ಯಕ್ಕೆ, ಹಣಕ್ಕೆ, ಶೌಕೀನ್ ಜೀವನಕ್ಕೆ, ವ್ಯಾಪಾರಕ್ಕೆ, ಹೆಣ್ಣಿಗೆ ಇತ್ಯಾದಿ ಕಾರಕತ್ವಗಳಿಗೆ ಕಾರಕನಾಗುತ್ತಾನೆ. ಅದೇ ಕೇತು ಗ್ರಹ ವಿನಾಯಕನಿಗೆ, ಜ್ನಾನಕ್ಕೆ, ಆಳವಾಗಿ ರೀಸರ್ಚ್ ಮಾಡುವುದಕ್ಕೆ ಇತ್ಯಾದಿ ಕಾರಕತ್ವಗಳಿಗೆ ಕಾರಕನಾಗಿರುತ್ತಾನೆ.  ಮಂಗಲ್ ಗ್ರಹ ಅಹಂಕಾರಕ್ಕೆ, ಧೈರ್ಯಕ್ಕೆ, ಕೋಪಕ್ಕೆ, ತಾಪಕ್ಕೆ, ರಕ್ತದ ಒತ್ತಡಕ್ಕೆ ಕಾರಕವಾದರೆ, ಶನಿ ಗ್ರಹ ನ್ಯಾಧೀಶನಾಗಿ ಎಲ್ಲರಿಗೂ ನ್ಯಾಯವನ್ನ ಕೊಡಲಿಕ್ಕೆ, ಕಬ್ಬಿಣಕ್ಕೆ, ಪೆಟ್ರೋಲ್ ಪ್ರೊಡಕ್ಟ್ಸಗಳಿಗೆ, ಮಂದವಾದ ಗುಣಕ್ಕೆ, ತೊದಲು ನುಡಿಗೆ ಕಾರಕನಾಗುತ್ತಾನೆ. ಅದೇ ಬುಧನು ಬುದ್ಧಿಗೆ, ವಿದ್ಯಕ್ಕೆ, ಕಂಪ್ಯೂಟರಿಗೆ, ಜ್ಯೋತಿಷ್ಯಕ್ಕೆ, ವ್ಯಾಪಾರಕ್ಕೆ ಕಾರಕ ಗ್ರಹವಾದರೆ, ಕೇತು ಗ್ರಹ ವೈರಾಗ್ಯಕ್ಕೆ, ವಿನಾಯಕನಿಗೆ, ಜ್ನಾನಕ್ಕೆ ಹಾಗೂ ಮೊಬಾಯಿಲಿಗೆ, ಎಲೆಕ್ಟ್ರೋನಿಕ್ಸ್ ಉಪಕರಣಗಳಿಗೆ ಕಾರಕನಾಗುತ್ತಾನೆ. ಇನ್ನು ಉಳಿದಂತಹ ರಾಹುವೆನ್ನುವ ಛಾಯಾ ಗ್ರಹವು ಸಂಚಾರಕ್ಕೆ, ತಿರುಗಾಟವಿರುವ ಕೆಲಸಕ್ಕೆ, ಕಾಯುವಂತಹ ಕೆಲಸಕ್ಕೆ(ಕಾರಣ ಹಾವು ನಿಧಿಯನ್ನ ಕಾಯುವ ಕೆಲಸವನ್ನ ಮಾಡುತ್ತಿರುತ್ತದೆ ಮತ್ತು ಸದಾ ಸಂಚಾರವನ್ನ ಮಾಡುತ್ತಿರುತ್ತದೆ. ಅದು ಒಂದು ಜಾಗದಲ್ಲಿ ಇರೋದೇ ಇಲ್ಲ.) ಛಕ ಛಕ ಮಾತಿಗೆ, ಮಂದಹಾಸಕ್ಕೆ, ದೈವದ ಸ್ತಾನಕ್ಕೆ(ಕಾರಣ ಇದು ಹಾವಿನ ಹೆಡೆ), ಹರ್ಡಲ್ಸ್ ತಂದೊಡ್ಡುವಿಕೆಗೆ, ಅಹಂಕಾರಕ್ಕೆ , ಲಾಟರಿಗೆ, ಸಡನ್ ಪ್ರೋಗ್ರೆಸ್ಸಿಗೆ ಕಾರಕನಾಗುತ್ತಾನೆ. ಅದ್ದರಿಂದಲೇ ಹೇಳುವುದು, ಆಯಾ ನಕ್ಷತ್ರಗಳಲ್ಲಿ ಹುಟ್ಟಿರುವ ಮಗುವಿಗೆ ಆಯಾ ನಕ್ಷತ್ರಗಳ ಗುಣಗಳು ಬರುವುದು. ಕೃತ್ತಿಕಾ ನಕ್ಷತ್ರದ ೧ ನೇ ಪಾದ ಮೇಷಕ್ಕೆ ಬಂದರೆ, ಉಳಿದ ೩ ಪಾದಗಳು ವೃಷಭ ರಾಶಿಗೆ ಬರುತ್ತವೆ. ಆದರೆ ವೃಷಭ ರಾಶಿಯ ಸ್ವಾಮಿ ಶುಕ್ರನಾಗುತ್ತಾನೆ. ಮೇಷ ರಾಶಿಯ ಸ್ವಾಮಿ ಮಂಗಲ್ ಗ್ರಹನಾಗುತ್ತಾನೆ. ಆದ್ದರಿಂದ ಮೊದಲನೇ ಪಾದವಾದ ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದಂತಹ ಮಗುವಿಗೆ ಮಂಗಲನ ಕಾರಕತ್ವಗಳು ಲಗಾವು ಆದರೆ, ಕ್ರತ್ತಿಕೆಯ  ಆಮೇಲಿನ ೩ ಪಾದಗಳಲ್ಲಿ ಹುಟ್ಟಿರುವ ಮಕ್ಕಳಿಗೆ ಶುಕ್ರನ ಕಾರಕತ್ವಗಳು ಬಂದಿರುತ್ತದೆ. ಇಡೀ ನಕ್ಷತ್ರದ ಅಧಿಪತಿ ಸೂರ್ಯ ದೇವ. ಇನ್ನು ತತ್ವಗಳು ಬೇರೆ ಬೇರೆ. ಮೇಷ ರಾಶಿಯು ಅಗ್ನಿ ತತ್ವದ್ದಾದರೆ, ವೃಷಭ ರಾಶಿಯು ಭೂ ತತ್ವದ್ದು ಆಗಿರುತ್ತದೆ. ಈ ತತ್ವಗಳೂ ಮಕ್ಕಳಿಗೆ ಲಗಾವು ಆಗುತ್ತದೆ. ಮೇಷದಲ್ಲಿ ಹುಟ್ಟಿರುವ ಮಕ್ಕಳಿಗೆ ಅಗ್ನಿ ಸಂಬಂಧಿತ ಕಾಹಿಲೆಗಳು ಬಂದರೆ, ವೃಷಭ ರಾಶಿಯಲ್ಲಿ ಹುಟ್ಟಿರುವ ಮಕ್ಕಳಿಗೆ ಭೂ ತತ್ವದ ಸಂಬಂಧಿತ ಕಾಹಿಲೆಗಳು ಬರುತ್ತವೆ. ಪ್ರವೃತ್ತಿಯೂ ಬೇರೆ ಬೇರೆ. ಮೇಷದಲ್ಲಿ ಹುಟ್ಟಿರುವ ಮಕ್ಕಳು ಕ್ಷತ್ರಿಯ ಪ್ರವೃತ್ತಿಯವರಾದರೆ, ಅದೇ ಕೃತ್ತಿಕಾ ನಕ್ಷತ್ರದ ಕೊನೆಯ ೩ ಪಾದಗಳಲ್ಲಿ ಜನಿಸಿದಂತಹ ಮಕ್ಕಳಿಗೆ ಶೂದ್ರ ಪ್ರವೃತ್ತಿ ಬಂದಿರುತ್ತವೆ. ಅದೇ ಕೃತ್ತಿಕೆಯ ಮೊದಲನೇ ಪಾದದಲ್ಲಿ ಹುಟ್ಟಿರುವ ಮಕ್ಕಳಿಗೆ ಚರ ರಾಶಿಯ ಗುಣಗಳು ಬಂದಿದ್ದಲ್ಲಿ, ಕೊನೆಯ ೩ ಪಾದಗಳಲ್ಲಿ ಕೃತ್ತಿಕೆ ನಕ್ಷತ್ರದಲ್ಲಿ ಜನಿಸಿದಂತಹ ಮಕ್ಕಳಿಗೆ ಸ್ಥಿರ ಸ್ವಭಾವದ ಗುಣಗಳು ಬಂದಿರುತ್ತವೆ. ಆದ್ದರಿಂದಲೇ ಹೇಳುವುದು, ರಾಶಿ ಒಂದೇ ಆದರೆ ಗುಣಗಳು ಬೇರೆ ಬೇರೆ. ಅದಕ್ಕೇ ಹೇಳುವುದು, ಜ್ಯೋತಿಷ್ಯ ಅಸ್ಟೇನೂ ಸುಲಭದ ವಿಷಯವಲ್ಲ. ನೀವು ಲೆಕ್ಕದಲ್ಲಿ ಪಕ್ಕನಾದಲ್ಲಿ, ನಿಮಗೆ ಜ್ಯೋತಿಷ್ಯ ಖಂಡಿತ ಬರುತ್ತವೆ. ಇನ್ನು ಪೂಜಾ ಪಾಠವನ್ನ ಮಾಡುತ್ತಿದ್ದಲ್ಲಿ, ನಿಮಗೆ ವಾಕ್ಶುದ್ಧಿಯೂ ಬರುವುದರಲ್ಲಿ ಸಂದೇಹವೇ ಇಲ್ಲ.

ಮೇಷ ರಾಶಿ :- (ರಾಶಿಯ ಸ್ವಾಮಿ ಮಂಗಲ್)

ಇವರುಗಳು ಸಾಮಾನ್ಯವಾಗಿ ದೋಸ್ತೋನ್ ಕಿ ದೋಸ್ತ್, ದುಷ್ಮನೋನ್ ಕಿ ದುಷ್ಮನ್, ಇವರ ಶರೀರದಲ್ಲಿ ಶಕ್ತಿ ಅಪಾರ. ಇವರುಗಳು  ಧನವಾನ್, ದಭಂಗ್, ಬಹಾದ್ದೂರ್, ಸಾಹಸಿ ಮತ್ತು ಸ್ವಾಭಿಮಾನಿಗಳು. ಅಪಾರ ಪ್ರೇಮ್ ಕರ್ನೇವಾಲಾ, ಅಪ್ನಾ ಅಪಮಾನ್ ಬಿಲ್ಕುಲ್ ಸಹಿಸೋಲ್ಲ. ಈತ ದಿಲ್ ಕೆ ರಾಜ, ಪ್ರೇಮ್ ಬಹಳ ಗೆಹರಾಯಿ ಕರನೇವಾಲಾ.

೧) (ನಕ್ಷತ್ರ ಅಶ್ವಿನಿ, ಚರಣ -೪(ಸ್ವಾಮಿ ಕೇತು), ಭರಣಿ, ಚರಣ-೪(ಸ್ವಾಮಿ ಶುಕ್ರ), ಕೃತ್ತಿಕ,ಚರಣ-೧(ಸ್ವಾಮಿ ಸೂರ್ಯ) . ಈ ನಕ್ಷತ್ರವನ್ನ ಆಳುವ ದೇವತೆಗಳು ಸಾಸ್ರ ಮತ್ತು ಸತ್ಯ, ಅಸ್ವಿನ್ ಟ್ವಿನ್ಸ್.

·      ಸ್ವಾಮಿ ಮಂಗಲ್ ಸ್ನೇಹಿತರಿಗೆ ಸ್ನೇಹಿತ, ವೈರಿಗಳಿಗೆ ವೈರಿ.
·      ಶರೀರದಲ್ಲಿ ಶಕ್ತಿ ಅಪಾರ.
·      ಇವರುಗಳಲ್ಲಿ ಅಸೂಹೆ ಇರುತ್ತೆ. ಇವರುಗಳಿಗೆ ಬೇರವರು ತಮಗಿಂತ ಮೇಲಕ್ಕೆ ಬರಬಾರದೆಂದಸ್ಟೆ.
·      ಇವರಲ್ಲಿ ಅಪಾರ ಹಣವಿರುತ್ತೆ.
·      ಬಹಳ ಧೈರ್ಯವಂತರು.
·      ಇವರುಗಳು ಬಹಳ ಸ್ವಾಭಿಮಾನಿ.
·      ಇವರುಗಳು ಬಹಳ ಸಾಹಸವಂತರು.
·      ಇವರು ಅಪಮಾನವನ್ನ ಸಹಿಲಾರರು.
·      ವಿಷಾಲ ಹೃದಯವಂತರು ಹಾಗೂ ಸಹಾಯ ಹಸ್ತರು.
·      ಇವರಲ್ಲಿ ವಿಷಾಲ ಪ್ರೇಮವಿರುತ್ತೆ.
·      ಇವರಲ್ಲಿ ಜ್ನಾನ ಕೂಡ ಒಳ್ಳೆಯದಿರುತ್ತೆ.
·      ಇವರುಗಳು ಮಹಾತ್ವಾಕಾಂಕ್ಷಿಗಳು.
·      ಸಾಮಾನ್ಯವಾಗಿ ಡಿಫ಼ೆನ್ಸನಲ್ಲಿ, ಪೋಲೀಸ್ ಹುದ್ದೆಯಲ್ಲಿ, ಎಲೆಕ್ಟ್ರೋನಿಕ್ಸ್ ಫ಼ೀಲ್ಡ್ಸನಲ್ಲಿ ಇವರುಗಳು ಬಹಳ ಶೈನ್.


೨) ಭರಣಿ ನಕ್ಷತ್ರ (ಸ್ವಾಮಿ ಶುಕ್ರ) . ಈ ನಕ್ಷತ್ರವನ್ನ ಆಳುವಂತಹ ದೇವತೆ ಯಮ.

·       ಒಂದು ಗಾದೆಯ ಮಾತುಂಟು. ಅದೇನೆಂದರೆ ಭರಣಿ ನಕ್ಷತ್ರದವರು ಧರಣಿಯನ್ನ ಆಳುವರು ಅಂತ!. ಇದು ನೂರಕ್ಕೆ ನೂರು ಸತ್ಯ. ನಾನು ಸುಮಾರು ಭರಣಿ ನಕ್ಷತ್ರದವರನ್ನ ನೋಡಿರುತ್ತೇನೆ. ನೋಡಲು ಎಂತಹ ಬೇಕೂಫ಼್ ತರ ಇರುತ್ತಾನರೆ. ಆದರೆ ಅವರಲ್ಲಿರುವ ಭೂಮಿ ಸಂಪತ್ತುಬೇರವರಲ್ಲಿಲ್ಲಾ ಅಂದರೆ ನೀವುಗಳು ನಂಬುವಿರಾ?
·      ಸಮಾಜ ಸುಧಾಕರರು, ಫಿಲೋಸಫ಼ರ್ಸಗಳು ಹಾಗೂ ಏಕ್ಟಿವಿಸ್ಟಗಳು ಈ ನಕ್ಷತ್ರದಲ್ಲಿ ಜಾಸ್ತಿ.
·      ಸಾಮಾನ್ಯವಾಗಿ ನಮ್ಮ ಹಿಂದುಗಳಲ್ಲಿ ಭರಣಿ ಮತ್ತು ಕೃತ್ತಿಕೆ ನಕ್ಷತ್ರಗಳಲ್ಲಿ ಯಾವ  ಕೆಲಸವನ್ನೂ ಮಾಡಬಾರದು.
·      ಇವರಲ್ಲಿ ಇಳಿ ಪ್ರಾಯದಲ್ಲಿ,ಒಂದು ರೀತಿಯ ಆಧ್ಯಾತ್ಮಿಕ ಮಾರ್ಪಾಡು ಆಗುತ್ತೆ.
·      ಇವರುಗಳು ಸಾಮಾನ್ಯವಾಗಿ ಭೂಮಿಯಲ್ಲಿ ಇನ್ವೆಸ್ಟ್ ಮಾಡುವುದು ಜಾಸ್ತಿ
·      ಇವರೊಬ್ಬರು ಅತ್ಯುತ್ತಮ ಆಡುಗೆಗಾರರು. ಇದಕ್ಕೆ ಕಾರಣ ಈ ನಕ್ಷತ್ರದ ಒಡೆಯನೇ ಶುಕ್ರ.
·      ಈ ನಕ್ಷತ್ರದವರಲ್ಲಿ ಹೋಟೇಲ್ ಉದ್ಯಮದವರು ಸಾಮಾನ್ಯವಾಗಿ ಸಿಗುತ್ತಾರೆ.

·      ವೃಷಭ ರಾಶಿ:-

ನಕ್ಷತ್ರ ಕೃತ್ತಿಕಾ, ಚರಣ-೩, (ಸ್ವಾಮಿ ಸೂರ್ಯ) ರೋಹಿಣಿ, ಚರಣ-೪ (ಸ್ವಾಮಿ ಚಂದ್ರ), ಮೃಗಶಿರ, ಚರಣ-೨(ಮಂಗಲ್).

) ಕೃತ್ತಿಕಾ(ಸೂರ್ಯ ಅಧಿದೇವತೆ) ನಕ್ಷತ್ರದವರು:- ಇದನ್ನ ಆಳಿದ ದೇವತೆ ಅಗ್ನಿ.

·      ಇವರುಗಳು ಉತ್ತಮ ರೋಪವನ್ನ ಪಡೆದಿರುತ್ತಾರೆ.
·      ಆರೋಗ್ಯ (ತಂದುರುಸ್ತ್) ವಂತರಾಗಿರುತ್ತಾರೆ.
·      ಯಾವುದರಲ್ಲೂ ಒಂದು ಶಿಸ್ತನ್ನ ಕಾಪಾಡಿಕೊಂಡು ಬರುವಂತಹ ಜನರಿವರು.
·      ಇವರುಗಳು ಸೂರ್ಯನಂತೆ  ತೇಜಸ್ಸಿನಿಂದ ಕೂಡಿರುತ್ತಾರೆ.
·      ಜಿಮ್ಮು, ಕಸರತ್ತು, ಯೋಗ, ಪ್ರಾಣಾಯಾಮ-ಇತ್ಯಾದಿಗಳನ್ನ ಮಾಡುವಂತಹ ಜನರು.
·      ಸೂರ್ಯನು ಒಳ್ಳೇ ದೇಹವನ್ನ ಕೊಡುವನು.
·      ಬಲಿಸ್ಠವಾದ ಭುಜಗಳು ಇವರಿಗೆ ಇರುತ್ತವೆ.
·      ಹೆಂಗಸರಿಗೆ ಆಕರ್ಷಣೆಯಾಗ್ತೀರ.
·      ರೋಮೇನ್ಸಿಗೆ ಹೇಳಿ ಮಾಡಿಸಿದಂತಹವರು.
·      ಕವಿತಾ ಓದುವುದರಲ್ಲಿ, ಹಾಡನ್ನ ಹೇಳುವುದರಲ್ಲಿ, ಹೆಂಗಸರ ಜೊತೆಯಲ್ಲಿ ಸ್ನೇಹದ ಹಸ್ತವನ್ನ ಚಾಚುವುದರಲ್ಲಿ ಅಗ್ರರು.
·      ಈ ರಾಶಿಯವರಲ್ಲಿ ಸೂರ್ಯ, ಚಂದ್ರ, ಮಂಗಲ್ ಮತ್ತು ಶುಕ್ರನ ಪ್ರಭಾವವಿರುವುದರಿಂದ, ಇವರುಗಳು ಸಾಹಸವಂತರು(ಮಂಗಲ್), ವೀರ್ಯವಂತರು(ಶುಕ್ರ), ಸುಂದರರು(ಚಂದ್ರ) ಹಾಗೂ ಅಧಿಕಾರದ ದರ್ಪ(ಸೂರ್ಯ) ವನ್ನ ತೋರಿಸುವವರು.

೪)ರೋಹಿಣಿ(ಚಂದ್ರ ಅಧಿದೇವತೆ) ನಕ್ಷತ್ರದವರು :- ಇದನ್ನ ಆಳಿದವರು ಲೋರ್ಡ್ ಬ್ರಹ್ಮ.

·      ಇವರು ಪ್ರಸಿದ್ಧ ಜ್ಯೋತಿಷಿಗಳಾಗುತ್ತಾರೆ.
·      ಇವರೊಬ್ಬರು ಕವಿಗಳೆಂದರೆ ತಪ್ಪಾಗದು.
·      ಇವರೊಬ್ಬರು ಪೈಂಟರ್ ಕೂಡಾ ಆಗುತ್ತಾರೆ.
·      ಇವರೊಬ್ಬರು ಸತ್ಯವಾದಿಗಳು.
·      ಇವರು ಬಹುಜನ ಸಂಪತ್ತಿಗರು.
·      ಇವರೊಬ್ಬರು ಭೋಗಿಗಳು.
·      ಇವರನ್ನ ನೀವು ೧೦೦ ಕ್ಕೆ ೧೦೦ ನಂಬಬಹುದು. ಕಾರಣ, ಇವರೊಬ್ಬರೇ ದಿಲ್ ಕಾ ರಾಜ. ಹೊಟ್ಟೆಯಲ್ಲಿ ಒಂದು ಚೂರು ಇಟ್ಟುಕೊಳ್ಳುವುದಿಲ್ಲ.
·      ಇವರುಗಳು ದಾನಪ್ರಿಯರು. ಕೈಯಲ್ಲಿದ್ದದ್ದನ್ನ ಬೇರವರಿಗೆ ಕೊಟ್ಟು ಸಂತ್ರಪ್ತಿಯನ್ನ ಪಡೆಯುವವರು. ಇದಕ್ಕೆ ಕಾರಣ ಚಂದ್ರನು ಈ ಮನೆಯಲ್ಲಿ ಉಛ್ಛನಾಗಿರುತ್ತಾನೆ. ಅದೂ ಮಿಥುನ ಲಗ್ನದವರಿಗೆ ಈ ವಾಕ್ಯ ನೂರಕ್ಕೆ ೨೦೦ ಸತ್ಯ! ಅದಕ್ಕೆ ನಾನೇ ಉದಾಹರಣೆಯಾಗಿರುತ್ತೇನೆಂದರೆ ನಿಮಗೆ ಆಸ್ಚರ್ಯವಾಗಬಹುದು. ಆದರೆ ಇದು ಸತ್ಯ!. ಇದಕ್ಕಾಗಿಯೇ ನಾನು ಮನೆಯಲ್ಲಿ ಬಹು ಜನರಿಂದ ಬೈಗಳವನ್ನ ತಿನ್ನುತ್ತಿರುತ್ತೇನೆ. ಆದರೆ ನನ್ನ ಸಂಪತ್ತು ಖರ್ಚು ಮಾಡಲು ದೊಣ್ಣೇ ನಾಯಕರ ಅಪ್ಪಣೆಯನ್ನ ತೆಗೆದುಕೊಳ್ಳಬೇಕೇ?
·      ಇದು ಕೃಷ್ಣನ ನಕ್ಷತ್ರ. ಆದ್ದರಿಂದಲೇ ಇವರಿಗೆ ಹೆಣ್ಣು ಮಕ್ಕಳ ಜೊತೆ ದೋಸ್ತಿ ಜಾಸ್ತಿ.
·      ಬಹಳ ವಿನಮ್ರ ನಡತೆ ಇದ್ದವರು. ಇವರನ್ನ ಹಾರ್ತಕ್ಕಿ ಮನುಷ್ಯರೆಂದರೆ ತಪ್ಪಾಗದು.
·      ಇವರು ಬಹಳ ಕೃತಜ್ನರು
·      ಗುರುವಿನಲ್ಲಿ ಅಪಾರ ನಂಬಿಕೆಯನ್ನ ಇಡುವವರು.
·      ಯಾವುದೇ ವಿಷಯವನ್ನ ಬಹಳ ಆಳವಾಗಿ ನೋಡುತ್ತಾರೆ.
·      ಚಂದ್ರನು ತಾಯಿಯ ಕಾರಕ.
·      ಚಂದ್ರನು ಮನಸ್ಸು ಕಾರಕ.
·      ಚಂದ್ರ ಸೌಂದರ್ಯ ಕಾರಕ.
·      ಚಂದ್ರ ಪ್ರೇಮದ ಕಾರಕ.
·      ಚಂದ್ರ ಶಾಂತಿ ಕಾರಕ.
·      ಚಂದ್ರ ಕವಿ ಕಾರಕ.
·      ಚಂದ್ರ ಮೃದು ಭಾಷೆಯ ಕಾರಕ.

೫) ಮೃಗಶಿರ(ಮಂಗಲ್ ಅಧಿದೇವತೆ) ನಕ್ಷತ್ರದವರು:-ಇದನ್ನ ಆಳಿದಂತಹ ದೇವತೆ ಸೋಮ.

·      ಇವರುಗಳು ತರ್ಕ-ವಿತರ್ಕವನ್ನ ಮಾಡುವ ಕೆಟೆಗರಿಗೆ ಸೇರಿದವರು.
·      ಬಹಳ ಚಪಲತೆ ಜಾಸ್ತಿ
·      ಬಹಳ ಬುದ್ಧಿವಂತರು.
·      ಬಹಳ ಧೈರ್ಯವಂತರೂ ಕೂಡ.
·      ಇವರುಗಳಿಗೆ ಅಹಂಕಾರ ಬಹಳ ಬೇಗ ಬರುತ್ತೆ.
·      ದ್ವೇಷದ ಭಾವನೆ ಇವರಿಗೆ ಬಹಳ ಬೇಗ ಬರುತ್ತೆ.
·      ಇವರುಗಳು ಬಹಳ ವಿದ್ವಾನ್ ಕೂಡ.
·      ಇವರಿಗೆ ಧನ, ಧಾನ್ಯದ ಸುಖ ಎಲ್ಲಾ ಸಿಗುತ್ತವೆ.

ಮಿಥುನ ರಾಶಿ (ಮೃಗಷಿರ-೨ (ಸ್ವಾಮಿ ಮಂಗಲ್), ಆರ್ದ್ರಾ-೪(ಸ್ವಾಮಿ ರಾಹು) , ಪುನರ್ವಸು-೩(ಸ್ವಾಮಿ ಗುರು))
ಮಿಥುನ ರಾಶಿಯ ಸ್ವಾಮಿ , ಬುದ್ಧಿಗೆ, ವಿದ್ಯಕ್ಕೆ,ವ್ಯಾಪಾರಕ್ಕೆ, ಕಂಪ್ಯೂಟರಿಗೆ ಮತ್ತು ಬೇಂಕಿಂಗ್ ಕ್ಷೇತ್ರಕ್ಕೆ ಕಾರಕ ಗ್ರಹ.

೬) ಆರ್ದ್ರಾ(ಸ್ವಾಮಿ ರಾಹು) ನಕ್ಷತ್ರ :-ಇದನ್ನ ಆಳಿದಂತಹ ದೇವತೆ ರುದ್ರ.

·      ಇವರು ಸ್ವಾಭಿಮಾನಿ ಜನಾಂಗದವರು.
·      ಸದಾ ಸಮಾಚಾರವನ್ನೇ ಮಾಡುವ ಜನರಿವರು.
·      ಇವರು ಬಹಳ ಅಹಂಕಾರಿಗಳು.
·      ಇವರುಗಳು ಬಹಳ ಕೃತಜ್ನರು.
·      ಯಾರಾದರೂ ಇವರಿಗೆ ಚಲೇಂಜ್ ಮಾಡಿದರೆ, ಅವರಿಗೆ ಅದೇ ಭಾಷೆಯಲ್ಲಿ ಉತ್ತರವನ್ನ ಕೊಡುವ ಜನರಿವರು.
·      ಬಹಳ ಛಲವಾದಿಗಳಿವರು.
·      ಅಸ್ಟೇ ಮೆಹನತ್ತನ್ನ ಮಾಡುವ ಜನರಿವರು.




೭) ಪುನರ್ವಸು (ಸ್ವಾಮಿ ಬ್ರಹಸ್ಪತಿ) ನಕ್ಷತ್ರದವರು:- ಇದನ್ನ ಆಳಿದ ದೇವತೆ ಅದಿತಿ.

·      ಬಹಳ ಶಾಂತ ಸ್ವಭಾವದ ಜನರು.
·      ಬಹಳ ಸುಖಿಗಳು.
·      ಐಶ್ವರ್ಯವನ್ನ ಪಾಲನೆವಾಲಾ.
·      ಜನರಿಂದ ಶಹಭಾಷಗಿರಿಯನ್ನ ತೆಗೆದುಕೊಳ್ಳುವ ಜನರಿವರು.
·      ಇವರು ಜನತಾಪ್ರಿಯರು.
·      ಪುತ್ರ ಮತ್ತು ಮಿತ್ರರಿಂದ ಪೂರಾ ಸಹಕಾರ ಇವರುಗಳಿಗೆ ಸಿಗುತ್ತದೆ.
·      ಇವರಲ್ಲಿ ಒಂದು ತರಹದ ಅಗಾಧ ಶಕ್ತಿಗಳು ಇರುತ್ತವೆ.
·      ಇವರುಗಳು ಸಾಮಾನ್ಯವಾಗಿ ತಿರುಗಿ ಬೀಳುವುದು ಜಾಸ್ತಿ.
·      ಇವರುಗಳನ್ನ ಪಬ್ಲಿಕ್ ಲೈಕ್ ಜಾಸ್ತಿ ಮಾಡುತ್ತಾರೆ, ಕಾರಣ ಪಬ್ಲಿಕ್ ಬೇಗ ಇವರನ್ನ ಕ್ಷಮೆ ಮಾಡಿ ಬಿಡುತ್ತಾರೆ.
·      ಇವರುಗಳು ಸಾಮಾನ್ಯವಾಗಿ ಪ್ರಯಾಣವನ್ನ ಮಾಡುತ್ತಿರುತ್ತಾರೆ. ಆದರೆ ಇದು ಅವರ ಸಂಸಾರದ ಸುತ್ತೇ ಜಾಸ್ತಿ ಇರುತ್ತೆ.
·      ಇವರುಗಳು ಸ್ವಲ್ಪದರಲ್ಲಿ ತೃಪ್ತಿಯನ್ನ ಪಡುವ ಜನಾಂಗ. ಅನ್ನ ಸಾರಿದ್ದರೆ ಸಾಕು. ಆದರೆ ದಿನವಿಡೀ ದುಡಿಯುತ್ತಾರೆ!
·      ಇದೊಂದು ಪ್ರೋಗ್ರೆಸ್ಸಿವ್ ನಕ್ಷತ್ರ. ಕಾರಣ ಆರ್ದ್ರಾ ನಕ್ಷತ್ರವು ಕತ್ತಲೆಯನ್ನ ನೀಗಿಸಿ ಬರುವಂತಹ ಗ್ರೀನ್ ಬೆಳಕೇ ಈ ನಕ್ಷತ್ರ.


ಕಟಕ ರಾಶಿ (ಸ್ವಾಮಿ ಚಂದ್ರ)
ಪುನರ್ವಸು, ಚರಣ -೧ (ಸ್ವಾಮಿ ಗುರು), ಪುಷ್ಯ, ಚರಣ ೪(ಸ್ವಾಮಿ ಶನಿ ದೇವ) ಮತ್ತು ಆಶ್ಲೇಷ, ಚರಣ -೪ (ಸ್ವಾಮಿ ಬುಧ ಗ್ರಹ.
ಇವರಲ್ಲಿ ಗುರುವಿನ ಜ್ನಾನ, ಶನಿದೇವನ ಧರ್ಮ ಹಾಗೂ ಬುಧನ ತಾರ್ಕಿಕ ಕೌಷಲ್ಯ ಕೂಡಿರುತ್ತದೆ.


೮) ಪುಷ್ಯ(ಶನಿ ಇವರಿಗೆ ಅಧಿದೇವತೆ) :- ಇದನ್ನ ಆಳಿದಂತಹ ದೇವತೆ ಬ್ರಹಸ್ಪತಿ.

·      ದೇವರು ಮತ್ತು ಧರ್ಮವನ್ನ ನಂಬುವ ಜನರಿವರು.
·      ಬಹಳ ಆಗರ್ಭ ಸ್ರೀಮಂತರು.
·      ಇವರುಗಳ ಮಗನು ಬಹಳ ಜೀನಿಯಸ್ ಆಗಿರುತ್ತಾರೆ.
·      ಪುತ್ರ ಬುಧ್ಧಿಮಾನ್ ಆಗಿರುತ್ತಾರೆ.
·      ಈ ವ್ಯಕ್ತಿಗಳು ಸುಖಿಯಾಗಿರುತ್ಟಾರೆ.
·      ಇವರುಗಳು ಹೆಲ್ಪಿಂಗ್ ಮತ್ತು ಕೇರಿಂಗ್  ನೇಚರಿನವರು.
·      ಇವರುಗಳು ಸ್ವಲ್ಪ ಅಹಂಕಾರಿ ಸ್ವಭಾವದವರು. ಕಾರಣ ಸ್ವಾಮಿ ಶನಿ ದೇವನು.
·      ಇವರುಗಳಲ್ಲಿ ಕಾನೂನು ಹಲವು. ಇವರಿಗೆ ಅದೆಲ್ಲವನ್ನೂ ಬೇರವರು ಫ಼ಾಲೋ ಮಾಡಬೇಕೆನ್ನುವ ಆಸೆ.
·      ಅವರು ತಮ್ಮಲ್ಲಿರುವ ಜ್ನಾನವನ್ನ ಬೇರವರಿಗೆ ಹಂಚಬೇಕೆನ್ನುವ ಪ್ರವೃತ್ತಿಯವರು. ಆದ್ದರಿಂದ ಈ ನಕ್ಷತ್ರದವರು ಹೆಚ್ಚಾಗಿ ಟೀಚರ್ಸ್ ಹಾಗೂ ಪ್ರೊಫ಼ೆಸರ್ಸ್, ಲಾಯರ್ಸ್ ಜಾಸ್ತಿ ಇರುತ್ತಾರೆ.
·      ಇವರುಗಳು ಫಿಲೋಸಫ಼ರ್ಸ್ ಕೂಡ ಆಗಿರುತ್ತಾರೆ.
·      .ಜೀವನದಲ್ಲಿ ಕಸ್ಟ ಪಡುವ ಜನರು. ಕಸ್ಟ ಪಟ್ಟು ಇಸ್ಟವನ್ನ ತೆಗೆದುಕೊಳ್ಳುತ್ತಾರೆ.
·      ಇವರು ಬರೇ ಸಾರಿನಲ್ಲಿಯೇ ಸಂತೋಷವನ್ನ ಪಡುವ ಜನರು.
·      ದುಡ್ಡೇ ದೊಡ್ಡಪ್ಪ ಅನ್ನುವ ಜಾತಿಯವರು.
·      ದೂಡ್ಡಿನ ಮುಂದೆ ಬೇರೆ ಏನೂ ಇಲ್ಲ ಅನ್ನುವ ನಕ್ಷತ್ರದವರು.
·      ದೊಡ್ಡ ಗಾಡಿಯನ್ನ ತೆಗೆದುಕೊಳ್ಳುವ ಜನರಿರವರು.


೯) ಆಶ್ಲೇಷ ( ಬುಧ ದೇವನು ಅಧಿದೇವತೆ) :- ಇದನ್ನ ಆಳಿದ ದೆವತೆ ನಾಗ

·      "ಸರ್ವ ಭಕ್ಷೀ ಕೃತಾಂತಸ್ಯ, ವಂಚಕಃ ಕಲಹ" ಅಂದರೆ ಇವರುಗಳು ಯಾವುದೇ ಭೋಜನವನ್ನ ಗ್ರಹಿಸುವರೆಂದರ್ಥ.
·      ಇವರುಗಳು ಕಲಹ ಪ್ರಿಯರು. ಇವರು ಎರಡು ನಾಲಗೆ ಇರುವಂತಹ ವ್ಯಕ್ತಿಗಳು.
·      ಸುಳ್ಳನ್ನ ಕೂಡ ಸತ್ಯವೆಂದೇ ತಿಳಿಯ ಹೇಳುವವರು.
·      ಇವರಲ್ಲಿ ಹಿಪ್ನೋಟಿಕ್ ಕಣ್ಣುಗಳಿರುತ್ತವೆ.
·      ನಿಮ್ಮನ್ನ ಹಿಂಡಿ ಹಿಪ್ಪೆ ಮಾಡುವುದರಲ್ಲಿ ನಿಸ್ಸೀಮರು.
·      ಇವರುಗಳು ಯಾವುದೇ ಕ್ರಿಟಿಸಿಸಮ್ ಅಥವಾ ಹ್ಯುಮಿಲಿಯೇಷನನ್ನ ಸ್ವಲ್ಪವೂ ತಾಳಲಾರರು.
·      ಇವರುಗಳ ನಡೆ ನುಡಿಯಿಂದಾಗಿ ಅವರಾಗಿಯೇ ವಿಷವನ್ನ ಕುಡಿಯುತ್ತಾರೆ. ಬೇರವರು ಕುಡಿಸುವ ಅಗತ್ಯವಿಲ್ಲ.
·      ಬಹಳ ಹೊಟ್ಟೇ ಕಿಚ್ಚಿನ ಮಾರಿಗಳು ಇವರು.
·      ಇವರುಗಳು ಬಹಳ ತೀವ್ರ ಕಾಮಪ್ರಿಯರು. ಕೆಲವೊಮ್ಮೆ ಇದೇ ಇವರ ಆಯುಧವಾಗಿರುತ್ತದೆ, ಬೇರವರನ್ನ ಕಂಟ್ರೋಲ್ ಮಾಡಲು.
·      ಮಾಟ ಮಂತ್ರ ಇತ್ಯಾದಿ ವಿದ್ಯಗಳಲ್ಲಿ ರುಚಿಯನ್ನ ಇಡುವವರು. ಆದ್ದರಿಂದ ಇವರುಗಳಿಂದ ಸಾಧ್ಯವಾದಸ್ಟು ದೂರವಿದ್ದರೇ ನಿಮಗೆ ಒಳ್ಳೆಯದು.
·      ಇವರಿಗೆ ತೃಪ್ತಿಯೆನ್ನುವುದು ಜೀವನದಲ್ಲಿ ಇಲ್ಲವೇ ಇಲ್ಲ.
·      ಎಲ್ಲಿಯಾದರೂ ಹೋದಲ್ಲಿ ಅವರ ಮನೆಯ ಹೊರೆಗಳನ್ನ ಹೊತ್ತುಕೊಂಡು ಇವರ ಮನೆಯನ್ನ ಮಾಡುವಂತಹ ಜನರು.





ಸಿಂಹ ರಾಶಿ (ಸ್ವಾಮಿ ಸೂರ್ಯ ದೇವ)
(ಮಘ, ಚರಣ -೪ (ಸ್ವಾಮಿ ಕೇತು), ಪುಬ್ಬ, ಚರಣ-೪ (ಸ್ವಾಮಿ ಶುಕ್ರ), ಉತ್ತರ, ಚರಣ-೧(ಸ್ವಾಮಿ ಸೂರ್ಯ)

೧೦) ಮಘ (ಸ್ವಾಮಿ ಕೇತು) ಇದನ್ನ ಆಳಿದಂತಹ ದೇವತೆ ಪಿತೃ

·      ಬಹಳ ನೋಬಲ್ ವ್ಯಕ್ತಿಗಳು.
·      ಇವರಿಗೆ ಲೀಡರಶಿಪ್  ಕ್ವ್ಯಾಲಿಟಿ ಹುಟ್ಟುತ್ತಲೇ ಬರುತ್ತೆ.
·      ಈ ನಕ್ಷತ್ರದಲ್ಲಿ ರಾಜ ಅಥವಾ ಅಧ್ಯಕ್ಷರೇ ಹುಟ್ಟುವರು.
·      ಇವರಲ್ಲಿ ಸ್ರೀಮಂತಿಕೆಯ ಹಾಗೂ ಪವರಿನ ದಾಹವಿದೆ.
·      ಇವರ ಹೃದಯ ಭಲ ವಿಶಾಲವಾದದ್ದು.
·      ಇವರುಗಳು ಸಾಂಪ್ರದಾಯಕ್ಕೆ ಬೆಲೆಯನ್ನ ಕೊಡುವವರು.


೧೧) ಪುಬ್ಬ (ಸ್ವಾಮಿ ಶುಕ್ರ) :-ಇದನ್ನ ಆಳಿದಂತಹ ದೇವತೆ ಭಾಗ

·      ಇವರುಗಳು ಬಹಳ ಕೇರಫ಼್ರೀ ಇರುತ್ತಾರೆ.
·      ಇವರುಗಳು ಲಕ್ಕನ್ನೇ ನಂಬುವುದು ಜಾಸ್ತಿ.
·      ಇವರುಗಳು ಬಹಳ ಸುಂದರವಾಗಿರುತ್ತಾರೆ.
·      ಇವರುಗಳು ಬಹಳ ಪ್ರೀತಿಯನ್ನ ಮಾಡುವವರಾಗಿರುತ್ತಾರೆ.
·      ಬಹಳ ಸೋಸಿಯಲ್ ಜೀವಿಗಳು.
·      ಇವರುಗಳಿಗೆ ಸ್ನೇಹಿತರು ಜಾಸ್ತಿ.
·      ಇದನ್ನ ಪಾರ್ಟಿ ನಕ್ಷತ್ರವೆಂದರೂ ತಪ್ಪಾಗದು. ಕಾರಣ ಈ ನಕ್ಷತ್ರದವರು ಸಾಮಾನ್ಯವಾಗಿ ಸಾಮಾಜಿಕವಾಗಿ ಮಿಂಗಲ್ ಆಗುವುದು ಜಾಸ್ತಿ. ಇದಕ್ಕಾಗಿ ಅವರುಗಳು ಜಾಸ್ತಿ ಪಾರ್ಟಿಯ ಶರಣನ್ನ ಹೋಗುತ್ತಾರೆ.
·      ಇವರುಗಳಿಗೆ ಮದುವೆ ಆಗುವುದು ಕಸ್ಟ. ಆದಲ್ಲಿ,ಇವರುಗಳು ಮದುವೆ ಜೀವನ ಬಹಳ ಉದ್ದ ನಡೆಯುತ್ತೆ. ಬ್ರೇಕ್ ಆಗುವುದು ಕಡಿಮೆ. ಕಾರಣ ಇವರುಗಳು ಪತಿ ಯಾ ಪತ್ನಿಗೆ ಬಹಳ ವಿಧೇಯಕಾರಾಗಿರುತ್ತಾರೆ.
·      ಇವರುಗಳು ಸಾಮಾನ್ಯವಾಗಿ ನಿರೋಗಿಗಳು.
·      ಇವರು ಬಹಳ ಕಾಮ ಪ್ರಿಯರು ಕೂಡ.
·      ಇವರುಗಳು ಸಂಗೀತ ಹಾಗೂ ನೃತ್ಯದಲ್ಲಿ ಭಾಗಿಗಳಾಗುತ್ತಾರೆ.
·      ಇವರುಗಳ ಸಂತೋಷಕ್ಕೆ ಅಂತ್ಯವಿಲ್ಲ.


೧೨) ಉತ್ತರ (ಸ್ವಾಮಿ ಸೂರ್ಯ) ಇದನ್ನಆಳಿದಂತಹ ದೇವತೆ ಆರ್ಯಮಾನ್

·      ಇವರುಗಳು ಸಾಮಾನ್ಯವಾಗಿ ಸ್ನೇಹ ಜೀವಿಗಳು. ಸ್ನೇಹತ್ವದಲ್ಲಿ ಜಾಸ್ತಿ ನಂಬಿಕೆಯನ್ನ ಇಡುವವರು.
·      ಮದುವೆ ಆದ ಮೇಲೆ ಬಹಳ ಸಂತೋಷವಾಗಿರುತ್ತಾರೆ.
·      ಇವರುಗಳಿಗೆ ಸಂಬಂಧ ಮತ್ತು ಸಂಸಾರದ ಯುನಿಟಿ ಮುಖ್ಯ.
·      ಇವರುಗಳಿಗೆ ಸಾಮಾನ್ಯವಾಗಿ ಹೆಪ್ಪಿ ಮೇರೇಜ್ ನಡೆಯುತ್ತೆ.
·      ಆದ್ದರಿಂದ ಯಾರನ್ನ ಬೇಕಾದರೂ ಇವರುಗಳು ಒಪ್ಪುವರು.
·      ಸಾಮಾನ್ಯವಾಗಿ ಈ ಫಾಲ್ಗುಣಿ ನಕ್ಷತ್ರದವರೇ ಹಾಗೆ. ಬಹಳ ಜೋಲಿ ಮನುಷ್ಯರು ಹಾಗೂ ಸಂತೋಷವಾಗಿ ಇರುವಂತಹ ಜನರು.

ಕನ್ಯಾ ರಾಶಿ (ಸ್ವಾಮಿ ಬುಧ ದೇವ)

( ಉತ್ತರ, ಚರಣ -೩ (ಸ್ವಾಮಿ ಸೂರ್ಯ), ಹಸ್ತ, ಚರಣ-೪ (ಸ್ವಾಮಿ ಚಂದ್ರ), ಚಿತ್ತ, ಚರಣ-೨ (ಸ್ವಾಮಿ ಮಂಗಲ್)


೧೩)ಹಸ್ತ ನಕ್ಷತ್ರ (ಸ್ವಾಮಿ ಚಂದ್ರ)ಇದನ್ನಆಳಿದಂತಹ ದೇವತೆ ಸಾವಿತ್ರ್

·      ಇವರುಗಳು ಕಸೂತಿ ಕೆಲಸಕ್ಕೆ ಹೇಳಿಸಿದ ಜನರು. ಇವರ ಕೈಯಲ್ಲಿ ಒಂದು ಮೇಜಿಕ್ ಇರುತ್ತೆ.
·      ಇವರುಗಳ ಕೈಯನ್ನ ಹೀಲಿಂಗ್ ಟೆಕ್ನಿಕ್ಕಿಗೆ ಉಪಯೋಗಿಸಬಹುದು. ಆದ್ದರಿಂದಲೇ ಇವರುಗಳು ಮೊಸ್ಸೇಜ್ ಸೆಂಟರಿನಲ್ಲಿ, ಬ್ಯೂಟಿ ಪಾರ್ಲರಿನಲ್ಲಿ ಮೊಸ್ಸೇಜ್ ಥೆರಾಪಿಸ್ಟ್ ಆಗುವುದು ಜಾಸ್ತಿ.
·      ಇವರುಗಳು ಒಳ್ಳೇ ಮಾತನಾಡುವರು ಹಾಗೂ ಜೋಕ್ಸಗಳನ್ನ ಹೇಳುವವರು.
·      ಇವರ ಕೈ ಚಳಕವನ್ನ ಓಳ್ಳೇದಕ್ಕೂ ಹಾಗೂ ಕೆಟ್ಟದಕ್ಕೂ ಉಪಯೋಗಿಸುವರು. ಕೆಲವೊಂದು ಬಾರಿ ಪಿಕಪೋಕೆಟ್ ಕಳ್ಳರೂ ಕೂಡಾ ಇದೇ ನಕ್ಷತ್ರದವರೇ ಜಾಸ್ತಿ. ಅಂದರೆ ಇವರ ಕೈಯಲ್ಲಿ ಅಸ್ಟೊಂದು ಜಾದೂ ಇರುತ್ತದೆ.
·      ಇವರು ಬಹಳ ಬುದ್ಧಿವಂತರು.
·      ಹಸ್ತ ಸಾಮುದ್ರಿಕೆ ಕೂಡಾ ಇವರ ಕೈಗೆ ಕೂಡಿ ಬರುತ್ತೆ ಅಂದರೆ ನಿಮಗೆ ಆಸ್ಚರ್ಯವಾಗದು.

೧೪) ಚಿತ್ತ ನಕ್ಷತ್ರ (ಸ್ವಾಮಿ ಮಂಗಲ್) :-ಇದನ್ನಆಳಿದಂತಹ ದೇವತೆ ವಿಶ್ವಕರ್ಮ

·      ಬಹಳ ಆವೇಶವಂತರು, ಕಾರಣ ಸ್ವಾಮಿ ಮಂಗಲ್.
·      ಇವರಲ್ಲಿ ಜೋಷ್ ಜಾಸ್ತಿ.
·      ಪುತ್ರ ಪ್ರಾಪ್ತ ಯೋಗವಿದ್ದವರು.
·      ಪರಿವಾರವನ್ನ ಪ್ರೇಮಿಸುವವರು.
·      ದೇವರನ್ನ, ಬ್ರಾಹ್ಮಣರನ್ನ ಪೂಜಿಸುವವರು.
·      ಒಳ್ಳೇ ಪತಿಯ ಯೋಗ ಇದ್ದವರು.
·      ಧನ್ ಮತ್ತು ಧಾನ್ಯಕೀ ಕಮ್ ಇರದೇ ಇದ್ದವರು.
·      ಇವರುಗಳು ಸಾಮಾನ್ಯವಾಗಿ ಈಶ್ವರನ ಕೃಪಾ ಕಟಾಕ್ಷಕ್ಕೆ ಪಾತ್ರರಾಗುವವರು.
·      ಇವರು ಸಂದರ್ಭಕ್ಕೆ ತಕ್ಕ ನಡೆಯುವವರು.
·      ಇವರು ಬಹಳ ಸ್ಪಿರಿಚ್ಯುಯಲ್ ವ್ಯಕ್ತಿಗಳು.
·      ಇವರುಗಳು ಸಾಮಾನ್ಯವಾಗಿ ಬ್ರೈಟ್ ಬಣ್ಣವನ್ನೇ ಲೈಕ್ ಮಾಡುತ್ತಿರುತ್ತಾರೆ.
·      ಇವರಿಗೆ ಒಂದು ಸಂಸ್ಥೆಯನ್ನ ಕಟ್ಟಲು ತಿಳಿದಿರುತ್ತದೆ.
·      ಇವರುಗಳು ಸತ್ಯವನ್ನ ಕರೆಕ್ಟ್ ಸಮಯದಲ್ಲಿ ಹೇಳುವವರು.
·      ಇವರುಗಳಲ್ಲಿ ಆರ್ಟಿಸ್ಟಿಕ್ ನೇಚರ್ ಸದಾ ಇರುತ್ತೆ.
·      ಇವರುಗಳಿಗೆ ಜೆವೆಲರಿ ಮೇಲೆ ಆಸೆ ಜಾಸ್ತಿ.


ತುಲಾ ರಾಶಿ (ಸ್ವಾಮಿ ಶುಕ್ರ)

(ಚಿತ್ತ, ಚರಣ-೨(ಮಂಗಲ್), ಸ್ವಾತಿ, ಚರಣ-೪(ರಾಹು), ವಿಶಾಖ, ಚರಣ-೨(ಸ್ವಾಮಿ ಗುರು)
ತುಲಾ ರಾಶಿಯವರು ರೂಪ್ ಕಿ, ಜ್ನಾನಕಿ, ಬುಧ್ಧಿ ಕಿ, ಕಲಾ ಕಿ ಭಂಡಾರ್.

೧೫) ಸ್ವಾತಿ ನಕ್ಷತ್ರ (ಸ್ವಾಮಿ (ರಾಹು):- ಇದನ್ನಆಳಿದಂತಹ ದೇವತೆ ವಾಯು.

·      ಬಹಳ ಬಹಾದ್ದೂರ್ ಗಂಡನಿವನು
·      ಜೀವನದಲ್ಲಿ ರಿಸ್ಕನ್ನ ತೆಗೆದುಕೊಳ್ಳುವವನು.
·      ಇವರು ಸಾಮಾನ್ಯವಾಗಿ ಪ್ರಿಯವಲ್ಲಭರು.
·      ಧಾರ್ಮಿಕದಲ್ಲಿ ಆಸಕ್ತಿ ಇರುವವರು.
·      ಬಹಳ ಕಂಜೂಸಿ ವ್ಯಕ್ತಿಗಳು.
·      ದೇವರಲ್ಲಿ ಕೂಡಾ ಬಹಳ ಆಸಕ್ತಿವಹಿಸುವವನು.
·      ವೈಜ್ನಾನಿಕವಾಗಿ ಯೋಚನೆಯನ್ನ ಮಾಡುವವನು.
·      ಸಂಗೀತದಲ್ಲಿ, ಲಿಟರೇಚರಿನಲ್ಲಿ ಹಾಗೂ ಆಟ್ಸಿನಲ್ಲಿ ಆಸಕ್ತಿ ಇರುವವನು.
·      ಹಣದ ವ್ಯವಹಾರದಲ್ಲಿ, ವ್ಯಾಪಾರದಲ್ಲಿ ಇವರಿಗೆ ಸಕ್ಸಸ್ ಕಟ್ಟಿಟ್ಟ ಬುತ್ತಿ.
·      ಒಳ್ಳೇ ಕಮ್ಯುನಿಕೇಷನ್ ಇರುವವರು.
·      ಇವರುಗಳು ಗಾಳಿ ಹೇಗೆ ಬೀಸುತ್ತದೋ ಹಾಗೆ ತಿರುಗವ ಜನಾಂಗದವರು.
·      ಎಲ್ಲವುದನ್ನೂ ತಿಳಿಯುವುದರಲ್ಲಿ ಬಹಳ ಆಸಕ್ತಿ ಇರುವವರು.
·      ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಜನರಿವರು.
·      ಬಹಳ ಸೈಕಿಕ್ ಹಾಗೂ ಇನ್ಟೂಟಿವ್ ವ್ಯಕ್ತಿಗಳಿವರು.
·      ವಾತ ಇವರ ಒಂದು ವೀಕ್ನೆಸ್ಸ್.


೧೬) ವಿಷಾಖ ನಕ್ಷತ್ರ (ಸ್ವಾಮಿ ಗುರು) ಇದನ್ನಆಳಿದಂತಹ ದೇವತೆ ಇಂದ್ರ ಮತ್ತು ಅಗ್ನಿ.

("ಅತಿ ಮಾನನೀಯ ನಿಸ್ಠುರಸ್ಮೃತಿ ತೇಜ್" ಅಂದರೆ ಜಗಳದಲ್ಲಿ ಹಿಂದೆ ಸರಿಯುವವರಲ್ಲ. ಆದರೆ ಅವರ ಮೆಮೊರಿ ಮಾತ್ರ ಬಹಳ ತೇಜ್.
·      ಅಪಾರ ಮೆಮೊರಿ ಇರುವವರು.
·      ಅಪಾರ ಜ್ನಾನಿಗಳು,ಸಂಸ್ಕಾರಿಗಳು.
·      ಅಪಾರ ಕಾನೂನನ್ನ ತಿಳಿದವರು.
·      ಸ್ವಾಭಿಮಾನಿಗಳೂ ಕೂಡ.
·      ಕೆಲವೊಂದು ಬಾರಿ ಸಿಟ್ಟು ಬರುತ್ತೆ.
·      ಬೇರೆಯವರ ಹೆಂಗಸರಲ್ಲಿ ಆಸಕ್ತಿಯನ್ನ ವಹಿಸುವವರು.
·      ನಿಸ್ಠುರವಾದಿ ಜನರಿವರು.
·      ಇವರೊಂದಿಗೆ ತರ್ಕವನ್ನ ಮಾಡಲು ಎರಡು , ಮೂರು ಬಾರಿ ಯೋಚಿಸಬೇಕು.
·      ಪೈಸೆಯನ್ನ ಖರ್ಚು ಮಾಡುವವರಲ್ಲ.
·      ಇವರ ಲೋಜಿಕ್ ಬಹಳ ತೇಜ್.
·      ಗೋಲ್ ಓರಿಯನ್ಟೆಡ್ ವ್ಯಕ್ತಿಗಳು.
·      ಬಹಳ ಕೋಂಪಿಟಿಟಿವ್ ಜನರಿವರು.
·      ಬಹಳ ತಾಳ್ಮೆಯನ್ನ ಹೊಂದಿದವರು.
·      ಯಾವಾಗಲೂ ಒಂದರ ಹಿಂದೆಯೇ ಬೀಳುವರು.
·      ಇಟ್ಟ ಗುರಿಯನ್ನ ತಲಪುವವರು. (ಗೋಲ್ ಓರಿಯಂಟೆಡ್)
·      ಇವರುಗಳು ಬೇರವರನ್ನ ತಮ್ಮ ಕೆಲಸಕ್ಕಾಗೆ ಉಪಯೋಗಿಸಿಕೊಳ್ಳುವ ಜನರು.
·      ಬಹಳ ಕೋಂಪಿಟೆಷನ್ ಪ್ರವೃತ್ತಿಯವರು.
·      ಇವರುಗಳು ಬಹಳ ಶಾಂತ ಸ್ವಭಾವದವರು, ಒಂದರ ಹಿಂದೆಯೇ ಹೋಗುವವರು ಹಾಗೂ ಬಹಳ ಸ್ಥಿರ ಗುರಿ ಇರುವ ವ್ಯಕ್ತಿಗಳು.


ವೃಸ್ಚಿಕ ರಾಶಿ (ಸ್ವಾಮಿ ಶನಿ ದೇವ):-

ವಿಶಾಕ,ಚರಣ ೧ (ಸ್ವಾಮಿ ಗುರು)ಅನುರಾಧ, ಚರಣ-೪ (ಸ್ವಾಮಿ ಶನಿ ದೇವ), ಜ್ಯೇಷ್ಠ, ಚರಣ ೪(ಸ್ವಾಮಿ ಬುಧ)


೧೭ )ಅನುರಾಧ ನಕ್ಷತ್ರ (ಸ್ವಾಮಿ ಶನಿ ದೇವ):-ಇದನ್ನಆಳಿದಂತಹ ದೇವತೆ ಮಿತ್ರ

·      ಕೆಲಸವನ್ನ ಮಾಡುವವರು.
·      ಜಿಮ್ ಮಾಡಲು ಬಹಳ ಶೋಕ್ ಇರುವಂತಹ  ಜನರು.
·      ಇವರು ಒಂದು ರೀತಿಯ ಬೇಲೆನ್ಸನ್ನ ಸಂಬಂಧದಲ್ಲಿ ಇಟ್ಟುಕೊಳ್ಳುವವರು.
·      ಇವರಲ್ಲಿ ಒಂದು ರೀತಿಯ ಸಂಸ್ಥೆಯನ್ನ ಕಟ್ಟುವ ಯೋಗ್ಯತೆ ಉಂಟು.
·      ತಾಯಿಯೊಂದಿಗೆ ಸಂಬಂಧ ಅಸ್ಟೇನೂ ಒಳ್ಳೆಯದಿರುವುದಿಲ್ಲ.
·      ಇವರಲ್ಲಿ ಹೊಟ್ಟೇ ಕಿಚ್ಚು , ಒಳ ಸಿಟ್ಟು ಜಾಸ್ತಿ.
·      ಬೇರವರೊಂದಿಗೆ ಇವರದ್ದು ಫ಼್ರೆಂಡ್ಲೀ ಸಹಕಾರದಿಂದಾಗಿ ಬಹಳ ಪ್ರಸಿದ್ಧರಾಗಿರುತ್ತಾರೆ.
·      ಇವರುಗಳು ಕೆಲಸ್ ಮಾಡುವುದರಲ್ಲಿ ನಿಸ್ಸೀಮರು.


೧೮) ಜ್ಯೇಷ್ಠ ನಕ್ಷತ್ರ (ಬುಧ ದೇವ ಸ್ವಾಮಿ) :_ ಇದನ್ನಆಳಿದಂತಹ ದೇವತೆ ಇಂದ್ರ


·      ಗಂಡ ಮೂಲ ನಕ್ಷತ್ರಗಳಲ್ಲಿ ಇದೂ ಒಂದು. ಆದ್ದರಿಂದ ಪೂಜಾ ಮಾಡಲೇ ಬೇಕು.
·      ಇವರುಗಳು ಯಾವಾಗಲೂ ಬೋಸ್ ಆಗಿ ಜೀವನವನ್ನ ಸಾಗಿಸಲು ಇಛ್ಛೆ ಪಡುತ್ತಿರುತ್ತಾರೆ.
·      ಇವರಿಗೆ ಬಹು ಮಿತ್ರ ಪ್ರಾಧಾನ್ಯ.
·      ಎಲ್ಲಾ ಜಾತಿಯವರು ಇವರನ್ನ ಪ್ರಷಂಸೆಯನ್ನ ಮಾಡುತ್ತಾರೆ.
·      ಇವರುಗಳು ದಾನವೀರ ಕರ್ಣ.
·      ತನ್ನ ಮನೆಯ ರೀತಿ ರೀವಾಜನ್ನ ಬೆಲೆ ಕಟ್ಟುವವ.
·      ಸ್ವಾಭಿಮಾನ ಜಾಸ್ತಿ
·      ಬಿ.ಪಿ ಜಾಸ್ತಿ ಇರುತ್ತೆ.
·      ಇವರುಗಳು ಬಹಳ ಬುದ್ಧಿವಂತರು. ಆದರೆ ಸುಳ್ಳು ಬಹಳ ಹೇಳುತ್ತಾರೆ.
·      ಇವರಿಗೆ ಸ್ರೀಮಂತಿಕೆ ಮತ್ತು ಪವರನ್ನ ಹೇಗೆ ಲೀಡ್ ಮಾಡಬೇಕೆನ್ನುವುದು ಗೊತ್ತು.


ಧನೂರ್ ರಾಶಿ (ಬ್ರಹಸ್ಪತಿಯು ಸ್ವಾಮಿ)
ಮೂಲ, ಚರಣ-೪ (ಸ್ವಾಮಿ ಕೇತು), ಪೂ.ಆಶಾಢ, ಚರಣ-೪ (ಸ್ವಾಮಿ  ಶುಕ್ರ), ಉ.ಆಶಾಢ, ಚರಣ -೧ (ಸ್ವಾಮಿ ಸೂರ್ಯ)

೧೯) ಮೂಲ ನಕ್ಷತ್ರ ( ಮಂಗಲ್ ಇದರ ಸ್ವಾಮಿ.) ಇದೂ ಕೂಡ ಗಂಡಮೂಲ ನಕ್ಷತ್ರದಲ್ಲಿ ಒಂದು. ಇದನ್ನಆಳಿದಂತಹ ದೇವತೆ ನಿರುತಿ

·      ಇವರುಗಳು ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟಿಗೆ ಹೇಳಿ ಮಾಡಿಸಿದಂತಹ ಜನರು.
·      ಇವರುಗಳ ಜೀವನದಲ್ಲಿ ಎಕ್ಸ್ಟ್ರೀಮತೆಯೇ ಜಾಸ್ತಿ
·      ಕಸ್ಟವೇ ಇವರುಗಳ ಸ್ವಂತ ಆಸ್ತಿ ಎಂದರೂ ತಪ್ಪಾಗದು.
·      ಇವರುಗಳಿಗೆ ಮೆಟೀರಿಯಲ್ ಸುಖ ಬಹಳ ಕಡಿಮೆ.
·      ಇದು ಹನುಮಂತನ ನಕ್ಷತ್ರ. ಆದ್ದರಿಂದ ಈ ನಕ್ಷತ್ರದವರು ಮದುವೆ ಆಗುವುದೇ ಕಡಿಮೆ. ಆದರೂ ಸಂತೋಷದಿಂದಿರುವುದೂ ಕಡಿಮೆ.
·      ಇವರುಗಳಿಗೆ ಆಯುರ್ವೇದದ ಮೆಡಿಸಿನ್ ಕೈಗೂಡಿ ಬರುತ್ತೆ.
·      ಜೀವನದಲ್ಲಿ ಇವರುಗಳಿಗೆ ಜಿಗುಪ್ಸೆಯೇ ಜಾಸ್ತಿ ಅಂದರೂ ತಪ್ಪಾಗದು.
·      ಮೂಲಾ ನಕ್ಷತ್ರದ ಹೆಣ್ಣು ಮನೆಯಲ್ಲಿದ್ದ ಪಕ್ಷದಲ್ಲಿ, ಅದಕ್ಕೆ ಮದುವೆಯ ಚಾನ್ಸಸ್ ಬಹಳ ಕಡಿಮೆ.
·      ಮೂಲಾ ನಕ್ಷತ್ರ ಹನುಮಂತನ ನಕ್ಷತ್ರ.
·      ಮೂಲಾ ದವರ ಶಕ್ತಿ ಅಪಾರ.
·      ಮೂಲಾದವರು ನಾಟಿ ಔಷಧದಲ್ಲಿ ಬಹಳ ನಿಸ್ಸೀಮರು.

೨೦) ಪೂರ್ವಾಷಾಢ ನಕ್ಷತ್ರ (ಸ್ವಾಮಿ ಶುಕ್ರ) ಇದನ್ನಆಳಿದಂತಹ ದೇವತೆ ಆಪಸ್

·      ಇವರುಗಳ ಇನ್ಫ಼್ಲೂವೆನ್ಸ್ ಬೇರವರ ಮೇಲೆ ಜಾಸ್ತಿ ಇರುತ್ತದೆ.
·      ಇವರುಗಳು ಸಾಮಾನ್ಯವಾಗಿ ರೈಟ್ ಕೋಸಿಗೆ ಫ಼ೈಟ್ ಮಾಡುವುದು ಜಾಸ್ತಿ.
·      ಇವರಲ್ಲಿ ಒಂದು ಫಿಲೋಸಫ಼ಿ ಇದೆ.
·      ಇವರುಗಳು ಯಾರಿಗೂ ಹೆದುರೋದದೇ ಇಲ್ಲ.
·      ಇವರುಗಳು ಬಹಳ ಎಗ್ರೆಸ್ಸಿವ್.
·      ಇವರುಗಳಿಗೆ ಹೆಸರು ಬೇಕಸ್ಟೆ.
·      ಇವರುಗಳು ಬಹಳ ದೊಡ್ಡ ಒರೇಟರ್ಸ್. ಆದ್ದರಿಂದ ಡಿಬೇಟಿಗೆ ಹೇಳಿ ಮಾಡಿಸಿದಂತಹ ವ್ಯಕ್ತಿಗಳು.
·      ಯುಧ್ಧಕ್ಕೂ ಇದೇ ನಕ್ಷತ್ರ.
·      ಇವರುಗಳು ಯಾವಾಗಲೂ ಜಯಶಾಲಿಯಾಗಿ ಬರ್ತಾರೆ. ಈ ಜಯಶೀಲತೆ ಬಹಳ ಸಣ್ಣ ಪ್ರಾಯದಲ್ಲೇ ಇವರಿಗೆ ಸಿಗುತ್ತೆ.
·      ಇವರುಗಳು ನೀರಿನಲ್ಲಿ ಪ್ರಯಾಣವನ್ನ ಮಾಡುವುದು ಜಾಸ್ತಿ.


೨೧) ಉತ್ತರಾಷಾಢ (ಸ್ವಾಮಿ ಸೂರ್ಯ ದೇವ) ಇದನ್ನಆಳಿದಂತಹ ದೇವತೆ ವಿಶ್ವದೇವ

·      ಈ ನಕ್ಷತ್ರದವರು ಪೂ.ಆಷಾಢದವರಸ್ಟು ಎಗ್ರೆಸ್ಸಿವ್ ಅಲ್ಲ. ಬಹಳ ನಿಧಾನಿಗಳು.
·      ಇವರು ಯಾವುದು ಸರಿಯೋ ಅದಕ್ಕಾಗಿ  ಫ಼ೈಟ್ ಮಾಡುವುದು ಜಾಸ್ತಿ.
·      ಇವರು ಯಾವುದನ್ನ ಹೇಳುತ್ತಾರೋ ಅದನ್ನೇ ಪ್ರೇಕ್ಟೀಸ್ ಮಾಡುತ್ತಾರೆ.
·      ಇವರಲ್ಲಿ ಒಂದು ವಿಧೇಯಕತೆ ಉಂಟು.
·      ಇವರು ಬಹಳ ಸಾಹಸ ವ್ಯಕ್ತಿಗಳು.
·      ಇವರು ಹಿಡಿದಂತಹ ಕೆಲಸವನ್ನ ಮಾಡಿಯೇ ಸಿದ್ಧ.
·      ಇವರುಗಳು ಸುಳ್ಳನ್ನ ಹೇಳಲಾರರು.
·      ಇವರುಗಳು ಬಹಳ ಕರ್ಮಶಾಲಿಗಳು. ಇವರನ್ನ ಒಂದು ವೇಳೆ ಉತ್ಸಾಹಿಸಿದರೆ ಅದನ್ನೇ ಮಾಡುತ್ತಾ ಕುಳಿತಿರುತ್ತಾರೆ.
·      ಆದರೆ ಇವರನ್ನ ಎಲ್ಲಿಯಾದರೂ ತೆಗಳಿದರೆ, ಅವರು ಎಲ್ಲಿಯೇ ಟುಸ್ ಅಂತ ಕುಳಿತಿರುತ್ತಾರೆ.
·      ಆಮೇಲೆ ಅವರುಗಳು ಬಹಳ ಸೋಂಬೇರಿಗಳಾಗುವರು. ತಮ್ಮಲ್ಲಿಯೇ ಮುಳುಗಿ ಹೋಗುವರು. ಆ ಹಿಡಿದಂತಹ ಕೆಲಸವೂ ಅಲ್ಲಿಯೇ ಹಾಲ್ಟ್!
·      ಇವರಲ್ಲಿ ಒಂದು ಅಗಾಧ ಶಕ್ತಿ ಇರುತ್ತದೆ. ಅದನ್ನ ಕಂಡು ಹಿಡಿಯುವವರು ಬೇಕಸ್ಟೆ.
·      ಇವರೊಬ್ಬರು ಲೀಡರ್ ಆಗಲು ಬಹಳ ಲಾಯಕ್
·      ಇಳಿ (ಲೇಟರ್ ಪಾರ್ಟ ಆಫ಼್ ಲೈಫ಼್) ಪ್ರಾಯದಲ್ಲಿ ಇವರೊಬ್ಬರು ಬಹಳ ಸಕ್ಸಸ್ ವ್ಯಕ್ತಿಗಳಾಗುತ್ತಾರೆ ಹಾಗೂ ಜಯಶೀಲರಾಗುತ್ತಾರೆ.
·      ಇವರುಗಳಿಗೆ ಮದುವೆ ಸ್ವಲ್ಪ ಕಸ್ಟವೇ. ಇದಕ್ಕೆ ಕಾರಣ ಇವರೊಬ್ಬ ಸ್ಟಬ್ಬರನ್ ವ್ಯಕ್ತಿ ಮತ್ತು  ಸೆಲ್ಫ಼್  ಸೆಂಟರ್ಡ್ ಹಾಗೂ  ಮದುವೆಯಲ್ಲಿ ಇಂಟರೆಸ್ಟ್ ಇಲ್ಲದಂತಹ ವ್ಯಕ್ತಿಗಳು.

೨೨) ಶ್ರವಣ ನಕ್ಷತ್ರ (ಚಂದ್ರ ಇದರ ಸ್ವಾಮಿ) :- ಇದನ್ನಆಳಿದಂತಹ ದೇವತೆ ವಿಷ್ಣು.

·      ದಾನವೀರ
·      ಸ್ರೀಮಂತ
·      ಬಹು ಸಂತಾನದ ಯೋಗ
·      ಬುದ್ಧಿಮಾನ್
·      ಇವರುಗಳು ಜ್ನಾನಕ್ಕಾಗಿ ಯಾವಾಗಲೂ ಪ್ರಶ್ನೆಯನ್ನ ಕೇಳುತ್ತಿರುತ್ತಾರೆ.
·      ಕೌನ್ಸೆಲ್ಲಿಂಗ್ ಒಂದು ಇವರಿಗೆ ಬಂದಂತಹ ಗಿಫ಼್ಟ್.
·      ಇವರುಗಳು ಬಹಳ ರೆಸ್ಟ್ಲೆಸ್ ಪೀಪಲ್.
·      ಇವರುಗಳಿಗೆ ಸಣ್ಣ ಪ್ರಾಯದಲ್ಲಿ ಕಸ್ಟಗಳು ಬರುತ್ತವೆ.
·      ಇವರುಗಳು ಸಾಮಾನ್ಯವಾಗಿ ಟೀಚರ್ ಹುದ್ದೆಯನ್ನೇ ಪ್ರಿಫ಼ರ್ ಮಾಡುತ್ತಿರುತ್ತಾರೆ.


೨೩) ಧನಿಷ್ಠ ನಕ್ಷತ್ರ (ಸ್ವಾಮಿ ಮಂಗಲ್) ಇದನ್ನಆಳಿದಂತಹ ದೇವತೆ ವಾಸು.

·      ಬಂಧು ಮಾನ್ಯ. ಅಣ್ಣ, ತಮ್ಮಇಬ್ರಲ್ಲಿ ಬಹಳ ಪ್ರೇಮ.
·      ರತ್ನಗಳನ್ನ ಧರಿಸುವುದರಲ್ಲಿ ಬಹಳ ಶೋಕ್ ಇವರಿಗಿರುತ್ತದೆ.
·      ಬಹಳ ಧನವಾನ್ ಆಗಿರುತ್ತಾರೆ.
·      ಎಲಾರಿಗೂ ಪ್ರಿಯರಾಗಿರುತ್ತಾರೆ.
·      ಇವರಲ್ಲಿ ಭೂಮಿ, ಗಾಡಿ, ಮನೆ ಹೀಗೆ ಮೆಟೀರಿಯಲ್ ವೆಲ್ಥ್ ಜಾಸ್ತಿ ಇರುತ್ತದೆ.
·      ಮದುವೆ ಜೀವನ ಸ್ವಲ್ಪ ನೀರಸವಾಗಿರುತ್ತೆ. ಒಂದೂ ಲೇಟ್ ಮೇರೇಜ್ ಇಲ್ಲಾ ನೋ ಮೇರೇಜ್.


೨೪ ) ಶತಾಭಿಷಾ ನಕ್ಷತ್ರ (ಸ್ವಾಮಿ ರಾಹು) ಇದನ್ನಆಳಿದಂತಹ ದೇವತೆ ವರುಣ.

·      ಬಹಳಸ್ಟು ಹೀಲರ್ಸ್ ಮತ್ತು ಡಾಕ್ಟರ್ಸ್ ಇದೇ ನಕ್ಷತ್ರದವರು.
·      ಇವರುಗಳು ಸಾಮಾನ್ಯವಾಗಿ ತಮ್ಮದೇ ಪ್ರಪಂಚದಲ್ಲಿರುವವರು.
·      ಇವರಲ್ಲಿ ವಿಜ್ನಾನಿಗಳೂ ಜಾಸ್ತಿ ಇರುತ್ತಾರೆ.
·      ಬಹಳ ಮೂಡಿಯಾಗಿರುತ್ತಾರೆ.
·      ಕೆಲವೊಂದು ಬಾರಿ ಡಿಪ್ರೆಷನ್ ಮೋಡಿಗೂ ಹೋಗುತ್ತಾರೆ.
·      ಇವರುಗಳ ಹತ್ತಿರ ಆಲ್ಕೋಹಾಲ್ ಸುಳಿಯಲಾರದು.
·      ಒಂದು ವೇಳೆ ಏನಾದರೂ ಕಾಹಿಲೆ ಬಂದಲ್ಲಿ, ಅದನ್ನ ಗುಣ ಮಾಡಲು ಬಹಳ ಕಸ್ಟವಿರುತ್ತೆ.

೨೫) ಪೂರ್ವಾಭಾದ್ರ ನಕ್ಷತ್ರ (ಗುರು ಇದರ ಸ್ವಾಮಿ) ಇದನ್ನಆಳಿದಂತಹ ದೇವತೆ ಅಜೈಕಪಾದ.

·      ಬುಧ್ಧಿ ಕಾ, ಚರಿತ್ರಾ ಕಾ, ಐಶ್ವರ್ಯ ಕಾ, ಪರಾಕಾಸ್ಟ ಕಾ ನಕ್ಷತ್ರ.
·      ಆಲಸಿ ಜನಗಳು ಇವರುಗಳು.
·      ಇವರುಗಳಿಗೆ ಏಕ್ಸಿಡೆಂಟ್ಸ ಜಾಸ್ತಿ. ಆದ್ದರಿಂದ ಬಹಳ ಜಾಗರೂಕರಾಗಬೇಕು.
·      ಇವರ ಜೀವನದಲ್ಲಿ ದುಃಖ ತುಂಬಿರುತ್ತದೆ.
·      ಮಿತ್ರ ಕಾ ಸಾತ್ ದೇನೇವಾಲ.
·      ಬಹಳ ಒಳ್ಳೇದನ್ನೇ ಹೇಳುವವ.
·      ಜಾಗರೂಕತೆಯಿಂದ ಒಳ್ಳೇ ದಿನವನ್ನ ಕಳೆಯುವವ.


೨೬) ಉತ್ತರಾಭಾದ್ರ ನಕ್ಷತ್ರ (ಶನಿ ಇದರ ಸ್ವಾಮಿ)ಅಹಿರಬುದ್ನ್ಯ

·      ಧರ್ಮವನ್ನ ತಿಳಿಯುವವ.
·      ಪಿತಾ ಕಾ ಕೇರ್ ಕರ್ನೇವಾಲ.
·      ಒಳ್ಳೇ ಸಾಹಸೀ ಪ್ರವೃತ್ತಿ ಇರುತ್ತೆ.
·      ದುಸ್ಟರಿಗೆ ನಸ್ಟವನ್ನ ಉಂಟು ಮಾಡುವವ.
·      ಬಹಳ ಬಲವಾನ್ ವ್ಯಕ್ತಿ
·      ಇವರಿಗೆ ಇನ್ಹೆರಿಟೆನ್ಸ್ ಪ್ರೋಪರ್ಟಿ ಜೀವನದಲ್ಲಿ ಬಹಳ ಲೇಟ್ ಸಿಗುತ್ತೆ.
·      ಇವರುಗಳು ಯಾವಾಗಲೂ ಬಹಳ ಚೀರಫ಼ುಲ್, ಬಹಳ ಜನರಸ್ ಮತ್ತು ಸೆಲ್ಫ಼್ ಸೇಕ್ರಿಫ಼ೈಸಿಂಗ್ ಇನ್ ಲೈಫ಼್ ಇರುತ್ತಾರೆ.
·      ಸ್ವಲ್ಪ ಏಕಾಂಗಿತನವನ್ನ ಲೈಕ್ ಮಾಡುತ್ತಾರೆ.
·      ತಮ್ಮ ಕೋಪವನ್ನ ತಡೆದು ಹಿಡಿದುಕೊಳ್ಳುವ ಜನರು ಇವರುಗಳು.
·      ಇವರುಗಳು ಜೀವನದಲ್ಲಿ ಶೈನ್ ಆಗುವುದು ೩೫ ರ ನಂತರವೇ.



೨೭)ರೇವತಿ ನಕ್ಷತ್ರ (ಸ್ವಾಮಿ ಬುಧ ದೇವ) ಇದೂ ಕೂಡ ಗಂಡಮೂಲ ನಕ್ಷತ್ರ. ಆದ್ದರಿಂದ ಪೂಜೆಯನ್ನ ಮಾಡಲೇ ಬೇಕು. ಇಲ್ಲಾಂದ್ರೆ ಮದುವೆ ಜೀವನದಲ್ಲಿ ತೊಂದರೆಗಳನ್ನ ಅನುಭವಿಸಬೇಕು. ಇದನ್ನಆಳಿದಂತಹ ದೇವತೆ ಪುಶಾನ್.

·      ಧನ್, ಧಾನ್ಯ ಕೀ ಕಮ್ ನಹೀ ಹೋತಾ. (ಧನಕ್ಕೆ, ಧಾನ್ಯಕ್ಕೆ ಯಾವುದೂ ಕಡಿಮೆ ಇರುವುದಿಲ್ಲ.)
·      ಬುದ್ಧಿಮಾನ್ ಹೋತಾ (ಬಹಳ ಅಂದರೆ ಬಹಳ ಬುದ್ಧಿವಂತ ಜನರಿವರು)
·      ಇವರುಗಳು ಕೌನ್ಸಿಲಿಂಗ್ ಹುದ್ದೆ, ಟೀಚರ್ ಹುದ್ದೆಗೆ ಶ್ರೇಷ್ಠ.ಕೋಚಿಂಗ್, ಪ್ರವಚನ, ಜ್ಯೋತಿಷ್ಯ, ಹೋಟೆಲ್ ಮೆನೇಜ್ಮೆಂಟ್, ಎಡ್ವೋಕೇಟ್, ಫೋಟೋಗ್ರಫಿ ಡ್ರೆಸ್ ಡಿಸಾಯಿನ್, ಪೈಂಟಿಂಗ್, ಮೆನೇಜರಿಯಲ್ ಕೇಡ್ರ್ ಇತ್ಯಾದಿ ಹುದ್ದೆಗಳಿಗೆ ಹೇಳಿ ಮಾಡಿಸಿದವರು.
·      ಬೇರವರಿಗೆ ಸಲಹೆಗಳನ್ನ ಕೊಡುತ್ತಲೇ ಇರುತ್ತಾರೆ. ಮಾತಿಗೆ ಅಂತ್ಯವಿರುವುದಿಲ್ಲ.
·      ಯಾವಾಗಲೂ ಬೇರವರ ಬಗ್ಗೇನೇ ಯೋಚಿಸುತ್ತಾರೆ ವಿನಹ ಇವರ ಬಗ್ಗೆ ಸ್ವಲ್ಪವೂ ಯೋಚಿಸುವುದಿಲ್ಲ.
·      ಹ್ಯುಮೇನಿಟಿ ಏಂಡ್ ಸೊಸಾಯಿಟಿ ಲವರ್ಸ್
·      ದೇವರಲ್ಲಿ ಅನನ್ಯ ಭಕ್ತಿಯನ್ನ ಇಡುವಂತಹ ಕೆಟೆಗರಿ.
·      ಬಾಲ್ಯಾಪ್ಯದಲ್ಲಿ ಬಹಳ ಕಸ್ಟವನ್ನ ಅನುಭವಿಸಿರುತ್ತಾರೆ.
·      ಇದೊಂದು ಕೊನೆಯ ಪ್ರಯಾಣ ಇವರಿಗೆ ಮುಂದಿನ ಜೀವನಕ್ಕೆ ಅಂದರೂ ತಪ್ಪಿಲ್ಲ.



ಬರೆದವರು Dr.ಪಾರಂಪಳ್ಳಿ ಸುರೇಂದ್ರ ಉಪಾಧ್ಯ,M.Sc., Ph.D.;
(ಜ್ಯೋತಿಷ)
೨೬/೧೧/೨೦೧೫.
ರಿಟಾಯರ್ಡ್ ಪ್ರಾಂಷುಪಾಲ, ದೇನಾ ಬ್ಯಾಂಕ್, ಸ್ಟಾಫ್ ಟ್ರೈನಿಂಗ್ ಕೋಲೇಜ್,

ಕರೋಲ್ ಬಾಘ್, ನಯೀ ದೆಹಲಿ.

No comments:

Post a Comment