Wednesday 8 March 2017

ಮಗಳ ಜಾತಕದಿಂದ, ಅವಳ ತಂದೆಯ ಜಾತಕದ ಫಲಾಫಲಗಳನ್ನ ಅರಿಯೋಣವೇ?

ಗಳ ಜಾತಕದಿಂದ,
ಅವಳ ತಂದೆಯ ಜಾತಕದ ಫಲಾಫಲಗಳನ್ನ ಅರಿಯೋಣವೇ?



ಮೊದಲಿಗೆ ಮಗಳ ಜಾತಕವನ್ನ ನೋಡೋಣ:- ಅವಳು ಹುಟ್ಟಿದ
ತಾರೀಕು :- ಜನವರಿ, ೧೯೭೯ ಸಂಜೆ ೪.೫೪ ಕ್ಕೆ,
ಹುಟ್ಟಿದ ಸ್ಥಳ ಆಂಧ್ರಪ್ರದೇಶದ ನಿಜಾಮಾಬಾದ್ ಜಿಲ್ಲೆ


ಚಂದ್ರ    ೨೧*೩೩’
Moon


ಲಗ್ನ
Ascendant

ಕೇತು (ವ) ೨೭* ೨೬’
Ketu
ಲಗ್ನ ಕುಂಡಲಿ
Jupiter
ಗುರು (ವಕ್ರಿ)  ೧೨*೫೬’



ಶನಿ (ವ) ೨೦*೧೬’
ರಾಹು(ವ)೨೭*೨೬’
Saturn      Rahu
ರವಿ   Sun  ೨೦*೫೯’
ಬುಧ Mer ೦೧*೩೫’
ಕುಜ  Mars ೨೪*೩೭’

ಶುಕ್ರ   ೦೪/೪೮’
Venus



ಲಗ್ನ ಆರ್ದ್ರ-; ರವಿ  Sun ಪೂ.ಆಷಾಢ-೩; ಚಂದ್ರ  Moon ರೇವತಿ-೨;
ಕುಜ  Mars ಪೂ.ಆಶಾಢ-೪, ಬುಧ Mer ಮೂಲ-;
ಗುರು (ವ) Jup ® ಪುಷ್ಯ-೩; ಶುಕ್ರ  ಅನುರಾಧ-; ಶನಿ (ವ) Sat ಪುಬ್ಬ-೩
ರಾಹು  Rahu ಉತ್ತರ-೧; ಕೇತು  Ketu ಪೂ.ಭಾದ್ರ-

ಮಗಳ ತಂದೆಯ ಜಾತಕ :-
(ಇದನ್ನ ಅವಳ ಜಾತಕದಿಂದಲೇ ತೆಗೆದುಕೊಂಡದ್ದು.)
( ಪಧ್ಧತಿ-ಭಾವಾತ್-ಭಾವವನ್ನ ಪರಿಗಣಿಸಲಾಗಿದೆ)


ಚಂದ್ರ  
Moon

      

        ೪

                ೫
Asc.
ಲಗ್ನ      
ಕೇತು  Ketu
ಮಗಳ ತಂದೆಯ ಜಾತಕ
ಗುರು(ವ) 
Jup ®

               ೧೨

ಶನಿ       Sat
ರಾಹು  Rahu
ರವಿ        Sun
ಬುಧ      Mer   
              ೧೧
ಕುಜ       Mars

ಶುಕ್ರ    Ven

                    ೧೦

           ೯

               ೮


Predictions :-

1.              Ascendant falls on Kumbha Rashi and Ketu is posited therein. It shows that her father came from agriculture background and also from hardworking family. He himself is very studious. His personality is very lean and tall. Minimum, his height should be around 5’ 10”! Ketu is also there means ketu is jnanakaraka graha. So her father is very knowledgeable person. He is also inclined to religious activities and slowly he may become “Sanyasi” or away from all these family activities!

a.              ಈ ಮೇಲಿನ ಜಾತಕಳ ತಂದೆಯ ಲಗ್ನವು, ಇವಳ ಮಿಥುನ ಲಗ್ನದಿಂದ ೯  ನೆಯ ಮನೆಯಾದ ಕುಂಭ ರಾಶಿಯಾಗಿರುತ್ತೆ. ಆದರ ಅಧಿಪತಿಯಾದ ಶನಿ ದೇವನು ತನ್ನ ಸರಿಸಾಟಿಯಾದ ರಾಹುವಿನೊಂದಿಗೆ ಶನಿಯ  ತಂದೆಯಾದ ಹಾಗೂ ಅಜಾತ ಶತ್ರುವಾದ ಸೂರ್ಯನ ಮನೆಯಾದ ಸಿಂಹ ರಾಶಿಯಲ್ಲಿ ಉಪಸ್ಥಿತನು. ಶನಿಯು ವ್ಯವಸಾಯದ ಕಾರಕನಾದುದರಿಂದ, ಈತಳ ತಂದೆಯು ವ್ಯವಸಾಯದ ಹಿನ್ನೆಲೆಯಿಂದ ಬಂದವನಾಗಿರುತ್ತಾನೆ. ಲಗ್ನಾಧಿಪತಿ ಶನೈಶ್ಚರನಾದ ಕಾರಣ ಈತನು ಸೊಣಕಲ ದೇಹದವನಾಗಿದ್ದು, ಸ್ವಲ್ಪ ಮಟ್ಟಿಗೆ ಗೋಧಿ ಬಣ್ಣದವನಾಗಿರುತ್ತಾನೆ. ಈತನ ಎತ್ತರ ಸುಮಾರಿಗೆ ೫ ಅಡಿ, ೧೦ ಇಂಚಿಗಿಂತಲೂ ಹೆಚ್ಚಿಗೆ ಇರುತ್ತವೆ. ಶನಿಯು ಆತನ ಶತ್ರುವಾದ ಸೂರ್ಯನ ಮನೆಯಲ್ಲಿರುವ ಕಾರಣ ಈತನಿಗೂ , ಈತನ ತಂದೆಗೂ  ಸರಿಹೊಂದುವುದೇ ಇಲ್ಲ. ಸದಾ ಇವರಿಬ್ಬರಲ್ಲಿ ಒಬ್ಬರಿಗೊಬ್ಬರು ವೈರಿಯ ದೃಸ್ಟಿಯಿಂದಲೇ ಕಾಣುತ್ತಿರುತ್ತಾರೆ.

2.              His 2nd house is occupied by moon. So his family happiness is immense. He will not be having any sorts of problems in the family matters. Very peaceful person.

a.              ಈತನ ಲಗ್ನದಿಂದ ಎರಡನೇ ಮನೆಯಲ್ಲಿ ಚಂದ್ರನು ಉಪಸ್ಥಿತನಿರುವ ಕಾರಣ, ಈತನ ಸಂಸಾರದಲ್ಲಿ ಬಹಳಷ್ಟು ಶಾಂತಿ ಹಾಗೂ ಉತ್ಸಾಹವು ಸದಾ ತುಂಬಿರುತ್ತೆ. ಆತನಿಗೆ ಸಂಸಾರದ ವಿಷಯದಲ್ಲಿ ಯಾವುದೇ ತೊಂದರೆಗಳು ಬರುವುದಿಲ್ಲಾ ಅನ್ನಿ. ಇವರನ್ನ ನೋಡುವವರಿಗೆ ಹೊಟ್ಟೇ ಉರಿಯಾಗದೇ ಇರುವುದಿಲ್ಲಾ ಅನ್ನಿ!
3.              2nd house is also for the in law’s house. Moon is sitting in Pisces from the ascendant Aquarius. So his parents in law must be doing business related to Moon, i.e. water related. It is preferably Hotel Business!. Again the lord of the house is Jupiter and is exalted in Karka rashi . So his parents in law definitely a sober gentleman and must have earned name and fame in his profession and dharma activities! ( In fact he as a Swadhyaya man!)         
a.              ೨ನೇ ಮನೆಯು ಹೆಣ್ಣು ಕೊಟ್ಟಂತಹ ಅತ್ತೆಮತ್ತು ಮಾವರ ಮೆನೆಯಾಗಿರುತ್ತೆ. ಆದ್ದರಿಂದ ಈತನ ಹೆಣ್ಣು ಕೊಟ್ಟ ಮಾವನು ಜಲ ಸಂಬಂಧಿತ ವ್ಯಾಪಾರ, ಅಂದರೆ ಹೆಚ್ಚಿನ ಅಂಶ ಹೋಟೇಲ್ ಉದ್ಯಮವನ್ನ ಮಾಡುತ್ತಿರಬೇಕು! ( ನಿಜಕ್ಕೂ ಅವರು ಆರ್ಮೂರಿನಲ್ಲಿ ಹೋಟೇಲನ್ನ ನಡೆಸುತ್ತಿದ್ದರೆನ್ನಿ!) ಮತ್ತೆ ರಾಶ್ಯಾಧಿಪತಿ ಗುರುವಾಗಿದ್ದು, ಆ ಗ್ರಹವು ವಕ್ರೀ ಸ್ಥಿತಿಯಲ್ಲಿ ಕರ್ಕ ರಾಶಿಯಲ್ಲಿ ಉಛ್ಛನಾಗಿ ಕುಳಿತಿರುತ್ತಾನೆ. ಆದ್ದರಿಂದ ಈತನ ಹೆಣ್ಣು ಕೊಟ್ಟ ಮಾವನು ಬಹಳ ಮೃದು ಸ್ವಭಾವದ ವ್ಯಕ್ತಿಯಾಗಿದ್ದು, ಧಾರ್ಮಿಕ ಕಾರ್ಯಕ್ರಮವನ್ನ ಮಾಡುವಲ್ಲಿ ಎತ್ತಿದ ಕೈ ಆಗಿದ್ದರು. (ಅವರು ಸ್ವಾಧ್ಯಾಯವನ್ನೂ ನಡೆಸುತ್ತಿದ್ದು, ಗೀತಾಪ್ರವಚನವನ್ನಸುಮಾರು  ೫೦೦೦ ಜನರ ಮುಂದೆ ಕೊಡುತ್ತಿದ್ದರೆನ್ನಿ.) ಅವರು ಪ್ರತೀ ವಾರದ ಶುಕ್ರವಾರದಂದು ಹೋಟೇಲಿನಲ್ಲಿ ಹಲವು ಬಡ ಬಗ್ಗರಿಗೆ ಹೊಟ್ಟೇ ತುಂಬ ಊಟ ಅಥವಾ ತಿಂಡಿಯನ್ನ ಪುಕ್ಕಟೆಯಾಗಿ ಹಂಚುತಿದ್ದರೆನ್ನಿ! ಅವರುಗಳಿಗೆ ಆರ್ಮೂರ್ ತಾಲೂಕಿನಲ್ಲಿ ಒಳ್ಳೇ ಹೆಸರು ಬಂದಿತ್ತೆನ್ನಿ.

4.              His 3rd house is Aries wherein there is no planet. However the lord of that house is Mars which in the house of profit along with Sun and Mercury! So his communication will be excellent!. He may be a poet or a writer also!. As Jup is in its retrograde position, we may take it to its previous house!. As such, Jupiter’s aspect will be on this Mercury, Sun and Mars making him an excellent astrologer.

a.              ಮೂರನೇ ಮನೆಯು ಈತನ ಸಹೋದರ ಹಾಗೂ ಸಹೋದರಿಯರ ಮನೆಯಾಗಿದ್ದು, ಅಲ್ಲಿ ಯಾವ ಗ್ರಹಗಳೂ ಇಲ್ಲ. ಆದರೆ ಅದರ ಅಧಿಪತಿಯಾದ ಕುಜನು ಲಾಭ ಸ್ಥಾನದಲ್ಲಿ ಸೂರ್ಯ ಮತ್ತು ಬುಧರೊಡನೆ ಉಪಸ್ಥಿತನಾಗಿರುವನು. ಮತ್ತೆ ಆ ರಾಶಿಯ ಅಧಿಪತಿ ದೇವ ಬ್ರಹಸ್ಪತಿ. ಅಂದರೆ ಈತನಿಗೆ ಬ್ರಹಸ್ಪತಿಯ ಕಾರಕತ್ವಗಳನ್ನ ಹೊಂದಿರುವ, ಹಾಗೂ ಕುಜನ ಮತ್ತು ಬುಧನ ಕಾರಕತ್ವಗಳನ್ನ ಹೊಂದಿರುವ ಅಣ್ಣ-ತಮ್ಮಂದಿರು ಮತ್ತು ಅಕ್ಕ-ತಂಗಿಯರಿದ್ದಾರೆನ್ನಿ!  ಅವರಲ್ಲಿ ಕೆಲವರು ಅತೀ ಬುಧ್ಧಿವಂತರು. ಇನ್ನು ಕೆಲವರು ಬಹಳ ಕೋಪಿಸ್ಟರೂ, ಹೊಟ್ಟೇ ಉರಿ ಇರುವವರೂ ಇದ್ದಾರೆನ್ನಿ! ಮೂರನೇ ಮನೆಯು ಒಂದು ಸಾಮಾನ್ಯ ಮನೆಯಾಗಿದ್ದು, ಅದು ಸಣ್ಣ ಪುಟ್ಟ ಸಂಚಾರಗಳ ಮನೆಯೂ ಆಗಿರುತ್ತದೆ. ಅದು ನಿಮ್ಮ ಮಾತನ್ನೂ ಪ್ರತಿನಿಧಿಸುತ್ತೆ. ಆದ್ದರಿಂದ ಈತನ ಮಾತುಗಳು ಬಹಳ ಸರಾಗವಾಗಿದ್ದು, ಪುಂಖಾನುಪುಂಖವಾಗಿರುತ್ತೆ. ಈತನ ಮಾತಿನಲ್ಲಿ ಶೈಲಿ, ಪ್ರಾಸ ಹಾಗೂ ವ್ಯಂಗ್ಯೋಕ್ತಿಗಳೂ ತುಂಬಿ ತುಳುಕಾಡಿರುತ್ತೆ. ಬುಧನು ಜ್ಯೋತಿಷ್ಯಕ್ಕೆ ಕಾರಕನಾದ ಕಾರಣ ಜ್ಯೋತಿಷ್ಯದ ಅನುಭವವೂ ಇರುತ್ತೆ!

5.              His 4th house is also empty. But its lord is Venus sitting prettily well in 10th house. So we may draw the conclusion that his happiness lie in his profession. It means he is very happily enjoying his profession. He is very artistic in his profession also. Because of Mars is it’s lord, some disturbances are always there in his happiness like in his professional life!

a.              ಈತನ  ನಾಲ್ಕನೇ ಮನೆಯು ಸುಖಕ್ಕೆ, ತಾಯಿಗೆ, ವಾಹನಗಳಿಗೆ ಹಾಗೂ ಪಬ್ಲಿಕ್ಕಿಗೆ ಮತ್ತು ಸ್ನೇಹತರಿಗೆ ಕಾರಕತ್ವವಾದ ಕಾರಣ, ಅಲ್ಲಿ ಯಾವುದೇ ಗ್ರಹಗಳಿಲ್ಲ! ಆದರೆ ಅದರ ಅಧಿಪತಿ ಶುಕ್ರನು ೧೦ನೇ ಮನೆಯಾದ ವೃಸ್ಚಿಕದಲ್ಲಿ ಉಪಸ್ಥಿತನು. ಅಂದರೆ ಈತನಿಗೆ ಯಾವ ಸುಖಗಳಿಗೂ ತೊಂದರೆ ಇಲ್ಲಾ ಅನ್ನಿ. ವೃತ್ತಿಯ ಮನೆಯಲ್ಲಿ ಶುಕ್ರನಿರುವ ಕಾರಣ, ವೃತ್ತಿಯೇ ಈತನಿಗೆ ಬಹಳ ಸುಖವನ್ನ ಕೊಡುತ್ತೇ ಅನ್ನಿ.ಮತ್ತೆ ಈತನ ವೃತ್ತಿಯಲ್ಲಿ ಸದಾ ಹೆಂಗಸರೊಡನೆಯೇ ಈತನಿಗೆ ಅತಿ ಹೆಚ್ಚು ಸ್ನೇಹತ್ವ ಇರುತ್ತದೆ!  ಈತನು ತನ್ನ ವೃತ್ತಿಯನ್ನ ಒಂದು ಕಲಾ ರೂಪದಲ್ಲಿ ತೆಗೆದುಕೊಂಡು ಹೋಗುವ ಕಾರಣ, ಈತನು ಈ ಕ್ಷೇತ್ರದಲ್ಲಿ ಬಹಳ ಪ್ರಸಿಧ್ಧಿಯನ್ನ ಪಡೆದಿರುತ್ತಾನೆ. ಅದೇ ೪ನೇ ಮನೆಯು ಈತನ ಪತ್ನಿಯ ಮನೆಯಾದ ೭, ಅಂದರೆ ಸಿಂಹ ರಾಶಿಗೆ ೧೦ನೇ ಮನೆಯಾಗಿರುವ ಕಾರಣ, ಈತನ ಪತ್ನಿಯು ಕಲೆಯಲ್ಲಿ, ಕಸೂತಿಯಲ್ಲಿ, ಹೊಲಿಗೆಯಲ್ಲಿ, ಬಣ್ಣ ಹಾಕುವುದರಲ್ಲಿ ಬಹಳ ಜಾಣೆಯಾಗಿರುತ್ತಾಳೆ.ಇದಕ್ಕೆ ಕಾರಣ ಶುಕ್ರನೇ ಈ ೪ನೇ ಮನೆಯ ಅಧಿಪತಿ. ಮತ್ತೆ ಈತನ ಪಂಚಮ ಸ್ಥಾನಕ್ಕೆ ೪ನೇ ಮನೆಯು ವ್ಯಯ ಸ್ಥಾನವಾಗಿರುತ್ತೆ. ಆದ್ದರಿಂದ ಈತನ ಮಕ್ಕಳೂ ಬಹಳ ಐಷಾರಾಮಿಯಾಗಿ ಖರ್ಚನ್ನ ಮಾಡುವವರಾಗಿರುತ್ತಾರೆ. ಅವರುಗಳು ಕೂಡಾ ಯಾರೂ ಕಂಜೂಸಿನವರಲ್ಲ!

6.              His 5th house is also vacant. Whereas the lord of that house is Mercury, which is in his enemy’s house along with Sun and Mars.  This indicates that his children might have done either M.B.A degree or an Engineering degree either in Electronics and Communication (as Mercury id for the electronics media as well as for M.B.A finance or related to Marketing and also Mars is the karaka for engineering!) Since Mercury is the lord of 5th house his children are very intelligent people!

a.              ಪಂಚಮ ಸ್ಥಾನವು ಖಾಲಿಯಾಗಿದ್ದು, ಅದರ ಅಧಿಪತಿಯಾದ ಬುಧನು ಆತನ ಶತ್ರುವಾದ ಗುರುವಿನ ಮನೆಯಲ್ಲಿ ಸೂರ್ಯ ಹಾಗೂ ಕುಜನೊಡನೆ ಉಪಸ್ಥಿತನಾಗಿರುತ್ತಾನೆ. ಇದು ಏನನ್ನ ಸೂಚಿಸುತ್ತವೆ ಅಂದರೆ, ಈತನ ಮಕ್ಕಳು ಒಳ್ಳೇ ವಿದ್ಯಾವಂತರೂ, ಬುಧ್ಧಿವಂತರೂ ಆಗಿರುತ್ತಾರೆ. ಇವರುಗಳು ಒಂದೂ ಎಮ್.ಬೀ. ಏ. ಡೀಗ್ರಿಯನ್ನೋ, ಇಲ್ಲಾ ಕಂಪ್ಯೂಟರ್ನಲ್ಲಿ ಡಿಗ್ರೀಯನ್ನೋ, ಇಲ್ಲಾ ಎಂಜಿನೀರ್ ಡಿಗ್ರೀಯನ್ನೋ ತೆಗೆದುಕೊಂಡಿರುತ್ತಾರೆ. ಪಂಚಮ ಸ್ಥಾನವು ಪೂರ್ವ ಪುಣ್ಯ ಹಾಗೂ ಹೈಯರ್ ಎಜುಕೇಷನನ್ನ ಸೂಚಿಸು ತ್ತದೆ. ಆದ್ದರಿಂದ ಈತನೂ ಕೂಡ ಕಡಿಮೆಯೆಂದರೆ ಪೋಸ್ಟ್ ಗ್ರೇಜುವೇಟ್ ಡಿಗ್ರೀಯನ್ನ ತೆಗೆದುಕೊಂಡಿರುತ್ತಾನೆ. ಈ ಗ್ರಹಗಳು ಗುರುವಿನ ಮನೆಯಲ್ಲಿರುವ ಕಾರಣ, ಈತ ರೇಂಕನ್ನೂ ಕೂಡಾ ಪಡೆದಿರಲು ಸಾಧ್ಯಾ ಅನ್ನಿ! (ನಿಜವಾಗಿಯೂ ಈತ ಬಿ.ಎಸ್.ಸಿ. ಡಿಗ್ರೀಯಲ್ಲಿ ಇಡೀ ವಿಶ್ವವಿದ್ಯಾಲದಲ್ಲಿ ೭ ನೇ ರೇಂಕನ್ನ ಪಡೆದಿರುತ್ತಾನೆ!) ಈ ಪಂಚಮ ಸ್ಥಾನವು ೯ನೇ ಮನೆಗೆ ೯ ನೇ ಮನೆಯಾಗಿರುವ ಕಾರಣ, ಈತನ ತಂದೆಗೆ  ಒಳ್ಳೇ ಭಾಗ್ಯವನ್ನ ತಂದಿರುತ್ತೆ!. ಅಂದರೆ ಈತನು ಹುಟ್ಟಿದ ಮೇಲೆ, ಇವನ ತಂದೆಯ ಗ್ರಾಫ್ ಮೇಲಕ್ಕೆ ಹೋಗಲು ಶುರು ವಾಗಿದೆ  ಅನ್ನಿ! ಈ ಪಂಚಮ ಸ್ಥಾನವು ಈತನ ಜಾತಕದ ೭ನೇ ಮನೆಗೆ ಲಾಭ ಸ್ಥಾನವಾದ ಕಾರಣ, ಈತನ ಪತ್ನಿಗೆ ಇವನನ್ನ ಮದುವೆ ಆದ ಕ್ಷಣದಿಂದ ಲಾಭದ ಪಥದಲ್ಲಿ ನಡೆದಿರುತ್ತಾಳೆ. ಮತ್ತೆ ಇದೇ ಪಂಚಮ ಸ್ಥಾನವು ೪ನೇ ಮನೆಗೆ ಧನ ಸ್ಥಾನವಾದ ಕಾರಣ, ಈತನು ಹುಟ್ಟಿದ ಮೇಲೆ ಈತನ ತಾಯಿಗೆ ಕೈಯಲ್ಲಿ ಹಣಬರಲು ಶುರುವಾಯಿತು. ಅವಳ ಕೈ ಖಾಲೀ ಆಗಲೇ ಇಲ್ಲ ಆನಂತರ!

7.              Jup in th house causes diabetic! So always better to control the diet and also do Yoga daily and do walking regularly to keep fit and to control diabetes!.

a.              ಬ್ರಹಸ್ಪತಿಯು ೬ ನೇ ಮನೆಯಲ್ಲಿರುವ ಕಾರಣ, ಈತನಿಗೆ ಸಕ್ಕರೆ ಕಾಹಿಲೆ ಬರುವ ಸಾಧ್ಯತೆ ಹೆಚ್ಚು ಕಾಣಿಸುತ್ತೆ. ಈತನ ಜಾತಕದ ೭ನೇ ಮನೆಗೆ ಈ ೬ನೇ ಮನೆಯು ವ್ಯಯ ಸ್ಥಾನವಾದ ಕಾರಣ, ಮತ್ತೆ ಅಲ್ಲಿಯೇ ಗುರುವು ಉಛ್ಛನಾಗಿ ಇದ್ದ ಕಾರಣ, ಹಾಗೂ ಗುರುವು ವಕ್ರಿಯಾದ ಕಾರಣ, ಈತನ ಪತ್ನಿಯು ಶತ ಕಂಜೂಸ್ ಆಗಿರುತ್ತಾಳೇ. ದೇವರು ದಿಂಡಿರಲ್ಲಿ ಅಸ್ಟಕ್ಕಸ್ಟೇ ಆಸ್ಥೆ. ಇದಕ್ಕೆ ಕಾರಣ ಗುರು ಗ್ರಹವು ವಕ್ರಿ.

8.              Again Mars from Sagittarius aspect her father’s 6th house causing BP problems also. 6th house is occupied by exalted vakri Jupiter!. Great! This native in particular may not take any loans from anybody at all. Even if he takes, he will repay it immediately!
a.              ಮಂಗಲ್ ಧನೂರ್ ರಾಶಿಯಿಂದ, ತಂದೆಯ ನೇ ಮನೆಯನ್ನ ನೋಡುವುದರಿಂದ, ಆತನಿಗೆ ರಕ್ತದ ಒತ್ತಡವು ಬರಲು ಸಾಧ್ಯತೆ ಜಾಸ್ತಿ. ಬ್ರಹಸ್ಪತಿಯು ನೇ ಮನೆಯಲ್ಲಿ ವಕ್ರಿಯಾದ ಕಾರಣ, ಈತನು ಸಾಲವನ್ನ ತೆಗೆದುಕೊಳ್ಳಲು ಬಹಳ ಹಿಂಜರಿಯುತ್ತಾನೆ. ಒಂದು ವೇಳೆ ತೆಗೆದುಕೊಂಡರೂ ಅದನ್ನ ಬಡ್ಡಿ , ಬಡ್ಡಿ ಚುಕ್ತಾ ಮಾಡುತ್ತಾನೆಯೇ ವಿನಹ ಸಾಲದ ಹಣವನ್ನ ಯಾರಿಗೂ ಹಾಂಟನ್ನ ಹಾಕುವುದಿಲ್ಲ.

9.              6th house is 2nd to the 5th house. Great, for his children there will be an absolute happiness in their family and also their communication will be very sweetish! As Jupiter is in 6th house. Since Jupiter is exalted as well as in retrograde position, they will never ever face any problems in their family happiness as Brahaspati’s Ashirvada is always on them!

a.              ನೇ ಮನೆಯು ನೇ ಮನೆಗೆ ನೇ ಮನೆಯಾಗಿರುತ್ತೆ.ಆದ್ದರಿಂದ ಇವನ ಮಕ್ಕಳಿಗೆ ಅತೀ ಸುಖ ಹಾಗೂ ಸಂತೋಷವು ಇರುತ್ತದೆ. ಬ್ರಹಸ್ಪತಿಯು ಉಛ್ಛನಾದ ಕಾರಣ, ಇವರಿಗೆ ಸುಖಕ್ಕೇನೂ ಯಾವಾಗಲೂ ಕೊರತೆ  ಆಗಲಿಕ್ಕಿಲ್ಲ.
10.        6th house of the native is occupied by Jupiter and since this house is 12th house for 7th house, his wife must be very stingy lady. But with larger heart! If she gives, she gives it heartily! There is no doubt about it as Jupiter is for large things! (Dil Dar person)

a.              ಮನೆಯು ೭ನೇ ಮನೆಗೆ ೧೨ ನೇ ಮನೆಯಾದ ಕಾರಣ, ಈತನ ಹೆಂಡತಿಯ ಹೃದಯವು ದೊಡ್ಡ ಹೃದಯವಾಗಿರುತ್ತೆ. (ಇದು ಜೋಕಿನ ಸೈಡಿಗಾಗಿ ಆ ಮಾತನ್ನ ಅಂದೆ ಬಿಡಿ.  ಇವಳು ನಿಜ ಜೀವನದಲ್ಲಿ ಹೃದಯ ವಿಸ್ತಾರವಾದ ಕಾಹಿಲೆಯಿಂದಲೂ ನರಳುತ್ತಾ ಇದ್ದಾಳೆನ್ನಿ!)

11.        7th house is occupied by Saturn and Rahu. So his wife is very strong lady.

a.              ನೇ ಮನೆಯಲ್ಲಿ ಶನಿ ಮತ್ತು ರಾಹುವಿರುವ ಕಾರಣ ಈತನ ಪತ್ನಿಯು ಬಹಳ ಜೋರು! ರಾಹು ಕೂಡ ಕಮ್ಯುನಿಕೇಷ್ನ್ನಿಗೆ ಕಾರಣವಾದುದರಿಂದ ಇವಳು ಮಾತನಾಡಲು ಶುರು ಮಾಡಿದರೆಂದರೆ, ಅದೂ ಬೇರವರನ್ನ, ಯಾಕೆ ಗಂಡನನ್ನೇ ಹಳಿಯಲು ಶುರುಮಾಡಿದರೆಂದರೆ, ಇವಳ ಬಾಯಲ್ಲಿ ಹಳೆಯ ವಿಚಾರಗಳೆಲ್ಲಾ ಪುಂಖಾನುಪುಂಖವಾಗಿ ಬರಲು ಶುರು ಮಾಡುತ್ತೆ. ಇದಕ್ಕೆ ಕಾರಣ ರಾಹು ಗ್ರಹ! ಅದಕ್ಕೇ ಹೇಳುವುದು ತಾಯಿಯಂತೆ ಕರು, ನಾಯಿಯಂತೆ ಬಾಲ!

12.        His 8th house is is empty and its lord Mercury is with friend Sun and enemy Mars in 11th house. So person is having long ayu.

a.              ಈತನ ಅಸ್ಟಮ ಸ್ಥಾನದಲ್ಲಿ ಯಾವುದೇ ಗ್ರಹಗಳೂ ಇಲ್ಲವಾದ ಕಾರಣ, ಮನೆಯ ಅಧಿಪತಿ ಬುಧನು ಸ್ನೇಹಿತನಾದ ಸೂರ್ಯನೊಂದಿಗೆ ಹಾಗೂ ಶತ್ರುವಾದ ಕುಜನೊಡನೆ ಲಾಭದ ಮನೆಯಲ್ಲಿರುವ ಕಾರಣ, ಜಾತಕನಿಗೆ ದೀರ್ಘ ಆಯು ಇರುತ್ತದೆ!

13.        His 9th house is empty and the lord is Venus in 10th house. So his bhagya is profession! Again Saturn’s 3rd aspect will be on his bhagya as well as Pitru stan!. So, he and his father are not go side by side. They are always at cross! Even his Bhagya will come slowly.

a.              ಜಾತಕದಲ್ಲಿ ೯ ನೇ ಮನೆಯು ಖಾಲಿಯಾಗಿದ್ದು, ಅದರ ಅಧಿಪತಿ ಶುಕ್ರನು ೧೦ನೇ ಮನೆಯಲ್ಲಿದ್ದು, ೯ ನೇ ಮನೆಯವರಿಗೆ ಅದು ಧನ ಸ್ಥಾನ ಹಾಗೂ ಕುಟುಂಬ ಸ್ಥಾನ ಮತ್ತು ವಾಕ್ ಸ್ಥಾನವಾಗಿರುತ್ತೆ. ಅಂದರೆ ಈತನ ಪಿತನು ಒಳ್ಳೇ ವಾಚಾಳಿಯಾಗಿದ್ದು, ಅವರ ಕುಟುಂಬವು ಬಹಳ ಚೆನ್ನಾಗಿದೆ. ಈತನ ಪಿತನು ಶುಕ್ರನಂತೆಯೇ ೬೪ ಕಲೆಗಳಿಂದ ತುಂಬಿ ತುಳುಕಿರುತ್ತಾರೆ. ಅದೇ ಜಾತಕನ ಭಾಗ್ಯವು ಜಾತಕನ ವೃತ್ತಿಯಿಂದಲೇ ಮೇಲಕ್ಕೆ ಬಂದಿರುತ್ತೇ ಅಂದರೆ ತಪ್ಪಾಗದು.

14.        His professional life is very jolly and also very problematic. Why because of Venus, he is appreciated by one and all!. Because the lord of the said house is Mars, which is prettily sitting with Sun and Mercury. No doubt Mars is friend of Sun is the friend of Mars whereas Mercury is his enemy. Again the Rashi in which all the three are sitting is Jupiter’s house. So Jupiter is friend of Mars, Sun where as he is bitter enemy of Mercury. What it means? No doubt, though he fought with his executives, he will come out safely without any problems. That is how he takes pension today very peacefully!

a.              ಈ ಜಾತಕಳ ತಂದೆಯ ವೃತ್ತಿಯಲ್ಲಿ ಸಿಹಿಯೂ ಉಂಟು ಮತ್ತು ಕಹಿಯೂ ಉಂಟು. ಸಿಹಿ ಏಕೆಂದರೆ, ಆ ಮನೆಯಲ್ಲಿ ಶುಕ್ರನು ಇದ್ದಾನೆ. ಅದೂ ಕುಜನ ಮನೆಯಲ್ಲಿ. ಕುಜ ಮತ್ತು ಶುಕ್ರನು ಬಹಳ ಸ್ನೇಹಿತರು. ಆದ್ದರಿಂದ ವೃತ್ತಿಯಲ್ಲಿ ಈತನನ್ನ ಇಸ್ಟ [ಪಟ್ಟವರು ಬಹಳಸ್ಟು ಮಂದಿ ಹೆಂಗಸರೇ ಜಾಸ್ತಿ ಅನ್ನಿ!. ಶುಕ್ರನೂ ಒಬ್ಬ ಬ್ರಾಹ್ಮಣನಾಗಿ, ಗುರುವಿನ ಸ್ಥಾನದಲ್ಲಿರುವ ಕಾರಣ, ಈತನು ಕರ್ಮ ಸ್ಥಾನದಲ್ಲಿದ್ದು ಪ್ರಾಧ್ಯಾಪಕ ವೃತ್ತಿಯನ್ನ ಮಾಡಿರುತ್ತಾನೆ! ಈ ಮನೆಯ ಅಧಿಪತಿ ಕುಜನು ಲಾಭದ ಮನೆಯಲ್ಲಿ ಸೂರ್ಯನೊಂದಿಗೆ ಹಾಗೂ ಬುಧನೊಂದಿಗಿದ್ದುದರಿಂದ ಈತನಿಗೆ ಶತ್ರುಗಳು ಹಾಗೂ ಸ್ನೇಹಿತರೂ ಸಮಾ ಸಮವಾಗಿ ಈತನಿಗೆ ಲಾಭವನ್ನ ಮಾಡಿದವರೇ ಜಾಸ್ತಿ. ವೃತ್ತಿಯೇ ಲಾಭದಾಯಕ ಈತನಿಗೆ. ಆದರೆ ಸೂರ್ಯನು ಎಕ್ಸಿಕ್ಯುಟಿವನ್ನ ಸೂಚಿಸುವುದರಿಂದ, ಈತನಿಗೂ ಮತ್ತು ಈತನ ಮೇಲಿನ ಅಧಿಕಾರಿಗಳಿಗೂ ಆಗಿ ಬರುತ್ತಿರಲಿಲ್ಲ. ಆದರೂ ಕೂಡ ಲಾಭದ ಮನೆಯ ಅಧಿಪತಿ ಗುರುವಾದ ಕಾರಣ, ಆ ಗುರುವು ಉಛ್ಛನಾಗಿ ಕುಳಿತಿರುವುದರಿಂದ ಎಲ್ಲಾ ದೃಸ್ಟಿಯಿಂದ ಪಾರಾಗಿ ಆರಾಮವಾಗಿ ಪೆನ್ಶನ್ ತೆಗೆದುಕೊಳ್ಳುವುದರಲ್ಲಿ ಈತ ಬಹಳ ಗೆಲುವನ್ನೇ ಸಾಧಿಸಿದ್ದಾನೆಂದರೆ ನಿಮಗೆ ಸಂದೇಹವೇ ಬೇಡ. ಹಾಗೆಯೇ ಈತನು ೪ ವರ್ಷಗಳಿಂದ ತೆಗೆದುಕೊಳ್ಳುತ್ತಲೇ ಇದ್ದಾನೆ!

15.        For this horoscope Jupiter in Vakri position is in 9th house from his professional house. It shows he is bestowed with full of blessings from Jupiter in his profession and he earned name and fame from top to bottom. In fact this is very true as he trained nearly 3000 employees from sub staff to up to the chairman cadre in computers by establishing IT College!

a.              ಈ ಜಾತಕರಿಗೆ ಬ್ರಹಸ್ಪತಿಯು ವಕ್ರಿಯಾಗಿ ವೃತ್ತಿಯ ಮನೆಯಿಂದ ೯ ನೇ ಮನೆಯಲ್ಲಿ ಉಪಸ್ಥಿತನು. ಇದರಿಂದಾಗಿ ಬ್ರಹಸ್ಪತಿಯ ಸಂಪೂರ್ಣ ಆಶೀರ್ವಾದವು ಈತನ ಮೇಲೆ ಬಿದ್ದಿರುತ್ತೇ ಅಂದ ಹಾಗಾಯ್ತು!. ಆದ್ದರಿಂದ ಈತನು ತನ್ನ ವೃತ್ತಿಯಲ್ಲಿ ಬಹಳಸ್ಟು ಕೀರ್ತಿ ಮತ್ತು ಹೆಸರನ್ನ ಪಡೆದಿರುತ್ತಾನೆ. ಬ್ರಹಸ್ಪತಿಯು ವಿದ್ಯಾಭ್ಯಾಸಕ್ಕೆ ಅನುಕೂಲಕರವಾದ ವಾತಾವರಣವನ್ನ ಸೃಷ್ಟಿಸಿರುವುದರಿಂದ, ಬ್ರಹಸ್ಪತಿಯು ಪ್ರಾಧ್ಯಾಪಕ ವೃತ್ತಿಗೆ ಕಾರಕ ಗ್ರಹನಾದ ಕಾರಣ, ಬ್ರಹಸ್ಪತಿಯು ಮಂತ್ರಗಳಿಗೂ ಕಾರಕನಾದುದರಿಂದ, ಈತನು ತನ್ನ ಉದ್ಯೋಗ ಕ್ಷೇತ್ರದಲ್ಲಿ ಪ್ರಾಧ್ಯಾಪಕ ವೃತ್ತಿಯನ್ನ ಮಾಡಿದ್ದು ಬಹಳಸ್ಟು ಜನರಿಗೆ ಕಂಪ್ಯೂಟರಿನಲ್ಲಿ ಟ್ರೈನಿಂಗನ್ನೂ ಕೊಟ್ಟಿರುತ್ತಾನೆ! ಈತನು ಕೆಲ್ವೊಂದು ಮಂತ್ರಗಳನ್ನೂ ಕಲಿತಿದ್ದು, ದೇವರ ಪೂಜೆಯನ್ನ ಸುಮಾರು ಒಂದು ಗಂಟೆಯನ್ನ ಮಾಡುತ್ತಿರುತ್ಟಾನೆ!

16.        One more point you may notice that all the three planets viz Sun, Mer and Mars are sitting in the house of Profit!. So the father of the girl is benefitted by the Govt. or the company wherein Govt. investments are there. He is also benefitted by the investments in Lands and property!

a.              ಕುಜ, ರವಿ ಮತ್ತು ಬುಧನು ಲಾಭದ ಮನೆಯಲ್ಲಿ ಕುಳಿತಿರುವುದರಿಂದ, ಈತನು ಸರ್ಕಾರಿ ಅಥವಾ ಸರ್ಕಾರದ ವತಿಯಿಂದ ಶೇರ್ ಇನ್ವೆಸ್ಟ್ಮೆಂಟ್ಸ್  ಇರುವಂತಹ ಕಂಪೆನಿಯಿಂದಾಗಿ ಬಹಳಸ್ಟು ಲಾಭವನ್ನ ಗಳಿಸಿರುತ್ತಾನೆ. ಆತನು ಭೂಮಿಯ ಮೇಲೆ ಹಣವನ್ನ ಹಾಕಿದ್ದು, ಅದರಲ್ಲಿಯೂ ಲಾಭವನ್ನ ಗಳಿಸಿರುತ್ಟಾನೆ.

17.        11th house is 2nd house for the professional house. It means for this native, professional life will be main sources of finance and family happiness! So is his actual case! Since Mercury, Mars and Sun three planets are there in 2nd house to the professional house, he is an excellent communicator with mixture of authority, strictness and also discipline!

a.              ೧೧ ನೇ ಮನೆಯು ವೃತ್ತಿಯ ಮನೆಗೆ ೨ ನೇ ಮನೆಯಾದ ಕಾರಣ, ಈತನ ವೃತ್ತಿಯಿಂದ ಸಾಕಸ್ಟು ಲಾಭವನ್ನ ಪಡೆದಿರುತ್ತಾನೆ. ಬುಧನಿಂದಾಗಿ ಒಳ್ಳೇ ವಾಕ್ಚಾತುರ್ಯವನ್ನೂ, ಕುಜನಿಂದಾಗಿ ಒಳ್ಳೇ ಧೈರ್ಯವನ್ನೂ, ರವಿಯಿಂದಾಗಿ ಒಳ್ಳೇ ಎಡ್ಮಿನಿಸ್ಟ್ರೇಶನ್ ಕೆಪೇಸಿಟಿಯನ್ನೂ ಗಳಿಸಿರುತ್ತಾನೆ.

18.        His 12th house is empty. But the lord Saturn is sitting with Rahu in 7th house. This shows her father is spendthrift! Mostly he will send to the downtrodden as Saturn and for that matter Rahu is also equivalent to Saturn represents these downtrodden people!

a.              ಈತನ ವ್ಯಯಸ್ಥಾನವು ಖಾಲಿಯಾಗಿದ್ದು, ಅದರ ಅಧಿಪತಿ ಶನಿ ಮಹಾರಾಜನು ರಾಹುವಿನೊಂದಿಗೆ ಕಳತ್ರ ಸ್ಥಾನದಲ್ಲಿ ಉಪಸ್ಥಿತನು! ಅಂದರೆ ಈತನು ಬಹಳಸ್ಟು ಖರ್ಚನ್ನ ಮಾಡುವವನು. ಈತ ಕಂಜೂಸಿ ಅಲ್ಲ. ಈತನು ತನಗಿಂತಲೂ ಕಡಿಮೆ ಮಟ್ಟದಲ್ಲಿರುವ ಕೂಲಿಯಾಳು ಅಥವಾ ಕ್ಲಾಸ್ ೪ ನ ಜನರಿಗೆ ಸಹಾಯವನ್ನ ಮಾಡುವುದರಲ್ಲಿ ಎತ್ತಿದ ಕೈ! ಇದಕ್ಕೆ ಕಾರಣ ಶನಿಯು ಈ ದರ್ಜೆ  ನೌಕರರ ಕಾರಕ ಗ್ರಹನಾಗಿರುತ್ತಾನೆ.

19.        His 12th house is aspected by retrograded Jupiter indicating that the native may go abroad only for the visit purpose during the dasha of Saturn, as the house Capricorn is chara rashi. In fact the couple went to Phoenix, Las Vegas, Los Angeles, Sandi ago, Hollywood, Florida, and Orlando, Disney world New Jersey, New York and Washington DC etc. during 2012-13.

a.              ಈತನ ೧೨ ನೇ ಮನೆಯನ್ನ ವಕ್ರಿ ಗುರುವು ನೋಡುವುದರಿಂದ, ಈತನು ಹೊರದೇಶವನ್ನ ನೋಡಲೋಸುಗ ಹೋಗಬಹುದು! ಅದರಂತೆಯೇ ನಿವೃತ್ತಿಯಾದ ೨ ವರ್ಷದಲ್ಲಿ ಈತನು ಮತ್ತು ಈತನ ಧರ್ಮ ಪತ್ನಿಯು ಫಿನಿಕ್ಸ್, ಲಾಸ್ಏಂಜಲ್ಸ್, ಲಾಸ್ವೇಗಾಸ್, ಸಾಂಡಿಯಾಗೋ, ಹೋಲಿವುಡ್, ವಾಶಿಂಗ್ಟನ್ ಡೀ.ಸಿ, ನ್ಯೂಯಾರ್ಕ್, ನ್ಯೂ ಜೆರ್ಸೀ ಎಲ್ಲಾ ನೋಡಿಕೊಂಡು ಬಂದಿರುತ್ತಾರೆ!

20.        Again 12th house aspected by retrograde Jupiter making himself religious!

a.              ೧೨ ನೇ ಮನೆಯನ್ನ ವಕ್ರಿ ಗುರು ನೋಡುವುದರಿಂದ, ಜಾತಕನು ಧಾರ್ಮಿಕ ಪ್ರವ್ರತ್ತಿಯನ್ನ ಬೆಳೆಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಅಂತೆಯೇ ಆತನು ಬೆಳೆಸಿಯೂಕೊಂಡಿರುವ.


Written By
Dr.P Surendra Upadhya,Ph.D
(Astrology)

15-07-2016

No comments:

Post a Comment