Friday 10 March 2017

ಬುಧನ ಅಯಾರಾಶಿಯ ಫಲಗಳು

ಬುಧನ ಅಯಾರಾಶಿಯ ಫಲಗಳು

1.                 ಬುಧನು ಮೇದಲ್ಲಿದ್ದರೆ-ಜೂಜನ್ನ ಆಡುವವನು. ಸಾಲಮಾಡಿ ಜೀವನವನ್ನ ನಡೆಸುವವನು. ಮಧ್ಯಪಾನಾಸಕ್ತನು, ನಾಸ್ತಿಕನು, ಚೋರವೃತ್ತಿಯಾತ, ಧನಹೀನನು, ಕೆಟ್ಟ ಸ್ತ್ರೀಯ ಸಹವಾಸಿ, ಡಾಂಭಿಕ,ಸುಳ್ಳಾಡುವಾತನು ಅಂತ ವರಾಹಮೀರರು ಹೇಳಿರುತ್ತಾರೆ.
2.                 ಸಾರಾವಳಿಯ ಪ್ರಾಕಾರ, ವಿಶ್ವಾಸಿಕರಲ್ಲಿ ಕಲಹಕರ್ತ, ತಿಳಿದವನು, ಉಪದೇಶಕರ್ತ, ವಿಟಪುರುಷ, ಕೆಟ್ಟಕೆಲಸವನ್ನ ಮಾಡುತ್ತಿರುತ್ತಾನೆ, ಕ್ಷೀಣ ಶರೀರ ಉಳ್ಳವನು ಆಗಿರುತ್ತಾನೆ. ಗೀತನೃತ್ಯಾದಿ ಬಲ್ಲವನೂ, ಸ್ತ್ರೀ ರತಿಪ್ರಿಯನೂ, ಅಕ್ಷರತಜ್ನನೂ, ಕಪಟಿಯೂ, ಬಕನೂ ಆಗಿರುತ್ತಾನೆ. ಆತನು ಒಂದು ವೇಳೆ, ಶ್ರಮದಿಂದ ಹಣವನ್ನು ಗಳಿಸಿದ್ದರೆ, ಅದನ್ನ ಆತನು ಕಳೆದುಕೊಳ್ಳುತ್ತಾನೆ. ಅದೇ ಚರಸ್ಥಿರ ದ್ವಿಸ್ವಭಾವದವನು ಸಾಲದಿಂದ ಬಂಧನಕ್ಕೆ ಒಳಗಾಗುತ್ತಾನೆ ಹಾಗೂ ಮೋಸಗಾರನಾಗುತ್ತಾನೆ.
3.                 ನಮ್ಮ ಜ್ಯೋತಿಷ್ಯ ಕೇಂದ್ರದಲ್ಲಿ, ಪ್ರೊಫ಼ೆಸರ್ ವಿಜಯಕುಮಾರರ ಜಾತಕದಲ್ಲಿ ಬುಧನು ಲಗ್ನದಿಂದ ೧೧ ರಲ್ಲಿರುವನು. ಲೆಕ್ಚರರ್  ಶ್ರೀಮತಿ ಸುಚಿತ್ರಾರವರದ್ದು, ವೃಸ್ಚಿಕ ಲಗ್ನದಿಂದ  ಭಾಗ್ಯದಲ್ಲಿ, ಅಂದರೆ ಕಟಕ ರಾಶಿಯಲ್ಲಿ ಇರುವುದು. ಮಾನ್ಯ.ಎಮ್.ಎಸ್ ಹೆಬ್ಬಾರವರದ್ದು  (೮೨) ಮೀನ ಲಗ್ನದಿಂದ ೪ನೇ ಮನೆಯಾದ ಮಿಥುನದಲ್ಲಿಯೇ ಶುಕ್ರನ ಒಡನಿರುವನು, ಡಾಕ್ಟರ್ ಪಾ.ಸು. ಉಪಾಧ್ಯರವರದ್ದು ಅವರದ್ದು ಮಿಥುನ ಲಗ್ನದಿಂದ ಪಂಚಮದಲ್ಲಿ ಶುಕ್ರನೊಡನೆ ತುಲಾದಲ್ಲಿ ಇರುವನು. ಆದರೆ ಭಾವಕುಂಡಳಿಯಲ್ಲಿ ಕನ್ಯಾದಲ್ಲಿ ರವಿ ಮತ್ತು ಶನಿಯೊಡನೆ ಉಪಸ್ಥಿತನು. ಶ್ರೀಮತಿ ಶ್ರೀಲಕ್ಷ್ಮೀಯವರದ್ದು ಮಿಥುನ ಲಗ್ನದಿಂದ ೧೨ ರಲ್ಲಿ ರವಿಯೊಡನಿರುವನು. ಶ್ರೀಮತಿ ಲತಾರವರದ್ದು ಸಿಂಹ ಲಗ್ನದಿಂದ ಪಂಚಮದಲ್ಲಿ ವಕ್ರಿಯಾಗಿ ರವಿ ಹಾಗೂ ಕುಜನೊಡನೆ ಧನೂರ್ ರಾಶಿಯಲ್ಲಿ ಇರುವನು. ಅದೇ ಶ್ರೀಮತಿ ಸಾಧನಾ ಮೇಡಮ್ ಅವರದ್ದು ಕಟಕ ಲಗ್ನದಿಂದ ೭ ನೇ ಮನೆಯಲ್ಲಿ ವಕ್ರಿಯಾಗಿ ರವಿ, ಶನಿ, ಕೇತುವಿನೊಡನೆ ಮಕರದಲ್ಲಿ ಇರುವನು, ಅದೇ ಪ್ರೊಫ಼ೆಸ್ಸರ್ ಕೃಷ್ಣಕುಮಾರ ಅವರದ್ದು ಕನ್ಯಾ ಲಗ್ನದಿಂದ ೩ನೇ ಮನೆಯಾದ ವೃಷ್ಚಿಕದಲ್ಲಿದ್ದರೆ, ಶ್ರೀಯುತರಾದ  ಪ್ರೊಫ಼ೆಸ್ಸರ್ ಬೀ.,ವೀ,ರಾಮನ್ ಅವರ ಜಾತಕದಲ್ಲಿ ಕುಂಭ ಲಗ್ನದಿಂದ ೭ ರಲ್ಲಿ ಶುಕ್ರನೊಡನೆ ಸಿಂಹ ರಾಶಿಯಲ್ಲಿ ಉಪಸ್ಥಿತನು. ಅದೇ ಜಗನ್ನಾಥ ಅವರದ್ದು ವೃಷಭ ಲಗ್ನದಿಂದ ಅಷ್ಟಮದಲ್ಲಿ ಧನೂರ್ ರಾಶಿಯಲ್ಲಿ ವಕ್ರಿಯಾಗಿ ರವಿಯೊಡನೆ ಹಾಗೂ ಕುಜನೊಡನಿರುವನು. ನಮ್ಮ ಶಿವಕುಮಾರ, ಅವರದ್ದು ಕನ್ಯಾ ಲಗ್ನವಾಗಿದ್ದು ವ್ಯಯದಲ್ಲಿ ಚಂದ್ರ, ಕುಜ ಹಾಗೂ ಕೇತುವಿನೊಂದಿಗೆ ಸಿಂಹದಲ್ಲಿದ್ದರೆ, ನಮ್ಮ ಅಜಯ ರವರದ್ದು ವೃಶ್ಚಿಕ ಲಗ್ನದಿಂದ ಧನ ಸ್ಥಾನವಾದ ಧನೂರ್ ರಾಶಿಯಲ್ಲಿರುವುದು. ಅದೇ ನಮ್ಮ ಸು.ಪ್ರ ಅವರದ್ದು ಕುಂಭ ಲಗ್ನವಾಗಿದ್ದು, ಬುಧನು ಮೂರನೇ ಮನೆಯಾದ ಮೇಶದಲ್ಲಿಯೇ ರವಿ ಮತ್ತು ಕೇತುವಿನೊಡನಿರುವನು. ಜವಾಹರ್ಲಾಲ್ ನೆಹರೂ ಅವರ ಜಾತಕದಲ್ಲಿ ಕಟಕ ಲಗ್ನದಿಂದ ೪ ರಲ್ಲಿ ಬುಧನು ಶುಕ್ರನೊಡನೆ ಉಪಸ್ಥಿತನು. ನಮ್ಮ ಬಿಸಿನೆಸ್ಸ್ ಟೈಕೂನ್ ಎಮ್ ಎಸ್ ಓಬೀರೋಯ್ ಅವರ ಜಾತಕದಲ್ಲಿ ಬುಧನು ವೃಷಭ ಲಗ್ನದಿಂದ ಮೂರನೇ ಮನೆಯಾದ ಕಟಕ ರಾಶಿಯಲ್ಲಿ ಇರುವನು.
4.                 ಈಗ ಬುಧನು ವೃಷಭದಲ್ಲಿದ್ದರೆ ಫಲಗಳು:- ಆಚಾರ್ಯನು, ಉಪದೇಶ ಕರ್ತನು, ಬಹು ಪುತ್ರರಿರುವರು. ಬಹುಸ್ತ್ರೀಯರಲ್ಲಿ ರಮಿಸುವನು. ಧನ ಸಂಪಾದನೆಯಲ್ಲಿ ಸದಾ ಆಸಕ್ತನು. ದಾನಶೂರನು, ಗುರು ಭಕ್ತಿ ಉಳ್ಳವನೂ ಆಗಿರುತ್ತಾನೆ. ಸಕಲ ಕಾರ್ಯುದಕ್ಷನು, ಪ್ರತಿಭಾವಂತನು, ಮಹಾದಾನಿಯು, ಖ್ಯಾತಿವಂತನು, ವೇದಾಶಾಸ್ತ್ರಜ್ನನು ಆಗಿರುತ್ತಾನೆ. ವ್ಯಾಯಾಮವನ್ನ ಮಾಡುವಾತನು, ಅಲಂಕಾರ ಪ್ರಿಯನು, ಸ್ಥಿರನು, ಸ್ತ್ರೀಸುಖ ಇರುವವನು, ಧನಸುಖ ಉಳ್ಳವನು, ಪ್ರಿಯಸುಂದರ ಕಥಾತಜ್ನನು, ಗಂಭೀರ  ಮಾತು, ಗಾನ , ಹಾಸ್ಯರಸ, ರತಿಕ್ರೀಡೆಯಲ್ಲಿ ನಿಪುಣನು ಆಗಿರುತ್ತಾನೆ.
5.                 ಮಿಥುನ ರಾಶಿಯ ಬುಧನ ಫಲ :-ಅಸತ್ಯವಾದಿ, ಜ್ಯೋತಿಷ ಮುಂತಾದ ಶಾಸ್ತ್ರಜ್ನನು, ಚಿತ್ರ, ವಾದ್ಯ ಗೀತಾದಿ ಕಲಾಚತುರನು, ಪ್ರಿಯವಾದ ಮಾತನ್ನ ಆಡುವವನು, ಸುಖಿಯೂ ಆಗುತ್ತಾನೆ.ಸುಂದರ ಶುಭ್ರ ವೇಷಧಾರಿ, ಪ್ರಿಯವಾದ ಮಾತು, ಖ್ಯಾತ ಧನಿಕ, ಜಂಬದವನು, ಮಾನವಂತ, ಸುಖಬಿಟ್ಟವನು, ಅಲ್ಪ ರತಿಕ್ರೀಡೆ, ಇಬ್ಬರು ಹೆಂಡಿರು ಇರುವಾತನು ಆಗಿರುತ್ತಾನೆ. ಇಬ್ಬರು ಹೆಂಡಿರಲ್ಲೂ ಮಕ್ಕಳಿರುತ್ತಾರೆ. ವಿವಾದರಹಿತ, ವೇದಶಾಸ್ತ್ರಜ್ನ, ಕಲ್ಪಗಳು, ಕಲೆಗಳ ತಜ್ನನು, ಕವಿಯು, ಸ್ವತಂತ್ರನು, ಸರ್ವ ಪ್ರಿಯನು, ದಾನಿಯು, ಕರ್ಮ ಶೃದ್ಧೆಯುಳ್ಳವನು ಆಗಿರುತ್ತಾನೆ. ಬಹು ಬಂಧುಮಿತ್ರ, ಪುತ್ರರಿರುವಾತನು ಅಗಿರುತ್ತಾನೆ. ಈ ಕಾಲದಲ್ಲಿ ಇಬ್ಬರು ಹೆಂಡಿರು ಇರುವುದು ಕಾನೂನು ಬಾಹಿರವಾದ ಮಾತು. ಆದ್ದರಿಂದ ಇನ್ನೊಬ್ಬಳು ತೆರೆಯ ಮರೆಯಲ್ಲಿ ಇರುತ್ತಾಳೆಂದು ತಿಳಿಯಬೇಕು. ಇಲ್ಲಿ ಹೇಳಿದಂತಹ ಬುಧನ ಬಗ್ಗೆಯ ಉಲ್ಲೇಖಗಳು ನೀವೆಲ್ಲಿಯಾದರೂ ಬುಧನ ಲಗ್ನದವರೇ ಆಗಿದ್ದರೂ ಸಹ ತೆಗೆದುಕೊಂಡರೂ ನಡೆಯುತ್ತೇ ಎಂದು ನನ್ನ ಅಭಿಪ್ರಾಯ.
6.                 ಕಟಕದಲ್ಲಿರುವ ಬುಧನ ಫಲ ವಿಶೇಷಗಳು:- ಜಲ ಸಂಬಂಧವಾದ ಪ್ರವೃತ್ತಿಗಳಿಂದ ಹಣವನ್ನ ಗಳಿಸುತ್ತಾನೆ. ಸಜ್ಜನರಿಗೆ ಶತ್ರುವಾಗಿರುತ್ತಾನೆ. ಪ್ರಾಜ್ನನು, ವಿದೇಶವಾಸಿ, ಸ್ತ್ರೀರತಿಯಲ್ಲಿ ವಿಶೇಷ ಆಸಕ್ತಿ ಉಳ್ಳವನು, ಸಂಗೀತಪ್ರಿಯನು, ಚಂಚಲನು, ಬಹುಮಾತುಳ್ಳವನು, ಬಂಧುದ್ವೇಷಿಯು, ವಾದನಿರತನು, ಸ್ತ್ರೀವಿರೋಧದಿಂದ ಧನ ನಷ್ಠವನ್ನ ಹೊಂದುತ್ತಾನೆ, ದುರ್ನಡತೆಯುಳ್ಳವನು, ಬಹುಕಾರ್ಯ ಕರ್ತನು, ಒಳ್ಳೇಯ ಕವಿಯೂ, ವಂಶೋತ್ತಮನೂ, ಕೀರ್ತಿವಂತನೂ ಆಗಿರುತ್ತಾನೆ.
7.                 ಸಿಂಹಸ್ಥಿತ ಬುಧನ ಫಲಗಳು:- ಈ ರಾಶಿಯಲ್ಲಿ ಬುಧನಿದ್ದರೆ ಸ್ತ್ರೀಯರು ಇವರನ್ನ ದ್ವೇಷಿಸುತ್ತಾರೆ. ಧನಹೀನನು, ಸುಖಿಯು, ಸಂತಾನ ಹೀನನು, ಸಂಚಾರಪ್ರಿಯನು. ತಿಳುವಳಿಕೆ ಇಲ್ಲದ ಮೂರ್ಖನು. ಸ್ತ್ರೀಯರನ್ನು ಅಪೇಕ್ಷಿಸುವನು. ತನ್ನವರಿಂದ ನಿಂದಿಸುವಾತನು. ಬುಧಿ ಇಲ್ಲದಾತ, ಕಲಾಭಿರುಚಿ ಇಲ್ಲದವನು, ಲೋಕಖ್ಯಾತ, ಸುಳ್ಳೂಗಾರನು, ಸ್ವಲ್ಪ ಸ್ಮರಣೆಯುಳ್ಳವನು, ಧನಿಕನು, ಬಲಹೀನನು, ಸಹೋದರ ಘಾತಕನು, ಸ್ತ್ರೀದೌರ್ಭಾಗ್ಯದವಳು, ಸ್ವತಂತ್ರ, ಶೂದ್ರರ ಕೆಲಸವನ್ನ ಮಾಡುವವನು, ಸೇವಕನು, ಸಂತಾನ ಹೀನನು, ಕುಲಕ್ಕೆ ವಿರುಧ್ಧ ಹೋಗುವವನು, ಜನ ಮನ ರಂಜಕನೂ ಆಗುತ್ತಾನೆ.
8.                 ಕನ್ಯಾರಾಶಿಯ ಬುಧನ ಫಲಗಳು :- ದಾನ ಮಾಡುವಾತನು.ಪಂಡಿತನು. ಬಹು ಗುಣವಂತನು. ಸುಖೀಮನುಷ್ಯನು. ಕ್ಷಮಾಗುಣದವನು. ಸಕಲಯುಕ್ತಿಯನ್ನ ಅರಿತವನು. ಭಯವಿಲ್ಲದವನು. ಅತೀ ವಾಗ್ಮಿಯು, ಧರ್ಮಿಷ್ಟನು, ಮಹಾ ಚತುರನು, ಬರಹಗಾರನು, ಕಾವ್ಯಜ್ನನು, ವಿಜ್ನಾನಿಯು, ಶಿಲ್ಪಜ್ನನು, ಸುಂದರನು, ಅಲ್ಪ ರತಿಕ್ರೀಡೆಯಿಂದ ಅಲ್ಪ ತೃಪ್ತನು, ಪೂಜ್ಯನು, ಸ್ನೇಹಿತನು, ವಿನಯಿ, ಪತ್ನಿಯಲ್ಲಿ ಅನುರಕ್ತನು, ಖ್ಯಾತನು, ಉದಾರಿಯು, ಬಲಿಷ್ಠನೂ ಆಗಿರುತ್ತಾನೆ.
9.                 ತುಲಾ ರಾಶಿಯ ಬುಧನ ಫಲಗಳು:- ವರಾಹಮೀರರು ವೃಷಭ ರಾಶಿಯ ಬುಧನ ಫಲಗಳನ್ನೇ ತುಲಾ ಬುಧನಿಗೂ ಹೇಳಿರುತ್ತಾರೆ. ಶಿಲ್ಪಜ್ನನು, ವಿವಾದರತನು, ವಾಕ್ಚತುರನು, ಧನಸಂಗ್ರಹಕ್ಕೆ ಧನವನ್ನ ವೆಚ್ಚ ಮಾಡುವಾತನು, ನಾನಾ ವ್ಯಾಪಾರಕರ್ತನು, ರತಿಸುಖಿಯು, ದೇವನು, ಗುರು, ವಿಪ್ರಾರ್ಥ್ಥಿಯು, ಪೂಜಕನು, ಉಪಚಾರ ಪ್ರವೀಣನು, ಸರ್ವಪ್ರಿಯನು, ಮಾತುಕೃತಿಗಳಲ್ಲಿ ವ್ಯತ್ಯಾಸವನ್ನ ತೋರಿಸುವವನು, ಚಂಚಲನು, ಕೋಪಿಷ್ಠನು, ಸಂತೋಷಿಯೂ ಆಗಿರುತ್ತಾನೆ.
10.           ವೃಷ್ಚಿಕ ಬುಧನ ಫಲಗಳು:- ವರಾಹಮೀರರು ಮೇಶ ರಾಶಿಯ ಬುಧನ ಫಲಗಳನ್ನೇ ಈ ರಾಶಿಗೆ ಉಲ್ಲೇಖಿಸಿರುತ್ತಾರೆ. ಶ್ರಮ ಜೀವಿ, ಅನರ್ಥ ಪರಂಪರೆಯನ್ನ ಎದಿರಿಸುವನು, ಸಜ್ಜನದ್ವೇಷಿಯು, ಧರ್ಮ ಹೀನನು, ಮೂರ್ಖನು, ದುರ್ನಡತೆಯುಳ್ಳವನು, ಲೋಭಿಯು, ಕೆಟ್ಟ ಹೆಣ್ಣಿನ ಗಂಡನು, ಕೆಟ್ಟಮಾತು, ದಂಡೋಪಾಯದವನು, ಚಲವಾದಿ, ಇಷ್ಟಕಾರ್ಯಕ್ಕೆ ವಿರೋಧಿಗಳ ಪ್ರತಿರೋಧವನ್ನ ಎದಿರಿಸುತ್ತಾನೆ. ನೀಚಜನ ಸಂಪರ್ಕದವನು, ಸಾಲಗಾರನು, ಪರಸ್ವಾಪಹಾರಿಯಾಗುತ್ತಾನೆ.

11.           ಧನೂರ್ ರಾಶಿಯಲ್ಲಿರುವ ಬುಧನ ಫಲಗಳು :- ರಾಜಜನರಿಂದ ಸನ್ಮಾನಿಸಲ್ಪಡುವನು. ಪಂಡಿತನು. ಯಥಾರ್ಥವಾದಿಯಾಗುತ್ತಾನೆ. ಪ್ರಖ್ಯಾತನು, ಶಾಸ್ತ್ರಜ್ನನು, ಪರಾಕ್ರಮಿಯು, ಸಚ್ಛೀಲನು, ಮಂತ್ರಿಯು, ಪುರೋಹಿತನು, ಕುಲಪ್ರಧಾನನು, ಮಹಾಪುರುಷನು, ಯಾಗಕರ್ತನು, ಶಿಕ್ಷಕನು, ಪ್ರತಿಭಾವಂತನು, ವಾಕ್ಛತುರನು, ವ್ರತನಿರತನು, ದಾನಿಯು, ಅಕ್ಷರ ಲೇಖನಾದಿ ಪಟು ಹಾಗೂ ಶಬ್ದಜ್ನನು.
12.           ಮಕರ ರಾಶಿಗತ ಬುಧನ ಫಲಗಳು :- ಪರರ ಕಾರ್ಯವನ್ನ ನೆರವೇರಿಸಿಕೊಡುತ್ತಾನೆ. ಧನಹೀನನು. ಶಿಲ್ಪಕಲಾ ಕಾರ್ಯರತನು. ಸಾಲಗಾರನು. ಯಜಮಾನನ ಆಜ್ನಾ ಪಾಲಕನು. ಒಡೆಯನ ಸಂಬಳದ ಭೃತ್ಯನು, ನೀಚ ಕಾರ್ಯದಲ್ಲಿ ನಿರತನು. ಮೂರ್ಖ ಸ್ವಭಾವದವನು. ನಪುಂಸಕನು. ಕೂಲಿಯಾಳು. ಕುಲಗುಣಹೀನನು. ದುಃಖಸಂತಪ್ತನು. ಸ್ವಪ್ನಸಾಮ್ರಾಜ್ಯದಲ್ಲಿ ವಿಹರಿಸುವನು. ಪಿಸುಣನು. ಅಸತ್ಯವಾದಿಯು. ಸುಳ್ಳು ಆಚಾರವಂತನು. ಬಂಧು ಪರಿತ್ಯಕ್ತನಾಗುತ್ತಾನೆ. ಸ್ವಲ್ಪ ಅದೃಷ್ಟವಂತನೂ ಆಗುತ್ತಾನೆ

13.           ಕುಂಭ ರಾಶಿಯಲ್ಲಿನ ಬುಧನ ಫಲಗಳು:- ವರಾಹಮೀರರು ಮಕರ ರಾಶಿಯ ಫಲಗಳನ್ನೇ ಕುಂಭಕ್ಕೆ ಹೇಳಿರುತ್ತಾರೆ. ಆದರೆ ಇದನ್ನ ಎಲ್ಲರೂ ಒಪ್ಪರು. ಕಾರಣ ಕುಂಭವು ಬುಧನ ನೀಚದ ಪಾರ್ಶ್ವರಾಶಿ. ಈತನು ಮಾತಿನಂತೆ ನಡೆಯಲಾರ. ಬುಧ್ಧಿ ಹೀನನು. ಆಲಸಿಗನು. ಧರ್ಮಾರ್ಥಾದಿ ಶೂನ್ಯನು. ಸೋಲಿಸಲ್ಪಡುವಾತನು.ಅಪವಿತ್ರನು. ಅಜ್ನಾನಿಯು.ದುರ್ನಡತೆಯುಳ್ಳವನು. ವಿರೋಧಿಸುವ ಅತೀ ದುಷ್ಟ ಪತ್ನಿಯುಳ್ಳವನು. ಭೋಗಹೀನನು. ಮೂಕನು. ದೌರ್ಭಾಗ್ಯವಂತನು.ಭಯಗ್ರಸ್ಥನು. ನಪುಂಸಕನು. ಕೊಳಕನು. ಎಲ್ಲರಿಗೂ ವಿಧೇಯನಾಗಿರುವನು. ಕಲ್ಯಾಣವರ್ಮರು ಮಕರಕ್ಕಿಂತ ಕುಂಭಕ್ಕೇ ಹೆಚ್ಚು ಅನಿಷ್ಠ ಫಲಗಳನ್ನ ಹೇಳಿರುತ್ಟಾರೆ.
14.           ಮೀನ ರಾಶಿಯಲ್ಲಿರುವ ಬುಧನ ಫಲಗಳು :- ಕೆಲಸಗಾರರ ಒಟ್ಟಿಗೆ ದುಡಿದು ಅವರ ವಶವಿರುವಾತನು. (ಕೋಂಟ್ರೇಕ್ಟಗಾರನ ಕೈ ಕೆಳಗಿರುವಾತನು) . ಅಂತ್ಯ ವಯಸ್ಸಿನಲ್ಲಿ ಉದರಂಭರಣಕ್ಕೆ ನೀಚ ಶಿಲಾಭ್ಯಾಸವನ್ನ ಮಾಡುತ್ತಾನೆ. ಅದೇ ಸಾರಾವಳಿಯವರ ಪ್ರಕಾರ, ಆಚಾರವಂತನು, ಪವಿತ್ರನು, ದೇಶಾಂತರವಾಸಿಯು, ಸಂತಾನಹೀನನು, ಕಿಂಚಿತ್ ದರಿದ್ರನು, ಒಳ್ಳೆಯ ಪತ್ನಿಯುಳ್ಳವನು, ಕೃತಿಯಲ್ಲಿ ಸಾಧು, ಸಜ್ಜನರ ಹಿತವಂತ, ಅನ್ಯಧರ್ಮಾನುಯಾಯಿ, ಹೊಲಿಗೆ ಮತ್ತು ಸೂಜಿಕೆಲಸಗಳಲ್ಲಿ ನಿಪುಣನು. ವಿಜ್ನಾನದ ಬಗ್ಗೆ ಅಜ್ನಾನಿ. ವೇದಹೀನನು. ಕಲಾವಿಹೀನನು. ಪರದ್ರವ್ಯ ಸಂಚಯಕರ್ತನು. ಧನಹೀನನು. ಅವ್ಯವಸ್ಥಿತ ಜೀವನವನ್ನ ನಡೆಸುವವನು ಆಗಿರುತ್ತಾನೆ. ಬುಧನು ಒಂದು ಏಳೆ ಸಂತಾನದಾಯಕನಾಗಿದ್ದಲ್ಲಿ, ಇಲ್ಲಿ ಬುಧನಿದ್ದರೆ ಅವರುಗಳು ಸಂತಾನಹೀನರಾಗುತ್ತಾರೆಂದು ಅಭಿಮತ.
ಸಂಕಲನ

ಡಾಕ್ಟರ್ ಪಾರಂಪಳ್ಳೀ ಸುರೇಂದ್ರ ಉಪಾಧ್ಯ, ಎಮ್.ಎಸ್.ಸಿ, ಪಿ.ಹೆಚ್.ಡಿ
(ಜ್ಯೋತಿಷ)
ಬೆಳಿಗ್ಗೆ ೫.೦೦

೦೮/೦೧/೨೦೧೭ ವೈಕುಂಠ ಏಕಾದಶಿ

No comments:

Post a Comment